ಅನ್ಲಿಮಿಟೆಡ್ 4ಜಿ ಡೇಟಾವನ್ನು ಹೈ ಸ್ಪೀಡ್ನಲ್ಲಿ ಪಡೆದುಕೊಳ್ಳುವುದು ಹೇಗೆ?
ರಿಲಾಯನ್ಸ್ ಜಿಯೋದ ವೆಲ್ಕಮ್ ಆಫರ್ ಉಚಿತ ಮತ್ತು 4ಜಿ ಅನಿಯಮಿತ ಡೇಟಾ ಆಫರ್ನೊಂದಿಗೆ ಬಂದಿದ್ದು, ಡಿಸೆಂಬರ್ 31, 2016 ರವರೆಗೆ ಬಳಕೆದಾರರಿಗೆ ಲಭ್ಯವಿದೆ. ಆದರೆ ಹೆಚ್ಚಿನ ಬಳಕೆದಾರರು ಈ ಆಫರ್ನಲ್ಲಿ ಗೊಂದಲಗಳನ್ನು ಹೊಂದಿದ್ದು ಇದು 4ಜಿ ಡೇಟಾವನ್ನು 4ಜಿ ವೇಗದಲ್ಲಿ ನಿತ್ಯವೂ ನೀಡಲಿದೆಯೇ ಎಂಬುದೂ ಸಂದೇಹವಾಗಿದೆ.
ಓದಿರಿ: ರಿಲಾಯನ್ಸ್ ಜಿಯೋ ಆಫರ್ ಕುರಿತು ನೀವು ಅರಿಯದ ಟಾಪ್ ಸತ್ಯಗಳು
ಆದರೆ ಅನಿಯಮಿತ ಡೇಟಾದಲ್ಲಿ ನಿಮಗೆ 4ಜಿ ನಿಖರವಾಗಿ ದೊರೆಯುವುದಿಲ್ಲ ಎಂಬುದನ್ನು ಇಂದು ತಿಳಿಸಲಿದ್ದೇವೆ.ಅದಾಗ್ಯೂ ವೆಲ್ಕಮ್ ಆಫರ್ನಲ್ಲಿ ಯಾವುದೇ ತೊಂದರೆ ಇಲ್ಲದೆ 4ಜಿ ಡೇಟಾವನ್ನು ಅದೇ ವೇಗದಲ್ಲಿ ಬ್ರೌಸ್ ಮಾಡುವುದು ಹೇಗೆ ಎಂಬುದನ್ನು ಕೆಲವೊಂದು ಟ್ರಿಕ್ಸ್ ಮೂಲಕ ನಾವು ತಿಳಿಸಿಕೊಡಲಿದ್ದೇವೆ.
ಓದಿರಿ: ಟೆಲಿಕಾಮ್ ಪೈಪೋಟಿ, ಜಿಯೋಗೆ ಸೋಲು ಕಟ್ಟಿಟ್ಟ ಬುತ್ತಿಯೇ?

ಪ್ರಿವ್ಯೂ ಆಫರ್ಗೆ ಹೋಗಿ
ಮೇಲೆ ತಿಳಿಸಿದಂತೆ, ಪ್ರಿವ್ಯೂ ಆಫರ್ನೊಂದಿಗೆ, ಜಿಯೋ 4ಜಿ ಬಳಕೆದಾರರು ಹೆಚ್ಚುವರಿ ವೇಗದೊಂದಿಗೆ 4ಜಿ ಸೇವೆಗಳನ್ನು ಆನಂದಿಸಬಬಹುದಾಗಿತ್ತು. ಆದರೀಗ ವೆಲ್ಕಮ್ ಆಫರ್ ಕೆಲವೊಂದು ಷರತ್ತುಗಳನ್ನು ವಿಧಿಸಿದ್ದು ವೇಗವು ನಿಧಾನಕ್ಕೆ 128 ಕೆಬಿಪಿಎಸ್ಗೆ ಇಳಿಯುತ್ತದೆ

ಪ್ರಿವ್ಯೂ ಆಫರ್ಗೆ ಬದಲಾಯಿಸಿಕೊಳ್ಳಿ
ವೆಲ್ಕಮ್ ಆಫರ್ನಲ್ಲಿರುವ ಅದೇ ಕೊಡುಗೆಗಳನ್ನು ಆಸ್ವಾದಿಸಲು ನೀವು ಪ್ರಿವ್ಯೂ ಆಫರ್ಗೆ ನಿಮ್ಮ ಯೋಜನೆಗಳನ್ನು ಬದಲಾಯಿಸಿಕೊಳ್ಳಬೇಕು. ಹೀಗೆ ಮಾಡುವುದರಿಂದ ಯಾವುದೇ ಮಿತಿಯಿಲ್ಲದೆ 4ಜಿ ಡೇಟಾವನ್ನು 4ಜಿ ವೇಗದಲ್ಲಿ ನಿಮಗೆ ಆನಂದಿಸಬಹುದಾಗಿದೆ
ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದು ಸರಳ ವಿಧಾನ
ವೆಲ್ಕಮ್ ಆಫರ್ ಅನ್ನು ಪ್ರಿವ್ಯೂ ಆಫರ್ ಮಾಡಿಕೊಳ್ಳುವುದು ಹೆಚ್ಚು ಸುಲಭವಾಗಿದೆ. ಪ್ರಿವ್ಯೂ ಆಫರ್ಗೆ ಬದಲಾಯಿಸುವುದು ಹೆಚ್ಚು ಸುಲಭವಾಗಿದೆ.

ಮೈಜಿಯೋ ಅಪ್ಲಿಕೇಶನ್ನೊಂದಿಗೆ ಇದನ್ನು ಬಳಸಿಕೊಳ್ಳಿ
ನಿಮ್ಮ ಫೋನ್ನಲ್ಲಿ ಇನ್ಸ್ಟಾಲ್ ಮಾಡಿಕೊಂಡಿರುವ ಮೈಜಿಯೋ ಅಪ್ಲಿಕೇಶನ್ ಅನ್ನು ಅನ್ಇನ್ಸ್ಟಾಲ್ ಮಾಡಿ. ನಂತರ ಅಪ್ಲಿಕೇಶನ್ ಅನ್ನು ಪ್ಲೇ ಸ್ಟೋರ್ನಿಂದ ಡೌನ್ಲೋಡ್ ಮಾಡಿಕೊಳ್ಳಿ. ಅಪ್ಲಿಕೇಶನ್ ಅಪ್ಡೇಟ್ ಮಾಡದಿರಿ. ಅಪ್ಲಿಕೇಶನ್ ತೆರೆಯಿರಿ ಮತ್ತು ಪುನಃ ಅದನ್ನು ಇನ್ಸ್ಟಾಲ್ ಮಾಡಿ ಮತ್ತು ಮೈ ಜಿಯೋ ಅಪ್ಲಿಕೇಶನ್ ಅಡಿಯಲ್ಲಿ ಅಪ್ಲಿಕೇಶನ್ ಇನ್ಸ್ಟಾಲ್ ಮಾಡಿ.
ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹಂತಗಳನ್ನು ಜಾಗರೂಕವಾಗಿ ಪಾಲಿಸಿ
ಜಿಯೋ ಅಪ್ಲಿಕೇಶನ್ ಇನ್ಸ್ಟಾಲ್ ಮಾಡಿಕೊಂಡ ನಂತರ, ವೈಫೈ ಮತ್ತು ಮೊಬೈಲ್ ಡೇಟಾವನ್ನು ಆಫ್ ಮಾಡಿ. ಎಲ್ಲಾ ಅಪ್ಲಿಕೇಶನ್ಗಳನ್ನು ಕ್ಲೋಸ್ ಮಾಡಿ ಮತ್ತು ಫೋನ್ ರಿಸ್ಟಾರ್ಟ್ ಮಾಡಿ. ಈಗ ಮೈಜಿಯೋ ಅಪ್ಲಿಕೇಶನ್ ಅನ್ನು ಇಂಟರ್ನೆಟ್ ಬಳಸದೆಯೇ ತೆರೆಯಿರಿ. ಓಪನ್ ಐಕಾನ್ ಸ್ಪರ್ಶಿಸಿದಾಗ 'ಗೆಟ್ ಜಿಯೋ ಸಿಮ್' ಆಪ್ಶನ್ ಅನ್ನು ನೀವು ಪಡೆದುಕೊಳ್ಳುತ್ತೀರಿ. ಹೀಗೆ ಗೋಚರಿಸಿಲ್ಲ ಎಂದಾದಲ್ಲಿ, ಅಪ್ಲಿಕೇಶನ್ ಮುಚ್ಚಿರಿ ನಂತರ ಪುನಃ ಅದನ್ನು ತೆರೆಯಿರಿ. ಒಮ್ಮೆ ಈ ಆಪ್ಶನ್ ಅನ್ನು ನೀವು ಪಡೆದುಕೊಂಡ ಮೇಲೆ, ಡೇಟಾ ತೆರೆಯಿರಿ ಮತ್ತು 'ಗೆಟ್ ಜಿಯೋ ಸಿಮ್ ಬಟನ್' ಅನ್ನು ಸ್ಪರ್ಶಿಸಿ. ನಿಮ್ಮ ಕೆಲಸ ಮುಗಿದಂತೆಯೇ! ನೀವು ಪ್ರಿವ್ಯೂ ಆಫರ್ಗೆ ಹೋಗುತ್ತೀರಿ ಮತ್ತು ಇನ್ಸ್ಟಾಲ್ ಮಾಡಿಕೊಂಡಿರುವ ಜಿಯೋ ಅಪ್ಲಿಕೇಶನ್ಗಳನ್ನು ಡಿಲೀಟ್ ಮಾಡಬಹುದಾಗಿದೆ.
ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ


Click it and Unblock the Notifications








