Home
ಟೆಕ್ ನೌಕರಿ

ವಾಟ್ಸಪ್‌ನಲ್ಲಿ ಪ್ರೈವೆಸಿ ಕಾಪಾಡಲು ಬಳಕೆದಾರರಿಗೆ ಈ ಫೀಚರ್ಸ್‌ ನೆರವಾಗಲಿವೆ!

ವಿಶ್ವದಲ್ಲಿಯೇ ಹೆಚ್ಚು ಬಳಕೆಯಲ್ಲಿರುವ ಮೆಸೆಜಿಂಗ್‌ ಅಪ್ಲಿಕೇಶನ್ 'ವಾಟ್ಸಪ್‌' ಬಳಕೆದಾರರ ಸುರಕ್ಷತೆಗಾಗಿ ಈಗಾಗಲೇ ಹಲವು ಫೀಚರ್ಸ್‌ಗಳನ್ನು ಅಳವಡಿಸಿಕೊಂಡಿದೆ. ಅದಾಗ್ಯೂ ಹಲವು ಬಾರಿ ಸೆಕ್ಯುರಿಟಿ ದೋಷಗಳಿಂದಾಗಿ ವಾಟ್ಸಪ್‌ ಸುದ್ದಿಯಾಗಿದೆ. ಆದರೆ ವಾಟ್ಸಪ್‌ ಬಳಕೆದಾರರ ಮಾಹಿತಿ ಸುರಕ್ಷತೆಗೆ ಎಂಡ್‌-ಟು-ಎಂಡ್ ಎನ್‌ಕ್ರಿಪ್ಶನ್ ಭದ್ರತೆ ನೀಡಿದ್ದು, ಜೊತೆಗೆ ಕೆಲವು ಅಗತ್ಯ ಪ್ರೈವೆಸಿ ಸೌಲಭ್ಯಗಳಿಂದ ಗುರುತಿಸಿಕೊಂಡಿದೆ.

ಪ್ರೈವೆಸಿ ಆಯ್ಕೆ

ಹೌದು, ಫೇಸ್‌ಬುಕ್ ಮಾಲೀಕತ್ವದ ವಾಟ್ಸಪ್‌ ಅತ್ಯುತ್ತಮ ಫೀಚರ್ಸ್‌ ಮತ್ತು ಪ್ರೈವೆಸಿಗೆ ಹೆಚ್ಚಿನ ಒತ್ತನ್ನು ನೀಡಿರುವುದರಿಂದಲೇ ಹೆಚ್ಚು ಸಕ್ರಿಯ ಬಳಕೆದಾರರನ್ನು ಹೊಂದಿದೆ. ವಾಟ್ಸಪ್‌ನಲ್ಲಿ ಬಳಕೆದಾರರ ಮೆಸೆಜ್‌, ಫೋಟೊ, ವಿಡಿಯೊಗಳಿಗೆ ಭದ್ರತೆ ಆಯ್ಕೆಗಳಿದ್ದು, ಬಳಕೆದಾರರು ತಮ್ಮ ಅಗತ್ಯತೆಗಳಿಗೆ ಅನುಗುಣವಾಗಿ ಪ್ರೈವೆಸಿ ಆಯ್ಕೆಗಳನ್ನು ಸೆಟ್‌ ಮಾಡಿಕೊಳ್ಳಬಹುದಾಗಿದೆ. ಹಾಗಾದರೇ ವಾಟ್ಸಪ್‌ನಲ್ಲಿರುವ ಕೆಲವು ಪ್ರಮುಖ ಪ್ರೈವೆಸಿ ಆಯ್ಕೆಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಎಂಡ್‌-ಟು-ಎಂಡ್ ಎನ್‌ಕ್ರಿಪ್ಶನ್

ವಾಟ್ಸಪ್‌ ಸುರಕ್ಷತೆಗಾಗಿಯೇ ಎಂಡ್‌-ಟು-ಎಂಡ್ ಎನ್‌ಕ್ರಿಪ್ಶನ್ ಭದ್ರತೆಯ ಸೌಲಭ್ಯವನ್ನು ನೀಡಿದ್ದು, ಪ್ರತಿ ಮೆಸೆಜ್‌ ಸಹ ಈ ಫೀಚರ್‌ಗೆ ಒಳಗಾಗಿರುತ್ತದೆ. ಸಂದೇಶ ಕಳುಹಿಸಿದ ವ್ಯಕ್ತಿ ಮತ್ತು ಸ್ವೀಕರಿಸುವ ವ್ಯಕ್ತಿಗೆ ಮಾತ್ರ ಮೆಸೆಜ್ ಲಭ್ಯವಾಗುವ ಸೌಲಭ್ಯ ಎಂಡ್‌-ಟು-ಎಂಡ್ ಎನ್‌ಕ್ರಿಪ್ಶನ್ ಒದಗಿಸಲಿದೆ. ಎನ್‌ಕ್ರಿಪ್ಶನ್ ಪ್ರೈವೆಸಿಯಿಂದಾಗಿ ಮೆಸೆಜ್‌ಗಳನ್ನು ಇತರೆ ಥರ್ಡ್‌ಪಾರ್ಟಿ ಆಪ್ಸ್‌ ಮತ್ತು ವಾಟ್ಸಪ್‌ ಸಂಸ್ಥೆ ಓದಲು ಅಸಾಧ್ಯವಾಗಿರುತ್ತವೆ.

ಫಿಂಗರ್‌ಪ್ರಿಂಟ್ ಲಾಕ್‌

ಫಿಂಗರ್‌ಪ್ರಿಂಟ್ ಲಾಕ್‌

ಸ್ಕ್ರೀನ್‌ಲಾಕ್‌ ಫೀಚರ್‌ ಬಳಕೆದಾರರ ಖಾತೆಗೆ ಪ್ರೈವೆಸಿ ಒದಗಿಸಲಿದ್ದು, ಬಳಕೆದಾರರು ಸ್ಕ್ರೀನ್‌ಲಾಕ್‌ ಫೀಚರ್‌ ಅನ್ನು ಸಕ್ರಿಯ ಮಾಡಿಕೊಳ್ಳಬೇಕು. ಅದಕ್ಕಾಗಿ ಬಳಕೆದಾರರು ಈ ಕ್ರಮಗಳನ್ನು ಅನುಸರಿಸಿ. ವಾಟ್ಸಪ್‌ > ಸೆಟ್ಟಿಂಗ್ > ಅಕೌಂಟ್‌ > ಪ್ರೈವೆಸಿ > ಸ್ಕ್ರಾಲ್‌ ಡೌನ್‌ ಮಾಡಿ > ಫಿಂಗರ್‌ಪ್ರಿಂಟ್ ಲಾಕ್‌ ಆಯ್ಕೆ ಕಾಣಿಸುತ್ತದೆ. ಈ ಆಯ್ಕೆಯನ್ನು ಸಕ್ರಿಯ ಮಾಡಿಕೊಳ್ಳಬಹುದು. ಇದರಲ್ಲಿ ಸ್ಕ್ರೀನ್‌ಲಾಕ್ ಆಗಲು ಮೂರು ಆಯ್ಕೆಗಳು ಕಾಣಿಸುತ್ತವೆ.(ತಕ್ಷಣ, ಒಂದು ನಿಮಿಷ, ನಿಮಿಷ).

ಗ್ರೂಪ್‌ ಸೇರುವಿಕೆ ಕಂಟ್ರೋಲ್‌

ಗ್ರೂಪ್‌ ಸೇರುವಿಕೆ ಕಂಟ್ರೋಲ್‌

ಬಳಕೆದಾರರು ವಾಟ್ಸಪ್‌ ಗ್ರೂಪ್‌ ಸೇರುವಿಕೆ ನಿಯಂತ್ರಿಸಬಹುದಾದ ಆಯ್ಕೆಗಳಿವೆ. ಈ ಫೀಚರ್‌ನಲ್ಲಿ Everyone, My Contacts, My Contacts Except..ಮತ್ತು Nobody ಆಯ್ಕೆಗಳಿದ್ದು, ಬಳಕೆದಾರರು ಅಗತ್ಯ ಎನಿಸುವುದನ್ನು ಸೆಟ್‌ ಮಾಡಬಹುದಾಗಿದೆ. ಅದಕ್ಕಾಗಿ ಈ ಹಂತಗಳನ್ನು ಅನುಸರಿಸಿರಿ. ವಾಟ್ಸಪ್‌ > ಸೆಟ್ಟಿಂಗ್ > ಅಕೌಂಟ್‌ > ಪ್ರೈವೆಸಿ > ಗ್ರೂಪ್ಸ್‌.

ಪ್ರೋಫೈಲ್‌ ಕಂಟ್ರೋಲ್‌

ಪ್ರೋಫೈಲ್‌ ಕಂಟ್ರೋಲ್‌

ಬಳಕೆದಾರರು ವಾಟ್ಸಪ್‌ ಪ್ರೋಫೈಲ್‌ ಫೋಟೊವನ್ನು ಇಡುವ ಅವಕಾಶ ಇದ್ದು, ಅದರ ಜೊತೆಗೆ ಇತರರು ಪ್ರೋಫೈಲ್‌ ಫೋಟೊ ವೀಕ್ಷಣೆಯನ್ನು ನಿಯಂತ್ರಿಸುವ Everyone, My Contacts ಮತ್ತು Nobody ಆಯ್ಕೆಗಳನ್ನು ನೀಡಿದೆ. ಈ ಫೀಚರ್‌ ಅನ್ನು ಸೆಟ್‌ ಮಾಡಲು ಬಳಕೆದಾರರು ಈ ಹಂತಗಳನ್ನು ಅನುಸರಿಸಿ ವಾಟ್ಸಪ್‌ > ಸೆಟ್ಟಿಂಗ್ > ಅಕೌಂಟ್‌ > ಪ್ರೈವೆಸಿ > ಪ್ರೋಫೈಲ್‌ ಫೋಟೊ.

ಬ್ಲಾಕ್‌ ಸೌಲಭ್ಯ

ಬ್ಲಾಕ್‌ ಸೌಲಭ್ಯ

ಕಾಂಟ್ಯಾಕ್ಟ್‌ನಲ್ಲಿ ಇಲ್ಲದ ಅಥವಾ ಅಪರಿಚಿತರ ಮೆಸೆಜ್‌ಗಳ ಕಿರಿಕಿರಿ ತಪ್ಪಿಸಲು ವಾಟ್ಸಪ್‌ನಲ್ಲಿ ಬ್ಲಾಕ್‌ ಫೀಚರ್‌ ನೀಡಿಲಾಗಿದೆ. ಅಂತಹ ಕಾಂಟ್ಯಾಕ್ಟ್‌ಗಳನ್ನು ಬಳಕೆದಾರರು ಬ್ಲಾಕ್‌ ಮಾಡಬಹುದಾಗಿದೆ. ಬ್ಲಾಕ್‌ ಮಾಡಿದ ಕಾಂಟ್ಯಾಕ್ಟ್‌ಗಳಿಗೆ ನಿಮ್ಮ ಪ್ರೋಫೈಲ್‌ ಫೋಟೊ, ಸ್ಟೇಟಸ್ ಕಾಣಿಸುವುದಿಲ್ಲ ಮತ್ತು ಅವರು ನಿಮಗೆ ಮೆಸೆಜ್ ಕಳುಹಿಸಲು ಆಗದು.

Best Mobiles in India

English summary
WhatsApp is among the most secure messaging services out there, thanks to end-to-end encryption. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+