ವಾಟ್ಸಾಪ್ ವೀಡಿಯೊ ಕರೆ ಫೀಚರ್‌'ಗಾಗಿ ಈ ಲಿಂಕ್‌'ಗಳನ್ನು ತಪ್ಪಿಯೂ ಓಪನ್‌ ಮಾಡಬೇಡಿ

By Suneel
|

ವಾಟ್ಸಾಪ್ ಇದೀಗತಾನೆ ಎಲ್ಲರ ಬಹು ನಿರೀಕ್ಷಿತ ಫೀಚರ್ 'ವೀಡಿಯೊ ಕರೆ' ಅನ್ನು ಅಧಿಕೃತವಾಗಿ ಲಾಂಚ್ ಮಾಡಿದೆ. ವಾಟ್ಸಾಪ್‌ನ ಈ ವೀಡಿಯೊ ಕರೆ ಫೀಚರ್ ಪ್ರಪಂಚದಾದ್ಯಂತದ ಒಂದು ಶತಕೋಟಿಗೂ ಹೆಚ್ಚು ಬಳಕೆದಾರರಿಗಾಗಿ ಲಾಂಚ್‌ ಆಗಿದೆ. ಇಷ್ಟು ಬಳಕೆದಾರರಲ್ಲಿ ಈಗಾಗಲೇ ಕೆಲವರು ವಾಟ್ಸಾಪ್ ಅಧಕೃತವಾಗಿ ವೀಡಿಯೊ ಕರೆ ಫೀಚರ್ ಅನ್ನು ಲಾಂಚ್‌ ಮಾಡುವ ಮೊದಲೇ ಬೀಟಾ ವರ್ಸನ್‌ನಿಂದ ಫೀಚರ್ ಅಪ್‌ಡೇಟ್ ಪಡೆದಿದ್ದರೂ. ಆದರೆ ಹೆಚ್ಚಿನ ಬಳಕೆದಾರರು ಮಾತ್ರ ಈತ ಫೀಚರ್ ಪಡೆಯುತ್ತಿದ್ದಾರೆ.

ಆದರೆ ಗಿಜ್‌ಬಾಟ್‌'ನಲ್ಲಿ ಮೊದಲೇ ಹೇಳಿದಂತೆ ವಾಟ್ಸಾಪ್‌ನ ವೀಡಿಯೊ ಫೀಚರ್‌ ಸೇವೆಯಿಂದ ಹಲವು ಹ್ಯಾಕರ್‌ಗಳು ಮತ್ತು ವಂಚಕರು ಜನರನ್ನು ಟ್ರ್ಯಾಪ್ ಮಾಡುವ ಸಾಧ್ಯತೆ ಹೆಚ್ಚಾಗಿದೆ.

ವಾಟ್ಸಾಪ್ ವೀಡಿಯೊ ಕರೆ ಫೀಚರ್‌'ಗಾಗಿ ಈ ಲಿಂಕ್‌'ಗಳನ್ನು ತಪ್ಪಿಯೂ ಓಪನ್‌ ಮಾಡಬೇಡಿ

ಗಿಜ್‌ಬಾಟ್ ವಾಟ್ಸಾಪ್‌ ಬಳಕೆದಾರರು ವಂಚನೆಗೆ ಒಳಗಾಗದಿರಲಿ ಎಂದೇ ಈ ಹಿಂದೆ, 'ವಾಟ್ಸಾಪ್‌ ಲಕ್ಕಿ ವೀಲ್' ಮೆಸೇಜ್‌ ಬಗ್ಗೆ ಮಾಹಿತಿ ನೀಡಿತ್ತು. ಅಂತೆಯೇ ಈಗ ವೀಡಿಯೊ ಕಾಲಿಂಗ್ ಆಹ್ವಾನದಿಂದ ವಾಟ್ಸಾಪ್‌ ಬಳಕೆದಾರರು ವಂಚನೆಗೆ ಒಳಗಾಗುವ ಸಾಧ್ಯತೆ ಇದೆ. ಸಾಮಾನ್ಯವಾಗಿ ಲಿಂಕ್ ಒಂದು ವಾಟ್ಸಾಪ್‌ನಲ್ಲಿ " 'ವಾಟ್ಸಾಪ್‌ ವೀಡಿಯೊ ಕಾಲಿಂಗ್'ಗಾಗಿ ಆಹ್ವಾನ ನೀಡುವ ರೀತಿಯಲ್ಲಿ ಹರಿದಾಡುತ್ತಿದೆ. ಆ ವಾಟ್ಸಾಪ್‌ ಲಿಂಕ್‌ ಹೇಗಿದೆ ಎಂದು ಮುಂದೇ ನೀವೆ ನೋಡಿ.

ವಾಟ್ಸಾಪ್ ವೀಡಿಯೊ ಕರೆ ಫೀಚರ್‌'ಗಾಗಿ ಈ ಲಿಂಕ್‌'ಗಳನ್ನು ತಪ್ಪಿಯೂ ಓಪನ್‌ ಮಾಡಬೇಡಿ

ವಾಟ್ಸಾಪ್‌ನಲ್ಲಿ ಹ್ಯಾಕರ್‌ ಮತ್ತು ವಂಚಕರ ಮೆಸೇಜ್‌ ಇಂಗ್ಲೀಷ್‌ನಲ್ಲಿ "You're invited to try WhatsApp video calling frature' ಇದ್ದು, ಈ ಲಿಂಕ್ ಮೂಲಕ ವೀಡಿಯೊ ಕರೆ ಫೀಚರ್ ಪಡೆಯಲು ಸಾಧ್ಯ ಎಂದು ಹೇಳಲಾಗಿರುತ್ತದೆ. ಬಹುಸಂಖ್ಯಾತರನ್ನು ಮೊದಲ ನೋಟದಲ್ಲೇ ಈ ಮೆಸೇಜ್ ಟ್ರ್ಯಾಪ್ ಮಾಡುತ್ತದೆ.

ಮೇಲೆ ತಿಳಿಸಿದ ಲಿಂಕ್‌ ಮೇಲೆ ಕ್ಲಿಕ್ ಮಾಡಿದರೆ ಈ ಲಿಂಕ್‌ ಸಂಪೂರ್ಣವಾಗಿ ಸ್ಪ್ಯಾಮ್‌ ವೆಬ್‌ಸೈಟ್‌ಗಳಿಗೆ ಕರೆದೊಯ್ಯುತ್ತದೆ. ನಿಮ್ಮ ವಿವರಗಳನ್ನು ಸಹ ತೆಗೆದುಕೊಳ್ಳಲಾಗುತ್ತದೆ. ಒಮ್ಮೆ ವೆರಿಫೈ ಮಾಡಿದ ನಂತರ ನಿಮ್ಮ ಸ್ನೇಹಿತರನ್ನು ಇದೇ ಲಿಂಕ್‌ನಿಂದ ಆಹ್ವಾನ ಮಾಡುವಂತೆ ಹೇಳುತ್ತದೆ.

ವಾಟ್ಸಾಪ್ ವೀಡಿಯೊ ಕರೆ ಫೀಚರ್‌'ಗಾಗಿ ಈ ಲಿಂಕ್‌'ಗಳನ್ನು ತಪ್ಪಿಯೂ ಓಪನ್‌ ಮಾಡಬೇಡಿ

ಎಚ್ಚರ ಎಚ್ಚರ...! ಈ ಮೇಲಿನ ಮೆಸೇಜ್‌ ಓದಿಯು ವಂಚಕರ ಟ್ರ್ಯಾಪ್‌ಗೆ ಓಳಗಾಗದಿರಿ. ಮಾಹಿತಿ ನೀಡಿ ಹ್ಯಾಕರ್‌ಗಳಿಗೆ ತುತ್ತಾಗದಿರಿ. ಕಡ್ಡಾಯವಾಗಿ ಗೂಗಲ್‌ ಪ್ಲೇ ಸ್ಟೋರ್‌ಗೆ ಹೋಗಿ ವೀಡಿಯೊ ಕರೆ ಫೀಚರ್ ಪಡೆಯಿರಿ. ಹೇಗೆ ಎಂದು ತಿಳಿಯಲು ಮುಂದೆ ಓದಿರಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾಟ್ಸಾಪ್ ವೀಡಿಯೊ ಕರೆ ಫೀಚರ್‌'ಗಾಗಿ ಈ ಲಿಂಕ್‌'ಗಳನ್ನು ತಪ್ಪಿಯೂ ಓಪನ್‌ ಮಾಡಬೇಡಿ

ವಾಟ್ಸಾಪ್ ವೀಡಿಯೊ ಕರೆ ಫೀಚರ್ ಯಾವ ಡಿವೈಸ್‌ಗಳಿಗೆ ಲಭ್ಯ?
ವಾಟ್ಸಾಪ್‌ ವೀಡಿಯೊ ಕರೆ ಫೀಚರ್ ಆಂಡ್ರಾಯ್ಡ್ 4.1 ಮತ್ತು ನಂತರದ ಅಪ್‌ಡೇಟೆಡ್ ಓಎಸ್‌, ಎಲ್ಲಾ ಐಓಎಸ್‌ಗಳು ಮತ್ತು ವಿಂಡೋಸ್ 10 ವೇದಿಕೆಗಳಿಗೆ ಲಭ್ಯ. ಈ ಎಲ್ಲಾ ಡಿವೈಸ್‌ಗಳ ಬಳಕೆದಾರರು ತಮ್ಮ ಡಿವೈಸ್‌ನಲ್ಲಿನ ವಾಟ್ಸಾಪ್ ಆಪ್‌ ಅನ್ನು ಅಪ್‌ಗ್ರೇಡ್ ಮಾಡಬೇಕು.

ವಾಟ್ಸಾಪ್ ವೀಡಿಯೊ ಕರೆ ಫೀಚರ್‌'ಗಾಗಿ ಈ ಲಿಂಕ್‌'ಗಳನ್ನು ತಪ್ಪಿಯೂ ಓಪನ್‌ ಮಾಡಬೇಡಿ

ವಾಟ್ಸಾಪ್ ವೀಡಿಯೊ ಕರೆ ಫೀಚರ್ ಎನೇಬಲ್ ಮಾಡುವುದು ಹೇಗೆ?
* ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಗೂಗಲ್‌ ಪ್ಲೇ ಸ್ಟೊರ್ ಓಪನ್ ಮಾಡಿ ವಾಟ್ಸಾಪ್‌ ಸರ್ಚ್‌ ಮಾಡಿ
* ಗೂಗಲ್‌ ಪ್ಲೇ ಆಪ್‌ ಲೀಸ್ಟ್‌ನಲ್ಲಿ ವಾಟ್ಸಾಪ್ ಆಪ್‌ ಓಪನ್ ಮಾಡಿ
* ನಂತರ ಓಪನ್ ಆದ ಪೇಜ್‌ನಲ್ಲಿ ಕೆಳಭಾಗದವರೆಗೂ ಸ್ಕ್ರಾಲ್‌ ಮಾಡಿ.
* ನಂತರ ಬೀಟಾ ಟೆಸ್ಟ್‌ಗಾಗಿ 'I'M IN ಟ್ಯಾಪ್ ಮಾಡಿ
* ನಂತರದ ಪೇಜ್‌ನಲ್ಲಿ ಖಚಿತ ಪಡಿಸಿ, ಕೆಲವು ನಿಮಷ ಕಾಯಿರಿ
* ಗೂಗಲ್‌ ಪ್ಲೇನಲ್ಲಿ ಹಿಂದಕ್ಕೆ ಬನ್ನಿ. ಬೀಟಾ ವರ್ಸನ್‌ಗೆ ಅಪ್‌ಡೇಟ್‌ ಮಾಡಲು ಆಪ್ಶನ್ ಕಾಣುತ್ತದೆ.
* ಆಪ್‌ ಅಪ್‌ಡೇಟ್ ಮಾಡಿ. ನಂತರ ಲೇಟೆಸ್ಟ್ ಬೀಟಾ ವರ್ಸನ್ ಆಪ್‌ ಅನ್ನು ನಿಮ್ಮ ಆಂಡ್ರಾಯ್ಡ್‌ನಲ್ಲಿ ಹೊಂದಿರುತ್ತೀರಿ. ಇದು ವಾಟ್ಸಾಪ್ ವೀಡಿಯೊ ಕರೆ ಫೀಚರ್ ಹೊಂದಿರುತ್ತದೆ.

ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾಟ್ಸಾಪ್ ವೀಡಿಯೊ ಕರೆ ಫೀಚರ್‌'ಗಾಗಿ ಈ ಲಿಂಕ್‌'ಗಳನ್ನು ತಪ್ಪಿಯೂ ಓಪನ್‌ ಮಾಡಬೇಡಿ

ವಾಟ್ಸಾಪ್‌ ವೀಡಿಯೊ ಕರೆ ಹೇಗೆ?
ಲೇಟೆಸ್ಟ್ ವಾಟ್ಸಾಪ್‌ ಬೀಟಾ ವರ್ಸನ್‌ ಪಡೆದಿದ್ದಲ್ಲಿ ವೀಡಿಯೊ ಕರೆ ಸುಲಭ.
* ವಾಟ್ಸಾಪ್ ಓಪನ್ ಮಾಡಿ * ನಂತರ ಕಾಂಟ್ಯಾಕ್ಟ್‌ಗೆ ಟ್ಯಾಬ್‌ಗೆ ಹೋಗಿ
* ನೀವು ವಾಟ್ಸಾಪ್‌ ವೀಡಿಯೊ ಕರೆ ಮಾಡಬೇಕಾದ ಕಾಂಟ್ಯಾಕ್ಟ್ ಆಯ್ಕೆ ಮಾಡಿ ಟ್ಯಾಪ್‌ ಮಾಡಿ.
* ಕಾಂಟ್ಯಾಕ್ಟ್ ಟ್ಯಾಪ್ ಮಾಡಿದ ನಂತರ ಸ್ಕ್ರೀನ್ ಟಾಪ್‌ನಲ್ಲಿ ಕಾಣುವ ಫೋನ್‌ ಐಕಾನ್ ಟ್ಯಾಪ್‌ ಮಾಡಿ.
* ನಂತರ ಪಾಪಪ್ ಆದ ಆಪ್ಶನ್‌ಗಳಲ್ಲಿ, ವೀಡಿಯೊ ಕರೆ ಮೇಲೆ ಕ್ಲಿಕ್ ಮಾಡಿ.

ವಾಟ್ಸಾಪ್ ವೀಡಿಯೊ ಕರೆ ಫೀಚರ್‌'ಗಾಗಿ ಈ ಲಿಂಕ್‌'ಗಳನ್ನು ತಪ್ಪಿಯೂ ಓಪನ್‌ ಮಾಡಬೇಡಿ

ವೀಡಿಯೊ ಕರೆ ಮಾಡುವವರಿಗೆ ಸೂಚನೆ
ವೀಡಿಯೊ ಕರೆ ಮಾಡಲು, ಕರೆ ಯಾರಿಗೆ ಮಾಡಬೇಕು ಎಂದುಕೊಂಡಿದ್ದೀರೋ ಅವರು ಸಹ ವಾಟ್ಸಾಪ್ ಲೇಟೆಸ್ಟ್ ಬೀಟಾ ವರ್ಸನ್‌ ಅನ್ನು ಅಪ್‌ಡೇಟ್‌ ಪಡೆದಿರಬೇಕು.

ವಾಟ್ಸಾಪ್ ವೀಡಿಯೊ ಕರೆ ಫೀಚರ್‌'ಗಾಗಿ ಈ ಲಿಂಕ್‌'ಗಳನ್ನು ತಪ್ಪಿಯೂ ಓಪನ್‌ ಮಾಡಬೇಡಿ

ಹೆಚ್ಚಿನ ಫೀಚರ್‌ಗಳು
ವಾಟ್ಸಾಪ್ ವೀಡಿಯೊ ಕರೆ ವೇಳೆ ಫೇಸ್ ಅನ್ನು ಫ್ರಂಟ್ ಮತ್ತು ಹಿಂಭಾಗ ಕ್ಯಾಮೆರಾಗೆ ಫಾರ್ವರ್ಡ್‌ ಮಾಡಬಹುದು, ಕರೆ ಮ್ಯೂಟ್ ಮಾಡಬಹುದು, ರೆಡ್‌ ಬಟನ್‌ ಟ್ಯಾಪ್‌ ಮಾಡಿ ಕರೆ ಹ್ಯಾಂಗ್ ಮಾಡಬಹುದು.

ವಾಟ್ಸಾಪ್ ವೀಡಿಯೊ ಕರೆ ಫೀಚರ್ ಲಾಂಚ್: ಒಂದೇ ಕ್ಲಿಕ್‌ನಿಂದ ಫೀಚರ್ ಪಡೆಯಿರಿ!

Best Mobiles in India

English summary
Don't open this link for WhatsApp video calling. To know more about this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X