Subscribe to Gizbot

ಭಾರತದಲ್ಲಿ ಎಲ್ಲೇ ಇದ್ದರೂ ಉಚಿತ ವೈಫೈ ಕನೆಕ್ಟ್‌ಗಾಗಿ ಈ 4 ಸ್ಟೆಪ್‌ ಫಾಲೋ ಮಾಡಿ

Written By:

ಭಾರತದಾದ್ಯಂತದ 400 ರೈಲ್ವೆ ನಿಲ್ದಾಣಗಳಲ್ಲಿ ಉಚಿತ ವೈಫೈ ಆಕ್ಸೆಸ್‌ ಅನ್ನು ಪ್ರಯಾಣಿಕರಿಗಾಗಿ ನೀಡಲಾಗಿದೆ. ಕರ್ನಾಟಕದಲ್ಲಿ 144 ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಗಳಲ್ಲಿ ಉಚಿತ ವೈಫೈ ಆಕ್ಸೆಸ್‌ ಅನ್ನು ಪ್ರಯಾಣಿಕರಿಗೆ ನೀಡಲಾಗಿದೆ. ಉಚಿತ ವೈಫೈ ಆಕ್ಸೆಸ್‌ ಪಡೆಯುವುದು ಎಂದರೆ ಎಲ್ಲರಿಗೂ ಕುತೂಹಲ. ಆದರೆ ಉಚಿತ ಆಕ್ಸೆಸ್ ಇರುವ ಸ್ಥಳಗಳಲ್ಲಿಯೂ ಸಹ ಕೆಲವರು ವೈಫೈ ಕನೆಕ್ಟ್‌ ಮಾಡಿಕೊಳ್ಳುವಲ್ಲಿ ಸಮಸ್ಯೆ ಎದುರಿಸುತ್ತಿದ್ದಾರೆ.

ಹೋದಲೆಲ್ಲಾ ಉಚಿತ ವೈಫೈ ಸಂಪರ್ಕ ಪಡೆಯುವುದು ಎಲ್ಲರ ಆಸೆ. ಅಂತೆಯೇ ಉಚಿತ ವೈಫೈ ಅನ್ನು ಮನೆಯಲ್ಲಿ ಇದ್ದರೂ, ಟ್ರಾವೆಲಿಂಗ್ ಮಾಡುವಾಗ, ನೀವು ಎಲ್ಲೇ ಇದ್ದರೂ ಸಹ ಪಡೆಯಬಹುದು.

ವೈಫೈ ನೆಟ್‌ವರ್ಕ್‌ ಹ್ಯಾಕ್ ಮಾಡಿ ಉಚಿತ ಇಂಟರ್ನೆಟ್‌ ಬಳಕೆ ಹೇಗೆ?

ಗಿಜ್‌ಬಾಟ್‌ನಲ್ಲಿ ಇಂದು ಸ್ಮಾರ್ಟ್‌ಫೋನ್‌ ಬಳಕೆದಾರರು ಎಲ್ಲೇ ಇದ್ದರೂ ಸಹ ಉಚಿತ ವೈಫೈ ಸಂಪರ್ಕವನ್ನು ಪಡೆಯಬಹುದಾದ 4 ಮಾರ್ಗಗಳನ್ನು ತಿಳಿಸುತ್ತಿದ್ದೇವೆ. ಈ ಮಾರ್ಗಗಳಿಂದ ಉಚಿತ ವೈಫೈ(WiFi) ಸಂಪರ್ಕ ಪಡೆದಲ್ಲಿ ಹೆಚ್ಚಿನ ಡಾಟಾದ ಫೈಲ್‌, ಇಮೇಜ್‌, ವೀಡಿಯೊಗಳನ್ನು ಮತ್ತು ಡಾಕ್ಯುಮೆಂಟ್‌ಗಳನ್ನು ಸೆಂಡ್‌ ಮಾಡಬಹುದು. ನಿಮ್ಮ ಮೊಬೈಲ್ ಡಾಟಾ ಉಳಿಸಬಹುದು. ಆ ಮಾರ್ಗಗಳು ಯಾವುವು ಎಂದು ಇಂದಿನ ಲೇಖನದಲ್ಲಿ ಓದಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಗೆಸ್ಟ್‌ ನೆಟ್‌ವರ್ಕ್‌ಗೆ ಕನೆಕ್ಟ್ ಆಗಿ

ಗೆಸ್ಟ್‌ ನೆಟ್‌ವರ್ಕ್‌ಗೆ ಕನೆಕ್ಟ್ ಆಗಿ

ಗೆಸ್ಟ್ ನೆಟ್‌ವರ್ಕ್‌ಗೆ ಕನೆಕ್ಟ್‌ ಆಗುವುದರಿಂದ, ಸ್ಮಾರ್ಟ್‌ಫೋನ್ ಬಳಕೆದಾರರು ಎಲ್ಲೇ ಹೋದರು ಸಹ ಉಚಿತ ಇಂಟರ್ನೆಟ್ ಸಂಪರ್ಕ ಪಡೆಯಬಹುದು. ಜಸ್ಟ್‌ ನಿಮ್ಮ ಫೋನ್‌ನಲ್ಲಿ ವೈಫೈ ಆಪ್ಸನ್‌ ಅನ್ನು ಆನ್‌ ಮಾಡಿ, ನಂತರ ನಿಮ್ಮ ಸುತ್ತಮುತ್ತಲ ಇರುವ ವೈಫೈ ನೆಟ್‌ವರ್ಕ್‌ಗಳು ಪ್ರದರ್ಶನವಾಗುತ್ತವೆ. ಅವುಗಳಲ್ಲಿ ಗೆಸ್ಟ್ ನೆಟ್‌ವರ್ಕ್‌ಗೆ ಕನೆಕ್ಟ್‌ ಆಗಿ ಬ್ರೌಸ್‌ ಮಾಡಿ.

ವಾಣಿಜ್ಯ ಹಾಟ್‌ಸ್ಪಾಟ್‌ಗಳ ಕನೆಕ್ಷನ್‌ ಅಭಿವೃದ್ದಿಪಡಿಸಿ

ವಾಣಿಜ್ಯ ಹಾಟ್‌ಸ್ಪಾಟ್‌ಗಳ ಕನೆಕ್ಷನ್‌ ಅಭಿವೃದ್ದಿಪಡಿಸಿ

ಟ್ರಾವೆಲಿಂಗ್ ಮಾಡುವಾಗ ತುರ್ತುಪರಿಸ್ಥಿತಿ ನಿಮಿತ್ತ ಇಮೇಲ್‌, ಡಾಕ್ಯುಮೆಂಟ್‌ಗಳನ್ನು ನಿಮ್ಮ ಸ್ನೇಹಿತರಿಗೆ ಸೆಂಡ್ ಮಾಡಬೇಕಿರುತ್ತದೆ. ಆದರೆ ಇಂಟರ್ನೆಟ್‌ ಸಂಪರ್ಕ ಇರುವುದಿಲ್ಲ. ಇಂತಹ ಸಂದರ್ಭದಲ್ಲಿ ಸುಲಭವಾಗಿ ನೀವು ನಿಮ್ಮ ಸುತ್ತಮುತ್ತಲ ವಾಣಿಜ್ಯ ಹಾಟ್‌ಸ್ಪಾಟ್‌ಗಳಿಗೆ ಕನೆಕ್ಟ್‌ ಆಗಬಹುದು.

ರೆಸ್ಟೋರೆಂಟ್‌, ಏರ್‌ಪೋರ್ಟ್‌, ಹೋಟೆಲ್‌ಗಳ ವೈಫೈ ಹಾಟ್‌ಸ್ಪಾಟ್‌ ಅನ್ನು ಸುಲಭವಾಗಿ ಕನೆಕ್ಟ್‌ ಮಾಡಿಕೊಳ್ಳಬಹುದು.

ಓಪನ್‌ ನೆಟ್‌ವರ್ಕ್ ಬಳಸಿ

ಓಪನ್‌ ನೆಟ್‌ವರ್ಕ್ ಬಳಸಿ

ನೀವು ಹೊರಗಿನ ಪ್ರದೇಶಗಳಲ್ಲಿ ಇದ್ದಲ್ಲಿ, ವೈಫೈ ಸ್ಚಿಚ್‌ ಆನ್‌ ಮಾಡಿ, ನಂತರ ಹಲವು ವೈಫೈ ನೆಟ್‌ವರ್ಕ್‌ಗಳ ಪಟ್ಟಿ ಪ್ರದರ್ಶನವಾಗುತ್ತದೆ. ಅವುಗಳಲ್ಲಿ ಓಫನ್‌ ನೆಟ್‌ವರ್ಕ್‌ ಅನ್ನು ಆಯ್ಕೆ ಮಾಡಿ , ಸುಲಭವಾಗಿ ಇಂಟರ್ನೆಟ್ ಸಂಪರ್ಕ ಪಡೆಯಬಹುದು.

ಮೆಶ್‌ ನೆಟ್‌ವರ್ಕ್‌ ನಿರ್ಮಿಸಿ

ಮೆಶ್‌ ನೆಟ್‌ವರ್ಕ್‌ ನಿರ್ಮಿಸಿ

ನೆಟ್‌ವರ್ಕ್‌ ಜಾಲ ಬಳಸಿ, ನಿಮ್ಮ ಸ್ನೇಹಿತರ ಮೊಬೈಲ್‌ಗೆ ಇಂಟರ್ನೆಟ್ ಕನೆಕ್ಟ್‌ ಮಾಡಬಹುದು. ಇದು ಓಪನ್‌ ನೆಟ್‌ವರ್ಕ್‌ಗಿಂತ ಸುರಕ್ಷಿತವಾಗಿದ್ದು, ಆದರೆ ಸ್ವಲ್ಪ ಕಠಿಣವಾಗಿದೆ.

 ಮೊಬೈಲ್‌ ಡಾಟಾ ಸೇವ್‌ ಮಾಡಿ

ಮೊಬೈಲ್‌ ಡಾಟಾ ಸೇವ್‌ ಮಾಡಿ

ಮೊಬೈಲ್‌ ಡಾಟಾ ಯಾವುದಾದರೂ ಉದ್ದೇಶ ಪೂರ್ಣಗೊಳಿಸಲು ಕಡಿಮೆ ಇದ್ದರೇ, ಇಂತಹ ಸಂದರ್ಭಗಳಲ್ಲಿ ವೈಫೈ ಅಗತ್ಯವಾಗಿದೆ.

ವೈಫೈ ಸಂಪರ್ಕವನ್ನು ಹೆಚ್ಚಾಗಿ ಪಡೆಯುವುದರಿಂದ, ಮೊಬೈಲ್‌ ಡಾಟಾವನ್ನು ಕಡಿಮೆಗೊಳಿಸಬಹುದು. ಹಾಗೆ ಹಣವನ್ನು ಉಳಿತಾಯ ಮಾಡಬಹುದು.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
Here are 4 Ways You Can Have Wi-Fi Access Everywhere in India. To know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot