ಆಂಡ್ರಾಯ್ಡ್ ಬಳಕೆದಾರರು ಮಿಸ್ ಮಾಡಿಕೊಳ್ಳಲೇಬಾರದ ಟಿಪ್ಸ್‌

By Shwetha
|

ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳನ್ನು ಮಿಲಿಯಗಟ್ಟಲೆ ಜನರು ಬಳಸುತ್ತಿದ್ದು, ಆದರೆ ತಮ್ಮ ಸ್ಮಾರ್ಟ್‌ಫೋನ್ ಎಷ್ಟೊಂದು ಬಲಿಷ್ಟ ಮತ್ತು ಉಪಯೋಗಕಾರಿ ಎಂಬ ಮಾಹಿತಿ ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ. ನಿಮ್ಮ ಇದೇ ಫೋನ್ ಅನ್ನು ಬಳಸಿಕೊಂಡು ಕೆಲವೊಂದು ಸಲಹೆಗಳನ್ನು ಅನುಸರಿಸುವುದರ ಮೂಲಕ ಅತ್ಯುಪಯುಕ್ತವಾದುದನ್ನು ಸಾಧಿಸಬಹುದಾಗಿದೆ.

ಓದಿರಿ: ರಿಲಾಯನ್ಸ್ ಜಿಯೋ ಸಮಸ್ಯೆಗೆ ಇಲ್ಲಿದೆ ಪರಿಹಾರ

ಹೌದು ನಿಮ್ಮ ಫೋನ್‌ನಲ್ಲಿ ಅಡಗಿರುವ ಈ ಟ್ರಿಕ್ಸ್‌ಗಳನ್ನು ನೀವು ಅರಿತುಕೊಂಡಲ್ಲಿ ಪುಟ್ಟ ಡಿವೈಸ್ ಅನ್ನು ಬಳಸಿಕೊಂಡು ಸಾಕಷ್ಟನ್ನು ಮಾಡಬಹುದಾಗಿದೆ. ಬನ್ನಿ ಅದೇನು ಎಂಬುದನ್ನೇ ಇಂದಿನ ಲೇಖನದಲ್ಲಿ ನಾವು ತಿಳಿಸುತ್ತಿದ್ದು ಇದು ಅತ್ಯುತ್ತಮ ಸಲಹೆಗಳು ಎಂದೆನಿಸಿವೆ

ಸ್ಮಾರ್ಟ್ ಲಾಕ್

ಸ್ಮಾರ್ಟ್ ಲಾಕ್

ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಗ್ಗೆ ಕಳವಳವಿದೆಯೇ? ನಿಮ್ಮ ಡಿವೈಸ್‌ ಪಾಸ್‌ವರ್ಡ್ ಆಗಾಗ್ಗೆ ಮರೆತು ಹೋಗುತ್ತಿದ್ದೀರಾ? ಫೋನ್‌ನಲ್ಲಿರುವ ಸ್ಮಾರ್ಟ್ ಲಾಕ್ ಬಳಸಿಕೊಂಡು ಫೋನ್ ಅನ್ನು ಭದ್ರಪಡಿಸಿಕೊಳ್ಳಬಹುದಾಗಿದೆ. ಫೋನ್‌ನ ಸೆಟ್ಟಿಂಗ್‌ಗೆ ಹೋಗಿ ಮತ್ತು ಲಾಕ್ ಸ್ಕ್ರೀನ್ ಆಯ್ಕೆಗೆ ಹೋಗಿ. ಇಲ್ಲಿ ಸೆಕ್ಯೂರ್ ಲಾಕ್ ಸೆಟ್ಟಿಂಗ್ಸ್ ಆಯ್ಕೆಗಳು ನಿಮಗೆ ದೊರೆಯುತ್ತದೆ. ಇಲ್ಲಿ ಸ್ಮಾರ್ಟ್ ಲಾಕ್ ಅನ್ನು ಆರಿಸಿ. ಇಲ್ಲಿ ಬೇರೆ ಬೇರೆ ವಿಧದ ಸ್ಮಾರ್ಟ್ ಲಾಕ್ ವಿಧಾನಗಳು ನಿಮಗೆ ದೊರೆಯುತ್ತದೆ.

ಜಿಮೇಲ್ ಖಾತೆ

ಜಿಮೇಲ್ ಖಾತೆ

ಜಿಮೇಲ್ ಖಾತೆಯೊಂದಿಗೆ ಆಂಡ್ರಾಯ್ಡ್ ಡಿವೈಸ್ ಅನ್ನು ಹೊಂದಿಸುವುದು ಕಡ್ಡಾಯವಾಗಿದೆ. ಆದರೆ ಇದನ್ನು ಬಳಸಿಕೊಂಡು ಹಲವಾರು ಕಾರ್ಯಗಳನ್ನು ನಿಮಗೆ ಮಾಡಬಹುದಾಗಿದೆ. ಮ್ಯೂಸಿಕ್, ಪಿಕ್ಚರ್ಸ್, ವೀಡಿಯೊಗಳು, ಸಂಪರ್ಕಗಳು, ಕ್ಯಾಲೆಂಡರ್, ಇಮೇಲ್ಸ್ ಮೊದಲಾದವನ್ನು ಕಂಪ್ಯೂಟರ್‌ನಿಂದ ಸಿಂಕ್ ಮಾಡಬಹುದಾಗಿದೆ.

ವೈಫೈ ಹಾಟ್‌ಸ್ಪಾಟ್

ವೈಫೈ ಹಾಟ್‌ಸ್ಪಾಟ್

ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಅನ್ನು ವೈಫೈ ಹಾಟ್‌ಸ್ಪಾಟ್ ಆಗಿ ಪರಿವರ್ತಿಸಲು ಟೆದರಿಂಗ್ ಮಾಡಿ. ಇದರಿಂದ ಫೋನ್‌ನಲ್ಲಿರುವ ವೈಫೈ ಸಂಪರ್ಕವನ್ನು ಬೇರೆ ಡಿವೈಸ್‌ಗಳಿಗೆ ಬಳಸಿಕೊಳ್ಳಬಹುದಾಗಿದೆ.

ಬಾರ್ ಕೋಡ್

ಬಾರ್ ಕೋಡ್

ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಅನ್ನು ಬಾರ್ ಕೋಡ್ ಆಗಿ ಪರಿವರ್ತಿಸಲು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಹಲವಾರು ಅಪ್ಲಿಕೇಶನ್‌ಗಳು ಲಭ್ಯವಿದೆ. ಈ ಅಪ್ಲಿಕೇಶನ್‌ಗಳು ನಿಮ್ಮ ಕ್ಯುಆರ್ ಕೋಡ್ ಅನ್ನು ಸ್ಕ್ಯಾನ್ ಮಾಡುತ್ತವೆ ಮತ್ತು ಬಾರ್ ಕೋಡ್‌ಗಳನ್ನು ಕೂಡ.

ಅತಿದೊಡ್ಡ ನಷ್ಟ

ಅತಿದೊಡ್ಡ ನಷ್ಟ

ನಿಮ್ಮ ಫೋನ್ ಅನ್ನು ಕಳೆದುಕೊಳ್ಳುವುದು ಎಂದರೆ ಅದು ಅತಿದೊಡ್ಡ ನಷ್ಟವೇ ಹೌದು. ಇದರ ಜೊತೆಗೆ ನಿಮ್ಮ ಮುಖ್ಯ ಡೇಟಾ ಕೂಡ ನೀವು ಕಳೆದುಕೊಳ್ಳುತ್ತೀರಿ. ಆದರೆ ರಿಮೋಟ್ ಲೊಕೇಶನ್ ಅನ್ನು ಬಳಸಿಕೊಂಡು ನಿಮ್ಮ ಡೇಟಾವನ್ನು ಬೇರೆ ಯಾರಾದರೂ ಪ್ರವೇಶಿಸುವುದನ್ನು ನಿಮಗೆ ನಿರ್ಬಂಧಿಸಬಹುದು. ಸೆಟ್ಟಿಂಗ್ಸ್ > ಅಪ್ಲಿಕೇಶನ್ಸ್> ಗೂಗಲ್ ಸೆಟ್ಟಿಂಗ್ > ಸೆಕ್ಯುರಿಟಿ.ಇತ್

Best Mobiles in India

English summary
In this article we are giving you tips on hidden tips every android user should know.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X