ಗೂಗಲ್ ನ್ಯೂಸ್‌ನಲ್ಲಿ ಕನ್ನಡ ಬೇಕು!

Posted By:

ಗೂಗಲ್‌ ತನ್ನ ನ್ಯೂಸ್‌ನಲ್ಲಿ ಕನ್ನಡವನ್ನು ಸೇರಿಸುತ್ತೇವೆ ಎಂದು ಕಳೆದ ಐದು ವರ್ಷ‌ಗಳಿಂದ ಹೇಳುತ್ತಿದ್ದರೂ ಇನ್ನೂ ಕನ್ನಡ ಭಾಷೆಯನ್ನು ಸೇರಿಸಿಲ್ಲ.ಭಾರತದ ಭಾಷೆಗಳಲ್ಲಿ ನ್ಯೂಸ್‌ ನೀಡಲು ಗೂಗಲ್‌ 2007ರಲ್ಲಿ ಮೊದಲು ಹಿಂದಿ ಭಾಷೆಯನ್ನು ಸೇರಿಸಿತ್ತು.ನಂತರ 2008ರಲ್ಲಿ ತಮಿಳು,ಮಲೆಯಾಳಂ,ತೆಲುಗು ಭಾಷೆಯನ್ನು ನ್ಯೂಸ್‌ನಲ್ಲಿ ಸೇರಿಸಿತ್ತು.ಆದರೆ,ನಮ್ಮದೇ ಕನ್ನಡ ಭಾಷೆಯಲ್ಲಿ ದೊರಕುವ ಮಾಹಿತಿಗಳನ್ನು ಇಂಟರ್‌ನೆಟ್‌ ಭಗವಂತ ನೆನೆಸಿಕೊಂಡ ಗೂಗಲ್ ತನ್ನ ನ್ಯೂಸ್ ತೆಕ್ಕೆಗೆ ತೆಗೆದುಕೊಳ್ಳದೆ ತಿರಸ್ಕಾರ ಮಾಡಿದೆ.

ಕನ್ನಡದಲ್ಲಿ ಇಷ್ಟೊಂದು ಜಾಲತಾಣಗಳಿದ್ದರೂ, ಆ ತಾಣಗಳನ್ನು ಓದುವ ಬೇಕಾದಷ್ಟು ಜನರಿದ್ದರೂ ಗೂಗಲ್ ನ್ಯೂಸ್‌ನಲ್ಲಿ ಕನ್ನಡದ ಸುದ್ದಿಗಳನ್ನು ಸಿಗುವುದಿಲ್ಲ ಎಂದು ಹೇಳಿ ಸುಮ್ಮನಿದ್ದರೆ ಸಾಲದು,ಕನ್ನಡದಲ್ಲೂ ನ್ಯೂಸ್ ಕೊಡಿ ಎಂದು ನಾವು ಅವರನ್ನು ಕೇಳಬಹುದು.

ಗೂಗಲ್ ನ್ಯೂಸ್‌ನಲ್ಲಿ ಕನ್ನಡ ಬೇಕು!

ಇದಕ್ಕಾಗಿ ನೀವು ಮಾಡಬೇಕಾದ್ದು ಇಷ್ಟೆ:
* Suggest a feature for Google News - ಈ ತಾಣಕ್ಕೆ ಹೋಗಿ.
* 'Language editions' ಪಟ್ಟಿಯಲ್ಲಿ 'India - Kannada' ಇದೆಯೇ ನೋಡಿ.
* ಅದರ ಮುಂದಿರುವ 'Suggest it' ಗುಂಡಿಯನ್ನು ಒತ್ತಿ.
ಹೆಚ್ಚುಹೆಚ್ಚು ಜನ ಈ ಕೆಲಸ ಮಾಡಿದಂತೆ ಗೂಗಲ್ ನ್ಯೂಸ್‌ನಲ್ಲಿ ಕನ್ನಡ ಕಾಣಿಸಿಕೊಳ್ಳುವುದು ಸುಲಭವಾಗುತ್ತದೆ. ಹಾಗಾಗಿ ನೀವು ಕನ್ನಡ ಬೇಕೆಂದು ಕೇಳಿ, ಕೇಳುವಂತೆ ಬೇರೆಯವರಿಗೂ ಹೇಳಿ!

ಇದನ್ನೂ ಓದಿ : ಗೂಗಲ್‌ ನಿಮ್ಮ ಮಾಹಿತಿಯನ್ನು ಎಲ್ಲೆಲ್ಲಿ ರಕ್ಷಿಸುತ್ತದೆ ಗೊತ್ತಾ?

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot