Subscribe to Gizbot

ಟ್ರ್ಯಾಕರ್‌ಗಳು ಹೇಗೆ ಕೆಲಸ ಮಾಡುತ್ತವೆ ಗೊತ್ತಾ?..ನಿಮ್ಮ ಡೇಟಾ ಕದಿಯದಂತೆ ತಡೆಯುವುದು ಹೇಗೆ?

Written By:

ನಿಮ್ಮ ಬ್ರೌಸರ್‌ನಲ್ಲಿ ಪ್ಲಾಂಟ್ ಮಾಡಿ ನಿಮ್ಮಿಂದ ಎಲ್ಲಾ ಮಾಹಿತಿಯನ್ನು ಸಂಗ್ರಹಿಸಿ ತನ್ನ ಮಾಲಿಕನಿಗೆ ಕಳುಹಿಸಿಕೊಡುವ ಟ್ರ್ಯಾಕರ್‌ಗಳು ಒಂದು ರೀತಿಯ ಅನಿಷ್ಟದಂತೆ ಯಾವಾಗಲು ನಮ್ಮನ್ನು ಸುತ್ತಿವರೆಯತ್ತಲೇ ಇರುತ್ತವೆ. ಆದರೆ, ಈ ಟ್ರ್ಯಾಕರ್‌ಗಳು ಹೇಗೆ ಕೆಲಸ ಮಾಡುತ್ತವೆ ಎಂಬುದು ಮಾತ್ರ ಬಹಳಷ್ಟು ಜನರಿಗೆ ಈ ವರೆಗೂ ತಿಳಿಸದಿಲ್ಲ.!!

ನೀವು ಒಂದು ಆಪ್ ಬಳಸುತ್ತಿದ್ದೀರಿ ಎಂದಿಟ್ಟುಕೊಳ್ಳಿ ಆ ಆಪ್‌ ನಿಮ್ಮ ಬ್ರೌಸರ್‌ನಲ್ಲಿ ಟ್ರ್ಯಾಕರ್‌ ಪ್ಲಾಂಟ್ ಮಾಡಬಹುದು. ಹೀಗೆ ಪ್ಲಾಂಟ್ ಮಾಡಿ ನಿಮ್ಮಿಂದ ಎಲ್ಲಾ ಮಾಹಿತಿಯನ್ನು ಸಂಗ್ರಹಿಸಿ ತನ್ನ ಮಾಲಿಕನಿಗೆ ಕಳುಹಿಸಿಕೊಡಬಹುದು. ಒಂದೊಮ್ಮೆ ನೀವು ಆಪ್‌ ಕ್ಲೋಸ್ ಮಾಡಿದರೂ ಸಹ ಅದು ತನ್ನ ಕದಿಯುವ ಚಾಳಿಯನ್ನು ಬಿಡುವುದಿಲ್ಲ.!!

ಟ್ರ್ಯಾಕರ್‌ಗಳು ಹೇಗೆ ಕೆಲಸ ಮಾಡುತ್ತವೆ ಗೊತ್ತಾ?

ನೀವು ಯಾವೆಲ್ಲ ವೆಬ್‌ಸೈಟ್‌ಗಳಿಗೆ ಭೇಟಿ ಕೊಡುತ್ತೀರಿ, ಯಾರ ಜತೆ ಸಂಪರ್ಕ ಸಾಧಿಸುತ್ತೀರಿ, ಸ್ಟೇಟಸ್ ಅಪ್‌ಡೇಟ್ಸ್‌ಗಳೇನು ಎಂಬೆಲ್ಲಾ ಮಾಹಿತಿಯನ್ನು ಆ ಆಪ್ ಕದಿಯುತ್ತಲೇ ಇರುತ್ತದೆ. ನಿಮ್ಮೆಲ್ಲ ಆಕ್ಟಿವಿಟಿಸ್‌ಗಳನ್ನು ಅದು ಫಾಲೋ ಮಾಡುತ್ತಲೇ ಇರುತ್ತದೆ ಎಂದರೆ ಆ ಆಪ್ ಹೇಗೆ ನಿಮ್ಮನ್ನು ಟ್ರ್ಯಾಕ್ ಮಾಡುತ್ತಿದೆ ಎಂಬುದನ್ನು ನೀವು ತಿಳಿಯಬಹುದು.!!

ಹಾಗಾಗಿ, ಯಾವುದೇ ಥರ್ಡ್‌ ಪಾರ್ಟಿ ಆಪ್‌ ಬಳಸುವಾಗ ಬಹಳ ಜಾಗರೂಕರಾಗಿರಬೇಕು ಮತ್ತು ಟ್ರ್ಯಾಕರ್‌ ಬ್ಲಾಕರ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳುವುದು ಇನ್ನೂ ಉತ್ತಮ. ಹಾಗೆಯೇ ಆಡ್‌ ಬ್ಲಾಕರ್‌ಗಳನ್ನು ಕೂಡ ಇನ್‌ಸ್ಟಾಲ್ ಮಾಡಿಕೊಳ್ಳಬೇಕು. ಆದರೆ, ಕೆಲವೊಮ್ಮೆ ಇಂಥ ಟ್ರ್ಯಾಕರ್‌ಗಳು ನಿಮ್ಮ ವೆಬ್‌ಸೈಟ್‌ ಕಾರ್ಯನಿರ್ವಹಣೆಯಲ್ಲಿ ತೊಂದರೆ ಕೂಡುವ ಸಾಧ್ಯತೆ ಹೆಚ್ಚು.!!

ಟ್ರ್ಯಾಕರ್‌ಗಳು ಹೇಗೆ ಕೆಲಸ ಮಾಡುತ್ತವೆ ಗೊತ್ತಾ?

ಆಡ್‌ ಬ್ಲಾಕರ್‌ಗಳೂ ಆಡ್‌ ಆನ್‌ಗಳಾಗಿದ್ದು, ನಿಮ್ಮ ಬ್ರೌಸರ್, ಮೊಬೈಲ್‌ ಅಥವಾ ಕಂಪ್ಯೂಟರ್‌ಗಳಲ್ಲಿ ಇನ್‌ಸ್ಟಾಲ್ ಮಾಡಿಕೊಳ್ಳಬಹುದಾಗಿದೆ. ಮೊಬೈಲ್‌ ಆಡ್‌ ಪೂರ್ಣಪ್ರಮಾಣದ ಪ್ರೊಗ್ರಾಮ್‌ಗಳಾಗಿದ್ದು ಇವು ನಿಮ್ಮ ಎಲ್ಲ ಡೇಟಾ ಕದಿಯುವ ಸಾಧ್ಯತೆ ಇರುತ್ತದೆ. ಹಾಗಾಗಿ, ಆಡ್‌ ಬ್ಲಾಕರ್‌ಗಳನ್ನು ಇನ್‌ಸ್ಟಾಲ್ ಮಾಡುವುದು ಉತ್ತಮ.!!

Xiaomi Mi TV 4A ಹೇಗಿದೆ?..ಖರೀದಿಸಲು ಬೆಸ್ಟ್ ಟಿವಿ ಇದೇನಾ?

ಓದಿರಿ: ಒಂದೇ ಪಾಸ್‌ವರ್ಡ್ ಅನ್ನು ನಾಲ್ಕೈದು ಕಡೆ ಬಳಸುತ್ತಿದ್ದೀರಾ?..ಹಾಗಾದ್ರೆ ಈ ಶಾಕಿಂಗ್ ಸ್ಟೋರಿ ನೋಡಿ!!

English summary
But no matter the aim, leaks of sensitive information without a user's permission carry potential for abuse. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot