Home
ಟೆಕ್ ನೌಕರಿ

ಫೇಸ್‌ಬುಕ್‌ನ್ನು ಸಕ್ರಿಯವಾಗಿ ಬಳಸುವವರಿಗೆ ಏಳು ಟಿಪ್ಸ್‌

By Ashwath

ಪೋಸ್ಟ್‌‌ ಮಾಡುವುದು, ಫೋಟೋ ಅಪ್‌ಲೋಡ್‌ ಮಾಡುವುದು ಮತ್ತು ಲೈಕ್‌ ಮಾಡುವುದು ಇಷ್ಟೇ ಕಾರ್ಯಕ್ಕೆ ಮಾತ್ರ ಫೇಸ್‌ಬುಕ್‌ ಸಿಮೀತವಲ್ಲ. ಫೇಸ್‌ಬುಕ್‌ನಲ್ಲಿ ನಿಮ್ಮ ಟ್ವೀಟರ್‌ ಅಕೌಂಟ್‌ನ್ನು ಸೇರಿಸಬಹುದು. ಮೊಬೈಲ್‌ಗೆ ನೋಟಿಫಿಕೇಶನ್‌ ಪಡೆದುಕೊಳ್ಳಬಹುದು. ಇಂಟ್ರೆಸ್ಟ್‌ ಲಿಸ್ಟ್‌ ಸಹ ಮಾಡಿಕೊಳ್ಳಬಹುದು.

ಫೇಸ್‌ಬುಕ್‌ನಲ್ಲಿ ಈ ರೀತಿಯ ಸೆಟ್ಟಿಂಗ್ಸ್‌ ಮಾಡಿಕೊಳ್ಳುವುದು ಹೇಗೆ ಎನ್ನುವುದಕ್ಕೆ ಮುಂದಿನ ಪುಟದಲ್ಲಿ ವಿವರವಿದೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ಫೇಸ್‌ಬುಕ್  ಟಿಪ್ಸ್‌

ಫೇಸ್‌ಬುಕ್ ಟಿಪ್ಸ್‌


ಫೇಸ್‌ಬುಕ್‌ನಲ್ಲಿ ನೀವು ಇಷ್ಟವಾದ ಪೇಜ್‌ ಲೈಕ್‌ ಮಾಡಿರುತ್ತಿರಿ ಅಥವಾ ಗ್ರೂಪ್‌ನ ಸದಸ್ಯರಾಗಿರುತ್ತಿರಿ. ಈ ಗ್ರೂಪ್‌ನಲ್ಲಿ ಸದಸ್ಯರ ಸಂಖ್ಯೆ ಜಾಸ್ತಿಯಾದ ಮೇಲೆ ಅದರಲ್ಲಿ ನಮಗೆ ಬೇಕಾದ ಸ್ನೇಹಿತರ ಜೊತೆ ಚರ್ಚಿಸಲು ಸಾಧ್ಯವಿಲ್ಲ. ಯಾಕೆಂದರೆ ಅದನ್ನು ಓಪನ್‌ ಗ್ರೂಪ್‌ ಅಗಿರುತ್ತದೆ. ಹೀಗಾಗಿ ನೀವು ಆ ಗ್ರೂಪ್‌ನ ಅಡಿಯಲ್ಲೇ ಇನ್ನೊಂದು ಸಮಾನ ಮನಸ್ಕರ ಲಿಸ್ಟ್‌ ಮಾಡಲು ಸಾಧ್ಯವಿದೆ. ಈ ಮೂಲಕ ನಿಮ್ಮ ಸ್ನೇಹಿತರನ್ನು ಗ್ರೂಪ್‌ಗೆ ಆಹ್ವಾನಿಸಿ ಅವರಲ್ಲಿ ಚರ್ಚಿಸಬಹುದು.

ಫೇಸ್‌ಬುಕ್  ಟಿಪ್ಸ್‌

ಫೇಸ್‌ಬುಕ್ ಟಿಪ್ಸ್‌


ಫೇಸ್‌ಬುಕ್‌ ಇದುವರೆಗಿನ ನಿಮ್ಮ ಮೆಸೇಜ್‌,ಫೋಟೋ ಸೆರಿದಂತೆ ಎಲ್ಲಾ ಚಟುವಟಿಕೆಯ ಮಾಹಿತಿಯನ್ನ ಡೌನ್‌ಲೋಡ್‌ ಮಾಡಬಹುದು. ಜನರಲ್‌ ಅಕೌಂಟ್‌ ಸೆಟ್ಟಿಂಗ್ಸ್‌ ಹೋಗಿ ಕೆಳಗಡೆ ಇರುವ ಡೌನ್‌ಲೋಡ್‌ ಎ ಕಾಪಿ ಆಯ್ಕೆಯನ್ನು ಆರಿಸಿ ಅಕೌಂಟ್‌ ಪಾಸ್‌ವರ್ಡ್‌ ಟೈಪ್‌ ಮಾಡಿ ಡೌನ್‌ಲೋಡ್‌ ಮಾಡಬಹುದು.

ಫೇಸ್‌ಬುಕ್  ಟಿಪ್ಸ್‌

ಫೇಸ್‌ಬುಕ್ ಟಿಪ್ಸ್‌


ಫೇಸ್‌ಬುಕ್‌ನ ಹೊಸ ಫೀಚರ್‌‌ ಗ್ರಾಫ್‌ ಸರ್ಚ್‌‌ನಲ್ಲಿ ನೀವು ನಿಮ್ಮ ಸ್ನೇಹಿತರು ಫೇಸ್‌ಬುಕ್‌ನಲ್ಲಿ ಏನೇನು ಮಾಡಿದ್ದಾರೆ ಎನ್ನುವುದನ್ನು ನೋಡಬಹುದು.ಆದರೆ ನೀವು ಫೇಸ್‌ಬುಕ್‌ನಲ್ಲಿ ಏನೇನು ಮಾಡಿದ್ದೀರಿ? ಯಾರ ಫೋಟೋ, ಕಮೆಂಟ್‌‌ಗೆ ಲೈಕ್‌ ಮಾಡಿದ್ದೀರಿ, ಸ್ನೇಹಿತರಿಗೆ ಫ್ರೆಂಡ್‌ ರಿಕ್ವೆಸ್ಟ್‌ ಕಳುಹಿಸಿದ ಮಾಹಿತಿ ಒಂದೇ ಸ್ಕ್ರೀನ್‌ನಲ್ಲಿ ಕಾಣ ಬೇಕಿದ್ದಲ್ಲಿ ಆಕ್ಟಿವಿಟಿ ಲಾಗ್‌ನ್ನು ಓಪನ್‌ ಮಾಡಿ ನೋಡಬಹುದು. ಸೆಟ್ಟಿಂಗ್ಸ್‌---ಪ್ರೈವೆಸಿ--- ಯೂಸ್‌ ಆಕ್ಟಿವಿಟಿ ಲಾಗ್‌ ಓಪನ್‌ ಮಾಡಿ ನಿಮ್ಮ ಫೇಸ್‌ಬುಕ್‌ ಚಟುವಟಿಕೆಯನ್ನು ನೋಡಬಹುದು. ಅಥವಾ ನಿಮ್ಮ ಟೈಮ್‌ಲೈನ್‌ಗೆ ಹೋಗಿ ಆಕ್ಟಿವಿಟಿ ಲಾಗ್‌ ಕ್ಲಿಕ್‌ ಮಾಡುವ ಮೂಲಕ ನೋಡಬಹುದು.

ಫೇಸ್‌ಬುಕ್  ಟಿಪ್ಸ್‌

ಫೇಸ್‌ಬುಕ್ ಟಿಪ್ಸ್‌

ಫೇಸ್‌ಬುಕ್‌ನಲ್ಲಿ ನಡೆಯುವ ಪ್ರತಿ ಮಾಹಿತಿಗಳು ನಿಮ್ಮ ಮೊಬೈಲ್‌ಗೆ ಬರಬೇಕು ಎಂದು ಯೋಚಿಸಿದ್ದಲ್ಲಿ ಮೊಬೈಲ್‌ನ್ನು ನಂಬರ್‌ನ್ನು ರಿಜಿಸ್ಟರ್‌ ಮಾಡುವ ಮೂಲಕ ಫೇಸ್‌ಬುಕ್‌ನ ಪ್ರತಿ ಫೀಡ್‌ ಪಡೆಯಬಹುದು.ಸೆಟ್ಟಿಂಗ್ಸ್‌ನಲ್ಲಿ ಮೊಬೈಲ್‌ ಸೆಟ್ಟಿಂಗ್ಸ್‌ ಹೋಗಿ ಈ ಸೇವೆಯನ್ನು ಪಡೆದುಕೊಳ್ಳಬಹುದು.

ಫೇಸ್‌ಬುಕ್  ಟಿಪ್ಸ್‌

ಫೇಸ್‌ಬುಕ್ ಟಿಪ್ಸ್‌


ಟ್ವೀಟರ್‌ ಮತ್ತು ಫೇಸ್‌ಬುಕ್‌‌ನಲ್ಲಿ ಎರಡು ಅಕೌಂಟ್‌ ಹೊಂದಿರುವ ಬಳಕೆದಾರರಿಗೆ ಫೇಸ್‌ಬುಕ್‌ನಲ್ಲಿ ಟ್ವೀಟರ್‌ ಅಕೌಂಟ್‌ ಲಿಂಕ್‌ ಮಾಡಿ ಫೇಸ್‌ಬುಕ್‌ ಪೋಸ್ಟ್‌ ಫೋಟೋ ವನ್ನು ಟ್ವೀಟರ್‌ನಲ್ಲೂ, ಟ್ವೀಟರ್‌ನಲ್ಲಿ ಟ್ವೀಟ್‌ ಮತ್ತು ಫೋಟೋವನ್ನು ಫೇಸ್‌ಬುಕ್‌ನಲ್ಲೂ ಬರುವಂತೆ ಮಾಡಬಹುದು. ಸೆಟ್ಟಿಂಗ್ಸ್‌--- ಫಾಲೋವರ್‍ಸ್---ಲಿಂಕ್‌ ಟ್ವೀಟರ್‌ ಅಕೌಂಟ್‌ ಮೂಲಕ ಟ್ಟೀಟರ್‌ ಖಾತೆಯನ್ನು ಸೇರಿಸಬಹುದು.

ಫೇಸ್‌ಬುಕ್  ಟಿಪ್ಸ್‌

ಫೇಸ್‌ಬುಕ್ ಟಿಪ್ಸ್‌

ಈಗಾಗಲೇ ಫ್ರೆಂಡ್‌ ಆಗಿರುವ ಫ್ರೆಂಡ್ಸ್‌ನ್ನು ಅನ್‌ಫ್ರೆಂಡ್‌ ಮಾಡಬಹುದು. ಅನ್‌ಫ್ರೆಂಡ್‌ ಮಾಡಲು ನಿಮ್ಮ ಸ್ನೇಹಿತರ ಖಾತೆಗೆ ಹೋಗಿ. ಅಲ್ಲಿ ಅವರ ಟೈಮ್‌ಲೈನ್‌ ಕಾಣುತ್ತಿರುವ ಫ್ರೆಂಡ್ಸ್‌ ಬಾಕ್ಸ್‌ ಕ್ಲಿಕ್‌ ಮಾಡಿ ಅನ್‌ಫ್ರೆಂಡ್‌ ಆಯ್ಕೆಯನ್ನು ಆರಿಸಿ.

ಫೇಸ್‌ಬುಕ್  ಟಿಪ್ಸ್‌

ಫೇಸ್‌ಬುಕ್ ಟಿಪ್ಸ್‌

ಫೇಸ್‌ಬುಕ್‌ನಲ್ಲಿ ಸಾವಿರಕ್ಕೂ ಹೆಚ್ಚು ಇರುವ ಸ್ನೇಹಿತರಲ್ಲಿ ಕೆಲವು ಸ್ನೇಹಿತರ ಪೋಸ್ಟ್‌‌ಗಳನ್ನು ನಾವು ಓದುವ ಹಂಬಲದಲ್ಲಿ ಇರುತ್ತೇವೆ. ಆದರೆ ಉಳಿದ ಸ್ನೇಹಿತರ ಪೋಸ್ಟ್‌ಗಳಿಂದ ಅವರ ಪೋಸ್ಟ್‌ಗಳನ್ನು ನಮ್ಮ ವಾಲ್‌ನಲ್ಲಿ ಸುಲಭವಾಗಿ ಕಾಣುದಿಲ್ಲ.ಹೀಗಾಗಿ ಆ ಸ್ನೇಹಿತರು ಯಾವಾಗ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ ಸಂದೇಶ ಸುಲಭವಾಗಿ ಓದಬೇಕಿದ್ದಲ್ಲಿ ಗೆಟ್‌ ನೋಟಿಫಿಕೇಶನ್‌ ಆಯ್ಕೆಯನ್ನು ಆರಿಸಿಕೊಳ್ಳಬಹುದು.ಸ್ನೇಹಿತರ ಟ್ವೈಮ್‌ ಲೈನ್‌ ಹೋಗಿ ಫ್ರೆಂಡ್ಸ್‌ ಬಾಕ್ಸ್‌ನಲ್ಲಿರುವ
Get Notifiactions ಆಯ್ಕೆಯನ್ನು ಆರಿಸಿದ್ದಲ್ಲಿ ಆ ಸ್ನೇಹಿತರು ಹೊಸದಾಗಿ ಅಪ್‌ಲೋಡ್‌ ಮಾಡಿರುವ ಪೋಸ್ಟ್‌,ಫೋಟೋಗಳ ನೋಟಿಫಿಕೇಶನ್‌ ನಿಮ್ಮ ಅಕೌಂಟ್‌ಗೆ ಬರುತ್ತದೆ.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+