ಬಿಎಸ್‌ಎನ್‌ಎಲ್‌ 'ಬ್ರಾಡ್‌ಬ್ಯಾಂಡ್‌ 249' ಪ್ಲಾನ್‌ನ 5 ಅನ್‌ಲಿಮಿಟೆಡ್‌ ಉಪಯೋಗಗಳು

By Suneel
|

ರಿಲಾಯನ್ಸ್ ಜಿಯೋ ಆಫರ್‌ ಮತ್ತು ಹಲವು ಟ್ಯಾರಿಫ್ ಪ್ಲಾನ್‌ಗಳಿಂದ ಈಗ ಬಿಎಸ್‌ಎನ್‌ಎಲ್‌ ಮತ್ತು ಇತರೆ ಟೆಲಿಕಾಂಗಳಿಗೂ ಉದ್ಯಮ ನಿರ್ವಹಣೆಯ ಬಿಸಿ ಹೆಚ್ಚಾಗಿದೆ. ಆದರೆ ಬಿಎಸ್‌ಎನ್‌ಎಲ್‌ ಮಾತ್ರ ರಿಲಾಯನ್ಸ್ ಜಿಯೋಗೆ ಪ್ರತಿಸ್ಪರ್ಧಿಯಾಗಿ ಬ್ರಾಡ್‌ಬ್ಯಾಂಡ್ 249 ಪ್ಲಾನ್ ಅನ್ನು ಪರಿಚಯಿಸಿದೆ.

ಬಿಎಸ್‌ಎನ್‌ಎಲ್‌ ತಡವಾಗಿ ಪರಿಚಯಿಸಿರುವ ಹೊಸ ಪ್ಲಾನ್ ಹೆಸರು 'ಬ್ರಾಡ್‌ಬ್ಯಾಂಡ್ 249 (BB249)', ಅಂದಹಾಗೆ ಈ ವಿಶೇಷ ಪ್ಲಾನ್ ಕೇವಲ ಹೊಸ ಬಿಎಸ್‌ಎನ್‌ಎಲ್‌ನ ಹೊಸ ಗ್ರಾಹಕರಿಗೆ. ಬ್ರಾಡ್‌ಬ್ಯಾಂಡ್ 249 ಅತಿ ವಿಶೇಷ ಆಫರ್‌ಗಳನ್ನು ಹೊಂದಿದ್ದು, ಇತರೆ ಟೆಲಿಕಾಂಗಳು ಸಹ ಈ ಆಫರ್‌ ಅನ್ನು ನೀಡಲು ಸಾಧ್ಯವಿಲ್ಲ. ಬ್ರಾಡ್‌ಬ್ಯಾಂಡ್ 249 ಪ್ಲಾನ್ ಜೊತೆಗೆ ರೂ.499 ರ ಆಫರ್ ಪ್ಲಾನ್‌ ಅನ್ನು ಬಿಡುಗಡೆ ಮಾಡಿದೆ.

ನೀವು ಬಿಎಸ್‌ಎನ್‌ಎಲ್‌ನ ಹೊಸ ಗ್ರಾಹಕರೇ? ಉತ್ತಮ ಬ್ರಾಡ್‌ಬ್ಯಾಂಡ್‌ ಪ್ಲಾನ್‌ಗಳನ್ನು ಹುಡುಕುತ್ತೀದ್ದೀರಾ? ಆಗಿದ್ದಲ್ಲಿ, ಬಿಎಸ್‌ಎನ್‌ಎಲ್‌ನ ಬ್ರಾಡ್‌ಬ್ಯಾಂಡ್ 249 ಪ್ಲಾನ್ ಪಡೆಯಬಹು. ಬ್ರಾಡ್‌ಬ್ಯಾಂಡ್ 249 ಪ್ಲಾನ್‌ನ ಅತ್ಯುತ್ತಮ ಆಫರ್‌ಗಳು ಯಾವುವು ಎಂದು ಲೇಖನದ ಸ್ಲೈಡರ್‌ ಓದಿ ತಿಳಿಯಿರಿ.

ಶೇ.100 ಬಿಎಸ್‌ಎನ್‌ಎಲ್‌ ಬ್ರಾಡ್‌ಬ್ಯಾಂಡ್‌ ಇಂಟರ್ನೆಟ್ ವೇಗಗೊಳಿಸುವುದು ಹೇಗೆ?

 ಅನ್‌ಲಿಮಿಟೆಡ್

ಅನ್‌ಲಿಮಿಟೆಡ್

ಬ್ರಾಡ್‌ಬ್ಯಾಂಡ್ 249 ಖಂಡಿತವಾಗಿಯಯೂ ಅನ್‌ಲಿಮಿಟೆಡ್‌ ಆಫರ್‌ ಆಗಿದೆ. ಈ ಆಫರ್‌ನಿಂದ 2GB ವರೆಗೆ 2MBPS ಡಾಟಾ ವೇಗ ಪಡೆಯಬಹುದು. ನಂತರ ಡಾಟಾ ವೇಗ 1MBPS ಇರಲಿದೆ.

 6 ತಿಂಗಳಿಗೆ ರೂ.249

6 ತಿಂಗಳಿಗೆ ರೂ.249

ನಿಜವಾದ ಅನ್‌ಲಿಮಿಟೆಡ್‌ ಉಪಯೋಗ ಇದೆ. ಬ್ರಾಡ್‌ಬ್ಯಾಂಡ್‌ ಪ್ಯಾಕ್‌ ಬೆಲೆ ರೂ.249 ಆಗಿದ್ದು, 6 ತಿಂಗಳು ವ್ಯಾಲಿಡಿಟಿ ಇರಲಿದೆ. ಆಕ್ಟಿವೇಶನ್ ಬೆಲೆ ತಿಂಗಳಿಗೆ ರೂ.49.

ಭಾನುವಾರ ಉಚಿತ ಕರೆಗಳು

ಭಾನುವಾರ ಉಚಿತ ಕರೆಗಳು

ಇತರೆ ಸೂಪರ್‌ ಬೆನಿಫಿಟ್ ಎಂದರೆ, ಯಾವುದೇ ಮೊಬೈಲ್‌ ನಂಬರ್‌ ಅಥವಾ ಲ್ಯಾಂಡ್‌ಲೈನ್‌ಗೆ ಕರೆ ಮಾಡಿದರು ಭಾನುವಾರ ದಿನ ಉಚಿತ ಕರೆ ಸೇವೆ ಇರುತ್ತದೆ. ಈ ಸೇವೆ 6 ತಿಂಗಳವರೆಗೂ ಇರುತ್ತದೆ.

6 ತಿಂಗಳವರೆಗೆ ಉಚಿತ ರಾತ್ರಿ ಕರೆಗಳು

6 ತಿಂಗಳವರೆಗೆ ಉಚಿತ ರಾತ್ರಿ ಕರೆಗಳು

ಭಾನುವಾರ ಹೊರತುಪಡಿಸಿ, 6 ತಿಂಗಳವರೆಗೆ ವಾರದ 6 ದಿನಗಳಲ್ಲಿ ರಾತ್ರಿ ಕರೆ ಉಚಿತವಾಗಿರುತ್ತದೆ. ಕರೆ ಸಮಯ ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 7 ಗಂಟೆವರೆಗೆ.

ಹೊಸ ಗ್ರಾಹಕರಿಗೆ ಮಾತ್ರ ಆಫರ್‌

ಹೊಸ ಗ್ರಾಹಕರಿಗೆ ಮಾತ್ರ ಆಫರ್‌

ಅಂದಹಾಗೆ ಹೊಸ ಬ್ರಾಡ್‌ಬ್ಯಾಂಡ್ 249 ಪ್ಲಾನ್ ಆಫರ್ ಬಿಎಸ್‌ಎನ್‌ಎಲ್‌ನ ಹೊಸ ಗ್ರಾಹಕರಿಗೆ ಮಾತ್ರ. ಬಿಎಸ್‌ಎನ್‌ಎಲ್‌ನ ಹಳೆಯ ಗ್ರಾಹಕರು ಈ ಆಫರ್‌ಗೆ ಅಪ್‌ಡೇಟ್‌ ಆಗಲು ಸಹ ಸಾಧ್ಯವಿಲ್ಲ.

Best Mobiles in India

Read more about:
English summary
5 Benefits of Buying the New BSNL Unlimted BB249 Plan in India. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X