Subscribe to Gizbot

ಐಫೋನ್ ಬುಕ್ ಮಾಡಿದ್ದಕ್ಕೆ ಸೋಪು ಕೊಟ್ಟ ಫ್ಲಿಪ್‌ಕಾರ್ಟ್: ಗ್ರಾಹಕ ಮಾಡಿದ್ದೇನು..?

Written By:

ಭಾರತದಲ್ಲಿ ಆನ್‌ಲೈನ್ ಮಾರುಕಟ್ಟೆ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದು, ಗ್ರಾಹಕರಿಗೆ A ಟು Z ವಸ್ತುಗಳನ್ನು ಮತ್ತು ಸೇವೆಗಳನ್ನು ಒದಗಿಸುತ್ತಿವೆ. ಆಫ್‌ಲೈನ್ ಮಾರುಕಟ್ಟೆಗಿಂತಲೂ ಗ್ರಾಹಕರು ಮರುಳಾಗುವಂತಹ ಆಫರ್ ಹಾಗೂ ಸೇಲ್‌ಗಳನ್ನು ಆಯೋಜನೆ ಮಾಡುವ ಮೂಲಕ ಹೆಚ್ಚಿನ ಪ್ರಮಾಣದ ವಹಿವಾಟನ್ನು ಮಾಡುತ್ತಿವೆ. ಅದರಲ್ಲಿಯೂ ಸ್ಮಾರ್ಟ್‌ಫೋನ್ ಸೇರಿದಂತೆ ಎಲೆಕ್ಟ್ರಾನಿಕ್ ವಸ್ತುಗಳ ಖರೀದಿಗೆ ಆನ್‌ಲೈನ್ ಮಾರುಕಟ್ಟೆಯೇ ಬೆಸ್ಟ್ ಎನ್ನುವ ಮಾತು ಗ್ರಾಹಕ-ಬಳಕೆದಾರರಿದಲೇ ಬರುವಂತೆ ಮಾಡುವಷ್ಟು ಮಟ್ಟಕ್ಕೆ ಬೆಳೆದಿವೆ. ಆದರೆ ಇದರ ಬೆನ್ನಲ್ಲಿಯೇ ಆನ್‌ಲೈನ್ ಮಾರುಕಟ್ಟೆಯಲ್ಲಿ ವಂಚನೆಯ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

 ಐಫೋನ್ ಬುಕ್ ಮಾಡಿದ್ದಕ್ಕೆ ಸೋಪು ಕೊಟ್ಟ ಫ್ಲಿಪ್‌ಕಾರ್ಟ್: ಗ್ರಾಹಕ ಮಾಡಿದ್ದೇನು..?

ಇದೇ ಮಾದರಿಯಲ್ಲಿ ಗಣರಾಜ್ಯೋತ್ಸವ ಅಂಗವಾಗಿ ನಡೆದ ಸೇಲ್‌ನಲ್ಲಿ ಮುಂಬೈನ ಇಂಜಿನಿಯರ್ ಒಬ್ಬರು ಫ್ಲಿಪ್‌ಕಾರ್ಟಿನಲ್ಲಿ ನೂತನ ಐಫೋನ್‌ವೊಂದನ್ನುಆರ್ಡರ್ ಮಾಡಿದ್ದರು, ಆಫರ್ ಇದ್ದ ಕಾರಣ ಮುಂಚಿತವಾಗಿಯೇ ಸಂಪೂರ್ಣ ಹಣವನ್ನು ಪಾವತಿ ಮಾಡಿದ್ದರು. ಅದರಂತೆ ಫ್ಲಿಪ್‌ಕಾರ್ಟ್‌ನಿಂದ ಪಾರ್ಸಲ್ ಸಹ ಬಂದಿದ್ದು, ಅದನ್ನು ತೆಗೆದು ನೋಡಿ ಶಾಕ್ ಆಗಿದ್ದಾರೆ, ಆರ್ಡರ್ ಮಾಡಿದ್ದ ಐಫೋನಿನ ಬದಲಿಗೆ ಬಟ್ಟೆ ಒಗೆಯುವ ಸಾಬೂನು ಅನ್ನು ಫ್ಲಿಪ್‌ಕಾರ್ಟ್ ಕಳುಹಿಸಿತ್ತು.

Here's how the Face ID of the newly launched Oppo A83 works (KANNADA)

ಓದಿರಿ: ಹಳೇ ಫೋನ್ ನೀಡಿ: ಬದಲಿಗೆ ಹೊಚ್ಚ ಹೊಸ ಒನ್‌ಪ್ಲಸ್ 5T ಪಡೆದುಕೊಳ್ಳಿ.! ಹೇಗೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ದೂರು ದಾಖಲು:

ದೂರು ದಾಖಲು:

ಜನವರಿ 22ರಂದು ಫ್ಲಿಪ್‌ಕಾರ್ಟಿನಲ್ಲಿ ಐಫೋನ್ 8 ಆರ್ಡರ್ ಮಾಡಿದ 26 ವರ್ಷದ ಮೆಹಬೂಬ್, ಅಂದೇ ರೂ. 55,000 ರೂ.ಗಳನ್ನು ಮುಂಚಿತವಾಗಿಯೇ ಪಾವತಿ ಮಾಡಿದ್ದಾರೆ. ಇದರಂತೆ ಫ್ಲಿಪ್‌ಕಾರ್ಡ್ ಕಳುಹಿಸಿದ ಪಾರ್ಸಲ್ ಸ್ವೀಕರಿಸಿ ಓಪನ್ ಮಾಡಿದ ಸಂದರ್ಭದಲ್ಲಿ ಐಫೋನ್‌ ಬದಲಿಗೆ ಸೋಪು ಇರುವುದನ್ನು ನೋಡಿ ತಾವು ಮೋಸ ಹೋಗಿರುವುದನ್ನು ಅರಿತಿದ್ದಾರೆ. ಈ ಹಿನ್ನಲೆಯಲ್ಲಿ ಫ್ಲಿಪ್‌ ಕಾರ್ಟ್ ವಿರುದ್ಧ ಚಿಚಿಂಗ್ ಕೇಸ್ ದಾಖಲಿಸಿದ್ದಾರೆ ಎನ್ನಲಾಗಿದೆ.

ಪರಿಹಾರ:

ಪರಿಹಾರ:

ಈ ಘಟನೆ ಕುರಿತಂತೆ ಪ್ರತಿಕ್ರಿಯೇ ನೀಡಿರುವ ಫ್ಲಿಪ್‌ಕಾರ್ಟ್‌ ಅಧಿಕಾರಿಗಳು, ಈ ಘಟನೆಯನ್ನು ಗಂಭೀರವಾಗಿ ಫ್ಲಿಪ್‌ಕಾರ್ಟ್ ಸ್ವೀಕರಿಸಲಿದ್ದು, ಗ್ರಾಹಕರ ನಂಬಿಕೆಯೇ ಕಂಪನಿಗೆ ಮುಖ್ಯ. ಈ ಘಟನೆಯಿಂದ ಗ್ರಾಹಕರಿಗೆ ಕಂಪನಿ ಮೇಲೆ ನಂಬಿಕೆ ಕಡಿಮೆಯಾಗಿದ್ದು, ಈ ಹಿನ್ನಲೆಯಲ್ಲಿ ಈ ತಪ್ಪು ಹೇಗಾಯಿತು, ಯಾರು ಮಾಡಿದ್ದು ಎಂಬದನ್ನು ಕುರಿತು ಆಂತರಿಕವಾಗಿ ತನಿಖೆಯನ್ನು ನಡೆಸುವುದಾಗಿ ತಿಳಿಸಿದ್ದಾರೆ, ಅಲ್ಲದೇ ಗ್ರಾಹಕರಿಗೆ ನ್ಯಾಯ ಒದಗಿಸುವುದಾಗಿ ಮಾಹಿತಿ ನೀಡಿದ್ದಾರೆ.

ಈ ಹಿಂದೆಯೂ ನಡೆದಿತ್ತು.

ಈ ಹಿಂದೆಯೂ ನಡೆದಿತ್ತು.

ಫ್ಲಿಪ್‌ಕಾರ್ಟ್‌ನಿಂದ ವಸ್ತುಗಳನ್ನು ಖರೀದಿಸಿದ ಸಂದರ್ಭಗಳಲ್ಲಿ ಈ ಹಿಂದೆಯೂ ಇದೇ ಮಾದರಿಯ ಘಟನೆಗಳು ವರದಿಯಾಗಿದ್ದವು ಎನ್ನಲಾಗಿದ್ದು, ಸ್ಮಾರ್ಟ್‌ಫೋನ್‌ ಬುಕ್ ಮಾಡಿದವರಿಗೆ ಸೋಪುಗಳು ಹಿಂದೆಯೂ ಸಾಕಷ್ಟು ಭಾರಿ ಲಭ್ಯವಾಗಿದೆ.

ಒನ್‌ಪ್ಲಸ್‌ ಬದಲಿಗೆ ಬಜೆಟ್ ಫೋನ್:

ಒನ್‌ಪ್ಲಸ್‌ ಬದಲಿಗೆ ಬಜೆಟ್ ಫೋನ್:

ಇದೇ ಕೆಲವು ದಿನಗಳ ಹಿಂದೆ ಒನ್‌ಪ್ಲಸ್ ಬುಕ್ ಮಾಡಿದವರಿಗೆ ಅಮೆಜಾನ್‌ ಶಾಕ್ ನೀಡಿತ್ತು. ಟಾಪ್ ಆಂಡ್ರಾಯ್ಡ್ ಫೋನ್‌ ಬದಲಿಗೆ ಬಜೆಟ್ ಬೆಲೆಯ ಸ್ಮಾರ್ಟ್‌ಫೋನ್ ವೊಂದನ್ನು ಕಳುಹಿಸಿ ಕೈ ತೊಳೆದುಕೊಂಡಿತ್ತು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
orders Apple iPhone 8, Flipkart delivers a bar of soap. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot