ಭಾರತೀಯ ಕಾಲೇಜು ವಿದ್ಯಾರ್ಥಿಗಳು ದಿನಕ್ಕೆ ಎಷ್ಟು ಬಾರಿ ಮೊಬೈಲ್ ಚೆಕ್ ಮಾಡ್ತಾರೆ ಗೊತ್ತಾ?
ಕಾಲೇಜು ವಿಧ್ಯಾರ್ಥಿಗಳು ಸ್ಮಾರ್ಟ್‌ಫೋನ್ ಬಳಸಬೇಕೆ ಅಥವಾ ಬಳಸಬಾರದೇ ಎಂಬ ಜಿಜ್ಞಾಸೆಯಲ್ಲಿಯೇ ಭಾರತದಲ್ಲಿ ಕಾಲೇಜು ವಿದ್ಯಾರ್ಥಿಗಳು ದಿನಕ್ಕೆ ಸರಾಸರಿ 150ಕ್ಕೂ ಹೆಚ್ಚು ಬಾರಿ ತಮ್ಮ ಸ್ಮಾರ್ಟ್‌ಫೋನ್ ಚೆಕ್ ಮಾಡುತ್ತಾರೆ ಎಂದು ವರದಿಯೊಂದು ಹೇಳಿದೆ. ವಿಧ್ಯಾರ್ಥಿಗಳ ಮೇಲೆ ಸ್ಮಾರ್ಟ್‌ಫೋನ್ ಅವಲಂಬನೆ ಹೇಗಿದೆ ಎಂಬುದನ್ನು ಈ ವರದಿ ಬಹಿರಂಗಪಡಿಸಿದೆ.
ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯ ಹಾಗೂ ಭಾರತೀಯ ಸಾಮಾಜಿಕ ವಿಜ್ಞಾನ ಅಧ್ಯಯನ ಪರಿಷತ್ತು (ಐಸಿಎಸ್‌ಎಸ್‌ಆರ್) ಜಂಟಿಯಾಗಿ ಕೈಗೊಂಡ ಅಧ್ಯಯನದಿಂದ ಈಅಂಶ ಬೆಳಕಿಗೆ ಬಂದಿದ್ದು, 'ಸ್ಮಾರ್ಟ್‌ಫೋನ್ ಅವಲಂಬನೆ, ಭೋಗ ವಾದ ಮತ್ತು ಖರೀದಿ ನಡವಳಿಕೆ: ಡಿಜಿಟಲ್ ಇಂಡಿಯಾ ಉಪಕ್ರಮಗಳ ಪ್ರಭಾವ' ಎಂಬ ಶೀರ್ಷಿಕೆಯಡಿ ಈ ಸಂಶೋಧನೆ ನಡೆಸಲಾಗಿದೆ.

ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯ ಹಾಗೂ ಭಾರತೀಯ ಸಾಮಾಜಿಕ ವಿಜ್ಞಾನ ಅಧ್ಯಯನ ಪರಿಷತ್ತು ಜಂಟಿಯಾಗಿ ನಡೆಸಿರುವ ಈ ಅಧ್ಯಯನದಲ್ಲಿ, 20 ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಪ್ರತಿ ಕೇಂದ್ರದಲ್ಲಿ ತಲಾ 200 ವಿದ್ಯಾರ್ಥಿಗಳ ಸಂದರ್ಶನ ನಡೆಸಲಾಗಿದೆ. ಇವರಲ್ಲಿ ಶೇ.80ರಷ್ಟು ವಿದ್ಯಾರ್ಥಿಗಳು ಮೊಬೈಲ್ ಫೋನ್ ಹೊಂದಿದ್ದಾರೆ ಎಂದು ಅಧ್ಯಯನ ಹೇಳಿದೆ.
ಕುತೂಹಲ ಹಾಗೂ ಮಾಹಿತಿಯಿಂದ ಎಲ್ಲಿ ವಂಚಿತರಾಗುತ್ತೇವೋ ಎಂಬ ಭಯದಿಂದ ವಿದ್ಯಾರ್ಥಿಗಳು ದಿನಕ್ಕೆ ಹೆಚ್ಚೂಕಡಿಮೆ 150 ಬಾರಿ ತಮ್ಮ ಮೊಬೈಲ್ ಫೋನ್‌ಗಳನ್ನು ಚೆಕ್ ಮಾಡುತ್ತಾರೆ. ಶೇಕಡ 26ರಷ್ಟು ವಿದ್ಯಾರ್ಥಿಗಳು ಕೇವಲ ಕರೆ ಮಾಡುವುದಕ್ಕೆ ಹಾಗೂ ಬಾಕಿ ಉಳಿದವರು ಸಾಮಾಜಿಕ ಜಾಲತಾಣದ ಸಂಪರ್ಕ ಮನೋರಂಜನೆಗಾಗಿ ಮೊಬೈಲ್ ಬಳಕೆ ಮಾಡುತ್ತಾರಂತೆ.

ಸ್ಮಾರ್ಟ್‌ಫೋನ್ ಹೊಂದಿರುವ ಈ ಪೈಕಿ ಹೆಚ್ಚಿನವರು ಅಪ್ಲಿಕೇಷನ್‌ಗಳನ್ನು ಇನ್‌ಸ್ಟಾಲ ಮಾಡಿಕೊಳ್ಳುವುದಕ್ಕೆ, ಹೊಸ ಹೊಸ ವಿಷಯಗಳನ್ನು ಸಂಗ್ರಹಿಸುವುದಕ್ಕೆ ಹಾಗೂ ಸುಲಭದಲ್ಲಿ ವಿಷಯ ಗ್ರಹಿಸುವುದಕ್ಕೆ ಸ್ಮಾರ್ಟ್‌ಫೋನ್‌ಗಳನ್ನು ಬಳಸುತ್ತಾರೆ. ಕಂಪ್ಯೂಟರ್‌ಗಳಿಗೆ ಬದಲಿಯಾಗಿಯೂ ಸ್ಮಾರ್ಟ್‌ಫೋನ್‌ಗಳನ್ನು ಬಳಸುವವರಿದ್ದಾರೆ ಎನ್ನುತ್ತದೆ ಅಧ್ಯಯನ.

ಓದಿರಿ: ಪ್ಲೂಟೋ 9 ಗ್ರಹವೆಂಬುವುದರಲ್ಲಿ ಅನುಮಾನವೇ ಇಲ್ಲ!..ಸೌರವ್ಯೂಹಕ್ಕೆ ಮತ್ತೆ ಪ್ಲೂಟೋ!!


Click it and Unblock the Notifications








