ನಿಮ್ಮ ಸ್ಮಾರ್ಟ್‌ಫೋನ್ ಹಾನಿ ಆಗದಂತೆ ತಡೆಯಲು ಈ ಟಿಪ್ಸ್‌ ಉಪಯುಕ್ತ!

|

ಸದ್ಯ ಸ್ಮಾರ್ಟ್‌ಫೋನ್‌ಗಳು ಪ್ರತಿಯೊಬ್ಬರ ಅಗತ್ಯ ಸಾಧನ ಆಗಿದೆ. ಬಹುತೇಕರು ಹೆಚ್ಚಿನ ವೇಗದ ಪ್ರೊಸೆಸರ್‌, ಅಧಿಕ ಸೆನ್ಸಾರ್ ಕ್ಯಾಮರಾ, ದೀರ್ಘ ಬ್ಯಾಟರಿ ಬಾಳಿಕೆ ಫೀಚರ್ಸ್‌ ಒಳಗೊಂಡ ಫೋನ್‌ಗಳಿಗೆ ಆದ್ಯತೆ ನೀಡುತ್ತಾರೆ. ಅತ್ಯುತ್ತಮ ಫೋನ್‌ ಖರೀದಿಸಿದ ಬಳಿಕ ಆ ಫೋನ್‌ ಕಾಳಜಿ, ಸುರಕ್ಷತೆ ಸಹ ಬಹು ಮುಖ್ಯ ಆಗಿದೆ. ಆದರೆ ಬಳಕೆದಾರರು ಕೆಲವೊಮ್ಮೆ ಈ ವಿಷಯವನ್ನು ಮರೆತು ಬಿಡುತ್ತಾರೆ. ಹೀಗಾಗಿ ಫೋನ್‌ ಅನ್ನು ಹಾನಿಯಿಂದ ಸುರಕ್ಷಿತವಾಗಿ ಇಡುವುದು ಅಗತ್ಯ.

ನೋಡಿಕೊಳ್ಳುವುದು

ಹೌದು, ಅವಶ್ಯ ಸಾಧನ ಆಗಿರುವ ಸ್ಮಾರ್ಟ್‌ಫೋನ್‌ ಅನ್ನು ಯಾವುದೇ ಹಾನಿ ಆಗದಂತೆ ಸುರಕ್ಷಿತವಾಗಿ ನೋಡಿಕೊಳ್ಳುವುದು ಅಗತ್ಯ. ಒಂದು ಸಣ್ಣ ಸ್ಕ್ರೀನ್ ಸ್ಕ್ರಾಚ್ ಸಹ ಫೋನಿನ ಅಂದ ಹಾಳು ಮಾಡುತ್ತದೆ. ಇನ್ನು ದೊಡ್ಡ ಹಾನಿಗಳು ಸಂಭವಿಸಿದರೆ ಫೋನ್ ಸರಿಯಾಗಿ ಕಾರ್ಯ ನಿರ್ವಹಿಸದೇ ಇರಬಹುದು. ಆದರೆ ಕೆಲವು ಉಪಯುಕ್ತ ಸಲಹೆಗಳನ್ನು ಅನುಸರಿಸುವ ಮೂಲಕ ಸ್ಮಾರ್ಟ್‌ಫೋನ್‌ ಹಾನಿಗೊಳಗಾಗದಂತೆ ನೋಡಿ ಕೊಳ್ಳಬಹುದಾಗಿದೆ. ಹಾಗಾದರೇ ಸ್ಮಾರ್ಟ್‌ಫೋನ್ ಹಾನಿ ಆಗದಂತೆ ಸುರಕ್ಷಿತವಾಗಿ ನೋಡಿಕೊಳ್ಳಲು ಉಪಯುಕ್ತ ಸಲಹೆಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಸ್ಮಾರ್ಟ್‌ಫೋನ್ ಬ್ಯಾಕ್‌ ಕವರ್‌ ಬಳಕೆ

ಸ್ಮಾರ್ಟ್‌ಫೋನ್ ಬ್ಯಾಕ್‌ ಕವರ್‌ ಬಳಕೆ

ಸ್ಮಾರ್ಟ್‌ಫೋನ್ ಅನ್ನು ಬ್ಯಾಕ್‌ ಕವರ್ ಇಲ್ಲದೆ, ಬಳಸುವುದು ಖಂಡಿತವಾಗಿಯೂ ಅತ್ಯುತ್ತಮ ಅನುಭವವಾಗಿದೆ. ಆದರೆ ಬ್ಯಾಕ್‌ ಕವರ್ ಬಳಸದೇ ಫೋನ್ ಬಳಕೆ ಮಾಡಿದಾಗ ಕೆಲವೊಮ್ಮೆ ಕೈ ಯಿಂದ ಫೋನ್ ಬೀಳುವ ಸಾಧ್ಯತೆಗಳಿರುತ್ತವೆ. ಇಂಥ ವೇಳೆ ಫೋನ್ ಬ್ಯಾಕ್‌ ಕವರ್ ಇದ್ದರೆ, ಅದು ಹೆಚ್ಚಿನ ಹಾನಿ ಆಗುವುದನ್ನು ತಡೆಯಲು ನೆರವಾಗುತ್ತದೆ. ಮಾರುಕಟ್ಟೆ ಯಲ್ಲಿ ಭಿನ್ನ ಮಾದರಿಯ ಫೋನ್‌ ಬ್ಯಾಕ್‌ ಕವರ್ ಸಿಗುತ್ತವೆ. ಬಳಕೆದಾರರು ತಮ್ಮ ಅನುಕೂಲಕ್ಕೆ ತಕ್ಕಂತೆ ಖರೀದಿಸಬಹುದು.

ಫೋನ್‌ಗೆ ಇತರೆ ವಸ್ತುಗಳು ತಾಗದಿರಲಿ

ಫೋನ್‌ಗೆ ಇತರೆ ವಸ್ತುಗಳು ತಾಗದಿರಲಿ

ಬಳಕೆದಾರರು ತಮ್ಮ ಜೇಬಿನಲ್ಲಿ ಸ್ಮಾರ್ಟ್‌ಫೋನ್‌ ಅನ್ನು ಇಡುವಾಗ ಫೋನ್‌ಗೆ ಇತರೆ ವಸ್ತುಗಳು ತಾಗದಂತೆ ಪ್ರತ್ಯೇಕವಾಗಿ ಇಡುವುದು ಉತ್ತಮ. ಇದರಿಂದ ಫೋನಿನ ಸ್ಕ್ರೀನ್ ಗಳಿಗೆ ಸ್ಕ್ರಾಚ್‌ಗಳು ಆಗುವುದುದನ್ನು ತಡೆಯಬಹುದು. ನಾಣ್ಯಗಳು ಇರುವ ಜೇಬಿನಲ್ಲಿ ಫೋನ್ ಇಟ್ಟರೆ, ನಾಣ್ಯಗಳು ಫೋನಿನ ಸ್ಕ್ರಿನ್‌ಗೆ ತಾಗಿ ಸ್ಕ್ರಾಚ್ ಆಗುವ ಸಾಧ್ಯತೆಗಳು ಇರುತ್ತವೆ. ಹೀಗಾಗಿ ಎಚ್ಚರ ವಹಿಸುವುದು ಉತ್ತಮ.

ಸ್ಮಾರ್ಟ್‌ಫೋನ್‌ ಬಗ್ಗೆ ಕಾಳಜಿ ತೋರಿ

ಸ್ಮಾರ್ಟ್‌ಫೋನ್‌ ಬಗ್ಗೆ ಕಾಳಜಿ ತೋರಿ

ಸ್ಮಾರ್ಟ್‌ಫೋನ್‌ಗೆ ಹಾನಿ ಆಗುವುದನ್ನು ತಡೆಯುವುದು ಮುಖ್ಯ. ಅದಕ್ಕಾಗಿ ಬ್ಯಾಕ್‌ ಕವರ್, ಸ್ಕ್ರೀನ್ ಗಾರ್ಡ್‌ ಬಳಕೆ ಮಾಡುತ್ತಾರೆ. ಅದಾಗ್ಯೂ, ಬಳಕೆದಾರರ ಕಾಳಜಿ ಅಗತ್ಯ ಇರುತ್ತದೆ. ಫೋನ್‌ ಅನ್ನು ಇಡುವಾಗ ಹೆಚ್ಚು ಸುರಕ್ಷಿತ ಸ್ಥಳದಲ್ಲಿ ಇಡುವುದು ಉತ್ತಮ. ಚಿಕ್ಕ ಮಕ್ಕಳು ಕೈಯಲ್ಲಿ ಫೋನ್ ಕೊಟ್ಟಾಗಲೂ ಎಚ್ಚರ ವಹಿಸುವುದು ಅಗತ್ಯ. ಹಾಗೆಯೇ ಮನೆಯಲ್ಲಿ ಸಾಕು ಪ್ರಾಣಿಗಳು ಇದ್ದರೆ, ಅವುಗಳು ಓಡಾಡುವ ಸ್ಥಳದಲ್ಲಿ ಸ್ಮಾರ್ಟ್‌ಫೋನ್ ಇಡುವುದು ಸುರಕ್ಷಿತವಲ್ಲ.

ಸ್ಕ್ರೀನ್ ಗಾರ್ಡ್ ಬಳಕೆ ಮಾಡುವುದು ಸೂಕ್ತ

ಸ್ಕ್ರೀನ್ ಗಾರ್ಡ್ ಬಳಕೆ ಮಾಡುವುದು ಸೂಕ್ತ

ಹಾನಿಯ ವಿಷಯದಲ್ಲಿ ಸ್ಮಾರ್ಟ್‌ಫೋನ್ ಸ್ಕ್ರೀನ್‌ ಸಾಧನದ ಅತ್ಯಂತ ದುರ್ಬಲ ಭಾಗವಾಗಿದೆ. ಇದು ಗೀರುಗಳ ಬಗ್ಗೆ ಅಥವಾ ಒಡೆಯುವಿಕೆಯ ಬಗ್ಗೆ ಇರಲಿ, ಅದು ಯಾವಾಗಲೂ ಸ್ಕ್ರೀನ್‌ ಅನ್ನು ರಕ್ಷಿಸ ಬೇಕು. ಸ್ವಲ್ಪ ಡ್ರಾಪ್ ಅಥವಾ ಅಜಾಗರೂಕತೆ ಸ್ಕ್ರೀನ್‌ ಅನ್ನು ಮುರಿಯಬಹುದು. ಇಂತಹ ಅವಘಡಗಳನ್ನು ತಪ್ಪಿಸಲು, ಉತ್ತಮ ಗುಣಮಟ್ಟದ 'ಸ್ಕ್ರೀನ್ ಗಾರ್ಡ್' ಅಥವಾ 'ಟೆಂಪರ್ಡ್ ಗ್ಲಾಸ್' ಅನ್ನು ಬಳಸುವುದು ಸುರಕ್ಷಿತ ಟ್ರಿಕ್ ಆಗಿದ್ದು ಅದು ಪರದೆಯನ್ನು ಗೀರುಗಳಿಂದ ರಕ್ಷಿಸುತ್ತದೆ ಮತ್ತು ಹಾನಿ ಯಿಂದ ರಕ್ಷಣೆ ನೀಡಲು ಹೆಚ್ಚುವರಿ ಪದರವಾಗಿ ಕಾರ್ಯ ನಿರ್ವಹಿಸುತ್ತದೆ.

Best Mobiles in India

English summary
Few Useful Tips To Protect Your Smartphone From Damage. Details.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X