ಉಚಿತ ಪಡಿತರ ಪಡೆಯುವಲ್ಲಿ ತೊಂದರೆ ಆಗಿದೆಯೇ? ದೂರು ಸಲ್ಲಿಸಲು ಹೀಗೆ ಮಾಡಿ!

|

ಭಾರತ ಸರ್ಕಾರ ಬಡತನ ರೇಖೆಗಿಂತ ಕೆಳಗಿರುವ, ಬಡವರು, ಮಧ್ಯಮ ವರ್ಗ ಸೇರಿದಂತೆ ಎಲ್ಲರಿಗೂ ಆಹಾರ ಧಾನ್ಯಗಳನ್ನು ವಿತರಿಸಲು ಪಡಿತರ ಚೀಟಿ ವ್ಯವಸ್ಥೆ ಮಾಡಿದೆ. ಪಡಿತರ ಚೀಟಿಯ ಪಡೆದ ಜನರು ನ್ಯಾಯ ಬೆಲೆ ಅಂಗಡಿಗಳಲ್ಲಿ ಪಡಿತರ ಪಡೆಯಬಹುದಾಗಿದೆ. ಜನರ ಪಡಿತರ ಚೀಟಿ ಆಧಾರದ ಮೇಲೆ ಪಡಿತರ ವಿತರಣೆ ಭಿನ್ನವಾಗಿರುತ್ತದೆ. ಆದ್ರೆ, ಕೆಲವೊಮ್ಮೆ ಪಡಿತರ ವಿತರಣೆಯಲ್ಲಿ ಜನರು ಸಮಸ್ಯೆಗಳನ್ನು ಎದುರಿಸುತ್ತಾರೆ.

ಪಡಿತರ

ಪಡಿತರ ಚೀಟಿ ಹೊಂದಿರುವ ಜನರು ಪ್ರತಿ ತಿಂಗಳು ಅವರ ರೇಷನ್‌ ಕಾರ್ಡಿಗೆ ಅನ್ವಯಿಸುವ ಪಡಿತರವನ್ನು ಪಡೆಯಬಹುದು. ಇತ್ತೀಚಿಗೆ ಸರ್ಕಾರ ಒನ್‌ ನೇಷನ್‌, ಒನ್‌ ರೇಷನ್‌ ಯೋಜನೆ ಜಾರಿ ಮಾಡಿದೆ. ಈ ಯೋಜನೆಯು ವಲಸೆ ಕಾರ್ಮಿಕರು ಒಂದು ಸ್ಥಳದಿಂದ ಬೇರೊಂದು ಸ್ಥಳಕ್ಕೆ ಹೋದಾಗ ಪಡಿತರ ಪಡೆಯಲು ನೆರವಾಗಲಿದೆ. ಅದಾಗ್ಯೂ, ಕೆಲವೊಮ್ಮೆ ನ್ಯಾಯ ಬೆಲೆ ಅಂಗಡಿಯಿಂದ ಪಡಿತರ ಸರಿಯಾಗಿ ಸಿಗದಿರುವುದು, ವಿಳಂಬ ಆಗುವುದು, ಇತರೆ ಕೆಲವು ಸಮಸ್ಯೆಗಳು ಆಗುತ್ತವೆ.

ಸಹಾಯವಾಣಿ

ಆದ್ರೆ, ಪಡಿತರ ಪಡೆಯುವಲ್ಲಿ ಜನರು ಏನಾದರೂ ಸಮಸ್ಯೆ ಎದುರಿಸಿದರೇ, ಆಹಾರ ಇಲಾಖೆಗೆ ದೂರು ಸಲ್ಲಿಸಲು ಅವಕಾಶ ಇದೆ. ದೂರು ನೀಡಲು ಜನರು ಅಧಿಕೃತ ಕಛೇರಿಗೆ ಹೋಗುವ ಅವಶ್ಯಕತೆಯೂ ಇಲ್ಲ. ಆನ್‌ಲೈನ್‌ ಮೂಲಕ ಅಥವಾ ಇ ಮೇಲ್‌ ಅಥವಾ ಟೋಲ್-ಫ್ರೀ ಸಹಾಯವಾಣಿ ಮೂಲಕ ದೂರು ಸಲ್ಲಿಸಬಹುದು. ಹಾಗಾದರೇ ಪಡಿತರ ಪಡೆಯುವಲ್ಲಿ ಸಮಸ್ಯೆಗಳು ಎದುರಾದರೆ, ಆನ್‌ಲೈನ್ ಮೂಲಕ ದೂರು ಸಲ್ಲಿಸುವುದು ಹೇಗೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಆನ್‌ಲೈನ್‌ನಲ್ಲಿ ದೂರು ಸಲ್ಲಿಸಲು ಅವಕಾಶ:

ಆನ್‌ಲೈನ್‌ನಲ್ಲಿ ದೂರು ಸಲ್ಲಿಸಲು ಅವಕಾಶ:

ಜನರು ಪಡಿತರ ಲಭ್ಯ ಆಗದಿದ್ದರೆ, ಅಧಿಕೃತ ವೆಬ್‌ಸೈಟ್ ಮತ್ತು ಇ-ಮೇಲ್ ಮೂಲಕ ಆನ್‌ಲೈನ್‌ನಲ್ಲಿಯೂ ದೂರು ನೀಡಬಹುದು. ದೂರು ಸಲ್ಲಿಸಲು ಸಹಾಯವಾಣಿ ಸಂಖ್ಯೆಯನ್ನೂ ಸಹ ಬಳಕೆ ಮಾಡಬಹುದು. ಇ-ಮೇಲ್ ಮೂಲಕ ಸಹ ದೂರು ನೀಡಲು ಅವಕಾಶ ಇದೆ. ಇದರಲ್ಲಿ ನಿಮ್ಮ ಪಡಿತರ ಚೀಟಿ ಸಂಖ್ಯೆಯೊಂದಿಗೆ ನೀವು ಪಡಿತರ ಡಿಪೋದ ಹೆಸರನ್ನು ಸಹ ನಮೂದಿಸಬೇಕಾಗುತ್ತದೆ.

ಟೋಲ್-ಫ್ರೀ ಸಹಾಯವಾಣಿ ಮೂಲಕ ಸಹ ದೂರು ಸಲ್ಲಿಸಬಹುದು:

ಟೋಲ್-ಫ್ರೀ ಸಹಾಯವಾಣಿ ಮೂಲಕ ಸಹ ದೂರು ಸಲ್ಲಿಸಬಹುದು:

ಸಲಹೆ ಮತ್ತು ದೂರು ಸಲ್ಲಿಸಲು ಜನರು 1800-425-9339 ಈ ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಬಹುದು. ಅಲ್ಲದೇ ಅಧಿಕೃತ ಜಿಲ್ಲಾ/ತಾಲೂಕ್ ಕಚೇರಿಯ ವಿಳಾಸಕ್ಕೆ ಹೋಗಿಯೂ ದೂರು ನೀಡಬಹುದು.

ಇ-ಮೇಲ್ ಮೂಲಕವೂ ದೂರು ನೀಡಬಹುದು:

ಇ-ಮೇಲ್ ಮೂಲಕವೂ ದೂರು ನೀಡಬಹುದು:

ಪಡಿತರ ಪಡೆಯುವಲ್ಲಿ ಸಮಸ್ಯೆ ಆದಾಗ ಜನರು ಇ ಮೇಲ್‌ ಮೂಲಕ ಸಹ ದೂರು ಸಲ್ಲಿಸಬಹುದು. ಪ್ರತಿ ರಾಜ್ಯಗಳು ಪ್ರತ್ಯೇಕ ಇ-ಮೇಲ್ ವಿಳಾಸ ಹೊಂದಿವೆ. ಕರ್ನಾಟಕ ಪಡಿತರ ಚೀಟಿ ಹೊಂದಿರುವ ಜನರು prs-fcs@karnataka.gov.in ನಲ್ಲಿ ಮೇಲ್ ಅನ್ನು ಡ್ರಾಪ್ ಮಾಡಬಹುದು. ಅಲ್ಲದೇ ಕರ್ನಾಟಕ ಸರ್ಕಾರದ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಅಧಿಕೃತ https://ahara.kar.nic.in/ ವೆಬ್‌ಸೈಟ್‌ಗೆ ಸಹ ಭೇಟಿ ನೀಡಬಹುದು.

ಆನ್‌ಲೈನ್‌ ಮೂಲಕ ಪಡಿತರ ಚೀಟಿ ತಿದ್ದುಪಡಿಗೆ ಈ ಹಂತಗಳನ್ನು ಅನುಸರಿಸಿ:

ಆನ್‌ಲೈನ್‌ ಮೂಲಕ ಪಡಿತರ ಚೀಟಿ ತಿದ್ದುಪಡಿಗೆ ಈ ಹಂತಗಳನ್ನು ಅನುಸರಿಸಿ:

ಹಂತ 1: ಅಧಿಕೃತ ವೆಬ್ ಸೈಟ್ ಗೆ ಲಾಗ್‌ ಇನ್ ಆಗುವುದು https://ahara.kar.nic.in/home.aspx
ಹಂತ 2: ಲಾಗ್‌ಇನ್‌ ಮಾಡಿದ ನಂತರ ಮುಖ್ಯ ಪುಟದಲ್ಲಿ ಇ-ಸೇವೆಗಳು ಆಯ್ಕೆ ಕಾಣುವಿರಿ. ಅಲ್ಲಿ ತಿದ್ದುಪಡಿಗೆ ವಿನಂತಿ ಆಯ್ಕೆ ಕಾಣಿಸುತ್ತದೆ.
ಹಂತ 3: ನಂತರ ಆ ಆಯ್ಕೆಯನ್ನು ಕ್ಲಿಕ್ ಮಾಡಿದ ನಂತರ ಹೊಸ ಪೇಜ್ ತೆರೆಯುತ್ತದೆ.
ಹಂತ 4: ಅಲ್ಲಿನ ಫಾರ್ಮ್‌ನಲ್ಲಿ ಎಲ್ಲ ಅಗತ್ಯ ಮಾಹಿತಿಯನ್ನು ಭರ್ತಿ ಮಾಡುವುದು.

ತಿಳಿಸಲಾದ

ಹಂತ 5: ಆ ನಂತರ ತಿಳಿಸಲಾದ ಎಲ್ಲ ದಾಖಲೆಗಳನ್ನು ಸ್ಕ್ಯಾನ್ ಪ್ರತಿಯನ್ನು ಅಪಲೋಡ್ ಮಾಡುವುದು.
ಹಂತ 6: ಅಪ್‌ಲೋಡ್ ಮಾಡಿದ ನಂತರ ಫಾರ್ಮ್ ಅನ್ನು(ಸಬ್‌ಮೀಟ್) ಸಲ್ಲಿಸ ಮಾಡುವುದು.
ಹಂತ 7: ಫಾರ್ಮ್ ಅನ್ನು ಸಲ್ಲಿಸಿದ ನಂತರ ನೋಂದಣಿ ಸಂಖ್ಯೆ ಸಿಗುತ್ತದೆ.
ಹಂತ 8: ನೋಂದಣಿ ಸಂಖ್ಯೆ ಮೂಲಕ ವೆಬ್ ಸೈಟ್ ಗೆ ಲಾಗ್‌ಇನ್‌ ಆಗಬಹುದು ಹಾಗೂ ಫಾರ್ಮ್ ಅನ್ನು ಟ್ರ್ಯಾಕ್ ಮಾಡಬಹುದು.
ಹಂತ 9: ನೀಡಲಾದ ಎಲ್ಲ ದಾಖಲಾತಿ ಸರಿಯಾಗಿದ್ದರೆ ಮನೆಗೆ ಹೊಸ ಪಡಿತರ ಚೀಟಿಯನ್ನೂ ಕಳಿಸಲಾಗುತ್ತದೆ.

ಏನಿದು ಒನ್ ನೇಷನ್, ಒನ್ ರೇಷನ್ ಕಾರ್ಡ್?

ಏನಿದು ಒನ್ ನೇಷನ್, ಒನ್ ರೇಷನ್ ಕಾರ್ಡ್?

ಒನ್ ನೇಷನ್, ಒನ್ ರೇಷನ್ ಕಾರ್ಡ್ ಕೇಂದ್ರ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾಗಿದೆ. ದೇಶದಾದ್ಯಂತ ಒಂದೇ ರೀತಿಯ ಪಡಿತರ ಕಾರ್ಡ್‌ ವ್ಯವಸ್ಥೆ ಅನುಷ್ಠಾನ ಇದರ ಉದ್ದೇಶ. ಒನ್ ನೇಷನ್, ಒನ್ ರೇಷನ್ ಕಾರ್ಡ್ ಪಡಿತರ ಚೀಟಿ ಹೊಂದಿರುವವರು ದೇಶದ ಯಾವುದೇ ಭಾಗದಲ್ಲಿರುವ ಸರ್ಕಾರಿ ಪಡಿತರ ಅಂಗಡಿಗಳಿಂದ ಪಡಿತರ ಧಾನ್ಯವನ್ನು ಖರೀದಿಸಲು ಸಾಧ್ಯವಾಗುತ್ತದೆ. ಹಾಗೆಯೇ ವಲಸೆ ಕಾರ್ಮಿಕರು ಮತ್ತು ಅವರ ಕುಟುಂಬ ಸದಸ್ಯರಿಗೆ ಈ ವ್ಯವಸ್ಥೆಯ ಪ್ರಯೋಜನಗಳನ್ನು ಪಡೆಯಲು ಸಾಧ್ಯ.

ಒನ್ ನೇಷನ್, ಒನ್ ರೇಷನ್ ಕಾರ್ಡ್ ಪ್ರಯೋಜನ

ಒನ್ ನೇಷನ್, ಒನ್ ರೇಷನ್ ಕಾರ್ಡ್ ಪ್ರಯೋಜನ

* ಕಾರ್ಮಿಕರು, ದಿನಗೂಲಿ ನೌಕರರು, ಬಡ ಜನರು, ಬೀದಿ ಬದಿ ವ್ಯಾಪಾರಿಗಳಿಗೆ ಈ ಯೋಜನೆ ಸಹಾಯಕ.
* ನಗರ ಪ್ರದೇಶಗಳಲ್ಲಿ ವಾಸಿಸುವ ಬಡವರು, ಅರೆಕಾಲಿಕ ಖಾಸಗಿ ನೌಕರರು, ಅಸಂಘಟಿತ ವಲಯದ ಕಾರ್ಮಿಕ ವರ್ಗದ ಜನರಿಗೆ ಹೆಚ್ಚು ನೆರವಾಗಿದೆ.
* ನಕಲಿ ಕಾರ್ಡ್ ಮೂಲಕ ಪಡಿತರ ಸೋರಿಕೆ ತಡೆಯಲು ನೆರವಾಗಲಿದೆ.
* ವಲಸೆ ಕಾರ್ಮಿಕರು ಮತ್ತು ಅವರ ಕುಟುಂಬ ಸದಸ್ಯರಿಗೆ ಪಡಿತರ ಪಡೆಯಲು ಅನುಕೂಲ.
* ಬಡವರಿಗೆ ಹೆಚ್ಚಿನ ಲಾಭ ದೊರೆಯಲಿದೆ.
* ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸ್ಥಳಾಂತರಗೊಂಡವರಿಗೆ ಪಡಿತರ ಪಡೆಯಲು ಅನುಕೂಲವಾಗಲಿದೆ.
* ನಕಲಿ ಪಡಿತರ ಚೀಟಿಗಳಿಗೆ ಬ್ರೇಕ್‌ ಮಾಡಲು ಒನ್ ನೇಷನ್, ಒನ್ ರೇಷನ್ ಕಾರ್ಡ್ ಯೋಜನೆ ಸಹಾಯಕ.
* ಎಲ್ಲಾ ಪಡಿತರ ಚೀಟಿಗಳನ್ನು ಆಧಾರ್ ಕಾರ್ಡ್‌ಗೆ ಸಂಪರ್ಕಿಸುವ ಮತ್ತು ಪಾಯಿಂಟ್ ಆಫ್ ಸೇಲ್, ಪಿಒಎಸ್ ಯಂತ್ರದ ಮೂಲಕ ಆಹಾರ ಧಾನ್ಯಗಳನ್ನು ವಿತರಿಸುವ ವ್ಯವಸ್ಥೆ ಒನ್ ನೇಷನ್, ಒನ್ ರೇಷನ್ ಕಾರ್ಡ್ ನಲ್ಲಿ ಸೇರಲಿದೆ.

Best Mobiles in India

English summary
Difficulty in getting ration? How To Register Online Complaint.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X