Subscribe to Gizbot

ಟಾಪ್‌ 5 ಟೆಲಿಕಾಂಗಳಲ್ಲಿ ಟಾಕ್‌ಟೈಮ್‌ ಮತ್ತು ಡಾಟಾ ಲೋನ್ ಪಡೆಯುವುದು ಹೇಗೆ?

Written By:

ಏರ್‌ಟೆಲ್‌(Airtel), ಬಿಎಸ್‌ಎನ್‌ಎಲ್‌, ವೊಡಾಫೋನ್, ರಿಲಾಯನ್ಸ್ ಮತ್ತು ಐಡಿಯಾ ಸೇರಿದಂತೆ ಇತರೆ ಎಲ್ಲಾ ಟೆಲಿಕಾಂಗಳಿಗೂ ಪ್ರತಿಯೊಬ್ಬ ಗ್ರಾಹಕನು ಇಂದು ಅತೀ ಮುಖ್ಯವಾಗಿದ್ದಾನೆ. ಈ ಪರಿಸ್ಥಿತಿ ಉಂಟಾಗಲೂ ರಿಲಾಯನ್ಸ್ ಜಿಯೋ ಡಾಟಾ ಆಫರ್‌ ಮತ್ತು ಟ್ಯಾರಿಫ್‌ ಪ್ಲಾನ್‌ಗಳು ಕಾರಣ. ಪ್ರತಿಯೊಂದು ಟೆಲಿಕಾಂ ಗ್ರಾಹಕರು ತುರ್ತುಪರಿಸ್ಥಿತಿಯಲ್ಲಿ ಟಾಕ್‌ಟೈಮ್‌ ಮತ್ತು ಡಾಟಾ ಲೋನ್‌ ಪಡೆದುಕೊಳ್ಳುವುದು ಹೇಗೆ ಎಂದು ಲೇಖನದಲ್ಲಿ ತಿಳಿಯಿರಿ.

ಉತ್ತಮ ಫೀಚರ್‌ ಎಂದರೆ ಟಾಕ್‌ಟೈಮ್‌ ಮತ್ತು ಡಾಟಾ ಲೋನ್‌ ನೀಡುವುದು. ಈ ಸೇವೆಗಳಿಂದ ಗ್ರಾಹಕರು ತುರ್ತುಪರಿಸ್ಥಿತಿಗಳಲ್ಲಿ, ವ್ಯಕ್ತಿ ತಾನಿರುವ ಪ್ರದೇಶದಲ್ಲಿ ಯಾವುದೇ ರೀಚಾರ್ಜ್‌ ಸೆಂಟರ್‌ಗಳು ಇಲ್ಲದ ಸಮಯದಲ್ಲಿ ಕಡಿಮೆ ಪ್ರಮಾಣದ ಟಾಕ್‌ಟೈಮ್‌ ಮತ್ತು ಡಾಟಾ ಲೋನ್‌ ತೆಗೆದುಕೊಂಡು ಬಳಸಬಹುದಾಗಿದೆ. ತೆಗೆದುಕೊಂಡ ಲೋನ್‌ಗೆ ಕನಿಷ್ಟ ರೂ.1 ಅಥವಾ ರೂ.2 ಬಡ್ಡಿ ಜೊತೆಗೆ ರೀಚಾರ್ಜ್‌ ಮಾಡಿಸಿದಾದ ಹಣ ಕಡಿತಗೊಳ್ಳುತ್ತದೆ. ಈ ಫೀಚರ್ ಪ್ರಿಪೇಡ್ ಜಿಎಸ್‌ಎಂ ಬಳಕೆದಾರರಿಗೆ ಅತ್ಯುಪಯುಕ್ತವಾಗಿದೆ.

ಇಂದಿನ ಲೇಖನದಲ್ಲಿ ಗಿಜ್‌ಬಾಟ್‌ ನಿಮಗೆ ಪ್ರಖ್ಯಾತ ಟೆಲಿಕಾಂಗಳಾದ ಏರ್‌ಟೆಲ್‌, ಬಿಎಸ್‌ಎನ್‌ಎಲ್‌, ವೊಡಾಫೋನ್, ರಿಲಾಯನ್ಸ್ ಮತ್ತು ಐಡಿಯಾಗಳಿಂದ ತುರ್ತುಪರಿಸ್ಥಿತಿಯಲ್ಲಿ ಹೇಗೆ ವಿವಿಧ ರೀತಿಯಲ್ಲಿ ಟಾಕ್‌ಟೈಮ್‌ ಪಡೆಯಬಹುದು ಎಂದು ತಿಳಿಸುತ್ತಿದೆ. ಮಾಹಿತಿಯನ್ನು ಕೆಳಗಿನ ಸ್ಲೈಡರ್‌ನಲ್ಲಿ ಓದಿರಿ.

ಬಿಎಸ್‌ಎನ್‌ಎಲ್‌ 'ಬ್ರಾಡ್‌ಬ್ಯಾಂಡ್‌ 249' ಪ್ಲಾನ್‌ನ 5 ಅನ್‌ಲಿಮಿಟೆಡ್‌ ಉಪಯೋಗಗಳು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಏರ್‌ಟೆಲ್‌ ಟಾಕ್‌ಟೈಮ್‌ ಲೋನ್‌ ಕೋಡ್‌

ಏರ್‌ಟೆಲ್‌ ಟಾಕ್‌ಟೈಮ್‌ ಲೋನ್‌ ಕೋಡ್‌

ನಿಮ್ಮ ಏರ್‌ಟೆಲ್‌ ನಂಬರ್‌ನಲ್ಲಿ ರೂ.5 ಕ್ಕಿಂತ ಕಡಿಮೆ ಬ್ಯಾಲೆನ್ಸ್ ಇದ್ದಲ್ಲಿ ನೀವು ಟಾಕ್‌ಟೈಮ್‌ ಲೋನ್ ಪಡೆಯಬಹುದು. ಟಾಕ್‌ಟೈಮ್‌ಲೋನ್‌ ಪಡೆಯಲು *141*10# ಡಯಲ್‌ ಮಾಡಿ ಅಥವಾ 52141 ಗೆ ಕರೆ ಮಾಡಿ 10 ರೂ ಟಾಕ್‌ಟೈಮ್ ಪಡೆಯಿರಿ. ಈ ಹಣ ನಿಮ್ಮ ಮುಂದಿನ ರೀಚಾರ್ಜ್‌ನಲ್ಲಿ ಕಡಿತಗೊಳ್ಳುತ್ತದೆ.

ಏರ್‌ಟೆಲ್‌ ಡಾಟಾ ಲೋನ್‌ ಕೋಡ್‌

ಏರ್‌ಟೆಲ್‌ ಡಾಟಾ ಲೋನ್‌ ಕೋಡ್‌

ಏರ್‌ಟೆಲ್‌ನಲ್ಲಿ ಡಾಟಾ ಲೋನ್‌ ಪಡೆಯಲು *141*567# ಡಯಲ್‌ ಮಾಡಿ 50MB ಡಾಟಾವನ್ನು 2 ವ್ಯಾಲಿಡಿಟಿಯೊಂದಿಗೆ ಪಡೆಯಿರಿ. ನಿಮ್ಮ ಮುಂದಿನ ರೀಚಾರ್ಜ್‌ನಲ್ಲಿ ಏರ್‌ಟೆಲ್‌ ರೂ.15 ಅನ್ನು ಕಡಿತಗೊಳಿಸುತ್ತದೆ.

ವೊಡಾಫೋನ್‌ ಟಾಟ್‌ಟೈಮ್‌ ಲೋನ್‌ ಕೋಡ್‌

ವೊಡಾಫೋನ್‌ ಟಾಟ್‌ಟೈಮ್‌ ಲೋನ್‌ ಕೋಡ್‌

ವೊಡಾಫೋನ್‌ನಲ್ಲಿ ಟಾಕ್‌ಟೈಮ್‌ ಲೋನ್‌ ಪಡೆಯಲು 1241 ಗೆ ಕರೆ ಮಾಡಿ ಅಥವಾ 'SMS CREDIT' ಎಂದು ಟೈಪಿಸಿ 144 ಗೆ ಮೆಸೇಜ್‌ ಸೆಂಡ್‌ ಮಾಡಿ. *111*10# ಡಯಲ್‌ ಮಾಡಿಯು ಸಹ ಟಾಕ್‌ಟೈಮ್ ಪಡೆಯಬಹುದು. ಮೆನುವಿನಲ್ಲಿ 'Chotta Credit' ಆಯ್ಕೆ ಮಾಡಿ, ಟಾಕ್‌ಟೈಮ್‌ ಲೋನ್‌ಗಾಗಿ 1 ಮುಖಾಂತರ ರೀಪ್ಲೇ ಮಾಡಿ. ನಿಮ್ಮ ವೊಡಾಫೋನ್ ನಂಬರ್‌ಗೆ ಟಾಕ್‌ಟೈಮ್‌ ರೂ.10 ಕ್ರೆಡಿಟ್ ಆಗುತ್ತದೆ. ಮುಂದಿನ ರೀಚಾರ್ಜ್‌ನಲ್ಲಿ ರೂ.13 ಕಡಿತಗೊಳ್ಳುತ್ತದೆ.

ವೊಡಾಫೋನ್‌ ಡಾಟಾ ಲೋನ್‌ ಕೋಡ್‌

ವೊಡಾಫೋನ್‌ ಡಾಟಾ ಲೋನ್‌ ಕೋಡ್‌

*111*10# ಡಯಲ್‌ ಮಾಡಿದ ನಂತರ 2 ರೀಪ್ಲೇ ನೀಡಿ. ನಿಮ್ಮ ವೊಡಾಫೋನ್‌ ನಂಬರ್‌ಗೆ 30MB 3G ಡಾಟಾವನ್ನು 1 ದಿನ ವ್ಯಾಲಿಡಿಟಿಯೊಂದಿಗೆ ಪಡೆಯುತ್ತೀರಿ. ಇದರ ಬೆಲೆ 10 ರೂ.

ಬಿಎಸ್‌ಎನ್‌ಎಲ್‌ ಟಾಕ್‌ಟೈಮ್‌ ಲೋನ್‌ ಕೋಡ್‌

ಬಿಎಸ್‌ಎನ್‌ಎಲ್‌ ಟಾಕ್‌ಟೈಮ್‌ ಲೋನ್‌ ಕೋಡ್‌

ಬಿಎಸ್‌ಎನ್‌ಎಲ್‌ನಿಂದ ಟಾಕ್‌ಟೈಮ್ ಲೋನ್‌ ಪಡೆಯಲು 'SMS CREDIT' ಎಂದು ಟೈಪಿಸಿ 53738 ಗೆ ಮೆಸೇಜ್‌ ಸೆಂಡ್‌ ಮಾಡಿ. ರೂ.10 ಟಾಕ್‌ಟೈಮ್ ಪಡೆಯುತ್ತೀರಿ. ಟಾಕ್‌ಟೈಮ್‌ ಲೋನ್‌ ಪಡೆದ 24 ಗಂಟೆ ಒಳಗಾಗಿ ರೀಚಾರ್ಜ್‌ ಅನ್ನು ಬಿಎಸ್‌ಎನ್‌ಎಲ್‌ ನಂಬರ್‌ಗೆ ಪಡೆದಲ್ಲಿ ಕೇವಲ ರೂ.10 ಕಡಿತಗೊಳ್ಳುತ್ತದೆ. 24 ಗಂಟೆಗಳ ನಂತರ ರೀಚಾರ್ಜ್‌ ಪಡೆದಲ್ಲಿ ರೂ.11 ಕಡಿತಗೊಳ್ಳುತ್ತದೆ.

ರಿಲಾಯನ್ಸ್ ಟಾಕ್‌ಟೈಮ್ ಲೋನ್‌ ಕೋಡ್‌

ರಿಲಾಯನ್ಸ್ ಟಾಕ್‌ಟೈಮ್ ಲೋನ್‌ ಕೋಡ್‌

ರಿಲಾಯನ್ಸ್ ಎರಡು ಟಾಕ್‌ಟೈಮ್‌ ಲೋನ್ ಆಫರ್‌ ಮಾಡುತ್ತಿದೆ. ರೂ.5 ಪಡೆಯಲು *141*5# ಡಯಲ್ ಮಾಡಿ. ರೂ.10 ಪಡೆಯಲು *141*10# ಡಯಲ್‌ ಮಾಡಿ. 'YCR' ಎಂದು ಟೈಪಿಸಿ 51234 ಗೆ ಡಯಲ್ ಸಹ ಮಾಡಬಹುದು.

ಐಡಿಯಾ ಡಾಟಾ ಲೋನ್‌ ಕೋಡ್‌

ಐಡಿಯಾ ಡಾಟಾ ಲೋನ್‌ ಕೋಡ್‌

ಐಡಿಯಾ ಗ್ರಾಹಕರು ಡಾಟಾ ಲೋನ್‌ ಪಡೆಯಲು *150*06# ಗೆ ಡಯಲ್‌ ಮಾಡಿ 25MB 2G ಡಾಟಾ ಪಡೆಯಿರಿ. ಮುಂದಿನ ರೀಚಾರ್ಜ್‌ನಲ್ಲಿ ರೂ.6 ಕಡಿತಗೊಳ್ಳುತ್ತದೆ. *150*333# ಗೆ ಡಯಲ್‌ ಮಾಡಿ 35 MB 3G ಡಾಟಾ ಲೋನ್ ಪಡೆಯಿರಿ. ರೂ.11 ಕಡಿತಗೊಳ್ಳುತ್ತದೆ. ಡಾಟಾ ಲೋನ್ ಅನ್ನು MY Idea ಆಪ್‌ನಿಂದಲೂ ಸಹ ಪಡೆಯಬಹುದು. ಐಡಿಯಾ ಲೋನ್‌ಗಾಗಿ ಯಾವುದೇ ಬಡ್ಡಿ ವಿದಿಸುವುದಿಲ್ಲ.

ಏರ್‌ಸೆಲ್ ಟಾಕ್‌ಟೈಮ್‌ ಲೋನ್‌ ಕೋಡ್‌

ಏರ್‌ಸೆಲ್ ಟಾಕ್‌ಟೈಮ್‌ ಲೋನ್‌ ಕೋಡ್‌

ನಿಮ್ಮ ಏರ್‌ಸೆಲ್‌ ನಂಬರ್‌ನಲ್ಲಿ ರೂ.10 ಕ್ಕಿಂತ ಕಡಿಮೆ ಬ್ಯಾಲೆನ್ಸ್‌ ಇದ್ದಲ್ಲಿ ಟಾಕ್‌ಟೈಮ್‌ ಲೋನ್‌ ಪಡೆಯಬಹುದು. *414# ಅಥವಾ 12880 ಡಯಲ್‌ ಮಾಡಿ. 'SMS LOAN' ಎಂದು ಟೈಪಿಸಿ 55414 ಗೆ ಮೆಸೇಜ್‌ ಕಳುಹಿಸಿ. ರೂ.10 ಟಾಕ್‌ಟೈಮ್ ಪಡೆಯುತ್ತೀರಿ. ಮುಂದಿನ ರೀಚಾರ್ಜ್‌ನಲ್ಲಿ ರೂ.12 ಕಡಿತಗೊಳ್ಳುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
How to Get Talktime and Data Loans on Airtel, BSNL, Vodafone, Reliance and Idea Number. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot