Just In
- 1 hr ago ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- 4 hrs ago Bengaluru: ಆ ಆಪ್ ಇನ್ಸ್ಟಾಲ್ ಮಾಡಿದ್ದೇ ತಡ 5.2 ಕೋಟಿ ರೂ. ಮಾಯ.. ನೀವು ಎಚ್ಚರ
- 6 hrs ago Realme: ರಿಯಲ್ಮಿ ನಾರ್ಜೋ 70 5G, ನಾರ್ಜೋ 70x 5G ಸ್ಮಾರ್ಟ್‌ಫೋನ್ ಲಾಂಚ್! ಸಖತ್ ಫೀಚರ್ಸ್... ಬೆಲೆ ಎಷ್ಟು?
- 7 hrs ago OnePlus: ಒನ್ಪ್ಲಸ್ 13 ಸ್ಮಾರ್ಟ್‌ಫೋನ್ ಡಿಸ್ಪ್ಲೇ, ವಿನ್ಯಾಸ ಲೀಕ್!..ಯಾವಾಗ ಲಾಂಚ್?
Don't Miss
- Sports DC vs GT IPL 2024: ಅಕ್ಷರ್, ಪಂತ್ ಭರ್ಜರಿ ಬ್ಯಾಟಿಂಗ್; ಗುಜರಾತ್ಗೆ ಸವಾಲಿನ ಗುರಿ ನೀಡಿದ ಡೆಲ್ಲಿ
- News ಎಸ್ಸಿ, ಎಸ್ಟಿ ಮೀಸಲಾತಿ ಮುಸ್ಲಿಮರಿಗೆ ಹಂಚಿಕೆ: ಸ್ಪಷ್ಟನೆ ನೀಡಿದ ಸಿಎಂ ಸಿದ್ದರಾಮಯ್ಯ
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Movies Swathi Royal; ಒಂಬತ್ತನೇ ಕ್ಲಾಸ್ ನಲ್ಲೇ ಲವ್ವಲ್ಲಿ ಬಿದ್ದ ಅಮೃತಧಾರೆ ಅಪರ್ಣಾ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಫೇಸ್‌ಬುಕ್‌ನಲ್ಲಿ ಶೇರ್ ಮಾಡಿಕೊಳ್ಳಲೇಬಾರದ ಸಂಗತಿಗಳು ಏನೇನು ?
ಸಾಮಾಜಿಕ ಜಾಲತಾಣವೆಂಬುದು ಮುಕ್ತ ವೇದಿಕೆಯೇನೋ ನಿಜ ಆದರಿಲ್ಲಿ ನೀವು ನಿಮಗೆ ಬೇಕಾದ್ದನ್ನು ಹಂಚಿಕೊಳ್ಳುವಂತಿಲ್ಲ ಎಂಬ ಸತ್ಯ ನಿಮಗೆ ಗೊತ್ತೇ? ನೀವು ಮುಗ್ಧವಾಗಿ ತಾಣದಲ್ಲಿ ಹಾಕಿರುವ ಪೋಸ್ಟ್ ಕೂಡ ನಿಮ್ಮ ಭವಿಷ್ಯಕ್ಕೆ ತೊಂದರೆಯನ್ನುಂಟು ಮಾಡುವ ಸಾಧ್ಯತೆ ಇದೆ. ಆದರೆ ತಾಣದಲ್ಲಿ ಯಾವುದನ್ನು ಹಂಚಬೇಕು ಯಾವುದನ್ನು ಹಂಚಬಾರದು ಎಂಬ ಸತ್ಯವನ್ನು ನೀವು ತಿಳಿದುಕೊಂಡಿರುವುದು ಅತ್ಯವಶ್ಯಕವಾಗಿದೆ.
ಓದಿರಿ: ಸ್ಮಾರ್ಟ್‌ಫೋನ್ ಸ್ಕ್ರೀನ್ ಒಡೆದಿದ್ದರೆ ಇಲ್ಲಿದೆ ಪರಿಹಾರ
ಇಂದಿನ ಲೇಖನ ಈ ಮಾದರಿಯ ಯಾವೆಲ್ಲಾ ಅಂಶಗಳನ್ನು ಹಂಚಿಕೊಳ್ಳಬಾರದು ಎಂಬುದನ್ನು ನಾವು ತಿಳಿಸಲಿದ್ದು ಇದು ಏಕೆ ಎಂಬುದನ್ನು ನೀವು ಅರಿತುಕೊಳ್ಳಿರುವಿರಿ.
ರಜಾದಿನಗಳಲ್ಲಿ ಹೊರಹೋಗಿದ್ದಾಗ
ನೀವು ಎಲ್ಲಿಗಾದರೂ ಪ್ರಯಾಣ ಬೆಳೆಸುತ್ತಿದ್ದೀರಿ ಎಂದಾಗ ಅದನ್ನು ತಾಣದಲ್ಲಿ ಪೋಸ್ಟ್ ಮಾಡಲು ಹೋಗದಿರಿ. ನೀವು ಇಂತಹ ಮಾಹಿತಿಗಳನ್ನು ತಾಣದಲ್ಲಿ ಪೋಸ್ಟ್ ಮಾಡಿದಾಗ ಇದನ್ನು ಬೇರೆ ರೀತಿಯಲ್ಲಿ ಬಳಸುವ ಸಾಧ್ಯತೆ ಇರುತ್ತದೆ. ನಿಮ್ಮ ಪ್ರಯಾಣದ ವಿಚಾರಗಳನ್ನು ತಾಣದಲ್ಲಿ ಹಾಕಲೇಬೇಕು ಎಂದಾದಲ್ಲಿ ಪ್ರಯಾಣ ಮುಗಿಸಿದ ನಂತರ ಈ ಕೆಲಸವನ್ನು ಮಾಡಿ.
ಜಿಯೋಲೊಕೇಶನ್ ಮತ್ತು ಚೆಕ್ ಇನ್ಸ್
ಸ್ಮಾರ್ಟ್‌ಫೋನ್‌ನಂತೆಯೇ, ನಿಮ್ಮ ಬ್ರೌಸರ್ ನಿಮ್ಮ ಜಿಪಿಎಸ್ ಕೋರ್ಡಿನೇಶನ್‌ಗಳನ್ನು ಟ್ರ್ಯಾಕ್ ಮಾಡುತ್ತದೆ. ಇದರಿಂದಾಗಿಯೇ ನಿಮ್ಮ ತಾಣಗಳು ನೀವು ಅಪ್‌ಡೇಟ್ ಮಾಡಿದಂತೆಯೇ ಅದನ್ನು ಟ್ರ್ಯಾಕ್ ಮಾಡುತ್ತದೆ. ಇದನ್ನು ಜಿಯೋಲೊಕೇಶನ್ ಎಂಬುದಾಗಿ ಕರೆಯುತ್ತಾರೆ. ನಿಮ್ಮ ಈ ಮಾಹಿತಿಯನ್ನು ಬಳಸಿಕೊಂಡು ಇತರರು ದುರುಪಯೋಗಪಡಿಸಿಕೊಳ್ಳಬಹುದಾಗಿದೆ.
ದೂರುಗಳನ್ನು ದಾಖಲಿಸುವುದು
ನಿಮ್ಮ ಕಚೇರಿಯಲ್ಲಿ ನಡೆದಿರುವ ಘಟನೆಗಳನ್ನು ತಾಣದಲ್ಲಿ ಪೋಸ್ಟ್ ಮಾಡದಿರಿ. ಅಂತೆಯೇ ನಿಮ್ಮ ಮೇಲಾಧಿಕಾರಿಗಳ ಮೇಲೆ ದೂರು ಸಲ್ಲಿಸುತ್ತಿದ್ದೀರಿ ಎಂದಾದಲ್ಲಿ ಹೆಚ್ಚು ಕಾಳಜಿಯಿಂದಿರಿ. ಇದರಿಂದ ನಿಮಗೆ ತೊಂದರೆಯಾಗುವ ಸಂಭವ ಇರುತ್ತದೆ.
ಸ್ವಯಂ ದೋಷಾರೋಪಣೆ
ತಾಣದಲ್ಲಿ ನೀವು ಕಾಣುತ್ತಿರುವುದೆಲ್ಲಾ ನಿಜವಾಗಬೇಕೆಂದಿಲ್ಲ. ಕೆಲವೊಮ್ಮೆ ಜನರು ಮಾಡುವ ಅಪಾಯಕಾರಿ ಕೃತ್ಯಗಳೆಂದರೆ ಅಪಾಯಕಾರಿ ವಿಧಾನದಲ್ಲಿ ಸೆಲ್ಫಿ ತೆಗೆಸಿಕೊಳ್ಳುವುದು, ಕುಡಿದು ಡ್ರೈವ್ ಮಾಡುವುದು ಇದೆಲ್ಲಾ ಸಾಹಸಗಳಾದರೂ ಇಂತಹ ಪೋಸ್ಟ್‌ಗಳನ್ನು ದಾಖಲಿಸುವುದಕ್ಕೆ ಸಾಕ್ಷಿಗಳು ಬೇಕಾಗುತ್ತದೆ. ಇದರಿಂದ ನಿಮಗೆ ಜೈಲು ಆಗುವ ಸಂಭವ ಕೂಡ ಇರುತ್ತದೆ.
ದುಬಾರಿ ವಸ್ತುಗಳ ಖರೀದಿ
ನೀವು ದುಬಾರಿ ವಸ್ತುಗಳಾದ ಕಾರು, ಫ್ರಿಡ್ಜ್, ಬೈಕ್ ಮೊದಲಾದವುಗಳನ್ನು ಖರೀದಿಸಿ ಅವುಗಳನ್ನು ತಾಣದಲ್ಲಿ ಪೋಸ್ಟ್ ಮಾಡುವುದು ನಿಮಗೆ ಸಂತೋಷವನ್ನುಂಟು ಮಾಡಿದರೂ ಇದರಿಂದ ನೀವು ಅಪಾಯಕ್ಕೆ ಸಿಲುಕಿತ್ತೀರಿ. ನಿಮ್ಮನ್ನು ಕಳ್ಳಕಾರು ದೋಚುವ ಸಂಭವ ಕೂಡ ಇರುತ್ತದೆ.
ವೈಯಕ್ತಿಕ ಸಲಹೆಗಳನ್ನು ನೀಡುವುದು
ನೀವು ವೈದ್ಯರು ಅಥವಾ ನ್ಯಾಯವಾದಿಗಳಾಗಿದ್ದಲ್ಲಿ ಜನರಿಗೆ ವೈಯಕ್ತಿಕ ಸಲಹೆಗಳನ್ನು ಸಾಮಾಜಿಕ ತಾಣದಲ್ಲಿ ಪೋಸ್ಟ್ ಮಾಡುವುದು ಸರಿಯಲ್ಲ. ಇದರಿಂದ ಸಲಹೆ ಪಡೆದುಕೊಂಡ ಜನರಿಗೆ ಮತ್ತು ಸಲಹೆ ನೀಡಿದ ನಿಮಗೆ ತೊಂದರೆ ಖಂಡಿತ. ಆರ್ಥಿಕ, ಡಯೆಟ್, ತೂಕ ಇಳಿಕೆ, ಸಂಬಂಧ ಮೊದಲಾದ ಸಲಹೆಗಳನ್ನು ನೀಡದಿರಿ.
ಸ್ಕ್ಯಾಮ್‌ಗಳು
ನಿಮ್ಮ ಸ್ನೇಹಿತರಿಗೆ ಈ ತಾಣಗಳ ಮೂಲಕ ತೊಂದರೆಗಳನ್ನು ಉಂಟುಮಾಡಬೇಡಿ. ಸಂಪರ್ಕಗಳನ್ನು ಹಂಚಿಕೊಳ್ಳುವುದು, ಆಹ್ವಾನಗಳನ್ನು ಆಮಂತ್ರಿಸುವುದು, ಗಿವ್ ಅವೇ ಮೊದಲಾದ ಕಾರ್ಯಗಳನ್ನು ನಡೆಸದಿರಿ.
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999