Election Results 2023: ಚುನಾವಣಾ ಫಲಿತಾಂಶ 2023: ಕ್ಷಣ ಕ್ಷಣದ ಲೈವ್ ಅಪ್‌ಡೇಟ್ ಪಡೆಯೋದೇಗೆ?
ಭಾರತದಲ್ಲಿ ಚುನಾವಣೆ ಎಂದರೆ ಅದೊಂದು ದೊಡ್ಡ ವಿಷಯ. ಚುನಾವಣೆ ಘೋಷಣೆ ಆದಾಗಿನಿಂದ ಹಿಡಿದು ರಿಸಲ್ಟ್ ಬರೋವರೆಗೂ ಅಭ್ಯರ್ಥಿಗಳಲ್ಲಿ ಆತಂಕ ಮನೆ ಮಾಡಿರುತ್ತದೆ. ಅದರಂತೆ ಈಗ ಇಂದು ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ, ಛತ್ತೀಸ್‌ಗಢ (Madhya Pradesh, Rajasthan, Telangana, Chhattisgarh) ರಾಜ್ಯದ ಚುನಾವಣೆ ಫಲಿತಾಂಶ ಪ್ರಕಟ ಆಗಲಿದ್ದು, ಮಿಜೋರಾಂ ರಾಜ್ಯದ ಫಲಿತಾಂಶವನ್ನು ನಾಳೆಗೆ ಮುಂದೂಡಲಾಗಿದೆ.
ಹೌದು, ಇಡೀ ದೇಶ ಈಗ ಈ ಐದು ರಾಜ್ಯಗಳನ್ನು ನೋಡುತ್ತಿದೆ. ಈ ಮೂಲಕ ಮುಂದಿನ ಆಯಾ ರಾಜ್ಯದ ಸಿಎಂ ಯಾರು ಅನ್ನೋದನ್ನು ಲೆಕ್ಕ ಹಾಕಲಾಗುತ್ತಿದೆ. ಇದರ ನಡುವೆ ಗುರುವಾರ, 30 ನವೆಂಬರ್ 2023 ರಂದು ಎಕ್ಸಿಟ್ ಪೋಲ್ ಫಲಿತಾಂಶ ಸಹ ಬಹಿರಂಗಗೊಂಡಿದ್ದು, ಕೆಲವು ಕಡೆ ಕಾಂಗ್ರೆಸ್ ಪರ ಇದ್ದರೆ ಇನ್ನೂ ಕೆಲವರು ಕಡೆ ಬಿಜೆಪಿ ಹಾಗೂ ಸ್ಥಳೀಯ ಪಾರ್ಟಿಗಳ ಬಗ್ಗೆ ಉಲ್ಲೇಖ ಮಾಡಲಾಗಿದೆ. ಅದೇನೆ ಆದರೂ ಸಹ ನಿಖರವಾದ ರಿಸಲ್ಟ್ ಗಾಗಿ ಬಹಳ ಜನರು ಕಾದು ಕುಳಿತಿದ್ದಾರೆ. ಅದರಂತೆ ನೀವು ನಿಮ್ಮ ಫೋನ್‌ನಲ್ಲೇ ಈ ಫಲಿತಾಂಶದ ಮಾಹಿತಿಯನ್ನು ತಿಳಿದುಕೊಳ್ಳಿ.

ಚುನಾವಣಾ ಫಲಿತಾಂಶ: ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ, ಛತ್ತೀಸ್‌ಗಢ ಚುನಾವಣೆಯ ಫಲಿತಾಂಶ ಇಂದು ಹೊರಬೀಳಲಿದೆ. ಅಂತೆಯೇ ವರ್ಷದ ಕೊನೆಯ ವಿಧಾನಸಭಾ ಚುನಾವಣೆಗಳನ್ನು (Assembly election) ನವೆಂಬರ್‌ನಲ್ಲಿ ವಿವಿಧ ದಿನಾಂಕಗಳಲ್ಲಿ ನಡೆಸಲಾಗಿತ್ತು. ಆದರೆ, ಈಗ ಈ ಎಲ್ಲಾ ರಾಜ್ಯಗಳ ವಿಜೇತರು ಯಾರೆಂದು ತಿಳಿಯಲು ಜನರು ಉತ್ಸುಕರಾಗಿದ್ದಾರೆ. ಅದರಲ್ಲೂ ಕರ್ನಾಟಕದ ಜನ ಬಹಳ ಕಾತುರದಿಂದ ಕಾಯುತ್ತಿದ್ದಾರೆ.
ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ ಮತ್ತು ಮಿಜೋರಾಂನಲ್ಲಿ ಏಕ-ಹಂತದ ಮತದಾನ ಗುರುವಾರ, 30 ನವೆಂಬರ್ 2023 ರಂದು ನಡೆದಿದ್ದರೆ, ಛತ್ತೀಸ್‌ಗಢದಲ್ಲಿ ಎರಡು ಹಂತಗಳಲ್ಲಿ ಮತದಾನ ನಡೆದಿರುವುದನ್ನು ಈ ವೇಳೆ ನೆನಪು ಮಾಡಿಕೊಳ್ಳಬಹುದು. ಈ ನಡುವೆ ಈ ಚುನಾವಣೆ ಫಲಿತಾಂಶ ದೇಶದ ಎಲ್ಲಾ ಪ್ರಜೆಗಳಿಗೂ ಹೆಚ್ಚಿನ ಕಾತುರತೆ ಉಂಟು ಮಾಡಿದೆ. ಇದಕ್ಕೆ ಕಾರಣ 2024 ರಲ್ಲಿ ಜರುಗುವ ಲೋಕಸಭಾ ಚುನಾವಣೆ. ಅಂದರೆ, ಈ ವಿಧಾನಸಭೆ ಚುನಾವಣೆಯ ಫಲಿತಾಂಶವನ್ನು ಲೆಕ್ಕಾಚಾರ ಮಾಡಿ ಲೋಕಸಭೆಯ ಫಲಿತಾಂಶವನ್ನು ಅಂದಾಜಿಸುವ ಕೆಲಸ ಮಾಡಲಾಗುತ್ತದೆ.

2023 ರ ಚುನಾವಣಾ ಫಲಿತಾಂಶಗಳನ್ನು ಯಾವಾಗ ಮತ್ತು ಎಲ್ಲಿ ವೀಕ್ಷಿಸಬಹುದು?: ಚುನಾವಣಾ ಫಲಿತಾಂಶವನ್ನು ಸಾಮಾನ್ಯವಾಗಿ ಮಾಧ್ಯಮಗಳು ನೀಡುತ್ತವೆ. ಆದರೂ ಸಹ ಅವುಗಳು ಅಷ್ಟೊಂದು ನಿಖರವಾಗಿ ಇರುವುದಿಲ್ಲ. ನೀವು ಕ್ಷಣ ಕ್ಷಣದ ಮಾಹಿತಿಯನ್ನು ಅದೂ ಪಕ್ಕಾ ಮಾಹಿತಿಯನ್ನು ತಿಳಿಯಬೇಕು ಎಂದರೆ ಭಾರತದ ಚುನಾವಣಾ ಆಯೋಗದ ಅಧಿಕೃತ ವೆಬ್‌ಸೈಟ್ (eci.gov.in) ಗೆ ಭೇಟಿ ನೀಡಬೇಕಿದೆ. ಬನ್ನಿ ಈ ಸೈಟ್‌ನಲ್ಲಿ ಫಲಿತಾಂಶವನ್ನು ಹೇಗೆ ವೀಕ್ಷಣೆ ಮಾಡುವುದು ಅನ್ನೋದನ್ನು ಸರಳ ವಿಧಾನದ ಮೂಲಕ ತಿಳಿಯೋಣ.
ಹಂತ 1 : ಮೊದಲು ನಿಮ್ಮ ಫೋನ್ ಅಥವಾ ಲ್ಯಾಪ್‌ಟಾಪ್ ನಲ್ಲಿ ಅಧಿಕೃತ ವೆಬ್‌ಸೈಟ್‌ಗೆ ಹೋಗಿ. ಇದಕ್ಕಾಗಿ ನೀವು eci.gov.in. ಎಂದು ಟೈಪ್ ಮಾಡಿ. ಇದಾದ ನಂತರದಲ್ಲಿ ಮೇನ್ ಪೇಜ್‌ನಲ್ಲಿ 'ಚುನಾವಣೆಗಳು' ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ. ಅದರ ಮೇಲೆ ಟ್ಯಾಪ್ ಮಾಡಿ.

ಹಂತ 2: ಇಷ್ಟೆಲ್ಲಾ ಮಾಡಿದ ಮೇಲೆ ನೀವು ಛತ್ತೀಸ್‌ಗಢ, ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ ಅಥವಾ ಮಿಜೋರಾಂನ ವಿಧಾನಸಭೆಗೆ ಸಾರ್ವತ್ರಿಕ ಚುನಾವಣೆಯ ವೈಯಕ್ತಿಕ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಕಿದೆ. ಬಳಿಕ ಎಲ್ಲಾ ಮಾಹಿತಿಯನ್ನು ನಿಮ್ಮ ಡಿವೈಸ್‌ನ ಡಿಸ್‌ಪ್ಲೇನಲ್ಲಿ ತೋರಿಸಲಾಗುತ್ತದೆ. ಜೊತೆಗೆ ಈ ವಿಭಾಗದಲ್ಲಿ ವಿಜೇತ, ಮೊದಲ ಅಭ್ಯರ್ಥಿ, ಎರಡನೇ ಅಭ್ಯರ್ಥಿ ಮತ್ತು ಇನ್ನೂ ಅನೇಕ ಮಾಹಿತಿಯನ್ನು ಕೂಲಂಕಷವಾಗಿ ಪರಿಶೀಲನೆ ನಡೆಸಬಹುದು.


Click it and Unblock the Notifications








