Home
ಟೆಕ್ ನೌಕರಿ

ನಿಮ್ಮ ಮೊಬೈಲ್‌ನ ಮೆಮೊರಿ ಸಮಸ್ಯೆ ಎದುರಾಗಲು ಕಾರಣ ವಾಟ್ಸ್‌ಆಪ್‌!..ಪರಿಹಾರ ಇದು!!

By Bhaskar N J

ಭಾರತದ ಬಹುತೇಕ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಎದುರಾಗುವ ಸಮಸ್ಯೆ ಎಂದರೆ ಮೊಬೈಲ್‌ನ ಮೆಮೊರಿ (ಸ್ಥಳಾವಕಾಶ) ಭರ್ತಿಯಾಗಿಬಿಡುವುದು. ಇದರಿಂದ ಸ್ಮಾರ್ಟ್‌ಪೋನ್ ವೇಗ ಕಡಿಮೆಯಾಗುವುದಲ್ಲದೇ, ಯಾವುದೇ 'ಫೈಲ್‌ ಡೌನ್‌ಲೋಡ್‌ ಆಗುವುದಿಲ್ಲ, ನಿಮ್ಮ ಫೋನ್ ಮೆಮೊರಿ ಡಿಲೀಟ್‌ ಮಾಡಿ' ಎಂಬ ಸಂದೇಶ ಕಾಣಿಸಿಕೊಳ್ಳುತ್ತದೆ.

ನಿಮಗೆ ಗೊತ್ತಾ? ಇದಕ್ಕೆ ಬಹುತೇಕ ಕಾರಣ ವಾಟ್ಸ್‌ಆಪ್‌!. ದಿನವೊಂದಕ್ಕೆ ಬರುವ ಸಾವಿರಾರು ಫೈಲುಗಳನ್ನು ಸ್ವಯಂಚಾಲಿತವಾಗಿ ಡೌನ್‌ಲೋಡ್ ಆಗುವಂತೆ ವಾಟ್ಸ್‌ಆಪ್ ಸೆಟ್ಟಿಂಗ್ಸ್ ಹೊಂದಿದ್ದರೆ, ಕೆಲವೇ ದಿನಗಳಲ್ಲಿ ಮೊಬೈಲ್‌ನ ಮೆಮೊರಿ (ಸ್ಥಳಾವಕಾಶ) ಭರ್ತಿಯಾಗಿಬಿಡುತ್ತದೆ. ಇದು ಕೆಲ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ತಿಳಿಯುವುದಿಲ್ಲ.

ನಿಮ್ಮ ಮೊಬೈಲ್‌ನ ಮೆಮೊರಿ ಸಮಸ್ಯೆ ಎದುರಾಗಲು ಕಾರಣ ವಾಟ್ಸ್‌ಆಪ್‌!..ಪರಿಹಾರ ಇದು!!

ಹಾಗಾಗಿ, ವಾಟ್ಸ್‌ಆಪ್‌ ಸೆಟ್ಟಿಂಗ್ಸ್‌ಗೆ ಹೋಗಿ ಅಲ್ಲಿ 'ಡೇಟಾ ಅಂಡ್‌ ಸ್ಟೋರೇಜ್ ಯೂಸೇಜ್' ಎಂಬುದನ್ನು ಒತ್ತಿಬಿಡಿ. ನಂತರ 'ಮೀಡಿಯಾ ಆಟೋ ಡೌನ್‌ಲೋಡ್‌' ಎಂಬಲ್ಲಿ ವೆನ್ ಯೂಸಿಂಗ್ ಮೊಬೈಲ್‌ ಡೇಟಾ ಮತ್ತು ಇತರ ಆಯ್ಕೆಗಳಿರುತ್ತವೆ. ಅದನ್ನು ಅನ್‌ಚೆಕ್‌ ಮಾಡಿ. ಇದರಿಂದ ಸ್ವಯಂಚಾಲಿತವಾಗಿ ವಾಟ್ಸ್‌ಆಪ್ ಪೈಲ್‌ಗಳು ಡೌನ್‌ಲೋಡ್‌ ಆಗುವುದಿಲ್ಲ.

ಕಂಪ್ಯೂಟರ್‌ ಮೂಲಕ Web.WhatsApp.com ಎಂಬ ತಾಣಕ್ಕೆ ಬ್ರೌಸರ್ ಮೂಲಕ ಹೋಗಿ ನಿಮ್ಮ ವಾಟ್ಸ್‌ಆಪ್‌ ಖಾತೆಗೆ ಲಾಗಿನ್‌ ಆದರೆ, ಅಲ್ಲಿಯೇ ನಿಮಗೆ ಬೇಕಾಗಿರುವ ಫೋಟೊ ಮತ್ತು ವೀಡಿಯೊ ಫೈಲುಗಳನ್ನು ನೋಡುತ್ತಾ ಇರಬಹುದು. ಕಂಪ್ಯೂಟರ್‌ನಲ್ಲಿ ಡೌನ್‌ಲೋಡ್‌ ಮಾಡುವ ಅಗತ್ಯವಿಲ್ಲದೇ, ಬೇಕಾಗಿರುವುದನ್ನು ಮಾತ್ರವೇ ಮೊಬೈಲ್‌ನಲ್ಲಿ ಡೌನ್‌ಲೋಡ್‌ ಮಾಡಬಹುದು.

ನಿಮ್ಮ ಮೊಬೈಲ್‌ನ ಮೆಮೊರಿ ಸಮಸ್ಯೆ ಎದುರಾಗಲು ಕಾರಣ ವಾಟ್ಸ್‌ಆಪ್‌!..ಪರಿಹಾರ ಇದು!!

ಕಂಪ್ಯೂಟರ್‌ನಲ್ಲಿನ ಮತ್ತೊಂದು ಅನುಕೂಲವೆಂದರೆ, ಯಾವುದೇ ಫೈಲನ್ನು ಡೌನ್‌ಲೋಡ್‌ ಮಾಡದೆಯೇ ಬೇರೊಬ್ಬರಿಗೆ ಅಥವಾ ಬೇರೊಂದು ಗ್ರೂಪಿಗೆ ಫಾರ್ವರ್ಡ್‌ ಸಹ ಮಾಡಬಹುದಾದ ಆಯ್ಕೆ ಇರುತ್ತದೆ. ಹಾಗಾಗಿ, ಕಂಪ್ಯೂಟರಲ್ಲೇ ಎಲ್ಲವೂ ನಡೆಯುವುದರಿಂದ ನಿಮ್ಮ ಮೊಬೈಲ್‌ ಫೋನ್‌ನಲ್ಲಿ ಸ್ಥಳಾವಕಾಶಕ್ಕೇನೂ ಅಪಾಯವಿರುವುದಿಲ್ಲ ಎಂದು ಹೇಳಬಹುದು.

ಓದಿರಿ: ಭಾರತೀಯ ಕಾಲೇಜು ವಿದ್ಯಾರ್ಥಿಗಳು ದಿನಕ್ಕೆ ಎಷ್ಟು ಬಾರಿ ಮೊಬೈಲ್ ಚೆಕ್ ಮಾಡ್ತಾರೆ ಗೊತ್ತಾ?

Best Mobiles in India

English summary
Open WhatsApp, make sure you are seeing the main window - where all your chats are displayed.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+