ನಿಮ್ಮ ಸ್ಯಾಮ್ಸಂಗ್ ಹಿಯರ್ ಫೋನಿನ ಮೇಲಿರುವ ಡಾಟ್ ಗೆ ಏನರ್ಥವೆಂದರೆ.....

|

ನಿಮ್ಮ ಬಳಿ ಸ್ಯಾಮ್ಸಂಗ್ ಹಿಯರ್ ಫೋನ್ ಇದೆಯೇ? ಅದರಲ್ಲಿ ಎಡ ಮತ್ತು ಬಲ ಎಂದು ಮಾರ್ಕ್ ಮಾಡಿದ್ದಾರೆಯೇ? ಆ ರೀತಿಯ ಮಾರ್ಕ್ ಇಲ್ಲದ ಸ್ಯಾಮ್ಸಂಗ್ ಹಿಯರ್ ಫೋನ್ ಉಪಯೋಗಿಸುವವರು ನೀವಾಗಿದ್ದರೆ ಈ ಲೇಖನ ನಿಮಗಾಗಿ.

ನಿಮ್ಮ ಸ್ಯಾಮ್ಸಂಗ್ ಹಿಯರ್ ಫೋನಿನ ಮೇಲಿರುವ ಡಾಟ್ ಗೆ ಏನರ್ಥವೆಂದರೆ.....

ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಹಿಯರ್ ಫೋನುಗಳು ಲಭ್ಯವಿದೆ; ಕೆಲವು ತುಂಬಾ ದುಬಾರಿ; ಕೆಲವು ಬಹಳ ಅಗ್ಗ. ಎಷ್ಟೋ ಅಗ್ಗದ ಹಿಯರ್ ಫೋನುಗಳು ದುಬಾರಿ ಹಿಯರ್ ಫೋನುಗಳಿಗಿಂತ ಉತ್ತಮವಾಗ ಕಾರ್ಯನಿರ್ವಹಿಸುತ್ತವೆ.

ಓದಿರಿ: ಐಫೋನ್‌ನಲ್ಲಿ ಉತ್ತಮ ಮ್ಯೂಸಿಕ್‌ ಅನುಭವಕ್ಕಾಗಿ ಟಾಪ್‌ 5 ಆಪ್‌ಗಳು

ಹಿಯರ್ ಪೋನಿನಲ್ಲಿರುವ ಕೆಲವು ಅಂಶಗಳನ್ನು ಬರಿಗಣ್ಣಿನಲ್ಲಿ ಗಮನಿಸಿರುವುದೇ ಇಲ್ಲ. ಅವು ತುಂಬಾ ಚಿಕ್ಕದಾಗಿರುತ್ತವೆ, ಮತ್ತು ನಮ್ಮ ಗಮನ ಆ ಕಡೆಗೆ ಹರಿದಿರುವುದೇ ಇಲ್ಲ. ಸ್ಯಾಮ್ಸಂಗ್ ನ ಬಹುತೇಕ ಹಿಯರ್ ಫೋನುಗಳಲ್ಲಿ ಒಂದು ಚಿಕ್ಕ ಉಬ್ಬಿದ ಡಾಟ್ ಇರುತ್ತದೆ.
ಹಿಯರ್ ಫೋನಿನ ಮೇಲಿರುವ ಆ ಚಿಕ್ಕ ಡಾಟ್ ಏನೆಂದು ನೋಡೋಣ ಬನ್ನಿ.

ಏನದು ಡಾಟ್?

ಏನದು ಡಾಟ್?

ಹಿಯರ್ ಫೋನಿನ ಮೇಲಿರುವ ಚಿಕ್ಕ ಡಾಟ್, ಆ ಡಾಟ್ ಇರುವ ಬದಿಯನ್ನು ಎಡಗಿವಿಗೆ ಹಾಕಿಕೊಂಡರೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತದ ಎಂದು ತಿಳಿಸುತ್ತದ. ನಿಮ್ಮ ಬಳಿ ಮಾರ್ಕ್ ಆಗದ ಹಿಯರ್ ಫೋನ್ ಇದ್ದರೆ ಈ ಡಾಟ್ ನ ಪ್ರಾಮುಖ್ಯತ ಉಪಯೋಗಕ್ಕೆ ಬರುತ್ತದೆ.

ಡಾಟ್ ಸಿಗದಿದ್ದರೆ ತಲೆ ಕೆರೆದುಕೊಳ್ಳಬೇಡಿ!

ಡಾಟ್ ಸಿಗದಿದ್ದರೆ ತಲೆ ಕೆರೆದುಕೊಳ್ಳಬೇಡಿ!

ಈ ಡಾಟ್ ಅನ್ನು ಕೆಲವು ಹಿಯರ್ ಫೋನುಗಳಲ್ಲಿ ಕಾಣಬಹುದು; ಬಹುತೇಕ ಹಿಯರ್ ಫೋನುಗಳಲ್ಲಿ ಅದು ಇರುವುದಿಲ್ಲ. ನಿಮ್ಮ ಹಿಯರ್ ಫೋನಿನಲ್ಲಿ ಯಾವ ಕಿವಿಗೆ ಸಿಕ್ಕಿಸಿಕೊಳ್ಳಬೇಕೆಂದು ಮಾರ್ಕ್ ಮಾಡಿದ್ದರೆ ಈ ಡಾಟ್ ಅನ್ನು ತೆಗೆದುಬಿಟ್ಟಿರುತ್ತಾರೆ.

ಈ ಡಾಟ್ ಅನ್ನು ಉಪಯೋಗಿಸುವವರಾರು?

ಈ ಡಾಟ್ ಅನ್ನು ಉಪಯೋಗಿಸುವವರಾರು?

ಸ್ಯಾಮ್ಸಂಗ್, ಶಿಯೋಮಿ, ಕವಾನ್, ಹುವೇಯಿ ಕಂಪನಿಯವರು ತಮ್ಮ ಹಿಯರ್ ಫೋನಿನ ಮೇಲೆ ಈ ಡಾಟ್ ಅನ್ನು ಉಪಯೋಗಿಸುತ್ತಾರೆ. ಸ್ಮಾರ್ಟ್ ಫೋನ್ ಜೊತೆಗೆ ಬರುವ ಹಿಯರ್ ಫೋನಿನಲ್ಲಿ ಈ ಡಾಟ್ ಇರುತ್ತದೆ.

ಮಾರ್ಕಿಂಗ್ ಜೊತೆಗೂ ಈ ಡಾಟ್ ಇದ್ದರೆ ನೀವು ಅದೃಷ್ಟವಂತರು!

ಮಾರ್ಕಿಂಗ್ ಜೊತೆಗೂ ಈ ಡಾಟ್ ಇದ್ದರೆ ನೀವು ಅದೃಷ್ಟವಂತರು!

ಮೊದಲೇ ಹೇಳಿದ ಹಾಗೆ, ಎಲ್ಲಾ ಹಿಯರ್ ಫೋನುಗಳಲ್ಲೂ ಈ ಡಾಟ್ ಇರುವುದಿಲ್ಲ. ನಿಮ್ಮ ಬಳಿ ಎಡ ಬಲ ಎಂದು ಮಾರ್ಕ್ ಮಾಡಿರುವ ಸ್ಯಾಮ್ಸಂಗ್ ಹಿಯರ್ ಫೋನ್ ಇದ್ದರೆ, ಅದರ ಜೊತೆಗೆ ಡಾಟ್ ಕೂಡ ಇದ್ದರೆ ನೀವು ಅದೃಷ್ಟವಂತ ವ್ಯಕ್ತಿ!

ಡಾಟ್ ಶಾಶ್ವತ, ಮಾರ್ಕಿಂಗ್ ಅಲ್ಲ!

ಡಾಟ್ ಶಾಶ್ವತ, ಮಾರ್ಕಿಂಗ್ ಅಲ್ಲ!

ಹಿಯರ್ ಫೋನಿನಲ್ಲಿ ಎಡ ಮತ್ತು ಬಲ ಎಂದು ಬರೆದಿರುವುದು ಕಾಲ ಕಳೆದಂತೆ ಅಳಸಿ ಹೋಗುತ್ತದೆ, ಆದರೆ ಯಾವ ಶಕ್ತಿಯೂ ಡಾಟ್ ಅನ್ನು ಅಳಿಸಲಾಗದು. ನೀವೇ ಬೇಕು ಬೇಕು ಅಂತ ಕಿತ್ತಾಕುವವರೆಗೂ!

ಆ ರಹಸ್ಯ ಡಾಟ್ ಅನ್ನು ನೀವು ಪತ್ತೆ ಹಚ್ಚಿದ್ರಾ?

ಆ ರಹಸ್ಯ ಡಾಟ್ ಅನ್ನು ನೀವು ಪತ್ತೆ ಹಚ್ಚಿದ್ರಾ?

ಈ ಡಾಟನ್ನು ಕೆಲವು ಹಿಯರ್ ಫೋನುಗಳಲ್ಲಿ ನೋಡಬಹುದು, ಅದರಲ್ಲೂ ಸ್ಯಾಮ್ಸಂಗಿನ ಹಿಯರ್ ಫೋನುಗಳಲ್ಲಿ ಇದಿದ್ದೇ ಇರುತ್ತದೆ. ಬಹುಶಃ ಅವರಿಗೆ ತಮ್ಮ ಮಾರ್ಕಿಂಗ್ ಮೇಲೆ ನಂಬಿಕೆ ಇಲ್ಲವೇನೋ! (ತಮಾಷೆಗೆ)
ನಿಮ್ಮ ಹಿಯರ್ ಫೋನಿನಲ್ಲಿ ಆ ರಹಸ್ಯ ಡಾಟ್ ಅನ್ನು ಪತ್ತೆ ಹಚ್ಚಿದ್ರಾ?
ಕೆಳಗೆ ಕಮೆಂಟಿನಲ್ಲಿ ತಿಳಿಸಿ.

Best Mobiles in India

English summary
Do you own a Samsung earphone? Does your earphone have the marking of left and right? Well, this article is for people who have Samsung earphones without the marking on them!

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X