Home
ಟೆಕ್ ನೌಕರಿ

ಪ್ರತಿದಿನ ಫೇಸ್‌ಬುಕ್‌ ಲಾಗ್ಔಟ್ ಮಾಡದಿದ್ದರೆ ಅಪಾಯ ಖಂಡಿತ!!

ಯಾವುದಾದರೂ ಒಂದು ವೆಬ್‌ಸೈಟ್‌ಗೆ ಲಾಗಿನ್ ಆದರೆ ಅದನ್ನು ಬಳಸಿದ ನಂತರ ಅದನ್ನು ಲಾಗ್ಔಟ್ ಮಾಡದೇ ಬಿಡುವವರ ಪ್ರಮಾಣ ಇತ್ತೀಚಿಗೆ ಹೆಚ್ಚಾಗುತ್ತಿದೆಯಂತೆ.

By Bhaskar N J

ಯಾವುದಾದರೂ ಒಂದು ವೆಬ್‌ಸೈಟ್‌ಗೆ ಲಾಗಿನ್ ಆದರೆ ಅದನ್ನು ಬಳಸಿದ ನಂತರ ಅದನ್ನು ಲಾಗ್ಔಟ್ ಮಾಡದೇ ಬಿಡುವವರ ಪ್ರಮಾಣ ಇತ್ತೀಚಿಗೆ ಹೆಚ್ಚಾಗುತ್ತಿದೆಯಂತೆ. ವಿಶ್ವದ ಸಾಮಾಜಿಕ ಜಾಲತಾಣ ಫೇಸ್‌ಬುಕ್ ಬಳಸುವ 10 ಜನರಲ್ಲಿ ಕೇವಲ ಇಬ್ಬರು ಮಾತ್ರ ಫೇಸ್‌ಬುಕ್‌ನಿಂದ ಲಾಗ್ಔಟ್ ಆಗುತ್ತಾರೆ ಎನ್ನುತ್ತವೆ ವರದಿಗಳು.!!!

ಪ್ರತಿದಿನ ಫೇಸ್‌ಬುಕ್‌ ಲಾಗ್ಔಟ್ ಮಾಡದಿದ್ದರೆ ಅಪಾಯ ಖಂಡಿತ!!

ಆದರೆ, ನಿಮಗೆ ಗೊತ್ತಾ? ಯಾವುದೇ ವೆಬ್‌ಸೈಟ್‌ ಅನ್ನು ಬಳಸಿದ ನಂತರ ಲಾಗ್ಔಟ್ ಮಾಡದಿದ್ದರೆ ಖಂಡಿತ ಅಪಾಯವಿದೆ. ಲಾಗ್‌ಔಟ್ ಆಗದ ಆ ವೆಬ್‌ಸೈಟ್‌ಗಳು ಆಕ್ಟಿವ್‌ ಆಗಿ ಬಳಸದಿದ್ದರೂ ಅವುಗಳು ನಿಮ್ಮ ಚಟುವಟಿಕೆಗಳನ್ನು ಟ್ರ್ಯಾಕ್‌ ಮಾಡುತ್ತಲೇ ಇರುತ್ತವೆ. ನಿಮ್ಮ ವಯಕ್ತಿಕ ಮಾಹಿತಿಯನ್ನು ಸ್ವಹಿತಕ್ಕಾಗಿ ಅಥವಾ ಲಾಭಕ್ಕಾಗಿ ಬಳಸಿಕೊಳ್ಳುತ್ತವೆ.!!

ಹಾಗಾಗಿ, ಯಾವುದೇ ವೆಬ್‌ಸೈಟ್‌ಗಳಿಗೆ ಲಾಗಿನ್‌ ಆಗಿದ್ದರೆ, ಅದನ್ನು ಬಳಸಿದ ನಂತರ ಲಾಗ್ಔಟ್ ಆಗುವುದನ್ನು ಮರೆಯಲೇಬೇಡಿ. ಇನ್ನು ಕೆಲವೊಮ್ಮೆ ಯಾವುದೋ ಡಿವೈಸ್‌ಲ್ಲಿ ಫೇಸ್‌ಬುಕ್‌ಗೆ ಲಾಗಿನ್ ಮಾಡಿ ಅದನ್ನು ಮರೆತಿರುತ್ತೇವೆ. ಅಂತಹ ತಪ್ಪುಗಳನ್ನು ಕೂಡ ನಿಮ್ಮ ಫೇಸ್‌ಬುಕ್ ಅಕೌಂಟ್‌ನಲ್ಲಿಯೇ ಹುಡುಕಿ ಲಾಗಿನ್ ಆಗಿರುವುದನ್ನು ಖಚಿತಪಡಿಸಿಕೊಳ್ಳಿ.!!

ಪ್ರತಿದಿನ ಫೇಸ್‌ಬುಕ್‌ ಲಾಗ್ಔಟ್ ಮಾಡದಿದ್ದರೆ ಅಪಾಯ ಖಂಡಿತ!!

ಫೇಸ್‌ಬುಕ್ ತೆರೆದು ಸೆಟ್ಟಿಂಗ್ಸ್ ಮೇಲೆ ಕ್ಲಿಕ್‌ ಮಾಡಿ, ಆಗ ದೊರೆಯುವ ಪೇಜ್‌ನ ಎಡಭಾಗದಲ್ಲಿ 'ಜನರಲ್‌' ಎಂಬ ಆಪ್ಷನ್ ಕೆಳಗೆ 'ಸೆಕ್ಯುರಿಟಿ ಆಂಡ್‌ ಲಾಗಿನ್‌' ಎಂಬ ಟ್ಯಾಬ್‌ ಮೇಲೆ ಕ್ಲಿಕ್‌ ಮಾಡಿ. ಆಗ ದೊರೆಯುವ ಪೇಜ್‌ನಲ್ಲಿ 'ವೇರ್‌ ಯೂ ಆರ್‌ ಲಾಗ್ಡ್ ಇನ್‌' ಮಾಹಿತಿ ದೊರೆಯುತ್ತದೆ. ನೀವು ಎಲ್ಲೆಲ್ಲಿ ಫೇಸ್‌ಬುಕ್‌ ಲಾಗಿನ್‌ ಆಗಿದ್ದೀರಿ ಎಂಬ ಮಾಹಿತಿ ನಿಮಗೆ ದೊರೆಯುತ್ತದೆ.!!

How to view all photos, pages, comments and posts you liked on Facebook (KANNADA)

ಮೊಬೈಲ್, ಡೆಸ್ಕ್‌ಟಾಪ್ ಮತ್ತು ಇನ್ನಿತರ ಯಾವೆಲ್ಲಾ ಡಿವೈಸ್‌ಗಳಲ್ಲಿ ಲಾಗಿನ್ ಆಗಿರುವ ಬಗ್ಗೆ ಅಲ್ಲಿಯೇ ಮಾಹಿತಿ ದೊರೆಯುತ್ತದೆ. ಹೀಗೆ ಎಲ್ಲ ಮಾಹಿತಿ ಒಂದು ಕಡೆ ಸಿಗುವುದರಿಂದ ನಿಮಗೆ ಲಾಗಿನ್‌ ಆಗಿದ್ದರ ಬಗ್ಗೆ ಅನುಮಾನಗಳುಂಟಾದರೆ, ಅಲ್ಲಿ ಕಾಣುವ 3 ಡಾಟ್‌ಗಳ ಮೇಲೆ ಕ್ಲಿಕ್‌ ಮಾಡಿ 'ನಾಟ್ ಯೂ' ಮತ್ತು 'ಲಾಗ್‌ ಔಟ್‌' ಆಯ್ಕೆ ಬಳಸಿಕೊಳ್ಳಬಹುದು.!!

ಓದಿರಿ: ಟ್ರ್ಯಾಕರ್‌ಗಳು ಹೇಗೆ ಕೆಲಸ ಮಾಡುತ್ತವೆ ಗೊತ್ತಾ?..ನಿಮ್ಮ ಡೇಟಾ ಕದಿಯದಂತೆ ತಡೆಯುವುದು ಹೇಗೆ?

Best Mobiles in India

English summary
You control your experience on Facebook. Control isn't just about deciding what you share and with whom you share it. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+