Subscribe to Gizbot

ಸ್ಮಾರ್ಟ್‌ಫೋನ್ ಸ್ಕ್ರೀನ್ ಒಡೆದಿದ್ದರೆ ಇಲ್ಲಿದೆ ಪರಿಹಾರ

Written By:

ದುಬಾರಿ ಸ್ಮಾರ್ಟ್‌ಫೋನ್ ಖರೀದಿಸಿದ್ದೀರಿ ಮತ್ತು ಅದರ ಫೋನ್ ಸ್ಕ್ರೀನ್ ಒಡೆದು ಹೋಗಿದೆ ಅದನ್ನು ಹೇಗೆ ಫಿಕ್ಸ್ ಮಾಡಬೇಕೆಂಬ ಗೊಂದಲದಲ್ಲಿದ್ದೀರಾ? ಆದರೆ ಕೆಲವೊಂದು ಸರಳ ಸಲಹೆಗಳ ಮೂಲಕ ಈ ಸಮಸ್ಯೆಗಳನ್ನು ಭದ್ರಪಡಿಸಬಹುದು ಎಂಬುದು ನಿಮಗೆ ಗೊತ್ತೇ? ದುಬಾರಿ ಬೆಲೆಯ ಸ್ಕ್ರೀನ್ ಪ್ರೊಟೆಕ್ಟರ್ ಅನ್ನು ಫೋನ್‌ಗೆ ಅಳವಡಿಸುವುದು ಎಲ್ಲರಿಗೂ ಸಾಧ್ಯವಿಲ್ಲದ ಮಾತಾಗಿದೆ ಆದರೆ ಕೆಲವೊಂದು ಪರಿಹಾರೋಪಾಯಗಳ ಮೂಲಕ ಫೋನ್ ಸ್ಕ್ರೀನ್ ಅನ್ನು ಸಂರಕ್ಷಿಸಹುದಾಗಿದೆ.

ಓದಿರಿ: ವಾಟ್ಸಾಪ್‌ನ ಟಾಪ್ 15 ಫೀಚರ್ಸ್: ನೀವು ಬಳಸುತ್ತಿದ್ದೀರಿ ತಾನೇ?

ಇಂದಿನ ಲೇಖನದಲ್ಲಿ ನಿಮ್ಮ ಫೋನ್‌ ಸ್ಕ್ರೀನ್‌ಗೆ ಬದಲಿ ವ್ಯವಸ್ಥೆಯನ್ನು ಮಾಡುವುದು ಹೇಗೆ ಎಂಬುದನ್ನು ಕೆಳಗಿನ ಸ್ಲೈಡರ್ ಮೂಲಕ ಅರಿತುಕೊಳ್ಳೋಣ. ಮನೆಯಲ್ಲೇ ಈ ಪರಿಹಾರಗಳು ಅತಿ ಕಡಿಮೆ ಖರ್ಚಿನಲ್ಲಿ ಲಭ್ಯವಿದ್ದು ನಿಮಗಿದರ ಸದ್ವಿನಿಯೋಗವನ್ನು ಮಾಡಿಕೊಳ್ಳಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬಿಳಿ ಬಣ್ಣದ ಪೇಸ್ಟ್

ಬಿಳಿ ಬಣ್ಣದ ಪೇಸ್ಟ್

ನಿಮ್ಮ ಸ್ಕ್ರೀನ್‌ನಲ್ಲಿ ಸಣ್ಣಗಿನ ಕ್ರಾಕ್ ಆಗಿದೆ ಎಂದಾದಲ್ಲಿ ಟೂತ್‌ಪೇಸ್ಟ್ ಬಳಸಿ ಇದನ್ನು ಮರೆಮಾಡಬಹುದಾಗಿದೆ. ನೀವು ಬಿಳಿ ಬಣ್ಣದ ಪೇಸ್ಟ್ ಅನ್ನು ಇದಕ್ಕಾಗಿ ಬಳಸಿದ್ದೀರಿ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.

ಜೆಲ್‌ ಪೇಸ್ಟ್

ಜೆಲ್‌ ಪೇಸ್ಟ್

ಜೆಲ್‌ ಪೇಸ್ಟ್ ಅನ್ನು ಬಳಸದೇ ಬಿಳಿ ಬಣ್ಣದ ಪೇಸ್ಟ್ ಅನ್ನು ಪರದೆಯ ಕ್ರ್ಯಾಕ್ ತೊಡೆಯಲು ಉಪಯೋಗಿಸಿ ಪೇಸ್ಟ್ ಅನ್ನು ಪರದೆಗೆ ಉಜ್ಜಿ ಮತ್ತು ಮೃದು ಬಟ್ಟೆಯನ್ನು ಬಳಸಿಕೊಂಡು ಸ್ಕ್ರೀನ್ ಒರೆಸಿ.

ಬೇಕಿಂಗ್ ಸೋಡ

ಬೇಕಿಂಗ್ ಸೋಡ

ಬೇಕಿಂಗ್ ಸೋಡಾವನ್ನು ಬಳಸಿ ದಪ್ಪನೆಯ ದ್ರಾವಣವನ್ನು ತಯಾರಿಸಿ. ಒಂದು ಭಾಗ ಬೇಕಿಂಗ್ ಸೋಡಾ ಮತ್ತು ಇನ್ನೊಂದು ಭಾಗ ನೀರು ಈ ರೀತಿಯ ಮಿಶ್ರಣವನ್ನು ಸಿದ್ಧಮಾಡಿಟ್ಟುಕೊಳ್ಳಿ. ದಪ್ಪನೆಯ ಪೇಸ್ಟ್ ತಯಾರುಗೊಳ್ಳುವವರೆಗೆ ಕಲಸಿ.

ಮೈಕ್ರೋಫೈಬರ್ ಬಟ್ಟೆ

ಮೈಕ್ರೋಫೈಬರ್ ಬಟ್ಟೆ

ಮೈಕ್ರೋಫೈಬರ್ ಬಟ್ಟೆಯನ್ನು ಬಳಸಿ ಈ ಪೇಸ್ಟ್ ಅನ್ನು ಸ್ಕ್ರೀನ್‌ಗೆ ಬಳಸಿ ಮತ್ತು ಸ್ಕ್ರೀನ್‌ನ ಹಾನಿಯಾದ ಭಾಗಕ್ಕೆ ವೃತ್ತಾಕಾರವಾಗಿ ಉಜ್ಜಿರಿ.

ಸ್ಯಾಂಡ್‌ಪೇಪರ್ ಬಳಸಿ

ಸ್ಯಾಂಡ್‌ಪೇಪರ್ ಬಳಸಿ

ಸ್ಯಾಂಡ್‌ಪೇಪರ್ ಬಳಸಿ ಪರದೆಯ ಸ್ಕ್ರಾಚ್‌ಗಳನ್ನು ನಿವಾರಿಸಬಹುದಾಗಿದೆ. ಒರಟು ಸ್ಯಾಂಡ್‌ಪೇಪರ್ ಅನ್ನು ಬಳಸಿ ಪರದೆಗೆ ಒತ್ತಿಹಿಡಿಯಿರಿ

ಸುಗ್ರು

ಸುಗ್ರು

ಸುಗ್ರು ಒಂದು ಜಾದೂ ಮಾಡುವ ಉತ್ಪನ್ನವಾಗಿದೆ. ನಿಮ್ಮ ಪೋನ್‌ನ ರಿಪೇರಿಯಲ್ಲಿ ಇದು ಅತ್ಯುತ್ತಮವಾಗಿ ಕೆಲಸ ಮಾಡುತ್ತದೆ ಕೂಡ. ನಿಮ್ಮ ಫೋನ್ ಬಟನ್‌ಗಳು ಒಡೆದುಹೋಗಿದೆ ಎಂದಾದಲ್ಲಿ ಸುಗ್ರು ಪರಿಹಾರ ವಿಧಾನವಾಗಿದೆ.

ನಿಮ್ಮ ಫೋನ್ ಒದ್ದೆ

ನಿಮ್ಮ ಫೋನ್ ಒದ್ದೆ

ನಿಮ್ಮ ಫೋನ್ ಒದ್ದೆಯಾಗಿದೆಯೇ? ಫೋನ್ ಅನ್ನು ಅಕ್ಕಿಯ ಡಬ್ಬದಲ್ಲಿ ಹಾಕಿಡಿ. ಇದು ಸ್ವಲ್ಪ ವಿಭಿನ್ನ ಯೋಜನೆಯಾದರೂ ಉತ್ತಮವಾಗಿ ಕೆಲಸ ಮಾಡುತ್ತದೆ.

 ಅಕ್ಕಿಯ ಡಬ್ಬ

ಅಕ್ಕಿಯ ಡಬ್ಬ

ಫೋನ್ ಅನ್ನು ಅಕ್ಕಿಯ ಡಬ್ಬದಲ್ಲಿ ನೀವು 7 ದಿನಗಳ ಕಾಲ ಹಾಕಿಡಬೇಕಾಗುತ್ತದೆ.

ಹೆಡ್‌ಫೋನ್ ಸಮಸ್ಯೆ

ಹೆಡ್‌ಫೋನ್ ಸಮಸ್ಯೆ

ಹೆಡ್‌ಫೋನ್ ಸಮಸ್ಯೆಯನ್ನು ದೂರಮಾಡಲು ಹತ್ತಿಯ ಬಡ್ಸ್‌ಗಳು ಅತ್ಯುತ್ತಮವಾಗಿದೆ. ಹೆಡ್‌ಫೋನ್‌ನ ಒಳಭಾಗಕ್ಕೆ ಕಾಟನ್ ಬಡ್‌ಗಳನ್ನು ಬಳಸಿ ಸ್ವಚ್ಛಮಾಡಿ.

ಫ್ಯಾಂಟಮ್ ಗ್ಲಾಸ್

ಫ್ಯಾಂಟಮ್ ಗ್ಲಾಸ್

ಫ್ಯಾಂಟಮ್ ಗ್ಲಾಸ್ ಕೂಡ ನಿಮ್ಮ ಫೋನ್ ಪರದೆಯಲ್ಲಿ ಮ್ಯಾಜಿಕ್ ಅನ್ನು ಉಂಟುಮಾಡುತ್ತದೆ ಎಂಬುದನ್ನು ಮಾತ್ರ ಮರೆಯಬೇಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
In this article we are giving you solution on phone breakage how to fix it.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot