Home
ಟೆಕ್ ನೌಕರಿ

Holi 2024: ಹೋಳಿ ಸಮಯದಲ್ಲಿ ಸ್ಮಾರ್ಟ್‌ಫೋನ್‌ಗೆ ನೀರು ಬಿದ್ದರೆ ತಕ್ಷಣ ಈ ಕೆಲಸ ಮಾಡಿ!

ಇಂದು ದೇಶದೆಲ್ಲೆಡೆ ಹೋಳಿ ಸಂಭ್ರಮ (Holi celebration). ಅದರಲ್ಲೂ ಕರ್ನಾಟಕದಲ್ಲಿ ಈ ಹಬ್ಬ ಇನ್ನೂ ಜೋರಾಗಿಯೇ ಇದ್ದು, ಸಾಕಷ್ಟು ಜನರು ರಂಗು ರಂಗಿನ ಬಣ್ಣದಲ್ಲಿ ಮಿಂದೇಳುತ್ತಿದ್ದಾರೆ. ಆದರೆ, ಒಂದು ಕಡೆ ಕಡೆ ನೀರಿನ ಸಮಸ್ಯೆ ಉಂಟಾಗಿದ್ದು, ಈ ಮೂಲಕ ಪರಿಸರ ಸ್ನೇಹಿ ಹಬ್ಬ ಆಚರಣೆ ಮಾಡಲಾಗುತ್ತಿದೆ. ಆದರೆ, ಹಲವು ಕಡೆ ಎಂದಿನಂತೆ ಹಬ್ಬದಲ್ಲಿ ಜನರು ಭಾಗಿಯಾಗುತ್ತಿದ್ದಾರೆ.

ಹೌದು, ಭಾರತೀಯರಿಗೆ ಹೋಳಿ ದೊಡ್ಡ ಹಬ್ಬ, ಆದರೆ ಸಾಕಷ್ಟು ಜನರು ಈ ಹೋಳಿ ಆಡುವ ಸಂದರ್ಭದಲ್ಲಿ ತಮ್ಮ ಬೆಲೆ ಬಾಳುವ ಸ್ಮಾರ್ಟ್‌ ಗ್ಯಾಜೆಟ್‌ಗಳಿಗೆ ಸಮಸ್ಯೆ ತಂದುಕೊಳ್ಳುತ್ತಾರೆ. ಅಂದರೆ ಡಿವೈಸ್‌ಗಳ ಒಳಗೆ ನೀರು ಅಥವಾ ಬಣ್ಣ ಹೋಗಿ ಆ ಡಿವೈಸ್‌ ಕೆಲಸ ಮಾಡದಂತೆ ಆಗುತ್ತದೆ. ಇಂತಹ ಸಾಕಷ್ಟು ನಿದರ್ಶನಗಳನ್ನು ಪ್ರತಿ ವರ್ಷ ಈ ಹಬ್ಬದಂದು ನೋಡುತ್ತೇವೆ. ಹಾಗಿದ್ರೆ, ನಿಮ್ಮ ಸ್ಮಾರ್ಟ್‌ಫೋನ್‌ ಅಥವಾ ಇತರೆ ಡಿವೈಸ್‌ಗಳು ನೀರಿಗೆ ಒದ್ದೆಯಾದರೆ ಅಥವಾ ಬಣ್ಣ ಡಿವೈಸ್‌ನ ಒಳ ಸೇರಿದಂತೆ ಏನು ಮಾಡಬೇಕು ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಹೋಳಿ ಸಮಯದಲ್ಲಿ ಸ್ಮಾರ್ಟ್‌ಫೋನ್‌ಗೆ ನೀರು ಬಿದ್ದರೆ ತಕ್ಷಣ ಈ ಕೆಲಸ ಮಾಡಿ!

ಹೋಳಿ ಆಚರಣೆ: ಹೋಳಿ ಸಂಭ್ರಮವನ್ನು ಕೇವಲ ಕಣ್ತುಂಬಿಕೊಳ್ಳುವುದು ಮಾತ್ರವಲ್ಲದೆ ಆ ಸುಂದರ ಕ್ಷಣಗಳನ್ನು ಮೊಬೈಲ್‌ ಮೂಲಕ ಸಾಕಷ್ಟು ಜನರು ಸೆರೆಹಿಡಿಯಲು ಮುಂದಾಗುತ್ತಾರೆ. ಅಂದರೆ ವಿಡಿಯೋವನ್ನು ರೆಕಾರ್ಡ್ ಮಾಡುವಾಗ ಅಥವಾ ಫೋಟೋಗಳನ್ನು ತೆಗೆದುಕೊಳ್ಳುವಾಗ ಫೋನ್‌ಗಳು ನೀರು ಅಥವಾ ಬಣ್ಣದಿಂದ ಸಮಸ್ಯೆಗೆ ಈಡಾಗುತ್ತವೆ. ನೀವು ಹೋಳಿ ಆಡುವ ಉತ್ಸಾಹದಲ್ಲಿದ್ದರೆ, ನೀವು ವಾಟರ್ ಬಲೂನ್‌ಗಳು ಮತ್ತು ವಾಟರ್ ಗನ್‌ಗಳನ್ನು ಬಳಕೆ ಮಾಡುತ್ತಿದ್ದರೆ ಸ್ಮಾರ್ಟ್‌ಫೋನ್‌ ಬಗ್ಗೆ ಎಚ್ಚರ ಇರಲಿ.

ಸ್ಮಾರ್ಟ್‌ಫೋನ್‌ ನೀರಿನಿಂದ ಒದ್ದೆಯಾದರೆ ಏನು ಮಾಡಬೇಕು?:
-ಹೋಳಿ ಹಬ್ಬದಲ್ಲಿ ನಿಮ್ಮ ಸ್ಮಾರ್ಟ್‌ಫೋನ್‌ ಒದ್ದೆಯಾದರೆ ತಕ್ಷಣವೇ ಅದನ್ನು ಆಫ್ ಮಾಡಿ. ಸಾಮಾನ್ಯವಾಗಿ ಇದು ಹಳೆಯ ಮಾದರಿಯಾರೂ ಸಹ ನಿಮ್ಮ ಫೋನ್‌ ಅನ್ನು ರಕ್ಷಿಸಿಕೊಳ್ಳುವ ಮೊದಲ ಕೆಲಸ ಇದಾಗಿರಲಿ.

ಹೋಳಿ ಸಮಯದಲ್ಲಿ ಸ್ಮಾರ್ಟ್‌ಫೋನ್‌ಗೆ ನೀರು ಬಿದ್ದರೆ ತಕ್ಷಣ ಈ ಕೆಲಸ ಮಾಡಿ!

- ಇದಾದ ನಂತರದಲ್ಲಿ ನೀರನ್ನು ಹೊರಹಾಕಲು ಫೋನ್ ಅನ್ನು ಅಲುಗಾಡಿಸಬೇಡಿ. ಯಾಕೆಂದರೆ ಈ ರೀತಿ ಮಾಡುವುದರಿಂದ ನೀರು ಫೋನ್‌ನಲ್ಲಿನ ವಿವಿಧ ಘಟಕಗಳಿಗೆ ಹೋಗಲಿದೆ. ಇದರಿಂದ ಇನ್ನಷ್ಟು ಹಾನಿ ಆಗಲಿದೆ. ಇದರ ಬದಲಾಗಿ ನೀವು ಪೇಪರ್ ಟವೆಲ್ ಬಳಕೆ ಮಾಡಿಕೊಂಡು ನಿಮ್ಮ ಸ್ಮಾರ್ಟ್‌ಫೋನ್‌ನ ಹೊರ ಮೇಲ್ಮೈಯನ್ನು ಒಣಗಿಸಿ.

- ಇದರ ಜೊತೆಗೆ ಈ ಪ್ರಕ್ರಿಯೆಯನ್ನು ವೇಗಗೊಳಿಸಲು, ತೇವಾಂಶವನ್ನು ಹೀರಿಕೊಳ್ಳುವಂತೆ ಮಾಡಲು ಫೋನ್ ಅನ್ನು ಕನಿಷ್ಠ ಆರು ಗಂಟೆಗಳ ಕಾಲ ಅಕ್ಕಿಯ ಚೀಲದಲ್ಲಿ ಇರಿಸಿ.ಇದರ ಜೊತೆಗೆ ಫೋನ್ ಒದ್ದೆಯಾಗಿರುವಾಗ ಅದನ್ನು ಚಾರ್ಜ್ ಮಾಡುವ ಕೆಲಸ ಮಾಡಬೇಡಿ. ಹಾಗೆಯೆ ಫೋನ್‌ನಿಂದ ಸಿಮ್ ಕಾರ್ಡ್ ಮತ್ತು ಟ್ರೇ ಅನ್ನು ತೆಗೆದುಹಾಕಿ.

- ಅದರಲ್ಲೂ ಪ್ರಮುಖವಾಗಿ ಸಾಕಷ್ಟು ಜನರು ಹೇರ್ ಡ್ರೈಯರ್ ಅನ್ನು ಬಳಕೆ ಮಾಡಲು ಮುಂದಾಗಿತ್ತಾರೆ. ಆದರೆ ಯಾವುದೇ ಕಾರಣಲ್ಲೂ ಈ ಕೆಲಸ ಮಾಡಬೇಡಿ. ಏಕೆಂದರೆ ಇದು ಅತಿಯಾದ ಶಾಖವನ್ನು ಉಂಟು ಮಾಡುವುದರಿಂದ ಫೋನ್‌ನಲ್ಲಿ ಇರುವ ಕೆಲವು ಭಾಗಗಳನ್ನು ಹಾನಿಗೊಳಿಸುತ್ತದೆ. ಬದಲಾಗಿ ನೀವು ಸೂರ್ಯನ ಬೆಳಕಿನಲ್ಲಿ ಫೋನ್‌ ಅನ್ನು ಕೆಲಕಾಲ ಇಡಿ.

ಹೋಳಿ ಸಮಯದಲ್ಲಿ ಸ್ಮಾರ್ಟ್‌ಫೋನ್‌ಗೆ ನೀರು ಬಿದ್ದರೆ ತಕ್ಷಣ ಈ ಕೆಲಸ ಮಾಡಿ!

ನಿಮ್ಮ ಸ್ಮಾರ್ಟ್‌ಫೋನ್ ಹೋಳಿ ಸಂಭ್ರಮದಲ್ಲಿ ಹೇಗೆ ರಕ್ಷಿಸಿಕೊಳ್ಳಬಹುದು:
ಜಿಪ್‌ಲಾಕ್ ಬ್ಯಾಗ್‌ ಬಳಕೆ ಮಾಡಿ: ಹೋಳಿ ಆಡುವಾಗ ನಿಮ್ಮ ಫೋನ್, ಸ್ಮಾರ್ಟ್‌ವಾಚ್, ಸ್ಮಾರ್ಟ್ ಬ್ಯಾಂಡ್ ಅಥವಾ ನೀವು ಹೊಂದಿರುವ ಯಾವುದೇ ಇತರ ಗ್ಯಾಜೆಟ್ ಅನ್ನು ರಕ್ಷಿಸಲು ಗಾಳಿಯಾಡದ ಟ್ರಾನ್ಫರೆಂಟ್ ಜಿಪ್‌ಲಾಕ್ ಬ್ಯಾಗ್ ಅನ್ನು ಬಳಕೆ ಮಾಡಬಹುದು.

ಪ್ಯಾಟರ್ನ್ ಲಾಕ್ ಬಳಕೆ ಮಾಡಿ: ಇದರ ಜೊತೆಗೆ ಸ್ಮಾರ್ಟ್‌ಫೋನ್‌ಗೆ ಫಿಂಗರ್‌ಪ್ರಿಂಟ್ ಗುರುತಿಸುವಿಕೆ ಬದಲು ಪ್ಯಾಟರ್ನ್ ಅಥವಾ ಪಿನ್ ಬಳಕೆ ಮಾಡಿ. ಇದು ಟ್ರಾನ್ಫರೆಂಟ್‌ ಜಿಪ್‌ಲಾಕ್ ಬ್ಯಾಗ್‌ನಲ್ಲಿ ಫೋನ್‌ ಅನ್ನು ಸುಲಭವಾಗಿ ಬಳಕೆ ಮಾಡಲು ಅನುಕೂಲ ಮಾಡಿಕೊಡುತ್ತದೆ.

ಮಾಯಿಶ್ಚರೈಸರ್: ಹೋಳಿ ವೇಳೆಯೂ ನೀವು ಇಯರ್‌ ಫೋನ್‌ಗಳನ್ನು ಬಳಕೆ ಮಾಡುವವರಾಗಿದ್ದರೆ ಇಯರ್‌ಫೋನ್‌ಗಳನ್ನು ಸಂಭಾವ್ಯ ಬಣ್ಣದ ಕಲೆಗಳು ಅಥವಾ ಹಾನಿಯಿಂದ ರಕ್ಷಿಸಲು ಗ್ಲಿಸರಿನ್ ಅಥವಾ ಮಾಯಿಶ್ಚರೈಸರ್ ಅನ್ನು ಅನ್ವಯಿಸಿ.

Best Mobiles in India

English summary
Holi festival has already started. In the meantime, here is the information on how to protect your smartphone if something gets wet.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+