ಇಂಟರ್‌ನೆಟ್‌ ಪ್ರಥಮಗಳು

By Ashwath
|

ಇಂಟರ್‌ನೆಟ್‌ನಿಂದಾಗಿ ನಾವೆಲ್ಲಾ ಇಮೇಲ್‌ ಕಳುಹಿಸುತ್ತೇದ್ದೇವೆ. ಯೂ ಟ್ಯೂಬ್‌ನಲ್ಲಿ ವೀಡಿಯೋ ನೋಡುತ್ತಿವೆ .ಇ- ಶಾಪಿಂಗ್‌ನಲ್ಲಿ ವಸ್ತುಗಳನ್ನು ಖರೀದಿಸುತ್ತೇವೆ. ಇಂಟರ್‌ನೆಟ್‌ನಲ್ಲಿ ಇಷ್ಟೆಲ್ಲ ವ್ಯವಹಾರ ನಡೆಸುವ ನಿಮಗೆ ಕೆಲವು ಪ್ರಶ್ನೆಗಳು ಮೂಡಬಹುದು.ಇಂಟರ್‌ನೆಟ್‌ನಲ್ಲಿ ಇ ಮೇಲ್‌ ಕಳುಹಿಸಿದ ಮೊದಲ ವ್ಯಕ್ತಿ ಯಾರು? ಯೂ ಟ್ಯೂಬ್‌ನಲ್ಲಿ ಅಪ್‌ಲೋಡ್‌ ಆದ ಮೊದಲ ವೀಡಿಯೋ ಯಾವುದು? ಇಂಟರ್‌ನೆಟ್‌ನಲ್ಲಿ ಅಪ್‌ಲೋಡ್‌ ಆದ ಮೊದಲ ಫೋಟೋ ಯಾವುದು? ಈ ನಿಮ್ಮ ಪ್ರಶ್ನೆಗೆ ಉತ್ತರ ನೀಡುವುದಕ್ಕಾಗಿ ಇಲ್ಲಿ ಕೆಲವು ಇಂಟರ್‌ನೆಟ್‌ ಪ್ರಥಮಕ್ಕೆ ಸಂಬಂಧಿಸಿದಂತೆ ಕೆಲವು ಮಾಹಿತಿಗಳಿವೆ..ಒಂದೊಂದೆ ಪುಟವನ್ನು ತಿರುವಿ ಮಾಹಿತಿ ಓದಿಕೊಂಡು ಹೋಗಿ.

ಇದನ್ನು ಓದಿ : ಓಲ್ಡ್ ಕಂಪ್ಯೂಟರ್‌ ಏನೇನು ಮಾಡಬಹುದು ಗೊತ್ತಾ ?

ಇಂಟರ್‌ನೆಟ್‌ ಪ್ರಥಮಗಳು

ಇಂಟರ್‌ನೆಟ್‌ ಪ್ರಥಮಗಳು

ಪ್ರಥಮವಾಗಿ ಇಮೇಲ್‌ ಕಳುಹಿಸಿದ ವ್ಯಕ್ತಿ ರೇ ಟಾಮ್ಲಿನ್ಸನ್. 1971ರಲ್ಲಿ ತನಗೆ ತಾನೆ ಈಮೇಲ್‌ ಕಳುಹಿಸಿದ್ದ

ಇಂಟರ್‌ನೆಟ್‌ ಪ್ರಥಮಗಳು

ಇಂಟರ್‌ನೆಟ್‌ ಪ್ರಥಮಗಳು

ಪ್ರಥಮ ಡೊಮೈನ್‌ ನೇಮ್‌ ಪಡೆದು ರಿಜಿಸ್ಟಾರ್ ಆದ ವೆಬ್‌ಸೈಟ್‌ Symbolics.com. 1985ರ ಮಾರ್ಚ್ 15ರಂದು ತನ್ನ ಹೆಸರನ್ನು ನೊಂದಾಯಿಸಿತ್ತು.

ಇಂಟರ್‌ನೆಟ್‌ ಪ್ರಥಮಗಳು

ಇಂಟರ್‌ನೆಟ್‌ ಪ್ರಥಮಗಳು

ಪ್ರಥಮವಾಗಿ ಸ್ಪಾಮ್‌ ಮೇಲ್‌ ಇ ಮೇಲ್‌ಗೆ ಬಂದದ್ದು 1978ರಲ್ಲಿ. ಮೇ 3ರಂದು ಈ ಸ್ಪಾಮ್‌ ಮೇಲ್‌ 393ಜನರ ಈ ಮೇಲ್‌ಗೆ ಬಂದಿತ್ತು.

ಇಂಟರ್‌ನೆಟ್‌ ಪ್ರಥಮಗಳು

ಇಂಟರ್‌ನೆಟ್‌ ಪ್ರಥಮಗಳು

ಪ್ರಥಮವಾಗಿ ಆನ್‌ಲೈನ್‌ಲ್ಲಿ ಬ್ಯಾನರ್‌ ಜಾಹೀರಾತನ್ನು ತಯಾರಿಸಿದ ವ್ಯಕ್ತಿ ಜೊ ಮ್ಯಾಕ್‌ಬ್ಲೇ.ಅಕ್ಟೋಬರ್‌ 1994 ರಲ್ಲಿ HotWired.comನಲ್ಲಿ ಬ್ಯಾನರ್‌ ಜಾಹೀರಾತು ಪ್ರಕಟಗೊಳಿಸಿದ್ದ.

ಇಂಟರ್‌ನೆಟ್‌ ಪ್ರಥಮಗಳು

ಇಂಟರ್‌ನೆಟ್‌ ಪ್ರಥಮಗಳು

ಇ- ಬೇಯಲ್ಲಿ ಪ್ರಥಮವಾಗಿ ಖರೀದಿಯಾದ ವಸ್ತು ಲೇಸರ್‌ ಪಾಯಿಂಟರ್‌. 1995ರಲ್ಲಿ 14.83 ಡಾಲರ್‌ ನೀಡಿ ಒಬ್ಬ ವ್ಯಕ್ತಿ ಇ ಬೇ ಸಂಸ್ಥಾಪಕ ಪಿಯರೆ ಒಮಿಡ್ಯರ್‌ನಿಂದ ವಸ್ತು ಖರೀದಿಸಿದ್ದ.

ಇಂಟರ್‌ನೆಟ್‌ ಪ್ರಥಮಗಳು

ಇಂಟರ್‌ನೆಟ್‌ ಪ್ರಥಮಗಳು

ಅಮೇಜಾನ್‌.ಕಾಂನಲ್ಲಿ ಪ್ತಥಮವಾಗಿ ಖರೀದಿಯಾದ ಪುಸ್ತಕ Computer Models of the Fundamental Mechanisms of Thought. 1995ರಲ್ಲಿ ಈ ಪುಸ್ತಕನ್ನು ಒಬ್ಬ ವ್ಯಕ್ತಿ ಖರೀದಿಸಿದ್ದ.

ಇಂಟರ್‌ನೆಟ್‌ ಪ್ರಥಮಗಳು

ಇಂಟರ್‌ನೆಟ್‌ ಪ್ರಥಮಗಳು

ಸ್ಕೈಪ್‌ನಲ್ಲಿ ಪ್ರಥಮವಾಗಿ ಮಾತನಾಡಿದ ಪದ"Hello, can you hear me?. 2003 ಏಪ್ರಿಲ್‌ನಲ್ಲಿ ಸ್ಕೈಪ್‌ ವಿನ್ಯಾಸ ಪಡಿಸುತ್ತಿದ್ದ ಸದಸ್ಯರಲ್ಲೊಬ್ಬ ಸ್ಕೈಪ್‌ ಟೆಸ್ಟಿಂಗ್‌ ಮಾಡುವ ವೇಳೆ ಈ ಪದ ಬಳಸಿದ.

ಇಂಟರ್‌ನೆಟ್‌ ಪ್ರಥಮಗಳು

ಇಂಟರ್‌ನೆಟ್‌ ಪ್ರಥಮಗಳು

ಫೇಸ್‌ಬುಕ್‌ನಲ್ಲಿ ಐಡಿ ನಂಬರ್ ಹೊಂದಿದ್ದ ನಾಲ್ಕನೇಯ ವ್ಯಕ್ತಿ ಮಾರ್ಕ್ ಜುಕರ್‌ಬರ್ಗ್‌.ಮೊದಲ ಮೂರು ಐಡಿಗಳು ಟೆಸ್ಟಿಂಗ್‌ಗಾಗಿ ಬಳಕೆಯಾಗಿದ್ದವು.

ಇಂಟರ್‌ನೆಟ್‌ ಪ್ರಥಮಗಳು

ಇಂಟರ್‌ನೆಟ್‌ ಪ್ರಥಮಗಳು

ಟ್ವೀಟರ್‌ನಲ್ಲಿ ಪ್ರಥಮವಾಗಿ ಟ್ವೀಟ್‌ ಮಾಡಿದ ವ್ಯಕ್ತಿ ಟ್ವೀಟರ್‌ನ ಸಹ ಸಂಸ್ಥಾಪಕ ಜ್ಯಾಕ್‌ ಡೊರ್ಸೆ. 2006 ಮಾರ್ಚ್ 21ರಂದು ಟ್ವೀಟರ್‌ನಲ್ಲಿ ಜ್ಯಾಕ್‌ ಡೊರ್ಸೆ ಟ್ವೀಟ್‌ ಮಾಡುವ ಮೂಲಕ ಟ್ವೀಟರ್‌ ಚಿಲಿಪಿಲಿ ಆರಂಭಗೊಂಡಿತು.

ಇಂಟರ್‌ನೆಟ್‌ ಪ್ರಥಮಗಳು

ಇಂಟರ್‌ನೆಟ್‌ ಪ್ರಥಮಗಳು

ಇಂಟರ್‌ನೆಟ್‌ನಲ್ಲಿ ಪ್ರಥಮವಾಗಿ ಅಪ್‌ಲೋಡ್‌ ಆದ ಫೋಟೋ. ವರ್ಲ್ಡ ವೈಡ್ ವೆಬ್‌ ಸಂಶೋಧಕ ಟಿಮ್‌ ಬರ್ನ್‌ರ್ಸ್ ಈ ಫೋಟೋವನ್ನು ಅಪ್‌ಲೋಡ್‌ ಮಾಡಿದ್ದರು

ಇಂಟರ್‌ನೆಟ್‌ ಪ್ರಥಮಗಳು

ಪ್ರಥಮವಾಗಿ ಯೂ ಟ್ಯೂಬ್‌ಗೆ ಅಪ್‌ಲೋಡ್‌ ಆದ ವೀಡಿಯೋ ಸ್ಯಾನ್ ಡಿಯೆಗೊ ಮೃಗಾಲಯದಲ್ಲಿ ತೆಗೆದ ವೀಡಿಯೋ. ಯೂ ಟ್ಯೂಬ್‌ನ ಸಹ ಸಂಸ್ಥಾಪಕ ಜಾವೇದ್ ಕರಿಂ ತೆಗೆದ ಈ ವೀಡಿಯೋವನ್ನು 2005ರ ಏಪ್ರಿಲ್‌ 23ರಂದು ಅಪಲೋಡ್‌ ಮಾಡಲಾಗಿತ್ತು.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X