ಕಂಪ್ಯೂಟರ್‌ನಲ್ಲಿ ಶಾಶ್ವತವಾಗಿ ಡಿಲೀಟ್ ಆದ ಡಾಟಾ ರಿಕವರಿ ಹೇಗೆ?
ಕಂಪ್ಯೂಟರ್ ಬಳಕೆದಾರರು ಆಕಸ್ಮಿಕವಾಗಿ ಮುಖ್ಯವಾದ ಫೈಲ್‌ಗಳು, ಫೋಟೋಗಳು ಅಥವಾ ವೀಡಿಯೋಗಳನ್ನು ಡಿಲೀಟ್ ಮಾಡುವುದು ಸಾಮಾನ್ಯವಾಗಿದೆ. ಆದರೆ ಡಿಲೀಟ್ ಆಗಿರುವುದಕ್ಕೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಯಾಕಂದ್ರೆ ರೀಸೈಕಲ್ ಬಿನ್ ಓಪನ್ ಮಾಡಿ ಡಿಲೀಟ್ ಆದ ಎಲ್ಲಾ ಫೈಲ್‌ಗಳನ್ನು ರಿಕವರಿ ಮಾಡಿಕೊಳ್ಳಬಹುದು.
ಆದರೆ ಕೆಲವೊಮ್ಮೆ ರೀಸೈಕಲ್ ಬಿನ್'ನಿಂದಲೂ ಮುಖ್ಯವಾದ ಫೈಲ್ ಮತ್ತು ಫೋಟೋಗಳನ್ನು ರೀಸ್ಟೋರ್ ಮಾಡಿಕೊಳ್ಳಲು ಮರೆತಲ್ಲಿ, ಕ್ಲೀನಪ್ ಮಾಡಿದಾಗ, ರೀಸೈಕಲ್ ಬಿನ್'ನಿಂದಲೂ ಖಾಯಂ ಆಗಿ ಡಿಲೀಟ್ ಆಗುತ್ತವೆ. ಖಾಯಂ ಆಗಿ ಡಿಲೀಟ್ ಆದ ಫೈಲ್, ಫೋಟೋ ಮತ್ತು ವೀಡಿಯೋಗಳನ್ನು ರಿಕವರಿ ಮಾಡುವುದು ಹೇಗೆ ಎಂದು ಯೋಚಿಸುತ್ತಿದ್ದಲ್ಲಿ ಇಂದಿನ ಲೇಖನದ ಮಾಹಿತಿಯನ್ನು ಎಚ್ಚರದಿಂದ ಓದಿ, ಸರಳವಾಗಿ ಡಿಲೀಟ್ ಆದ ಫೈಲ್‌ಗಳ ರಿಕವರಿ ಮಾಡಿಕೊಳ್ಳಿ.
ಆ್ಯಪಲ್ ಮ್ಯಾಕ್ ಬುಕ್ಕಿನಲ್ಲಿ ಹಿಡನ್ ಫೋಲ್ಡರ್ ತೆರೆಯುವುದು ಹೇಗೆ?

ಹಂತ 1
'Wondershare Data Discovery' ಅಪ್ಲಿಕೇಶನ್ ಅನ್ನು ವಿಂಡೋಸ್‌ಗೆ ಡೌನ್‌ಲೋಡ್ ಮಾಡಿ ಮತ್ತು ಇನ್ಸ್‌ಸ್ಟಾಲ್ ಮಾಡಿ. ಇದು ಉಚಿತ ಟ್ರಯಲ್ ಮತ್ತು ಪ್ರಾಥಮಿಕ ವರ್ಸನ್ ಆಗಿದೆ.
ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹಂತ 2
ಅಪ್ಲಿಕೇಶನ್ ಓಪನ್ ಮಾಡಿದಾಗ 5 ವಿವಿಧ 'Mode' ಆಪ್ಶನ್‌ಗಳನ್ನು ಪಡೆಯುತ್ತೀರಿ. ಅವುಗಳಲ್ಲಿ 'Wizard' ಎಂಬ 'Mode' ಆಪ್ಶನ್ ಅನ್ನು ಆಯ್ಕೆ ಮಾಡಿ.
ಈ ಮೋಡ್ ನಿಮ್ಮ ಫೈಲ್‌ಗಳನ್ನು ಸಂಪೂರ್ಣವಾಗಿ ಫೋಲ್ಡರ್ ವಿನ್ಯಾಸದಲ್ಲಿ, ಒರಿಜಿನಲ್ ಹೆಸರಿನಲ್ಲಿ ರಿಕವರಿ ಮಾಡುತ್ತದೆ.

ಹಂತ 3
ಈ ಹಂತದಲ್ಲಿ ನೀವು ಹಲವು ಕೆಟಗರಿಗಳನ್ನು, ಯಾವ ವಿಧದ ಫೈಲ್‌ಗಳನ್ನು ರಿಕವರಿ ಮಾಡಬೇಕು ಎಂದು ಪತ್ತೆಹಚ್ಚಿರಿ. ಚಿತ್ರದಲ್ಲಿ ಕಾಣುತ್ತಿರುವಂತೆ ಫೋಟೋ, ಆಡಿಯೋ, ವೀಡಿಯೊ, ಆಫೀಸ್ ಡಾಕ್ಯುಮೆಂಟ್ ಇತರೆ ಆಪ್ಶನ್‌ಗಳು ಕಾಣುತ್ತವೆ. ಅವುಗಳಲ್ಲಿ ನಿಮ್ಮ ಅಗತ್ಯಕ್ಕೆ ತಕ್ಕ ಆಪ್ಶನ್ ಅನ್ನು ಆಯ್ಕೆ ಮಾಡಿ.
ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹಂತ 4
ಮುಂದಿನ ಸ್ಕ್ರೀನ್‌ನಲ್ಲಿ, ಡಾಟಾವನ್ನು ಎಲ್ಲಿ ಡಿಲೀಟ್ ಮಾಡಿದ್ದೀರಿ ಎಂದು ಕೇಳಲ್ಪಡುತ್ತೀರಿ. ಅದನ್ನು ಆಯ್ಕೆ ಮಾಡಿ Next ಕ್ಲಿಕ್ ಮಾಡಿ.

ಹಂತ 5
ಡಿಲೀಟ್ ಆದ ಫೈಲ್‌ಗಳನ್ನು ರಿಕವರ್ ಮಾಡಲು 'Start Button' ಅನ್ನು ಕ್ಲಿಕ್ ಮಾಡಿ.
ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹಂತ 6
ಈ ಹಂತದಲ್ಲಿ 'Recover' ಕ್ಲಿಕ್ ಮಾಡಿ, ಡಾಟಾ ಯಾವ ಡ್ರೈವ್‌ಗೆ ಸೇವ್ ಆಗಬೇಕು ಎಂಬುದನ್ನು ಸೆಲೆಕ್ಟ್ ಮಾಡಿ.
ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ


Click it and Unblock the Notifications








