ಒಳಾಂಗಣ ಗೂಗಲ್‌ ನಕ್ಷೆ ಭಾರತದಲ್ಲಿ ಲಭ್ಯ

Posted By:

ಇನ್ನು ಮುಂದೆ ಮಹಾನಗರಗಳ ದೊಡ್ಡ ಶಾಪಿಂಗ್‌ ಮಾಲ್‌ಗೆ ಹೋಗದೇ ಕಂಪ್ಯೂಟರ್‌ ಮೂಲಕವೇ ಶಾಪಿಂಗ್‌ ಮಾಲ್‌ನ ಒಳಾಂಗಣ ದೃಶ್ಯವನ್ನು ನೋಡಬಹುದು. ಇಂಟರ್‌ನೆಟ್‌ ದೈತ್ಯ ಗೂಗಲ್‌ ತನ್ನ ಒಳಾಂಗಣ ಮ್ಯಾಪ್‌ ಸೇವೆಯನ್ನು‌ ಭಾರತದ ಆರಂಭಿಸಿದೆ.

ಅಮೆರಿಕ,ಸಿಂಗಾಪೂರ್‌,ಜಪಾನ್‌ ಸೇರಿದಂತೆ ಹಲವಾರು ದೇಶಗಳಲ್ಲಿ ಈಗಾಗಲೇ ಈ ಸೇವೆ ಆರಂಭಿಸಿರುವ ಗೂಗಲ್‌ ಈ ವಾರದಿಂದ ಈ ಸೇವೆಯನ್ನು ಭಾರತದಲ್ಲಿ ಆರಂಭಿಸಿದೆ. ಈ ಮ್ಯಾಪ್‌ನಲ್ಲಿ ಬೆಂಗಳೂರು ಸೇರಿದಂತೆ ,ದೇಶದ 22 ನಗರಗಳಲ್ಲಿರುವ ದೊಡ್ಡ ದೊಡ್ಡ ಕಟ್ಟಡಗಳ ನಕ್ಷೆಯಿದೆ. ದೇಶದ 75 ಪಾಲುದಾರರ ಮೂಲಕ ಈ ನಕ್ಷೆಯನ್ನು ಗೂಗಲ್‌ ಸಿದ್ದ ಪಡಿಸಿದ್ದು ಸದ್ಯದಲ್ಲೇ ಮತ್ತಷ್ಟು ಕಟ್ಟಡಗಳ ಒಳಾಂಗಣ ನಕ್ಷೆಯನ್ನು ಗೂಗಲ್‌ ಸೇರಿಸಲಿದೆ.

ಗೂಗಲ್‌ ಭಾರತದಲ್ಲಿ ಈ ಸೇವೆಯನ್ನು ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ಗೂಗಲ್‌ ಒಳಾಂಗಣ ನಕ್ಷೆಗೆ ಸಂಬಂಧಿಸಿದಂತೆ ಕಿರು ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಇದನ್ನೂ ಓದಿ: ಗೂಗಲ್‌ ನ್ಯೂಸ್‌ನಲ್ಲಿ ಕನ್ನಡ ಬೇಕು ಎಂದು ಗೂಗಲ್‌ನ್ನು ಕೇಳಿ ಸುದ್ದಿಯನ್ನು ಶೇರ್‍ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಏನಿದು ಒಳಾಂಗಣ ಗೂಗಲ್‌ ನಕ್ಷೆ?

ಏನಿದು ಒಳಾಂಗಣ ಗೂಗಲ್‌ ನಕ್ಷೆ?

ಒಳಾಂಗಣ ಗೂಗಲ್‌ ನಕ್ಷೆ ಭಾರತದಲ್ಲಿ ಲಭ್ಯ


ಮಹಾನಗರಗಳಲ್ಲಿ ದೊಡ್ಡ ದೊಡ್ಡ ಶಾಪಿಂಗ್‌ ಮಾಲ್‌ಗಳಿರುತ್ತವೆ.ಇದರಲ್ಲಿ ಯಾವ ಮಳಿಗೆಯಲ್ಲಿ ಯಾವ ಕಂಪೆನಿಯ ಅಂಗಡಿಗಳಿದೆ ಎನ್ನುವುದು ಅಲ್ಲಿ ಭೇಟಿ ನೀಡದೇ ಪತ್ತೆ ಹಚ್ಚುವುದು ತುಸು ಕಷ್ಟ.ಈ ಕಷ್ಟವನ್ನು ತನ್ನ ಬಳಕೆದಾರರಿಗೆ ನಿವಾರಿಸಲು ಗೂಗಲ್‌ ಆರಂಭಿಸಿರುವ ವಿನೂತನ ಪ್ರಯೋಗ ಒಳಾಂಗಣ ಗೂಗಲ್‌ ನಕ್ಷೆ(indoor Google Maps).ಮಹಾನಗರಗಳಲ್ಲಿರುವ ಶಾಪಿಂಗ್‌ ಮಾಲ್‌ ಅಲ್ಲದೇ ವಿಮಾನ ನಿಲ್ದಾಣ,ದೊಡ್ಡ ರಿಟೇಲ್‌ ಸ್ಟೋರ್‌‌,ರೈಲು ನಿಲ್ದಾಣಗಳ ಒಳಾಂಗಣ ಮಾಹಿತಿಯೂ ಗೂಗಲ್‌ನ ಒಳಾಂಗಣ ನಕ್ಷೆಯಲ್ಲಿದೆ.

 ಈ ನಕ್ಷೆಯಿಂದ ಏನು ಲಾಭ?

ಈ ನಕ್ಷೆಯಿಂದ ಏನು ಲಾಭ?

ಒಳಾಂಗಣ ಗೂಗಲ್‌ ನಕ್ಷೆ ಭಾರತದಲ್ಲಿ ಲಭ್ಯ


ಹೊಸದಾಗಿ ದೊಡ್ಡ ಕಟ್ಟಡಕ್ಕೆ ಹೋಗಿ ಯಾವ ಸ್ಥಳದಲ್ಲಿ ಏನಿದೆ,ಒಳಗಡೆ ಇರುವ ಎಟಿಎಂ,ವಿಶ್ರಾಂತಿ ಕೊಠಡಿಗಳನ್ನು ಈ ಮ್ಯಾಪ್‌ ಮೂಲಕವೇ ವೀಕ್ಷಿಸಬಹುದಾಗಿದೆ. ಸ್ಥಳಗಳನ್ನು ಹುಡುಕುವುದಕ್ಕಾಗಿ ಕಟ್ಟಡದಲ್ಲಿ ಓಡಾಡಿ ಸಮಯವನ್ನು ವ್ಯರ್ಥ‌ಮಾಡಬೇಕಿಲ್ಲ. ಎಲ್ಲಾ ಮಾಹಿತಿಗಳನ್ನು ಈ ನಕ್ಷೆಯಲ್ಲಿ ನೋಡಬಹುದಾಗಿದೆ. ಸದ್ಯಕ್ಕೆ ಇದು ಬೀಟಾ ಆವೃತ್ತಿಯಲ್ಲಿದೆ. ಗೂಗಲ್‌ ಈ ನಕ್ಷೆಯನ್ನು ಅಪ್‌ಗ್ರೇಡ್‌ ಮಾಡುತ್ತಿದೆ.

 ಒಳಾಂಗಣ ಗೂಗಲ್‌ ನಕ್ಷೆ ಹೇಗೆ ಸಿದ್ದಗೊಳ್ಳುತ್ತದೆ?

ಒಳಾಂಗಣ ಗೂಗಲ್‌ ನಕ್ಷೆ ಹೇಗೆ ಸಿದ್ದಗೊಳ್ಳುತ್ತದೆ?

ಒಳಾಂಗಣ ಗೂಗಲ್‌ ನಕ್ಷೆ ಭಾರತದಲ್ಲಿ ಲಭ್ಯ


ಒಳಗಾಂಣ ನಕ್ಷೆ ಉಚಿತವಾಗಿದ್ದು.ಐದು ಮಹಡಿಗಳಿಗಿಂತ ಹೆಚ್ಚಿನ ಮಹಡಿ ಒಳಗೊಂಡಿರುವ ಕಟ್ಟಡಗಳನ್ನು ಈ ಒಳಾಂಗಣ ನಕ್ಷೆಗೆ ಸೇರಿಸಬಹುದು.ನಕ್ಷೆಗೆ ತಮ್ಮ ಕಟ್ಟಡಗಳನ್ನು ಸೇರಿಸಬೇಕಿದ್ದಲ್ಲಿ ಮೊದಲು ಗೂಗಲ್‌ ಮ್ಯಾಪ್‌ಗೆ ಈ ಕಟ್ಟಡದ ಸಂಪೂರ್ಣ‌ ಚಿತ್ರ,ಮಾಹಿತಿಯನ್ನು ಅಪ್‌ಲೋಡ್‌ ಮಾಡಬೇಕಾಗುತ್ತದೆ. ಒಂದು ವೇಳೆ ನಕ್ಷೆಯ ಚಿತ್ರಗಳನ್ನು ಅಪ್‌ಲೋಡ್‌ ಮಾಡುವಾಗ ಸಮಸ್ಯೆ ಉಂಟಾದಲ್ಲಿ ಗೂಗಲ್‌ ಮ್ಯಾಪ್‌ ಸಿಬ್ಬಂದಿಯನ್ನು ಸಂಪರ್ಕಿಸಿ
ನಕ್ಷೆಯನ್ನು ಅಪ್‌ಲೋಡ್‌ ಮಾಡಬಹುದಾಗಿದೆ.

 ಯಾರು ಅಪ್‌ಲೋಡ್‌ ಮಾಡಬಹುದು?

ಯಾರು ಅಪ್‌ಲೋಡ್‌ ಮಾಡಬಹುದು?

ಒಳಾಂಗಣ ಗೂಗಲ್‌ ನಕ್ಷೆ ಭಾರತದಲ್ಲಿ ಲಭ್ಯ


ಸಂಸ್ಥೆಯ ಮಾಲಕರು ಮತ್ತು ಸಂಸ್ಥೆಯ ಅಧಿಕೃತ ಪ್ರತಿನಿಧಿಗಳಿಗೆ ಗೂಗಲ್‌ ಮ್ಯಾಪ್‌ನಲ್ಲಿ ತಮ್ಮ ಕಟ್ಟಡ ನಕ್ಷೆಯನ್ನುಅಪ್‌ಲೋಡ್‌‌ ಮಾಡುವ ಹಕ್ಕನ್ನು ಹೊಂದಿರುತ್ತಾರೆ.

 ಒಳಾಂಗಣ ನಕ್ಷೆಯಲ್ಲಿ ಎಷ್ಟು ಸ್ಥಳಗಳನ್ನು ನಾವು ನೋಡಬಹುದು?

ಒಳಾಂಗಣ ನಕ್ಷೆಯಲ್ಲಿ ಎಷ್ಟು ಸ್ಥಳಗಳನ್ನು ನಾವು ನೋಡಬಹುದು?

ಒಳಾಂಗಣ ಗೂಗಲ್‌ ನಕ್ಷೆ ಭಾರತದಲ್ಲಿ ಲಭ್ಯ


ವಿಶ್ವದ ಒಟ್ಟು 10 ಸಾವಿರಕ್ಕೂ ಅಧಿಕ ಸ್ಥಳಗಳ ಮಾಹಿತಿಯಿದೆ. ಬೆಂಗಳೂರು ಸೇರಿದಂತೆ ಭಾರತದ ಮಹಾನಗರ,ಮ್ಯೂಸಿಯಂ ನಕ್ಷೆಗಳು ಈಗ ಗೂಗಲ್‌ ಒಳಾಂಗಣ ನಕ್ಷೆಯಲ್ಲಿದೆ.

 ಬಳಕೆದಾರರು ಹೇಗೆ ಈ ಮ್ಯಾಪ್‌ನ್ನು ಬಳಸಬಹುದು?

ಬಳಕೆದಾರರು ಹೇಗೆ ಈ ಮ್ಯಾಪ್‌ನ್ನು ಬಳಸಬಹುದು?

ಒಳಾಂಗಣ ಗೂಗಲ್‌ ನಕ್ಷೆ ಭಾರತದಲ್ಲಿ ಲಭ್ಯ

ಡೆಸ್ಕ್‌ಟಾಪ್‌ ಬಳಕೆದಾರು ನೇರವಾಗಿ ಹೆಸರನ್ನು ಟೈಪ್‌ ಮಾಡಿಗೂಗಲ್‌ ಮ್ಯಾಪ್‌ ಮೂಲಕ ಕಟ್ಟಡವನ್ನು ವೀಕ್ಷಿಸಬಹುದು. ಆಂಡ್ರಾಯ್ಡ್‌ ಬಳಕೆದಾರರು ಗೂಗಲ್‌ ಪ್ಲೇ ಸ್ಟೋರ್‌ನಿಂದ ಮ್ಯಾಪ್‌ ಆಪ್‌ ಡೌನ್‌ಲೋಡ್‌ ಮಾಡಿ ಈ ಕಟ್ಟಡಗಳ ನಕ್ಷೆಯನ್ನು ವೀಕ್ಷಿಸಬಹುದು.

ಮಾಹಿತಿ:maps.google.com

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot