Home
ಟೆಕ್ ನೌಕರಿ

ನಿಮ್ಮ ಡ್ರೈವಿಂಗ್ ಲೈಸೆನ್ಸ್‌ಗೆ ಆಧಾರ್ ಸಂಖ್ಯೆ ಲಿಂಕ್ ಮಾಡಲು ಈ ಕ್ರಮ ಅನುಸರಿಸಿ!

ಸದ್ಯ ದೇಶದಲ್ಲಿ ಬಹುತೇಕ ಸೇವೆಗಳು ಡಿಜಿಟಲ್‌ ರೂಪ ಪಡೆಯುತ್ತ ಸಾಗಿದ್ದು, ಆ ಲಿಸ್ಟ್‌ನಲ್ಲಿ ಆರ್‌ಟಿಓದ ಹಲವು ಸೇವೆಗಳು ಸೇರ್ಪಡೆ ಆಗಿವೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು (MoRTH) ಇತ್ತೀಚೆಗೆ ಹಲವು ಸೇವೆಗಳನ್ನು ಆನ್‌ಲೈನ್‌ನಲ್ಲಿ ಲಭ್ಯವಾಗುವಂತೆ ಮಾಡಿದೆ. ಹಾಗೆಯೇ ಡ್ರೈವಿಂಗ್ ಲೈಸೆನ್ಸ್ ನೊಂದಿಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡುವಂತೆ ಸಹ ಸೂಚಿಸಿದೆ.

ಆಧಾರ

ಆಧಾರ ಸಂಖ್ಯೆಯನ್ನು ಲಿಂಕ್ ಮಾಡಿದರೇ ಚಾಲಕನ ಸಂಪೂರ್ಣ ಮಾಹಿತಿಯು ಆನ್‌ಲೈನ್‌ನಲ್ಲಿ ಲಭ್ಯವಿರುತ್ತದೆ. ಅಗತ್ಯ ಸಂದರ್ಭಗಳಲ್ಲಿ ಚಾಲಕರ ಸೂಕ್ತ ಮಾಹಿತಿ ಪಡೆಯಲು ಸುಲಭವಾಗಲಿದೆ. ಹಾಗಾದರೇ ಆಧಾರ್ ಸಂಖ್ಯೆ ಮತ್ತು DL ಅನ್ನು ಲಿಂಕ್ ಮಾಡುವುದು ಹೇಗೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಆಧಾರ್ ಸಂಖ್ಯೆ ಮತ್ತು DL ಅನ್ನು ಲಿಂಕ್ ಮಾಡಲು ಈ ಕ್ರಮಗಳನ್ನು ಫಾಲೋ ಮಾಡಿ

ಆಧಾರ್ ಸಂಖ್ಯೆ ಮತ್ತು DL ಅನ್ನು ಲಿಂಕ್ ಮಾಡಲು ಈ ಕ್ರಮಗಳನ್ನು ಫಾಲೋ ಮಾಡಿ

* ರಾಜ್ಯ ರಸ್ತೆ ಸಾರಿಗೆ ಇಲಾಖೆಯ ಅಧಿಕೃತ ವೆಬ್ ಸೈಟ್ https://transport.karnataka.gov.in/english ಭೇಟಿ ನೀಡಿ.

* ನಂತರ 'ಲಿಂಕ್ ಆಧಾರ್' ಆಯ್ಕೆಯನ್ನು .

* ಈಗ ಡ್ರಾಪ್ ಡೌನ್ ಮೆನುವಿನಿಂದ 'ಡ್ರೈವಿಂಗ್ ಲೈಸೆನ್ಸ್' ಆಯ್ಕೆಯನ್ನು ಸೆಲೆಕ್ಟ್ ಮಾಡಿ.

* ಡ್ರೈವಿಂಗ್ ಲೈಸೆನ್ಸ್ ನಂಬರ್ ನಮೂದಿಸಿ 'ಗೆಟ್ ಡಿಟೇಲ್ಸ್' ಮೇಲೆ.

ಆಧಾರ್

* ಈಗ ಕೊಟ್ಟಿರುವ ಜಾಗದಲ್ಲಿ 12 ಅಂಕಿಗಳ ಆಧಾರ್ ಸಂಖ್ಯೆ ಮತ್ತು ಮೊಬೈಲ್ ನಂಬರ್ ಅನ್ನು ನಮೂದಿಸಿ.

* ವಿವರಗಳನ್ನು ಭರ್ತಿ ಮಾಡಿದ ನಂತರ 'ಸಬ್ ಮಿಟ್' ಎಂದು ನಮೂದಿಸಿ.

* ನಿಮ್ಮ ನೋಂದಾಯಿತ ಮೊಬೈಲ್ ಗೆ ಒಂದು OTP ಯನ್ನು ಕಳುಹಿಸಲಾಗುತ್ತದೆ. ಪ್ರಕ್ರಿಯೆಯನ್ನು ಪೂರ್ಣಗೊಳಿಸಲು OTP ಯನ್ನು ನಮೂದಿಸಿ. ಈ ಮೂಲಕ ನಿಮ್ಮ ಡಿಎಲ್ ಗೆ ಆಧಾರ್ ಸಂಖ್ಯೆ ಲಿಂಕ್ ಮಾಡಿ.

ರಸ್ತೆ ಸಾರಿಗೆ

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಚಾಲನಾ ಪರವಾನಗಿ ಮತ್ತು ನೋಂದಣಿ ಪ್ರಮಾಣಪತ್ರ ಅಲ್ಲದೇ ಇತರೆ 18 ಸೇವೆಗಳನ್ನು ಆನ್‌ಲೈನ್‌ ಮೂಲಕ ಲಭ್ಯ ಮಾಡಿದೆ. ಆಧಾರ್ ದೃಢೀಕರಣದ ಮೂಲಕ ಅರ್ಜಿದಾರರು ಆನ್‌ಲೈನ್‌ ಸೇವೆಗಳನ್ನು ಪಡೆಯಬಹುದು. ಹಾಗಾದರೇ ಆನ್‌ಲೈನ್‌ ಮೂಲಕ ಪಡೆಯಬಹುದಾದ 18 ಸೇವೆಗಳ ಲಿಸ್ಟ್‌ ಮುಂದೆ ತಿಳಿಸಲಾಗಿದೆ ಓದಿರಿ.

* ಕಲಿಯುವವರ ಪರವಾನಗಿ(LLR).

* ಚಾಲನಾ ಪರವಾನಗಿಯನ್ನು ನವೀಕರಿಸುವುದು ಯಾವ ಚಾಲನೆಯ ಸಾಮರ್ಥ್ಯವನ್ನು ಪರೀಕ್ಷಿಸುವ ಅಗತ್ಯವಿಲ್ಲ(DL Renewal).

* ನಕಲಿ ಚಾಲನಾ ಪರವಾನಗಿ.

* ಚಾಲನಾ ಪರವಾನಗಿ ಮತ್ತು ನೋಂದಣಿ ಪ್ರಮಾಣಪತ್ರದಲ್ಲಿ ವಿಳಾಸ ಬದಲಾವಣೆ.

ಅಂತರರಾಷ್ಟ್ರೀಯ ಚಾಲನಾ

* ಅಂತರರಾಷ್ಟ್ರೀಯ ಚಾಲನಾ ಪರವಾನಗಿ ನೀಡುವಿಕೆ.

* ಸೆರೆಂಡರ್ ಆಫ್ ಕ್ಲಾಸ್‌ ವೆಹಿಕಲ್ ಫ್ರಮ್ ಲೈಸೆನ್ಸ್‌

* ಮೋಟಾರು ವಾಹನದ ತಾತ್ಕಾಲಿಕ ನೋಂದಣಿಗೆ ಅರ್ಜಿ.

ಪ್ರಮಾಣಪತ್ರ

ಪ್ರಮಾಣಪತ್ರ

* ಸಂಪೂರ್ಣ ನಿರ್ಮಿತ ದೇಹವನ್ನು ಹೊಂದಿರುವ ಮೋಟಾರು ವಾಹನದ ನೋಂದಣಿಗೆ ಅರ್ಜಿ.

* ನೋಂದಣಿ ನಕಲಿ ಪ್ರಮಾಣಪತ್ರ ವಿತರಣೆಗಾಗಿ ಅರ್ಜಿ.

* ನೋಂದಣಿ ಪ್ರಮಾಣಪತ್ರಕ್ಕಾಗಿ NOC ಅನುದಾನಕ್ಕಾಗಿ ಅರ್ಜಿ.

ಮೋಟಾರು

* ಮೋಟಾರು ವಾಹನದ ಮಾಲೀಕತ್ವದ ವರ್ಗಾವಣೆಯ ಸೂಚನೆ.

* ಮೋಟಾರು ವಾಹನದ ಮಾಲೀಕತ್ವದ ವರ್ಗಾವಣೆಗೆ ಅರ್ಜಿ.

* ನೋಂದಣಿ ಪ್ರಮಾಣಪತ್ರದಲ್ಲಿ ವಿಳಾಸ ಬದಲಾವಣೆಯ ಮಾಹಿತಿ.

ಆಫೀಸರ್

ಆಫೀಸರ್

* ಮಾನ್ಯತೆ ಪಡೆದ ಚಾಲಕ ತರಬೇತಿ ಕೇಂದ್ರದಿಂದ ಚಾಲಕ ತರಬೇತಿಗಾಗಿ ನೋಂದಣಿಗೆ ಅರ್ಜಿ.

* ಡಿಪ್ಲೋಮ್ಯಾಟಿಕ್ ಆಫೀಸರ್ ಮೋಟಾರು ವಾಹನದ ನೋಂದಣಿಗೆ ಅರ್ಜಿ.

* ಡಿಪ್ಲೋಮ್ಯಾಟಿಕ್ ಆಫೀಸರ್ ಮೋಟಾರು ವಾಹನದ ಫ್ರೇಶ್‌ ನೋಂದಣಿ ಗುರುತು ನಿಯೋಜನೆಗಾಗಿ ಅರ್ಜಿ.

* ಬಾಡಿಗೆ-ಖರೀದಿ ಒಪ್ಪಂದದ ಅನುಮೋದನೆ.

* ಬಾಡಿಗೆ-ಖರೀದಿ ಒಪ್ಪಂದದ ಮುಕ್ತಾಯ.

DL ಮಾಡಿಸಲು ಅಗತ್ಯವಿರುವ ದಾಖಲೆಗಳು:

DL ಮಾಡಿಸಲು ಅಗತ್ಯವಿರುವ ದಾಖಲೆಗಳು:

ವಾಹನ ಸವಾರರು ಅಗತ್ಯ ದಾಖಲೆಗಳನ್ನು ಹೊಂದಿದ್ದರೇ ಯಾವುದೇ ಅಂಜಿಕೆ ಇಲ್ಲದೇ ಬೈಕ್ ಓಡಿಸಬಹುದು. ಅದಕ್ಕಾಗಿ ಅಗತ್ಯ ಇರುವ ಡ್ರೈವಿಂಗ್ ಲೈಸೆನ್ಸ್‌, ವಾಹನದ ಆರ್‌ಸಿ, ವಾಹನದ ಇನ್ಶೂರೆನ್ಸ್, ಎಮಿಶನ್‌ ಟೆಸ್ಟ್ ಕಾಪಿ, ದಾಖಲೆಗಳೊಂದಿಗೆ ಮರೆಯದೇ ಹೆಲ್ಮೆಟ್‌ ಹಾಕಿಕೊಳ್ಳಿ. 18 ವರ್ಷ ತುಂಬಿಯೂ ನೀವಿನ್ನೂ ಡ್ರೈವಿಂಗ್ ಲೈಸೆನ್ಸ್‌ ಹೊಂದಿಲ್ಲದಿದ್ದರೇ ಆನ್‌ಲೈನ್‌ನಲ್ಲಯೇ ಡ್ರೈವಿಂಗ್ ಲೈಸೆನ್ಸ್‌ ಮಾಡಿಸಲು ಅರ್ಜಿ ಸಲ್ಲಿಸಿ. ಹಾಗಾದರೇ ಆನ್‌ಲೈನ್‌ನಲ್ಲಿ ಡ್ರೈವಿಂಗ್ ಲೈಸೆನ್ಸ್‌ ಮಾಡಿಸಲು ಅರ್ಜಿ ಸಲ್ಲಿಸಲು ಬೇಕಾದ ಅಗತ್ಯ ದಾಖಲಾತಿಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಕಲಿಕಾ ಚಾಲನಾ ಅನುಜ್ಞಾ ಪತ್ರ-LLR

ಕಲಿಕಾ ಚಾಲನಾ ಅನುಜ್ಞಾ ಪತ್ರ-LLR

ಡ್ರೈವಿಂಗ್ ಲೈಸನ್ಸ್‌ ಪಡೆಯಲು ಮೊದಲು ಕಲಿಕಾ ಚಾಲನಾ ಅನುಜ್ಞಾ ಪತ್ರವನ್ನು ಪಡೆದುಕೊಳ್ಳಬೇಕು. ಕಲಿಕಾ ಚಾಲನಾ ಅನುಜ್ಞಾ ಪತ್ರ ಪಡೆಯಲು ಆಸಕ್ತರು ಆನ್‌ಲೈನ್‌ ಮೂಲಕವೇ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಕಲಿಕಾ ಚಾಲನಾ ಅನುಜ್ಞಾ ಪತ್ರ ಪಡೆಯಲು ಅರ್ಜಿ ಸಲ್ಲಿಸುವವರು 18 ವರ್ಷ ತುಂಬಿದ ಮತ್ತು ಮೇಲ್ಪಟ್ಟಿರಬೇಕು. ಅಂತಹ ಅರ್ಜಿದಾರರು ಮಾತ್ರ ಅರ್ಹರಾಗಿರುತ್ತಾರೆ.

ವಯಸ್ಸಿನ ಪ್ರಮಾಣ ಪತ್ರ

ವಯಸ್ಸಿನ ಪ್ರಮಾಣ ಪತ್ರ

ಕಲಿಕಾ ಚಾಲನಾ ಅನುಜ್ಞಾ ಪತ್ರಕ್ಕಾಗಿ ಅರ್ಜಿ ಸಲ್ಲಿಸುವ ಅರ್ಜಿದಾರರು ವಯಸ್ಸಿನ ಪ್ರಮಾಣ ಪತ್ರ ನೀಡಬೇಕಿರುತ್ತದೆ. ಅಂದರೇ ಡ್ರೈವಿಂಗ್ ಲೈಸನ್ಸ್‌ ಪಡೆಯಲು ಅರ್ಜಿದಾರರು 18 ವರ್ಷ ಪೂರೈಸಿರುವುದನ್ನು ದೃಢಿಕರಿಸಲು ವಯಸ್ಸಿನ ಪ್ರಮಾಣ ಪತ್ರ ಅಗತ್ಯ. ಅರ್ಜಿದಾರರು ವಯಸ್ಸಿನ ದೃಢಿಕರಣಕ್ಕಾಗಿ ಜನನ ಪ್ರಮಾಣ ಪತ್ರ, ಶಾಲಾ ದಾಖಲಾತಿಗಳು ಅಥವಾ ಪಾನ್ ಕಾರ್ಡ್‌ ನೀಡಬಹುದಾಗಿದೆ.

ವಿಳಾಸ ಪುರಾವೆ

ವಿಳಾಸ ಪುರಾವೆ

ಅರ್ಜಿದಾರರು ತಮ್ಮ ವಿಳಾಸ ಪುರಾವೆಯ ದಾಖಲೆಯನ್ನು ಸಲ್ಲಿಸಬೇಕಿರುತ್ತದೆ. ಅದಕ್ಕಾಗಿ ಪಡಿತರ ಚೀಟಿ, ಪಾಸ್‌ಪೋರ್ಟ್, ಜೀವ ವಿಮೆ ಪಾಲಿಸಿ, ಚುನಾವಣಾ ಗುರುತಿನ ಚೀಟಿ, ದೂರವಾಣಿ ಬಿಲ್, ನೀರಿನ ಬಿಲ್ ಅಥವಾ ದಂಡಾಧಿಕಾರಿಗಳ ಅಥವಾ ನೋಟರಿಯವರ ಮುಂದೆ ದೃಢೀಕರಿಸಿದ ವಯಸ್ಸು ಮತ್ತು ವಿಳಾಸದ ಪ್ರಮಾಣ ಪತ್ರವನ್ನು ಸಹ ಅರ್ಜಿಯೊಂದಿಗೆ ಲಗತ್ತಿಸಬಹುದಾಗಿದೆ.

ಅರ್ಜಿ ನಮೂನೆ -2 (CMVR-2)

ಅರ್ಜಿ ನಮೂನೆ -2 (CMVR-2)

ಕಲಿಕಾ ಚಾಲನಾ ಅನುಜ್ಞಾ ಪತ್ರಕ್ಕಾಗಿ ಅರ್ಜಿ ಸಲ್ಲಿಸುವ ಅರ್ಜಿದಾರರು ಆನ್‌ಲೈನ್‌ನಲ್ಲಿ ನಮೂನೆ -2 (CMVR-2) ಅನ್ನು ತುಂಬಿದಬೇಕು. ಈ ಅರ್ಜಿಯಲ್ಲಿ ಯಾವ ವಾಹನದ ಮಾದರಿಯ(LMV/Motor Cycle without gear/Motor Cycle with gear ) ಲೈಸನ್ಸ್ ಪಡೆಯಲು ಅರ್ಜಿಸಲಿಸುತ್ತಿರಿ ಎನ್ನುವ ಅಂಶಗಳು ಸೇರಿದಂತೆ ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿರಿ. ನಂತರ ಮುದ್ರಿತ ಪ್ರತಿಯನ್ನು (Print out) ತೆಗೆದುಕೊಳ್ಳಬೇಕು.

ವೈದ್ಯಕೀಯ ಪ್ರಮಾಣ ಪತ್ರ

ವೈದ್ಯಕೀಯ ಪ್ರಮಾಣ ಪತ್ರ

ಕಲಿಕಾ ಚಾಲನಾ ಅನುಜ್ಞಾ ಪತ್ರಕ್ಕಾಗಿ ಅರ್ಜಿ ಸಲ್ಲಿಸುವ 40 ವರ್ಷ ವಯಸ್ಸು ಪೂರ್ಣಗೊಂಡಿರುವ ಅಭ್ಯರ್ಥಿಗಳು ನೊಂದಾಯಿತ ವೈದ್ಯಾಧಿಕಾರಿರವರು ನೀಡಿರುವ ವೈದ್ಯಕೀಯ ಪ್ರಮಾಣ ಪತ್ರ ಅರ್ಜಿಯೊಂದಿಗೆ ಲಗತ್ತಿಸಬೇಕು. (ಇದು ಸಾರಿಗೇತರ ವಾಹನಗಳಿಗೆ ಸಂಬಂಧಿಸಿರುತ್ತದೆ). ಹಾಗೂ ಸಾರಿಗೆ ವಾಹನಗಳಿಗೆ ಕಲಿಕಾ ಚಾಲನಾ ಅನುಜ್ಞಾನಪತ್ರ ಸಲ್ಲಿಸುವವರು ವಯಸ್ಸಿನ ಲೆಕ್ಕ ಮಿತಿಯಿಲ್ಲದೆ ವೈದ್ಯಕೀಯ ಪ್ರಮಾಣ ಪತ್ರ ಸಲ್ಲಿಸಬೇಕು.

Best Mobiles in India

English summary
Follow these steps to link your Aadhaar number to your driving license.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+