ವಾಹ್! ಒದ್ದೆ ಫೋನ್‌ಗೆ ಅಕ್ಕಿಚೀಲವೇ ಸರಿಯಾದ ಮದ್ದು

By Shwetha

  ಫೋನ್ ನೀರಿಗೆ ಬೀಳುವ ಸಂಭವ ಹೆಚ್ಚು ಕಡಿಮೆ ಎಲ್ಲಾ ಫೋನ್ ಬಳಕೆದಾರರು ಎದುರಿಸಿದ ಸಮಸ್ಯೆಯಾಗಿದೆ. ಮಳೆಗಾಲದಲ್ಲಿ ಫೋನ್ ಒದ್ದೆಯಾಗುವುದು ಸರ್ವೇ ಸಾಮಾನ್ಯವಾದರೂ ಕೆಲವೊಂದು ಅನಿರೀಕ್ಷಿತ ಸಂದರ್ಭಗಳಲ್ಲಿ ನಿಮ್ಮ ಫೋನ್‌ಗೆ ನೀರಿನಿಂದ ಹಾನಿಯುಂಟಾಗುವುದು ಹೆಚ್ಚು ತೊಂದರೆಯನ್ನುಂಟು ಮಾಡುವ ಸಮಸ್ಯೆಯಾಗಿದೆ.

  ಓದಿರಿ: ಫೋನ್‌ನ ಹ್ಯಾಂಗಿಂಗ್ ಸಮಸ್ಯೆಯನ್ನು ನಿವಾರಿಸುವುದು ಹೇಗೆ?

  ನಿಮ್ಮ ಫೋನ್ ನೀರಿಗೆ ಬಿದ್ದಾಗ ಗಾಬರಿಯಾಗದೇ ಬೆದರದೇ ಕೆಲವೊಂದು ಮುನ್ಸೂಚನಾ ಕ್ರಮಗಳನ್ನು ನೀವು ಅನುಸರಿಸಿದರೆ ಇದರಿಂದ ಪರಿಹಾರವನ್ನು ಕ್ಷಿಪ್ರವಾಗಿ ನಿಮಗೆ ಪಡೆದುಕೊಳ್ಳಬಹುದಾಗಿದೆ. ಹೌದು ಆ ವಿಧಾನಗಳು ಯಾವುವು ಎಂಬುದನ್ನು ಇಂದಿನ ಲೇಖನದಲ್ಲಿ ನಾವು ಅರಿತುಕೊಳ್ಳಲಿರುವೆವು.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಸ್ವಿಚ್ ಆಫ್ ಮಾಡಿ

  ನಿಮ್ಮ ಫೋನ್ ಒದ್ದೆಯಾದಾಗ ಶಾರ್ಟ್ ಸರ್ಕ್ಯೂಟ್ ಮೊದಲಾದ ಸಮಸ್ಯೆಗಳು ಸಂಭವಿಸುವುದರಿಂದಾಗಿ ಅದನ್ನು ಸ್ವಿಚ್ ಆಫ್ ಮಾಡಿ. ಅಂತೆಯೇ ಫೋನ್‌ನ ಒಳಭಾಗದಲ್ಲಿ ಯಾವುದೇ ನಷ್ಟ ಸಂಭವಿಸುವ ಕಾರಣಗಳೂ ಇರುವುದಿಲ್ಲ.

  ಎಲ್ಲವನ್ನೂ ಹೊರತೆಗೆಯಿರಿ

  ಫೋನ್ ಸ್ವಿಚ್ ಆಫ್ ಮಾಡಿದ ನಂತರ, ಫೋನ್‌ನಿಂದ ಎಲ್ಲವನ್ನೂ ಕಳಚಿರಿ. ಬ್ಯಾಟರಿ, ಸಿಮ್ ಕಾರ್ಡ್, ಮೆಮೊರಿ ಕಾರ್ಡ್‌, ಸ್ಟೈಲಸ್, ಕೇಸ್, ಇತ್ಯಾದಿ.

  ಶೇಕ್ ಮಾಡಿ

  ಹೆಡ್‌ಫೋನ್ ಜ್ಯಾಕ್, ಚಾರ್ಜಿಂಗ್ ಪೋರ್ಟ್ ಅಥವಾ ಫಿಸಿಕಲ್ ಬಟನ್ ಒಳಭಾಗದಲ್ಲಿ ನೀರು ಸೇರಿದ್ದರೆ ನೀವು ಬಲವಾಗಿ ಫೋನ್ ಅನ್ನು ಕುಲುಕುವುದು ನೀರನ್ನು ಹೊರಹಾಕುತ್ತದೆ. ನಂತರ ಒಣಗಿರುವ ಬಟ್ಟೆಯಿಂದ ಫೋನ್ ಒಳಭಾಗವನ್ನು ಒರೆಸಿ.

  ಅಕ್ಕಿಯಲ್ಲಿ ಹುದುಗಿಸಿ

  ಇದು ಹೆಚ್ಚು ಪ್ರಚಲಿತದಲ್ಲಿರುವ ವಿಧಾನವಾಗಿದ್ದು ನಿಮಗೆ ಇದನ್ನು ಪ್ರಯತ್ನಿಸಬಹುದಾಗಿದೆ. ಗಾಳಿಯಾಡದ ಅಕ್ಕಿ ಬ್ಯಾಗ್‌ನಲ್ಲಿ ಫೋನ್, ಬ್ಯಾಟರಿ ಮೊದಲಾದವನ್ನು ಹುದುಗಿಸಿಡಿ. ಅಕ್ಕಿಯು ಡಿವೈಸ್‌ಗಳಲ್ಲಿರುವ ನೀರನ್ನು ಹೀರಿಕೊಳ್ಳುತ್ತದೆ.

  ಕಾಯಿರಿ

  24 ರಿಂದ 48 ಗಂಟೆಗಳವರೆಗೆ ಫೋನ್ ಅಕ್ಕಿಯಲ್ಲಿರಲಿ. ತಾಳ್ಮೆಯಿಂದಿರಿ.

  ಇನ್ನೂ ಕಾರ್ಯನಿರ್ವಹಿಸದೇ ಇದ್ದಲ್ಲಿ

  ಇನ್ನೂ ನಿಮ್ಮ ಫೋನ್ ಕಾರ್ಯನಿರ್ವಹಿಸುತ್ತಿಲ್ಲ ಎಂದಾದಲ್ಲಿ ಉತ್ತಮ ಫೋನ್ ಆಪರೇಟರ್‌ಗಳ ಬಳಿ ಅದನ್ನು ಕೊಂಡೊಯ್ಯಿರಿ ಮತ್ತು ಪರಿಶೀಲಿಸಿಕೊಳ್ಳಿ.

  ಜಾಗರೂಕರಾಗಿರಿ

  ನಿಮ್ಮ ಫೋನ್ ಅನ್ನು ಆದಷ್ಟು ಜಾಗರೂಕತೆಯಿಂದ ಕಾಪಾಡಿಕೊಳ್ಳುವುದು ಕೂಡ ಅತಿ ಮುಖ್ಯವಾಗಿದೆ. ಮಳೆಗಾಲದಲ್ಲಿ ನೀವು ಹೊರಗಡೆ ಇದ್ದಾಗ ವಾಟರ್ ಪ್ರೂಫ್ ಕ್ಯಾರಿ ಬ್ಯಾಗ್ ಅನ್ನು ನಿಮ್ಮೊಂದಿಗೆ ಒಯ್ಯಿರಿ. ಈ ಬ್ಯಾಗ್‌ಗಳು ಪಾರದರ್ಶಕವಾಗಿದ್ದು ನಿಮಗೆ ಕರೆಗಳು ಇಲ್ಲವೇ ಅಧಿಸೂಚನೆಗಳು ಕಾಣುತ್ತವೆ.

  ಇನ್ಶುರೆನ್ಸ್ ಪಡೆದುಕೊಳ್ಳಿ

  ಇನ್ನು ನೀರಿನಿಂದ ನಿಮ್ಮ ಫೋನ್ ಹಾಳಾದಲ್ಲಿ ಕೆಲವೊಂದು ಕಂಪೆನಿಗಳು ಇನ್ಶೂರೆನ್ಸ್ ಭದ್ರತೆಯನ್ನು ನೀಡುತ್ತವೆ. ಮೈಕ್ರೊ ಕವರ್ ಪ್ಲಸ್, ಸಿಸ್ಕಾ ಗ್ಯಾಜೆಟ್ ಸೆಕ್ಯೂರ್ ಮೊದಲಾದ ಇನ್ಶೂರೆನ್ಸ್ ನಿಮಗೆ ಹೆಚ್ಚು ಪ್ರಯೋಜನಕಾರಿಯಾಗಲಿವೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  It has happened to the best of us: accidentally dropping a smartphone in water and then frantically trying anything and everything to recover it. But worry not, help is here. We tell you how best you can save your smartphone if it has taken a dip in water.
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more