ಆನ್‌ಲೈನ್‌ ಕ್ಲಾಸ್‌ ವೇಳೆ ಆಡಿಯೋ ಆಫ್ ಮಾಡುವುದು ಹೇಗೆ ಗೊತ್ತಾ?

|

ಕೊರೊನಾ ಎಫೆಕ್ಟ್‌ನಿಂದಾಗಿ ಆನ್‌ಲೈನ್‌ ತರಗತಿಗಳು, ಆನ್‌ಲೈನ್‌ ಮೀಟಿಂಗ್‌ ಹೆಚ್ಚು ಬಳಕೆಯಲ್ಲಿ ಬಂದವು. ಈ ನಿಟ್ಟಿನಲ್ಲಿ ಆನ್‌ಲೈನ್‌ ಮೀಟಿಂಗ್, ಆನ್‌ಲೈನ್ ತರಗತಿಗಳಿಗೆ ಜೂಮ್ ಆಪ್, ಗೂಗಲ್ ಮೀಟ್, ಜಿಯೋ ಮೀಟ್ ನಂತಹ ಆಪ್‌ಗಳು ವೇದಿಕೆಗಳಾಗಿವೆ. ಈ ಪ್ಲಾಟ್‌ಫಾರ್ಮ್ ಗಳ ಮೂಲಕ ಆನ್‌ಲೈನ್‌ ತರಗತಿಗಳು ಅಥವಾ ಮೀಟಿಂಗ್‌ ನಡೆಯುವಾಗ ಬಳಕೆದಾರರು ಆಡಿಯೊ ಮತ್ತು ವಿಡಿಯೊ ಆನ್‌-ಆಫ್‌ಗಳ ಬಗ್ಗೆ ಗಮನ ನೀಡುವುದು ಮುಖ್ಯ.

ಆನ್‌ಲೈನ್

ಹೌದು, ಆನ್‌ಲೈನ್ ಮೀಟಿಂಗ್ ಅಥವಾ ಕ್ಲಾಸ್‌ ವೇಳೆ ಮೈಕ್ ಆಫ್‌ ಆಗಿರುವ ಬಗ್ಗೆ ದೃಢಪಡಿಸಿಕೊಳ್ಳುವುದು ಉತ್ತಮ. ಇಲ್ಲದಿದ್ದರೇ ಅದ್ವಾನಗಳು ಆಗುವ ಸಾಧ್ಯತೆಗಳಿರುವುತ್ತವೆ. ಸದ್ಯ ಶ್ವೇತಾ ಎಂಬ ಹುಡುಗಿ ಆನ್‌ಲೈನ್‌ ಕ್ಲಾಸ್‌ ವೇಳೆ ಮೈಕ್ ಆನ್‌ ಇರುವುದನ್ನು ಗಮನಿಸಿದೇ, ಪಕ್ಕದಲ್ಲಿ ಕುಳಿತಿದ್ದ ಗೆಳತಿಯೊಂದಿಗೆ ವೈಯಕ್ತಿಕ ವಿಷಯ ಮಾಡಾಡಿರುವ ಬಗ್ಗೆ ಮೀಮ್‌ ಹರಿದಾಡುತ್ತಿರುವುದನ್ನು ನೀವು ಗಮನಿಸಿರಬಹುದು. ಸೋಶೀಯಲ್‌ ಮೀಡಿಯಾಗಳಲ್ಲಿ #Shweta, #shwetayourmicison ಮಿಮ್ಸ್ ಟ್ರೆಂಡಿಂಗ್‌ನಲ್ಲಿ ಕಾಣಿಸಿಕೊಂಡಿವೆ. ಹೀಗಾಗಿ ಆನ್‌ಲೈನ್‌ ಕ್ಲಾಸ್‌/ಮೀಟಿಂಗ್ ವೇಳೆ ಆಡಿಯೊ ಆಫ್ ಮಾಡುವ ಬಗ್ಗೆ ಗಮನವಹಿಸಬೇಕು. ಇಂದಿನ ಈ ಲೇಖನದಲ್ಲಿ ಜೂಮ್‌ ಮತ್ತು ಸ್ಕೈಪ್‌ ಆಪ್‌ನಲ್ಲಿ ಆಡಿಯೊ ಆಫ್ ಮಾಡುವುದು ಹೇಗೆ ಎಂಬುದನ್ನು ನೋಡೋಣ ಬನ್ನಿರಿ.

ಸೋಶೀಯಲ್‌

ಸೋಶೀಯಲ್‌ ಮೀಡಿಯಾಗಳಲ್ಲಿ #Shweta, #shwetayourmicison ಮಿಮ್ಸ್ ಟ್ರೆಂಡಿಂಗ್‌ನಲ್ಲಿ ಕಾಣಿಸಿಕೊಂಡಿವೆ. ಹೀಗಾಗಿ ಆನ್‌ಲೈನ್‌ ಕ್ಲಾಸ್‌/ಮೀಟಿಂಗ್ ವೇಳೆ ಆಡಿಯೊ ಆಫ್ ಮಾಡುವ ಬಗ್ಗೆ ಗಮನವಹಿಸಬೇಕು. ಇಂದಿನ ಈ ಲೇಖನದಲ್ಲಿ ಜೂಮ್‌ ಮತ್ತು ಸ್ಕೈಪ್‌ ಆಪ್‌ನಲ್ಲಿ ಆಡಿಯೊ ಆಫ್ ಮಾಡುವುದು ಹೇಗೆ ಎಂಬುದನ್ನು ನೋಡೋಣ ಬನ್ನಿರಿ.

ಜೂಮ್ ಕರೆಯ ವೇಳೆ ಆಡಿಯೊವನ್ನು ಮ್ಯೂಟ್ ಮಾಡಲು ಈ ಕ್ರಮ ಅನುಸರಿಸಿ:

ಜೂಮ್ ಕರೆಯ ವೇಳೆ ಆಡಿಯೊವನ್ನು ಮ್ಯೂಟ್ ಮಾಡಲು ಈ ಕ್ರಮ ಅನುಸರಿಸಿ:

ಹಂತ 1: ಮೊದಲು, ಡೆಸ್ಕ್‌ಟಾಪ್ ಮತ್ತು ಮೊಬೈಲ್ ಅಪ್ಲಿಕೇಶನ್‌ನಲ್ಲಿ ಜೂಮ್ ಅಪ್ಲಿಕೇಶನ್ ತೆರೆಯಿರಿ

ಹಂತ 2: ಸೆಟ್ಟಿಂಗ್‌ಗಳ ಮೆನು ಕ್ಲಿಕ್ ಮಾಡಿ

ಹಂತ 3: ನಂತರ ಆಡಿಯೋ ಆಯ್ಕೆಯನ್ನು ಟ್ಯಾಪ್ ಮಾಡಿ

ಹಂತ 4: ಸ್ಕ್ರೀನ್‌ನ ಕೆಳಭಾಗದಲ್ಲಿ ಪ್ರದರ್ಶಿಸಲಾದ ‘ಸಭೆಗೆ ಸೇರುವಾಗ ಯಾವಾಗಲೂ ಮೈಕ್ರೊಫೋನ್ ಮ್ಯೂಟ್ ಮಾಡಿ' ಆಯ್ಕೆಯನ್ನು ಪರಿಶೀಲಿಸಿ

ಹಂತ 4: ಈಗ, ನೀವು ವೀಡಿಯೊ ಕರೆಗೆ ಸೇರಿದಾಗಲೆಲ್ಲಾ ಮ್ಯೂಟ್ ಬಟನ್ ಸ್ವಯಂಚಾಲಿತವಾಗಿ ಆಫ್ ಆಗುತ್ತದೆ. ಅಗತ್ಯವಿದ್ದಾಗ ಮೈಕ್ ಐಕಾನ್ ಕ್ಲಿಕ್ ಮಾಡುವ ಮೂಲಕ ನೀವು ಮ್ಯೂಟ್ ಮಾಡಬಹುದು ಮತ್ತು ಮ್ಯೂಟ್ ಮಾಡಬಹುದು.

ಡೆಸ್ಕ್‌ಟಾಪ್

ಸ್ಕೈಪ್ ಕರೆಯ ವೇಳೆ ಆಡಿಯೊ ಮ್ಯೂಟ್ ಮಾಡಲು ಹೀಗೆ ಮಾಡಿ:

ಹಂತ 1: ಸ್ಕೈಪ್ ಡೆಸ್ಕ್‌ಟಾಪ್ ಅಥವಾ ಮೊಬೈಲ್ ಅಪ್ಲಿಕೇಶನ್ ತೆರೆಯಿರಿ

ಹಂತ 2: ಪ್ರೊಫೈಲ್ ಫೋಟೋ ಮತ್ತು ನಂತರ ಸೆಟ್ಟಿಂಗ್‌ಗಳ ಮೇಲೆ ಕ್ಲಿಕ್ ಮಾಡಿ

ಹಂತ 3: ಆಡಿಯೋ ಮತ್ತು ವಿಡಿಯೋ ಆಯ್ಕೆಯನ್ನು ಆರಿಸಿ

ಹಂತ 4: ಸೆಟ್ಟಿಂಗ್‌ಗಳ ಮೆನುವಿನಲ್ಲಿರುವ "ಮೈಕ್ರೊಫೋನ್" ಆಯ್ಕೆಯನ್ನು ಕ್ಲಿಕ್ ಮಾಡುವ ಮೂಲಕ ಮೈಕ್ರೊಫೋನ್ ಸೆಟ್ಟಿಂಗ್‌ಗಳನ್ನು ಹೊಂದಿಸಿ. ಅಗತ್ಯವಿದ್ದಾಗ ನೀವು ಮ್ಯೂಟ್ ಮಾಡಬಹುದು ಮತ್ತು ಮ್ಯೂಟ್ ಮಾಡಬಹುದು.

Best Mobiles in India

English summary
Don't be like #Shweta: Here's how to mute audio on Zoom And Skype.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X