IMEI ಸಂಖ್ಯೆ ಸಹಾಯದಿಂದ ಕಳೆದುಹೋದ ಮೊಬೈಲ್ ಟ್ರ್ಯಾಕ್ ಮಾಡುವುದು ಹೇಗೆ?

ಪ್ರತಿಯೊಂದು ಮೊಬೈಲ್ ಫೋನ್‌ಗೂ ಪ್ರತ್ಯೇಕ ಮತ್ತು ವಿಶಿಷ್ಟವಾದ 15 ಅಂಕಿಗಳ ಐಎಂಇಐ ಸಂಖ್ಯೆ ಇರುತ್ತದೆ. ಮೊಬೈಲ್ ಫೋನ್‌ಗಳಲ್ಲಿನ ಈ ಐಎಂಇಐ ಸಂಖ್ಯೆ ಎಂಬುದು ಅತ್ಯಂತ ಮಹತ್ವದ್ದು

|

ಪ್ರತಿಯೊಂದು ಮೊಬೈಲ್ ಫೋನ್‌ಗೂ ಪ್ರತ್ಯೇಕ ಮತ್ತು ವಿಶಿಷ್ಟವಾದ 15 ಅಂಕಿಗಳ ಐಎಂಇಐ ಸಂಖ್ಯೆ ಇರುತ್ತದೆ. ಮೊಬೈಲ್ ಫೋನ್‌ಗಳಲ್ಲಿನ ಈ ಐಎಂಇಐ ಸಂಖ್ಯೆ ಎಂಬುದು ಅತ್ಯಂತ ಮಹತ್ವದ್ದು. ಇದನ್ನು ಬಳಸಿ ನಿಮ್ಮ ಕಳೆದುಹೋದ ಮೊಬೈಲ್ ಫೋನನ್ನು ಪತ್ತೆ ಹಚ್ಚಬಹುದು ಮತ್ತು ನಿಮ್ಮ ಮೊಬೈಲ್ ಬಳಸಿ ಇತರರು ಮಾಡಬಾರದ್ದನ್ನು ಮಾಡದಂತೆ ತಡೆಗಟ್ಟಬಹುದು.

ಐಎಂಇಐ ಎಂದರೆ ಇಂಟರ್‌ನ್ಯಾಷನಲ್ ಮೊಬೈಲ್ ಇಕ್ವಿಪ್‌ಮೆಂಟ್ ಐಡೆಂಟಿಟಿ (ಮೊಬೈಲ್ ಉಪಕರಣದ ಅಂತಾರಾಷ್ಟ್ರೀಯ ಗುರುತಿನ ಸಂಖ್ಯೆ). ಪ್ರತಿಯೊಂದು ಮೊಬೈಲ್ ಫೋನ್‌ಬ್ಯಾಟರಿ ತೆಗೆದಾಗ ಅಲ್ಲಿನ ಕುಳಿಯಲ್ಲಿ ಇದು ಗೋಚರಿಸುತ್ತದೆ. ಅಥವಾ ಮೊಬೈಲ್ ಫೋನ್‌ನಲ್ಲಿ *#06# ಅಂತ ಟೈಪ್ ಮಾಡಿ ಕರೆ ಮಾಡಿದರೆ ಫೋನಿನಲ್ಲಿ ಐಎಂಇಐ ಸಂಖ್ಯೆ ಕಾಣಿಸಿಕೊಳ್ಳುತ್ತದೆ.

IMEI ಸಂಖ್ಯೆ ಸಹಾಯದಿಂದ ಕಳೆದುಹೋದ ಮೊಬೈಲ್ ಟ್ರ್ಯಾಕ್ ಮಾಡುವುದು ಹೇಗೆ?

ಈಗ ನಿಮ್ಮ ಮೊಬೈಲ್ ಫೋನ್ ಕಳೆದುಹೋಯಿತು ಅಂತ ಇಟ್ಟುಕೊಳ್ಳೋಣ. ಆವಾಗ ನೀವು ಪೊಲೀಸರಿಗೆ ದೂರು ನೀಡಬೇಕಿದ್ದರೂ, ಹ್ಯಾಂಡ್‌ಸೆಟ್‌ನ ಐಎಂಇಐ ಸಂಖ್ಯೆಯನ್ನು ಕೇಳಲಾಗುತ್ತದೆ. ನಿಮ್ಮ ಸೆಲ್ ಆಪರೇಟರ್‌ ಕಂಪೆನಿಗೂ ಮೊಬೈಲ್ ಕಳೆದುಹೋಗಿರುವ ಸಂಗತಿಯನ್ನು ತಿಳಿಸಿದರೆ, ಅವರು ಕೂಡ ಐಎಂಇಐ ಸಂಖ್ಯೆಯನ್ನು ಕೇಳುತ್ತಾರೆ.!

How to search your lost smartphone!!! ಕಳೆದು ಹೋದ ನಿಮ್ಮ ಸ್ಮಾರ್ಟ್‌ಫೋನ್ ಹುಡುಕುವುದೇಗೆ...?

ನೀವು ಮೊಬೈಲ್ ಫೋನ್ ಕಳೆದುಕೊಂಡರೆ, ಫೋನನ್ನು ಕದ್ದವರು ಸಿಮ್ ಕಾರ್ಡ್ ಬದಲಾಯಿಸಿ ಆ ಫೋನ್ ಬಳಸಿದರೂ ಪೊಲೀಸರು ಉಪಗ್ರಹ ಆಧಾರಿತ ಜಿಪಿಎಸ್ (ಗ್ಲೋಬಲ್ ಪೊಸಿಶನಿಂಗ್ ಸಿಸ್ಟಂ) ತಂತ್ರಜ್ಞಾನದ ಮೂಲಕ, ಈ ನಿರ್ದಿಷ್ಟ ಐಎಂಇಐ ಸಂಖ್ಯೆಯುಳ್ಳ ಸಾಧನವು ಎಲ್ಲಿದೆ ಎಂದು ಪತ್ತೆಹಚ್ಚಬಲ್ಲರು.

IMEI ಸಂಖ್ಯೆ ಸಹಾಯದಿಂದ ಕಳೆದುಹೋದ ಮೊಬೈಲ್ ಟ್ರ್ಯಾಕ್ ಮಾಡುವುದು ಹೇಗೆ?

ಹಾಗಾಗಿ, ವಿಶಿಷ್ಟವಾದ 15 ಅಂಕಿಗಳ ಐಎಂಇಐ ಸಂಖ್ಯೆಯನ್ನು ಬರೆದಿಟ್ಟುಕೊಳ್ಳುವುದು ತೀರಾ ಅತ್ಯಗತ್ಯ. ನೀವು http://www.trackimei.com ಎಂಬಲ್ಲಿ ನಿಮ್ಮ ಮೊಬೈಲ್ ಫೋನನ್ನು ಐಎಂಇಐ ಸಂಖ್ಯೆ, ಖರೀದಿ ಮಾಡಿದ್ದೆಲ್ಲಿಂದ, ಅದರ ಬಿಲ್ ಮುಂತಾದ ವಿವರಗಳೊಂದಿಗೆ ನೋಂದಾಯಿಸಿಕೊಂಡರೆ ಫೋನ್ ಎಲ್ಲಿದೆ ಎಂದು ಪತ್ತೆ ಹಚ್ಚಲು ನಕ್ಷೆಯ ನೆರವು ಸಿಗುತ್ತದೆ.

ಓದಿರಿ: ಏರ್‌ಟೆಲ್‌ನ ಹೊಸ ''ಭರ್ಜರಿ ಆಫರ್'': ಉಚಿತವಾಗಿ ವೀಕ್ಷಿಸಿ 'ಐಪಿಎಲ್'!!

Best Mobiles in India

English summary
Trackimei Provides The Best Services To Customer Related To Protect The Mobile From Theft Through Track IMEI Number. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X