Home
ಟೆಕ್ ನೌಕರಿ

ಇಂಟರ್ನೆಟ್‌ ಬ್ರೌಸಿಂಗ್ ಮಾಡುವ ಸಂದರ್ಭದಲ್ಲಿ ಈ ತಪ್ಪುಗಳನ್ನು ಮಾಡಬೇಡಿ: ಪರಿಣಾಮ ತೀರಾ ಅಪಾಯಕಾರಿ..!

By Srinidhi

ಇಂಟರ್ನೆಟ್ ಬಳಕೆಯು ಅವಶ್ಯಕವಾಗಿರುವ ಇಂದಿನ ದಿನದಲ್ಲಿ ಒಂದಲ್ಲ ಒಂದು ಕಾರಣಕ್ಕೆ ನಾವು ತಿಳಿಯದೆ ತಪ್ಪು ಮಾಡಿ ಭಾರೀ ದಂಡವನ್ನು ತರೆಬೇಕಾಗುತ್ತದೆ. ಬ್ರೌಸಿಂಗ್ ಮಾಡುವ ಸಂದರ್ಭದಲ್ಲಿ, ಆಪ್‌ ಬಳಕೆಮಾಡಿಕೊಳ್ಳುವ ಸಂದರ್ಭದಲ್ಲಿ ಇಲ್ಲವೇ ಚಾಟ್ ಮಾಡುವಾಗ ನಮ್ಮ ಅರಿವಿಗೆ ಬಾರದೆ ಮಾಡುವ ತಪ್ಪುಗಳು ಮುಂದೆ ನಮಗೆ ಮಾರಕವಾಗುವ ಸಾಧ್ಯತೆ ಇದೆ. ನಿಮ್ಮ ಸ್ಮಾರ್ಟ್‌ಫೋನ್ ಇಲ್ಲವೇ ಕಂಪ್ಯೂಟರ್‌ಗಳನ್ನು ಹ್ಯಾಕ್ ಮಾಡಲು ವೈರಸ್ ಮೂಲಕ ದಾಳಿಯನ್ನು ನಡೆಸಲು ನಾವು ಮಾಡುವ ಸಣ್ಣ-ಪುಟ್ಟ ತಪ್ಪುಗಳೇ ಕಾರಣವಾಗುತ್ತವೆ.

ಇಂಟರ್ನೆಟ್‌ ಬ್ರೌಸಿಂಗ್ ಮಾಡುವ ಸಂದರ್ಭದಲ್ಲಿ ಈ ತಪ್ಪುಗಳನ್ನು ಮಾಡಬೇಡಿ

ಈ ಹಿನ್ನಲೆಯಲ್ಲಿ ನಾವು ಬ್ರೌಸಿಂಗ್ ಮಾಡುವ ವಿಧಾನವನ್ನು ಬದಲಾಯಿಸಿಕೊಳ್ಳಬೇಕಾಗಿದೆ. ಅಲ್ಲದೇ ಸಿಕ್ಕ-ಸಿಕ್ಕ ಆಪ್‌ ಬಳಕೆ ಮಾಡಿಕೊಳ್ಳುವ ಮುನ್ನ ಎಚ್ಚರ ವಹಿಸಬೇಕಾಗಿದೆ. ಮ್ಯಾನ್ಯತೆ ಇಲ್ಲದ ವೆಬ್ ಸೈಟುಗಳನ್ನು ಜಾಲಾಡುವುದನ್ನು ಬಿಡಬೇಕಿದೆ. ಕಂಪ್ಯೂಟರ್ ಮತ್ತು ಸ್ಮಾರ್ಟ್‌ಫೋನ್‌ಗಳಲ್ಲಿ ಸೆಕ್ಯೂರಿಟಿ ಆಪ್ ಗಳನ್ನು ಹಾಕಿಕೊಳ್ಳುವುದು ಉತ್ತಮ ಬೆಳವಣಿಗೆಯಾಗಿದೆ.

ಓದಿರಿ: ಐಫೋನ್ ಬುಕ್ ಮಾಡಿದ್ದಕ್ಕೆ ಸೋಪು ಕೊಟ್ಟ ಫ್ಲಿಪ್‌ಕಾರ್ಟ್: ಗ್ರಾಹಕ ಮಾಡಿದ್ದೇನು..?

ಪಾಪ್ ಆಪ್ ವಿಂಡೋ ಓಪನ್ ಮಾಡಬೇಡಿ:

ಪಾಪ್ ಆಪ್ ವಿಂಡೋ ಓಪನ್ ಮಾಡಬೇಡಿ:

ಅತೀ ಹೆಚ್ಚಿನ ಮಾಲ್ವೇರ್‌ಗಳು ನೀವು ಬ್ರೌಸ್ ಮಾಡುವ ವೆಬ್‌ ತಾಣಗಳಿಂದಲೇ ಬರಲಿದೆ. ಅಲ್ಲದೇ ಅವುಗಳು ನೀವು ಮಾಡುವ ಒಂದು ತಪ್ಪಿನಿಂದ ನಿಮ್ಮ ಡಿವೈಸ್‌ನಲ್ಲಿ ಸೇರಿಕೊಳ್ಳಲಿದೆ. ಪಾಪ್‌-ಅಪ್‌ ವಿಂಡೋಗಳಲ್ಲಿ ಕಾಣಿಸಿಕೊಳ್ಳುವ ಯಾವುದೇ ಲಿಂಕ್‌ಗಳನ್ನು ಕ್ಲಿಕ್‌ ಮಾಡುವ ಮುನ್ನ ಹತ್ತು ಬಾರಿ ಯೋಚಿಸಿ. ಅಗತ್ಯವಿಲ್ಲವಾದರೆ ಅದರ ಮೇಲೆ ಕ್ಲಿಕ್ ಮಾಡಬೇಡಿ.

ವೈರಸ್ ಬಂದಿದೆ ಎನ್ನುವ ಮೇಸೆಜ್:

ವೈರಸ್ ಬಂದಿದೆ ಎನ್ನುವ ಮೇಸೆಜ್:

ನೀವು ಸ್ಮಾರ್ಟ್‌ಫೋನ್ ನಲ್ಲಿ ಇಲ್ಲವೇ ಕಂಪ್ಯೂಟರ್ ನಲ್ಲಿ ಬ್ರೌಸಿಂಗ್ ಮಾಡುತ್ತಿರುವ ಸಂದರ್ಭದಲ್ಲಿ ಅದರಲ್ಲೂ ಮಾನ್ಯತೆ ಇಲ್ಲದೇ ವೆಬ್ ಸೈಟ್‌ಗಳನ್ನು ನೋಡುತ್ತಿರುವ ಸಂದರ್ಭದಲ್ಲಿ ನಿಮ್ಮ ಫೋನಿಗೆ ವೈರಸ್ ಬಂದಿದೆ ಸ್ಕ್ಯಾನ್ ಮಾಡಿ ಎನ್ನುವ ಸಂದೇಶದ ಕಾಣಿಸಿಕೊಳ್ಳಿದ್ದು, ಅದರ ಮೇಲೆ ಕ್ಲಿಕ್ ಮಾಡಲೇ ಬೇಡಿ. ಅದು ವೈರಸ್ ಇಲ್ಲವೇ ಇನ್ನೊಂದು ಆಪ್ ಲಿಂಕ್ ಆಗಿರಲಿದೆ.

Here's how the Face ID of the newly launched Oppo A83 works (KANNADA)
ಪಬ್ಲಿಕ್ ವೈಫೈ ಬಳಕೆ ಕಡಿಮೆ ಮಾಡಿ:

ಪಬ್ಲಿಕ್ ವೈಫೈ ಬಳಕೆ ಕಡಿಮೆ ಮಾಡಿ:

ಇದಲ್ಲದೇ ಯಾವುದೇ ಪಾಸ್‌ವರ್ಡ್ ಇಲ್ಲದೇ ಸಾರ್ವಜನಿಕವಾಗಿ ಉಚಿತವಾಗಿ ದೊರೆಯುವ ವೈಫೈಗಳನ್ನು ಬಳಕೆ ಮಾಡಿಕೊಳ್ಳ ಬೇಡಿ. ಕಾರಣ ಹ್ಯಾಕರ್ಸ್ ಗಳು ಉಚಿತ ವೈಫೈ ಮೂಲಕವೇ ನಿಮ್ಮ ಸ್ಮಾರ್ಟ್‌ಫೋನ್ ಅಥಾವ ಲ್ಯಾಪ್ ಟಾಪ್ ಪ್ರವೇಶವನ್ನು ಪಡೆದುಕೊಳ್ಳಲಿದ್ದಾರೆ ಎಚ್ಚರಿಕೆಯಿಂದ ಇರುವುದು ಉತ್ತಮ.

Best Mobiles in India

English summary
Don't Do These Mistakes While Web Browsing. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+