ಸ್ಮಾರ್ಟ್‌ಫೋನ್ ಸುರಕ್ಷತೆಗಾಗಿ ಈ ಕ್ರಮಗಳನ್ನು ತಪ್ಪದೇ ಅನುಸರಿಸಿರಿ!

|

ಪ್ರಸ್ತುತ ಯಾರೊಬ್ಬರಿಗೂ ಸ್ಮಾರ್ಟ್‌ಫೋನ್ ಬಿಟ್ಟಿರಲು ಅಸಾಧ್ಯ ಎನ್ನುವಷ್ಟು ದೈನಂದಿನ ಅಗತ್ಯ ಕೆಲಸಗಳಲ್ಲಿ ಸ್ಮಾರ್ಟ್‌ಫೋನ್ ಅಗತ್ಯ ಡಿವೈಸ್‌ ಅನಿಸಿಕೊಂಡಿದೆ. ಜನರು ಅನೇಕ ಕೆಲಸಗಳನ್ನು ಫೋನ್‌ ಮೂಲಕವೇ ನಡೆಸಿ ಬಿಡುತ್ತಾರೆ. ಈಗಂತೂ ಡಿಜಿಟಲ್‌ ಪೇಮೆಂಟ್‌ ಹೆಚ್ಚು ಬಳಕೆಯಲ್ಲಿದ್ದು, ಹೀಗಾಗಿ ಜೇಬಿನಲ್ಲಿ ಹಣ ಇಲ್ಲದಿದ್ದರೂ ಸ್ಮಾರ್ಟ್‌ಫೋನ್ ಇರಲೇ ಬೇಕಾದ ಅನಿವಾರ್ಯತೆ ಇದೆ. ಆದ್ರೆ ಬಳಕೆದಾರರು ಸ್ಮಾರ್ಟ್‌ಫೋನ್ ಸುರಕ್ಷತೆ ಬಗ್ಗೆ ಎಚ್ಚರವಹಿಸುವುದು ಅಗತ್ಯವಿದೆ.

ಸ್ಮಾರ್ಟ್‌ಫೋನ್

ಹೌದು, ಸದಾ ಜೊತೆಗೆ ಇರುವ ಸ್ಮಾರ್ಟ್‌ಫೋನ್ ಅತೀ ಆಪ್ತ ಆಗಿದೆ. ಏಕೆಂದರೇ ಬ್ಯಾಂಕ್ ಪಾಸ್‌ವರ್ಡ್‌, ಪ್ರಮುಖ ಮಾಹಿತಿ ಕಾಪಿ, ವೈಯಕ್ತಿಕ ಫೋಟೊಗಳು, ಇ-ಮೇಲ್‌ ಸೇರಿದಂತೆ ಹಲವು ಅಗತ್ಯ ಮಾಹಿತಿಗಳನ್ನು ಬಳಕೆದಾರರು ಸ್ಮಾರ್ಟ್‌ಫೋನಿನಲ್ಲಿ ಸೇವ್ ಮಾಡಿರುತ್ತಾರೆ. ಹೀಗಾಗಿ ಬಳಕೆದಾರರು ಫೋನ್ ಕಾಳಜಿ ಮಾಡುವುದು ಒಳಿತು. ಏಕೆಂದರೇ ಫೋನ್ ಕದಿಯದೇ ಫೋನ್‌ನಲ್ಲಿರುವ ಮಾಹಿತಿಗಳನ್ನು ಲೂಟಿ ಮಾಡುವ ಸಾಧ್ಯತೆಗಳು ಇರುತ್ತವೆ. ಹೀಗಾಗಿ ಸ್ಮಾರ್ಟ್‌ಫೋನ್‌ ಬಗ್ಗೆ ಎಚ್ಚರಿಕೆ ವಹಿಸುವುದು ಅತೀ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಬಳಕೆದಾರರು ಅನುಸರಿಸಬೇಕಾದ ಕೆಲವು ಕ್ರಮಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಕಠಿಣ ಪಾಸ್‌ವರ್ಡ್ ರಚಿಸಿ

ಕಠಿಣ ಪಾಸ್‌ವರ್ಡ್ ರಚಿಸಿ

ಬಹುತೇಕ ಬಳಕೆದಾರರು ಪಾಸ್‌ವರ್ಡ್‌ಗಳು ಬೇಗ ನೆನಪಿಗೆ ಬರಲಿ ಎನ್ನುವ ಕಾರಣಕ್ಕೆ ಅತೀ ಸುಲಭವಾದ ಪಾಸ್‌ವರ್ಡ್‌ನ್ನು ಬಳಸುತ್ತಾರೆ. ಆದರೆ ಇದು ಸೈಬರ್ ಕ್ರಿಮಿನಲ್‌ಗಳಿಂದ ಬಹಳ ಅಪಾಯ ತಂದೊಡ್ಡುವ ಸಾಧ್ಯತೆಗಳಿಗೆ ದಾರಿ ಮಾಡಿಕೊಡುತ್ತದೆ. ಹೀಗಾಗಿ ಬಳಕೆದಾರರು ಕಠಿಣ ಪಾಸ್‌ವರ್ಡ್‌ ಬಳಕೆ ಮಾಡುವುದು ಉತ್ತಮ. ನಿಮ್ಮ ಹೆಸರು ಅಥವಾ ಮೊಬೈಲ್‌ ಸಂಖ್ಯೆ ಅಥವಾ 111111111 ಅಥವಾ 123456789 ಅಥವಾ 987654321 ಈ ರೀತಿಯ ಪಾಸ್‌ವರ್ಡ್‌ ಬಳಸಬೇಡಿ.

OS ಅಪ್‌ಡೇಟ್‌ ಮಾಡುತ್ತಿರಿ

OS ಅಪ್‌ಡೇಟ್‌ ಮಾಡುತ್ತಿರಿ

ಸ್ಮಾರ್ಟ್‌ಫೋನ್‌ ಓಎಸ್‌ ಅಪ್‌ಡೇಟ್‌ ಇದ್ದಾಗ/ಕೇಳಿದಾಗ ಓಎಸ್‌ ಅನ್ನು ಅಪ್‌ಡೇಟ್ ಮಾಡಿಬಿಡಿ. ಏಕೆಂದರೇ ಓಎಸ್‌ ಅನ್ನು ಅಪ್‌ಡೇಟ್ ಮಾಡುವುದು ಫೋನ್ ಸುರಕ್ಷಿತವಾಗಿಡಲು ನೆರವಾಗಲಿದೆ. ಇಲ್ಲದಿದ್ದಲ್ಲಿ ಫೋನ್ ಆಪರೇಟಿಂಗ್ ಸ್ಲೋ ಆಗುವ ಜೊತೆಗೆ ಹ್ಯಾಕರ್ ದಾಳಿಗೆ ತುತ್ತಾಗುವ ಸಾಧ್ಯತೆಗಳು ಇವೆ.

ಹೊಸ ಆಪ್‌ ಡೌನ್‌ಲೋಡ್‌ ಮಾಡುವಾಗ ಎಚ್ಚರ

ಹೊಸ ಆಪ್‌ ಡೌನ್‌ಲೋಡ್‌ ಮಾಡುವಾಗ ಎಚ್ಚರ

ಗೂಗಲ್ ಪ್ಲೇ ಸ್ಟೋರ್‌ನಲ್ಲಿರುವ ಆಪ್‌ಗಳ ಬಗ್ಗೆ ಎಚ್ಚರವಿರಲಿ. ಹಾಗೆಯೇ ಥರ್ಡ್‌ಪಾರ್ಟಿ ಮೂಲಗಳಿಂದ ಯಾವುದೇ ಆಪ್‌ ಇನ್‌ಸ್ಟಾಲ್‌ ಮಾಡುಕೊಳ್ಳಬೇಡಿ. ಏಕೆಂದರೆ ಥರ್ಡ್‌ಪಾರ್ಟಿ ಆಪ್‌ಗಳಿಂದ ಆಪ್‌ ಇನ್‌ಸ್ಟಾಲ್‌ ಮಾಡುವುದರಿಂದ ಫೋನ್‌ಗೆ ಹಾನಿ ಆಗುವ ಸಂಭವಗಳಿರುತ್ತವೆ.

ಯಾವುದೇ ಲಿಂಕ್ ಕ್ಲಿಕ್ ಮಾಡಬೇಡಿ

ಯಾವುದೇ ಲಿಂಕ್ ಕ್ಲಿಕ್ ಮಾಡಬೇಡಿ

ನಿಮ್ಮ ಸ್ಮಾರ್ಟ್‌ಫೋನ್‌ಗಳಿಗೆ ಬರುವ ಗೊತ್ತಿಲ್ಲದ ಯಾವುದೋ ವೆಬ್‌ ಲಿಂಕ್‌ಗಳನ್ನು ಹಾಗೂ ಉಡುಗೊರೆಗಳ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ. ನಿಮ್ಮನ್ನು ಹಾದಿ ತಪ್ಪಿಸುವ ಈ ರೀತಿಯ ಲಿಂಕ್‌ಗಳು ಕ್ಲಿಕ್ ಮಾಡದಿರಿ. ಬ್ಯಾಂಕ್‌ ಹೆಸರು ಹೇಳಿಕೊಂಡು ಅಥವಾ ಬಹುಮಾನ ಬಂದಿದೆ ಎಂದು ಹೇಳಿಕೊಂಡು ಬರುವ ಯಾವುದೇ ಕರೆಗಳಿಗೆ ಸ್ಪಂದಿಸಬೇಡಿ.

ಬೇಸಿಕ್ ಸೇಫ್ಟಿ ಫೀಚರ್ಸ್‌ ಅನುಸರಿಸಿ

ಬೇಸಿಕ್ ಸೇಫ್ಟಿ ಫೀಚರ್ಸ್‌ ಅನುಸರಿಸಿ

ಸ್ಮಾರ್ಟ್‌ಫೋನಿನಲ್ಲಿಯೇ ಸ್ಕ್ರೀನ್ ಲಾಕ್‌ ಮಾಡಲು ಪಿನ್‌, ಪಾಸ್‌ವರ್ಡ್‌, ಪ್ಯಾಟ್ರಾನ್, ಫಿಂಗರ್‌ಪ್ರಿಂಟ್‌ ಮುಂತಾದ ಸ್ಮಾರ್ಟ್‌ಫೋನ್ ಅನ್‌ಲಾಕಿಂಗ್‌ ಮುಂತಾದ ತಂತ್ರಜ್ಞಾನ ಫೀಚರ್ಸ್‌ಗಳ ಆಯ್ಕೆ ಇವೆ. ಬೇಸಿಕ್‌ ಸೇಫ್ಟಿ ಆಯ್ಕೆಗಳನ್ನು ಬಳಕೆದಾರರು ಅನುಸರಿಸುವುದನ್ನು ಮರೆಯಬಾರದು. ಏಕೆಂದರೇ ಸ್ಮಾರ್ಟ್‌ಫೋನ್ ಕಾಳಜಿ ಅಗತ್ಯವಾಗಿದೆ.

Most Read Articles
Best Mobiles in India

English summary
Follow These Easy Steps For Smartphone Security.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X