ಮೊಬೈಲ್ ರೇಡಿಯೇಷನ್‌ನಿಂದ ಪಾರಾಗುವುದು ಹೇಗೆ ?
ಮೊಬೈಲ್ ಫೋನ್ ಬಳಕೆ ಧೂಮಪಾನಕ್ಕಿಂತ ಅಪಾಯಕಾರಿ ಎಂಬುದು ದೃಢಪಡತೊಡಗಿದೆ. ಮೊಬೈಲ್ ಫೋನ್ ಬಳಕೆಯನ್ನು ತಪ್ಪಿಸಲು ಹೇಗೆಲ್ಲ ಸಾಧ್ಯವೋ ಅದಕ್ಕೆ ಪ್ರಾಶಸ್ತ್ಯ ನೀಡಿ. ಸರಕಾರಗಳು ಮತ್ತು ಮೊಬೈಲ್ ಕಂಪನಿಗಳು ಈ ನಿಟ್ಟಿನಲ್ಲಿ ತಕ್ಷಣದಿಂದಲೇ ಕ್ರಮಗಳನ್ನು ಕೈಗೊಳ್ಳುವುದು ಉಚಿತ ಎಂದು ಕ್ಯಾನ್ಸರ್ ಅಧ್ಯಯನ ತಜ್ಞರು ಎಚ್ಚರಿಸಿದ್ದಾರೆ.
ಹದಿಹರೆಯದಲ್ಲೇ ಮೊಬೈಲ್ ಬಳಕೆ ಮಾಡಲಾರಂಭಿಸಿದ ಮತ್ತು ಮುಂದೆ ದಶಕಗಳ ಕಾಲ ಇದನ್ನು ಮುಂದುವರಿಸಿದ ವ್ಯಕ್ತಿಗಳು ಸಾಮಾನ್ಯ ರೀತಿಯ ಮೆದುಳು ಕ್ಯಾನ್ಸರ್ ಗೆ ತುತ್ತಾಗುವ ಅಪಾಯವು ಐದು ಪಟ್ಟು ಹೆಚ್ಚಾಗಿರುತ್ತದೆ ಎಂದು ಸ್ವೀಡನ್‌ನ ವಿಜ್ಞಾನಿಗಳು ಹೇಳಿದ್ದಾರೆ.
ಮೊಬೈಲ್‌ಗಳಿಂದ ಹೊರಹೊಮ್ಮುವ ರೇಡಿಯೇಷನ್ ಪ್ರಮಾಣ ಅಧಿಕವಾಗಿದ್ದರೆ ಆರೋಗ್ಯಕ್ಕೆ ಹೆಚ್ಚಿನ ಹಾನಿಯನ್ನುಂಟುಮಾಡುತ್ತಿದೆ. ಅಲ್ಲದೆ ಮೊಬೈಲ್ ಫೋನ್‌ಗಳ ದೀರ್ಘ ಬಳಕೆಯಿಂದ ಶೇ.20ರಷ್ಟು ಕಿವುಡುತನ ಹಾಗೂ ಶೇ. 30ರಷ್ಟು ಮೆದುಳಿನ ಕ್ಯಾನ್ಸರ್ ಬರುವ ಸಾಧ್ಯತೆ ಕೂಡಾ ಇದೆ. ಈ ಹಿಂದೆ ವಿಶ್ವಸಂಸ್ಥೆಯು ಕೂಡಾ ಮೊಬೈಲ್ ಫೋನ್‌ಗಳ ಅತಿಯಾದ ಬಳಕೆಯಿಂದ ಮುಂದೊಂದು ದಿನ ಕ್ಯಾನ್ಸರ್ ರೋಗಕ್ಕೆ ಎಡೆಮಾಡಿಕೊಡಲಿದೆ ಎಂಬ ಎಚ್ಚರಿಕೆಯನ್ನು ನೀಡಿತ್ತು.
ಮೊಬೈಲ್ ಟವರ್ ಜಾಸ್ತಿಯಾದಂತೆ ರೇಡಿಯೇಷನ್ ಪ್ರಮಾಣ ಜಾಸ್ತಿಯಾಗುತ್ತೆ ಅನ್ನೋ ತಪ್ಪು ಅಭಿಪ್ರಾಯ ಹಲವರಲ್ಲಿದೆ.ಎಲ್ಲಿ ಮೊಬೈಲ್ ಬಳಕೆದಾರರೂ ಜಾಸ್ತಿ ಇದ್ದಾರೋ ಅಲ್ಲಿ ಸಿಗ್ನಲ್ ಸ್ಟ್ರೆಂತ್ ಜಾಸ್ತಿ ಮಾಡಲೇ ಬೇಕಾದ ಅನಿವಾರ್ಯತೆ ಮೊಬೈಲ್ ಆಪರೇಟ್ ಕಂಪೆನಿಗಳದ್ದು.ಹೀಗಾಗಿ ಆಪರೇಟರ್‌ಗಳನ್ನು ನಾವು ದೂರುವಂತಿಲ್ಲ.ಬದಲಾಗಿ ನಾವೇ ಸ್ವ ನಿಯಂತ್ರಣ ಮಾಡಿಕೊಂಡರೇ ಭವಿಷ್ಯದಲ್ಲಿಕಾಡಲಿರುವ ತೊಂದರೆಯಿಂದ ಪಾರಾಗಬಹುದು. ಯಾವ ರೀತಿ ಸ್ವ ನಿಯಂತ್ರಣ ಹಾಕಿಕೊಳ್ಳಬೇಕು ಎಂಬುದನ್ನು ಮುಂದಿನ ಪುಟಗಳಲ್ಲಿ ವಿವರಿಸಲಾಗಿದೆ.ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.
ಇದನ್ನೂ ಓದಿ : ಫೋನ್ ಟ್ಯಾಪಿಂಗ್ ಯಾಕೆ ? ಹೇಗೆ ? ಯಾರು ಮಾಡಬಹುದು?
Click Here For New Smartphones Gallery

ಮೊಬೈಲ್ ಬಳಕೆಗೆ ಸ್ವ ನಿಯಂತ್ರಣ
ಅದಷ್ಟು ಸಾಧ್ಯವಿರುವ ಕಡೆಯಲ್ಲೆಲ್ಲ ದೇಹದಿಂದ ಮೊಬೈಲು ದೂರವಿರುವಂತೆ ನೋಡಿಕೊಳ್ಳಿ.

ಮೊಬೈಲ್ ಬಳಕೆಗೆ ಸ್ವ ನಿಯಂತ್ರಣ
ಕಾರು ಮುಂತಾದವುಗಳಲ್ಲಿ ಪ್ರಯಾಣಿಸುತ್ತಿರಬೇಕಾದರೆ ಕಿಟಕಿ ಗಾಜುಗಳನ್ನು ತೆರೆದು ಮಾತನಾಡುವುದು ಉತ್ತಮ.

ಮೊಬೈಲ್ ಬಳಕೆಗೆ ಸ್ವ ನಿಯಂತ್ರಣ
ಲಿಫ್ಟ್,ವಿಮಾನ,ರೈಲಿನಲ್ಲಿ ಪ್ರಯಾಣಿಸುವಾಗ ಹೆಚ್ಚು ಮೊಬೈಲ್‌ನಲ್ಲಿ ಮಾತನಾಡದಿರಿ.

ಮೊಬೈಲ್ ಬಳಕೆಗೆ ಸ್ವ ನಿಯಂತ್ರಣ
14 ವರ್ಷದ ಕೆಳಗಿನವರು ಮೊಬೈಲನ್ನು ಹೆಚ್ಚು ಉಪಯೊಗಿಸದಂತೆ ನೋಡಿಕೊಳ್ಳಿ

ಮೊಬೈಲ್ ಬಳಕೆಗೆ ಸ್ವ ನಿಯಂತ್ರಣ
ಮೊಬೈಲ್‌ನಲ್ಲಿ ಮಾತನಾಡುವಾಗ ಅದಷ್ಟು ಉತ್ತಮ ಗುಣಮಟ್ಟದ ಇಯರ್‌ಫೋನ್ ಬಳಸಿ ಮಾತನಾಡಿ

ಮೊಬೈಲ್ ಬಳಕೆಗೆ ಸ್ವ ನಿಯಂತ್ರಣ
ಗರ್ಭಿಣಿ ಮಹಿಳೆಯರು ಮೊಬೈಲ್‌ನ್ನು ಹೆಚ್ಚು ಬಳಸದಿರಿ.

ಮೊಬೈಲ್ ಬಳಕೆಗೆ ಸ್ವ ನಿಯಂತ್ರಣ
ಮೊಬೈಲ್‌ನಲ್ಲಿ ಎಡಗಡೆಯಲ್ಲಿರುವ ಶರ್ಟ್ ಕಿಸೆಯಲ್ಲಿ ಇಡಬೇಡಿ.ಹೃದಯ ಎಡಗಡೆಯಲ್ಲಿರುವುದರಿಂದ ತೊಂದರೆಯಾಗುವ ಸಾಧ್ಯತೆ ಇರುತ್ತದೆ.

ಮೊಬೈಲ್ ಬಳಕೆಗೆ ಸ್ವ ನಿಯಂತ್ರಣ
ಮನೆಯಲ್ಲಿದ್ದರೆ ಹೆಚ್ಚಾಗಿ ಲ್ಯಾಂಡ್‌ಲೈನ್ ಫೋನ್ ಬಳಸಿ. ಅಗತ್ಯವಿದ್ದಾಗ ಮಾತ್ರ ಕಾರ್ಡ್‌ಲೆಸ್ ಫೋನ್ ಬಳಸಿ

ಮೊಬೈಲ್ ಬಳಕೆಗೆ ಸ್ವ ನಿಯಂತ್ರಣ
ಮಲಗಿರುವಾಗ ಮೊಬೈಲ್‌ನ್ನು ತಲೆಯ ಹತ್ತಿರ ಇರಿಸಿ ಮಲಗಬೇಡಿ.

ಮೊಬೈಲ್ ಬಳಕೆಗೆ ಸ್ವ ನಿಯಂತ್ರಣ
ಅಗತ್ಯ ಬಂದಾಗ ಮಾತ್ರ ಮೊಬೈಲ್ ಬಳಸಿ.ಸ್ನೇಹಿತರೊಂದಿಗೆ ಹೆಚ್ಚಾಗಿ ಮಸೇಜ್‌ನಲ್ಲೇ ಸಂವಹನ ಮಾಡಿ.

ಮೊಬೈಲ್ ಬಳಕೆಗೆ ಸ್ವ ನಿಯಂತ್ರಣ
ಎಲೆಕ್ಟ್ರಾನಿಕ್ಸ್ ಗ್ಯಾಡ್ಜೆಟ್‌ಗಳನ್ನು ಖರೀದಿಸುವಾಗ ವೈರ್ ಕನೆಕ್ಷನ್ ಇರುವಂತಹ ಗ್ಯಾಡ್ಜೆಟ್‌ಗಳನ್ನು ಖರೀದಿಸಿ.ಬ್ಲೂಟೂತ್ ಅಗತ್ಯವಿದ್ದಾಗ ಮಾತ್ರ ಬಳಸಿ.

ಮೊಬೈಲ್ ಬಳಕೆಗೆ ಸ್ವ ನಿಯಂತ್ರಣ
ವೈರ್‌ಲೆಸ್ ರೂಟರ್‌ನ್ನು ಮನೆಗೆ ಹಾಕಿದ್ದರೆ ಅತೀ ಕಡಿಮೆ ಬಳಕೆ ಮಾಡುವ ರೂಮ್‌ನಲ್ಲಿ ರೂಟರ್‌ನ್ನು ಹಾಕಿ.ಯಾವುದೇ ಕಾರಣಕ್ಕೂ ಮಲಗುವ ಕೋಣೆಗೆ ರೂಟರ್‌ನ್ನು ಹಾಕದಿರಿ.
Click Here For New Gadgets Gallery


Click it and Unblock the Notifications








