Gmailನಲ್ಲಿ ಅನಗತ್ಯ ಇ-ಮೇಲ್‌ಗಳಿಂದ ಕಿರಿಕಿರಿ ಇದ್ರೆ?..ಹಾಗಿದ್ರೆ ಈ ಕೆಲಸ ಮಾಡಿರಿ!
ಪ್ರಪಂಚದಾದ್ಯಂತ ಅತೀ ಹೆಚ್ಚು ಬಳಸಲಾಗುವ ಅಪ್ಲಿಕೇಶನ್‌ಗಳ ಪೈಕಿ Gmail ಸಹ ಒಂದಾಗಿದೆ. Gmail ಬಳಕೆದಾರರಿಗೆ ಹಲವು ಅಗತ್ಯ ಫೀಚರ್ಸ್‌ಗಳನ್ನು ನೀಡಿದೆ. ಇನ್ನು ಬಹುತೇಕ ಬಳಕೆದಾರರು ಆನ್‌ಲೈನ್ ಸೇವೆಗಳ ಲಾಗ್‌ಇನ್‌ಗೆ ಜಿ-ಮೇಲ್ ನೀಡುತ್ತಾರೆ. ಹೀಗೆ ನೀವು Gmail ಐಡಿ ಬಳಸಿ ಸಾಮಾಜಿಕ ತಾಣಗಳಲ್ಲಿ ಲಾಗ್‌ಇನ್ ಆಗಿದ್ದರೇ ಮುಗಿತು. ಆ ಸಂಸ್ಥೆಗಳ ಇ-ಮೇಲ್‌ಗಳು ಇನ್‌ಬಾಕ್ಸ್‌ಗೆ ಬರುತ್ತಲೇ ಇರುತ್ತವೆ. ಎಷ್ಟೋ ಸಾರಿ ಇದು ಬಳಕೆದಾರರಿಗೆ ಕಿರಿಕಿರಿ ಅನಿಸುತ್ತವೆ.

ಹೌದು, ಜಿ-ಮೇಲ್ ಐಡಿ ಬಳಸಿ ಯಾವುದೇ ಸೇವೆಗೆ ಚಂದಾದಾರರಾಗಿದ್ದರೆ ಅಥವಾ ನಿಮ್ಮ Gmail ಐಡಿ ಬಳಸಿ ಯಾವುದೇ ಸಾಮಾಜಿಕ/ಆಪ್ ಖಾತೆಯನ್ನು ಮಾಡಿದ್ದರೆ, ನೀವು ಸಾಕಷ್ಟು ನೋಟಿಫಿಕೇಶನ್‌ಗಳನ್ನು ಪಡೆಯಲು ಬದ್ಧರಾಗಿರುತ್ತೀರಿ. ಲಿಂಕ್ಡ್‌ಇನ್, ಟ್ವಿಟರ್, ಅಮೆಜಾನ್ ಪ್ರೈಮ್, ಜೊಮಾಟೊ ಮತ್ತು ಇತರ ಅಪ್ಲಿಕೇಶನ್‌ಗಳು ನಿಮ್ಮ ಜಿ-ಮೇಲ್ ಇನ್‌ಬಾಕ್ಸ್ ಅನ್ನು ತುಂಬಿ ತುಳುಕುವಂತೆ ಮಾಡುತ್ತವೆ. ಆದರೆ ಇಂಹತ ಅನಗತ್ಯ ಇ-ಮೇಲ್‌ಗಳ ಕಿರಿಕಿರಿಯಿಂದ ಮುಕ್ತಿ ಇದೆ.

ನೀವು ಕಿರಿಕಿರ ಅನಿಸುವ ನಿರ್ದಿಷ್ಟ ಇ-ಮೇಲ್ ವಿಳಾಸವನ್ನು ನಿರ್ಬಂಧಿಸಲು ಬಯಸಿದರೆ, ಆ ಕಾರ್ಯವನ್ನು ಅತೀ ಸುಲಭವಾಗಿ ಮಾಡಬಹುದು. ನೀವು ಇ-ಮೇಲ್ ವಿಳಾಸವನ್ನು ನಿರ್ಬಂಧಿಸಿದರೆ, ಇ-ಮೇಲ್ ಕಳುಹಿಸುವವರ ಯಾವುದೇ ಇ-ಮೇಲ್‌ಗಳು ನೇರವಾಗಿ ಸ್ಪ್ಯಾಮ್ ಫೋಲ್ಡರ್‌ಗೆ ಹೋಗುತ್ತವೆ. ಕೆಲವು ಸರಳ ಹಂತಗಳನ್ನು ಅನುಸರಿಸುವ ಮೂಲಕ Gmail ನಲ್ಲಿನ ಇ-ಮೇಲ್‌ಗಳನ್ನು ನಿರ್ಬಂಧಿಸಿ ಜಿ-ಮೇಲ್ ಇನ್‌ಬಾಕ್ಸ್‌ನಿಂದ ಅನಗತ್ಯ ಇ-ಮೇಲ್‌ಗಳ ಬರುವಿಕೆ ತಡೆಯಬಹುದು.

Gmail ನಲ್ಲಿ ಇ-ಮೇಲ್ ವಿಳಾಸವನ್ನು ನಿರ್ಬಂಧಿಸುವುದು ಹೇಗೆ
ಹಂತ 1: Gmail ಗೆ ಹೋಗಿ ಮತ್ತು ಸೈನ್ ಇನ್ ಮಾಡಿ.
ಹಂತ 2: ನೀವು ನಿರ್ಬಂಧಿಸಬೇಕು ಎಂದಿರುವ ಇ-ಮೇಲ್ ತೆರೆಯಿರಿ.
ಹಂತ 3: ನಂತರ ಮೂರು ಡಾಟ್ ಆಯ್ಕೆ ಯನ್ನು ಟ್ಯಾಪ್ ಮಾಡಿ, ಅದನ್ನು ಸ್ಟಾರ್ ಐಕಾನ್ ಕೆಳಗೆ ಇರಿಸಲಾಗಿದೆ. ನೀವು ಕೆಲವು ಆಯ್ಕೆಗಳನ್ನು ಪಡೆಯುತ್ತೀರಿ, ಅದು ಬ್ಲಾಕ್ ಅನ್ನು ಸಹ ಒಳಗೊಂಡಿದೆ. ಆ ಇಮೇಲ್ ವಿಳಾಸವನ್ನು ನಿರ್ಬಂಧಿಸಲು ನೀವು ಅದನ್ನು ಸ್ಪರ್ಶಿಸಬೇಕಾಗಿದೆ.


Click it and Unblock the Notifications








