ಸ್ಮಾರ್ಟ್‌ಫೋನ್ ಬ್ಯಾಟರಿ ದೀರ್ಘತೆಗಾಗಿ ಟಾಪ್ ಸಲಹೆಗಳು
ಇಂದಿನ ದಿನಗಳಲ್ಲಿ ಬರುತ್ತಿರುವ ಸ್ಮಾರ್ಟ್‌ಫೋನ್‌ಗಳು ದೊಡ್ಡದಾದ ಹೈ ರೆಸಲ್ಯೂಶನ್ ಸ್ಕ್ರೀನ್‌ಗಳನ್ನು ಹೊಂದಿವೆ, ಅಂತೆಯೇ ಶಕ್ತಿಯುತ ಪ್ರೊಸೆಸರ್ ಮತ್ತು ಮಲ್ಟಿ ಟಾಸ್ಕ್ ಅನ್ನು ನಿರ್ವಹಿಸುವ ಮೆಮೊರಿಯನ್ನು ಪಡೆದುಕೊಂಡಿವೆ. ಆದರೆ ಇವೆಲ್ಲದರ ಕಾರಣದಿಂದ ಸ್ಮಾರ್ಟ್‌ಫೋನ್‌ನಲ್ಲಿ ಹೆಚ್ಚುವರಿ ಬ್ಯಾಟರಿ ಅಗತ್ಯವಾಗಿರುತ್ತದೆ.
ಓದಿರಿ: ಫೇಸ್‌ಬುಕ್‌ನಲ್ಲಿ ಶೇರ್ ಮಾಡಿಕೊಳ್ಳಲೇಬಾರದ ಸಂಗತಿಗಳು ಏನೇನು?
ಇದೇ ಸಮಸ್ಯೆ ಲ್ಯಾಪ್‌ಟಾಪ್‌ನದ್ದಾಗಿರುತ್ತದೆ. ಹಾಗಿದ್ದರೆ ನಿಮ್ಮ ಡಿವೈಸ್‌ಗಳ ಬ್ಯಾಟರಿಯನ್ನು ವೃದ್ಧಿಸಲು ಅನುಸರಿಬೇಕಾದ ಹಂತಗಳೇನು ಕ್ರಮಗಳೇನು ಎಂಬುದನ್ನು ಇಂದಿನ ಲೇಖನದಲ್ಲಿ ನೀಡುತ್ತಿದ್ದೇವೆ. ಈ ಸರಳ ಹಂತಗಳನ್ನು ಅನುಸರಿಸಿ ಫೋನ್ ಇಲ್ಲವೇ ಯಾವುದೇ ನೀವು ಬಳಸುವ ಡಿವೈಸ್‌ಗಳ ಬ್ಯಾಟರಿಯನ್ನು ದೀರ್ಘ ಸಮಯದವರೆಗೆ ವೃದ್ಧಿಸಬಹುದಾಗಿದೆ.

ತಂಪಾಗಿರಿಸಿ
ಹೆಚ್ಚು ತಾಪಮಾನಗಳಿಗೆ ಬ್ಯಾಟರಿ ಪ್ರದರ್ಶಿಸುವುದು ಬ್ಯಾಟರಿಯನ್ನು ಕೊಲ್ಲಬಹುದು. ನಿಮ್ಮ ಬ್ಯಾಟರಿಯನ್ನು ಆದಷ್ಟು ತಂಪು ವಾತಾವರಣದಲ್ಲಿ ಇರಿಸಿಕೊಳ್ಳಿ. ಬಿಸಿಲು,ಇಲೆಕ್ಟ್ರಾನಿಕ್ ಉಪಕರಣಗಳ ಮೇಲೆ ಫೋನ್ ಅನ್ನು ಇರಿಸುವುದು ಮುಂತಾದ ಕೆಲಸಗಳನ್ನು ಮಾಡದಿರಿ.

ಪಾವತಿ ಅಪ್ಲಿಕೇಶನ್‌ಗಳನ್ನು ಬಳಸಿ
ಜಾಹೀರಾತು ಬೆಂಬಲಿತ ಅಪ್ಲಿಕೇಶನ್‌ಗಳು ಬ್ಯಾಟರಿಯನ್ನು ಮುಗಿಸುತ್ತವೆ. ಎಲ್ಲಾ ಉಚಿತ ಅಪ್ಲಿಕೇಶನ್‌ಗಳು ಬ್ಯಾಟರಿಯನ್ನು ಮುಗಿಸುವುದಿಲ್ಲ, ಆದರೆ ಅಪ್ಲಿಕೇಶನ್‌ನಲ್ಲಿ ಬರುವ ಜಾಹೀರಾತುಗಳು ಫೋನ್ ಬ್ಯಾಟರಿಗೆ ಕಂಟಕವಾಗಿರುತ್ತವೆ. ಆದ್ದರಿಂದ ಆದಷ್ಟು ಕಡಿಮೆ ದರದಲ್ಲಿರುವ ಪಾವತಿ ಅಪ್ಲಿಕೇಶನ್‌ಗಳನ್ನು ಫೋನ್‌ನಲ್ಲಿ ಇನ್‌ಸ್ಟಾಲ್ ಮಾಡಿಕೊಳ್ಳಿ.

ಲೊಕೇಶನ್ ಟ್ರ್ಯಾಕಿಂಗ್ ಆಫ್ ಮಾಡಿ
ಇತ್ತೀಚಿನ ವರದಿಯ ಪ್ರಕಾರ, ಫೇಸ್‌ಬುಕ್ ಅಪ್ಲಿಕೇಶನ್ ಜಿಪಿಎಸ್ ಮೋಡ್ ಅನ್ನು ಬಳಸಿಕೊಂಡು ಬಳಕೆದಾರರ ಬ್ಯಾಟರಿಯನ್ನು ಮುಗಿಸುತ್ತಿದೆ ಎಂಬ ವರದಿ ತಿಳಿದು ಬಂದಿದೆ. ಆದಷ್ಟು ಲೊಕೇಶನ್ ಟ್ರ್ಯಾಕಿಂಗ್ ಅನ್ನು ಆಫ್ ಮಾಡಿ.

ರೀಚಾರ್ಜ್
ಆದಷ್ಟು ನಿಮ್ಮ ಫೋನ್ ಚಾರ್ಜ್ ಅನ್ನು ಶೂನ್ಯ ಸ್ಥಿತಿಗೆ ತರಬೇಡಿ. 50 ಶೇಕಡಾ ಬ್ಯಾಟರಿ ಫೋನ್‌ನಲ್ಲಿರುವಂತೆ ನೋಡಿಕೊಳ್ಳಿ.

ಡಿಸ್‌ಪ್ಲೇ ಬ್ರೈಟ್‌ನೆಸ್ ಕಡಿಮೆ ಮಾಡಿ
ಲ್ಯಾಪ್‌ಟಾಪ್ ಮತ್ತು ಮೊಬೈಲ್ ಡಿಸ್‌ಪ್ಲೇಗಳಿಗೆ ಈ ನಿಯಮ ಅನ್ವಯಿಸುತ್ತದೆ. ಲಕ್ಸ್‌ನಂತಹ ಥರ್ಡ್ ಪಾರ್ಟಿ ಅಪ್ಲಿಕೇಶನ್ ಬಳಸಿಕೊಂಡು ಸ್ಕ್ರೀನ್ ಡಿಮ್ಮಿಂಗ್ ಅನ್ನು ಮಾಡಿಕೊಳ್ಳಬಹುದಾಗಿದೆ

ಅಪ್ಲಿಕೇಶನ್ ಅಪ್‌ಡೇಟ್ಸ್
ವೈಫೈನಲ್ಲಿ ಅಪ್ಲಿಕೇಶನ್ ಅಪ್‌ಡೇಟ್‌ಗಳನ್ನು ಮಾಡಿಕೊಳ್ಳಿ. ಇದರಿಂದ ಫೋನ್‌ನ ಬ್ಯಾಟರಿ ಪೋಲಾಗುವಿಕೆಯನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ.

ಲೊ ಪವರ್ ಮೋಡ್
ನೀವು ಹಳೆಯ ಆಂಡ್ರಾಯ್ಡ್ ಫೋನ್ ಅನ್ನು ಬಳಸುತ್ತಿದ್ದೀರಿ ಎಂದಾದಲ್ಲಿ, ಲೊ ಪವರ್ ಮೋಡ್ ಫೀಚರ್ ಅನ್ನು ತಯಾರಕರು ಇದರಲ್ಲಿ ಅಳವಡಿಸಿರುತ್ತಾರೆ. ಇದನ್ನು ಹುಡುಕಿ ಅಂತೆಯೇ ಸೆಟ್ ಮಾಡಿಕೊಳ್ಳಿ

ಫ್ಲೈಟ್ ಮೋಡ್ ಅನ್ವೇಷಿಸಿ
ನೀವು ನೆಟ್‌ವರ್ಕ್ ಇಲ್ಲದ ಸ್ಥಳದಲ್ಲಿ ಇದ್ದೀರಿ ಎಂದಾದಲ್ಲಿ ಫ್ಲೈಟ್ ಮೋಡ್ ಅನ್ನು ಬಳಸಿ. ಇದರಿಂದ ವೃಥಾ ಬ್ಯಾಟರಿ ಪೋಲಾಗುವಿಕೆಯನ್ನು ತಪ್ಪಿಸಿಕೊಳ್ಳಬಹುದಾಗಿದೆ.


Click it and Unblock the Notifications








