ವಾಟ್ಸಾಪ್‌ನಲ್ಲಿ ಜಿಫ್ ಇಮೇಜ್‌ ಕ್ರಿಯೇಟ್‌ ಮಾಡುವುದು ಹೇಗೆ?

ಕೆಳಗಿನ ಹಂತಗಳನ್ನು ಫಾಲೋ ಮಾಡಿ ವಾಟ್ಸಾಪ್‌ನಲ್ಲಿ ಜಿಫ್‌ ಇಮೇಜ್‌ ರಚಿಸುವುದು ಹೇಗೆ ಎಂದು ತಿಳಿಯಿರಿ.

By Suneel
|

ವಾಟ್ಸಾಪ್ ಈ ವರ್ಷದಲ್ಲಿ ಹಲವು ಹೊಸ ಫೀಚರ್‌ಗಳನ್ನು ಬಿಡುಗಡೆ ಮಾಡಿರುವುದು ಗಿಜ್‌ಬಾಟ್‌ ಓದುಗರಿಗೆ ಬಹುಶಃ ಈಗಾಗಲೇ ತಿಳಿದಿರುತ್ತದೆ. ಆದರೆ ಇತ್ತೀಚೆಗೆ ಬಿಡುಗಡೆ ಮಾಡಿದ ಹೆಚ್ಚು ಗಾಳಿ ಸುದ್ದಿ ಪಡೆದ ಫೀಚರ್ ಒಂದು ಆಂಡ್ರಾಯ್ಡ್ ಬೀಟಾ ವರ್ಸನ್‌ ವಾಟ್ಸಾಪ್‌ ಆಪ್‌ನಲ್ಲಿ ಲಭ್ಯವಿದೆ. ಅಂದಹಾಗೆ ಈ ಫೀಚರ್‌ನಿಂದ‌ ಆಂಡ್ರಾಯ್ಡ್‌ ಬಳಕೆದಾರರು 6 ಸೆಕೆಂಡ್‌ಗಳ ವೀಡಿಯೊವನ್ನು GIF (ಜಿಫ್‌) ಇಮೇಜ್‌ ಆಗಿ ಕನ್ವರ್ಟ್‌ ಮಾಡಿ ಇತರರಿಗೆ ಕಳುಹಿಸಬಹುದು.

ವಾಟ್ಸಾಪ್ ವೀಡಿಯೊ ಕರೆ ಫೀಚರ್‌'ಗಾಗಿ ಈ ಲಿಂಕ್‌'ಗಳನ್ನು ತಪ್ಪಿಯೂ ಓಪನ್‌ ಮಾಡಬೇಡಿ

ವಾಟ್ಸಾಪ್‌ನಲ್ಲಿ ಜಿಫ್ ಇಮೇಜ್‌ ಕ್ರಿಯೇಟ್‌ ಮಾಡುವುದು ಹೇಗೆ?

ಬಹುಸಂಖ್ಯಾತರು ಈಗಾಗಲೇ ಈ ಫೀಚರ್‌ ಅನ್ನು ಬಳಸುತ್ತಿದ್ದಾರೆ. ಆದರೆ ಇನ್ನೂ ಕೆಲವರು ಈ ಫೀಚರ್ ಬಳಸುವ ಬಗ್ಗೆ ಮಾಹಿತಿ ತಿಳಿದುಕೊಂಡಿಲ್ಲ. ಆದ್ದರಿಂದ ಇಂದಿನ ಲೇಖನದಲ್ಲಿ ವಾಟ್ಸಾಪ್‌ ಬಳಕೆದಾರರು ಜಿಫ್ ಇಮೇಜ್‌ ಕ್ರಿಯೇಟ್ ಮಾಡುವುದು ಹೇಗೆ ಎಂದು ತಿಳಿದುಕೊಳ್ಳಿ.

ವಾಟ್ಸಾಪ್‌ನಲ್ಲಿ ಜಿಫ್‌ ಇಮೇಜ್‌

ವಾಟ್ಸಾಪ್‌ನಲ್ಲಿ ಜಿಫ್‌ ಇಮೇಜ್‌

ವಾಟ್ಸಾಪ್‌ನಲ್ಲಿ ಜಿಫ್‌ ಶೇರ್‌ ಆಯ್ಕೆ ಸದಾಕಾಲ ಇರುತ್ತದೆ. ಆದರೆ ಮೊದಲು ನಾವು ಪೀಠಿಕೆಯಲ್ಲಿ ಹೇಳಿದ ಬೀಟಾ ವರ್ಸನ್‌ ಆಪ್‌ ಅನ್ನು ಗೂಗಲ್‌ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್‌ ಮಾಡಿಕೊಳ್ಳಬೇಕು. ನಂತರ ಫೀಚರ್ 6 ಸೆಕೆಂಡ್‌ ವೀಡಿಯೊ ರೆಕಾರ್ಡ್‌ ಮಾಡಲು ಅವಕಾಶ ನೀಡುತ್ತದೆ, ನಂತರ ಅದನ್ನು ಜಿಫ್‌ ಆಗಿ ಕನ್ವರ್ಟ್ ಮಾಡುತ್ತದೆ. ಅಥವಾ ನಿಮ್ಮ ಗ್ಯಾಲರಿಯಲ್ಲಿನ ವೀಡಿಯೊವನ್ನು ಸಹ ಜಿಫ್‌ ಇಮೇಜ್‌ ಆಗಿ ಕನ್ವರ್ಟ್ ಮಾಡಬಹುದು. ಜಿಫ್‌ ಕ್ರಿಯೇಟ್‌ ಮಾಡುವುದು ಹೇಗೆ? ಎಂದು ಮುಂದಿನ ಹಂತಗಳನ್ನು ಓದಿ ತಿಳಿಯಿರಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹಂತ 1:

ಹಂತ 1:

ಮೊದಲಿಗೆ ಚಾಟ್‌ ಸ್ಕ್ರೀನ್‌ನ ಟಾಪ್‌ನಲ್ಲಿ ಅಟಾಚ್‌ಮೆಂಟ್‌ ಐಕಾನ್ ಮೇಲೆ ಕ್ಲಿಕ್‌ ಮಾಡಿ. ನಂತರ ಕ್ಯಾಮೆರಾ ಮೇಲೆ ಕ್ಲಿಕ್‌ ಮಾಡಿ, ರೆಕಾರ್ಡ್‌ ವೀಡಿಯೊ ಆಯ್ಕೆ ಮಾಡಿ.

 ಹಂತ 2:

ಹಂತ 2:

6 ಸೆಕೆಂಡ್‌ ಅಥವಾ ಕಡಿಮೆ ಸೆಕೆಂಡ್‌ನ ವೀಡಿಯೊ ರೆಕಾರ್ಡ್‌ ಮಾಡಿ ನಂತರ ಆರೋ (Arrow) ಬಟನ್ ಮೇಲೆ ಟ್ಯಾಪ್ ಮಾಡಿ. ರೆಕಾರ್ಡ್‌ ವೀಡಿಯೊ ಸೆಂಡ್ ಮಾಡುವ ಮೊದಲು ಟ್ರಿಮ್ಮಿಂಗ್‌ ಪೇಜ್‌ ಪ್ರದರ್ಶನವಾಗುತ್ತದೆ.

ಹಂತ 3:

ಹಂತ 3:

ಸ್ಕ್ರೀನ್‌ನ ಟಾಪ್‌ನಲ್ಲಿ ಬಲಭಾಗವನ್ನು ಗಮನಿಸಿದರೆ, ಅಲ್ಲಿ ಕ್ಯಾಮ್‌ಕಾರ್ಡರ್‌ ಐಕಾನ್‌ ಕಾಣುತ್ತದೆ. ಅದರ ಮೇಲೆ ಟ್ಯಾಪ್‌ ಮಾಡಿದರೆ, ನಂತರ GIF ಐಕಾನ್‌ ಕಾಣುತ್ತದೆ. ನಂತರ ರೆಕಾರ್ಡ್ ಆದ ವೀಡಿಯೊ ಜಿಫ್‌ ಇಮೇಜ್‌ ಆಗಿ ಕನ್ವರ್ಟ್‌ ಆಗುತ್ತದೆ. ಒಮ್ಮೆ ಈ ಪ್ರಕ್ರಿಯೆ ಮುಗಿದರೆ ಜಿಫ್‌ ಇಮೇಜ್‌ ಸೆಂಡ್‌ ಆಗುತ್ತದೆ.

ಸೂಚನೆ: ಕ್ಯಾಮ್‌ಕಾರ್ಡರ್‌ ಐಕಾನ್ ವೀಡಿಯೊ 6 ಸೆಕೆಂಡ್‌ ಇದ್ದರೆ, ಅದಕ್ಕಿಂತ ಕಡಿಮೆ ಸೆಕೆಂಡ್‌ ವೀಡಿಯೊ ಇದ್ದರೆ ಮಾತ್ರ ಪ್ರದರ್ಶನವಾಗುತ್ತದೆ.

ಜಿಫ್‌ ಫೈಲ್‌

ಜಿಫ್‌ ಫೈಲ್‌

ಪ್ರಕಟಣೆ ಪ್ರಕಾರ ಕನ್ಟರ್ಟ್ ಆದ ಜಿಫ್‌ ಫೈಲ್‌ ಆಡಿಯೊ ಇಲ್ಲದ MP4 ಫೈಲ್‌ ಆಗಿ ಸೆಂಡ್‌ ಆಗುತ್ತದೆ. ಜಿಫ್ ಇಮೇಜ್‌ ಪಡೆದ ಸ್ವೀಕೃತದಾರರ ಚಾಟ್‌ನಲ್ಲಿ ಜಿಫ್‌ ಇಮೇಜ್‌ ಆಟೋ ಪ್ಲೇ ಆಗುತ್ತದೆ. ಅಲ್ಲದೇ ನೀವು ಶೇರ್‌ ಮಾಡಿದ MP4 ಫೈಲ್‌ WhatsApp > Media > WhatsApp Animated GIFs > Sent folder ನಲ್ಲಿ ಇರುತ್ತದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

Read more about:
English summary
Here is How you can create your own animated Gif in whatsapp. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X