ಫೋನ್‌ ಟ್ಯಾಪಿಂಗ್‌ ಯಾಕೆ ? ಹೇಗೆ ? ಯಾರು ಮಾಡಬಹುದು?

By Ashwath
|

ಫೋನ್‌ ಟ್ಯಾಪಿಂಗ್‌..ಈ ಎರಡು ಪದಗಳ ಬಗ್ಗೆ ನೀವು ತಿಳಿಯಲೇಬೇಕು. ದೇಶದಲ್ಲಿ ಕ್ರಿಮಿನಲ್‌ ಕೃತ್ಯ ಎಸಗಲಿರುವರನ್ನು,ಎಸಗಿದವರನ್ನು ಎಲ್ಲೇ ಅಡಗಿದ್ದರೂ ಪತ್ತೆ ಹಚ್ಚಿ ಅವರನ್ನು ಸಮಾಜದ ಮುಂದೆ ತೋರಿಸುವುದು ಈ ಪೋನ್ ಟ್ಯಾಪಿಂಗ್‌ ಮೂಲಕ. ಸರ್ಕಾರದ ಕೆಲವು ಇಲಾಖೆಗಳಿಗೆ ಮಾತ್ರ ಫೋನ್‌ ಟ್ಯಾಪಿಂಗ್‌ಗೆ ಅವಕಾಶವಿದ್ದರೂ ಈಗ ಕೆಲವು ಸಮಾಜಘಾತುಕ ಶಕ್ತಿಗಳು ಈಗ ಫೋನ್‌ ಟ್ಯಾಪಿಂಗ್‌ ಮಾಡಲು ಆರಂಭಿಸಿವೆ.

ರಾಜಕಾರಣಿಗಳು,ಗಣ್ಯ ವ್ಯಕ್ತಿಗಳ ಫೋನ್‌ ಟ್ಯಾಪಿಂಗ್‌ ಹೆಚ್ಚಾಗುತ್ತಿವೆ ಎನ್ನುವ ಅಂಶ ಈಗ ಮಾಧ್ಯಮಗಳಿಂದ ಬಯಲಾಗುತ್ತಿವೆ. ಹೀಗಾಗಿ ಇಲ್ಲಿ ಫೋನ್‌ ಟ್ಯಾಪಿಂಗ್‌ ಯಾಕೆ ? ಹೇಗೆ ? ಕಾನೂನು ಏನು ಹೇಳುತ್ತದೆ ಎಂಬುದರ ಬಗ್ಗೆ ಮಾಹಿತಿಯಿದೆ. ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.

ಇದನ್ನೂ ಓದಿ : ಆನ್‌ಲೈನ್‌ಲ್ಲಿ ಗುಣಮಟ್ಟದ ಮೊಬೈಲ್‌ ಖರೀದಿ ಹೇಗೆ ?

ಫೋನ್‌ ಟ್ಯಾಪಿಂಗ್‌ ಯಾಕೆ ? ಹೇಗೆ ? ಯಾರು ಮಾಡಬಹುದು?

ಫೋನ್‌ ಟ್ಯಾಪಿಂಗ್‌ ಯಾಕೆ ? ಹೇಗೆ ? ಯಾರು ಮಾಡಬಹುದು?

ವಿಶೇಷ ಎಲೆಕ್ಟ್ರಾನಿಕ್‌ ಸಾಧನಗಳ ನೆರವಿನಿಂದ ಇಬ್ಬರು ಮಾತನಾಡುತ್ತಿರುವುದನ್ನು ಮೂರನೇಯವರು ಕದ್ದಾಲಿಸುವುದು ಫೋನ್‌ ಕದ್ದಾಲಿಕೆ. ಫೋನ್‌ ಕದ್ದಾಲಿಕೆಗೆ ಕಾನೂನಿನಡಿ ಅವಕಾಶವೂ ಇದೆ. ಆದರೆ ಇದಕ್ಕೆ ನಿರ್ದಿಷ್ಟ ರೀತಿ ನೀತಿಗಳಿವೆ. ಅದು ಹೊರತಾಗಿ ಕದ್ದಾಲಿಸಿದರೆ ಅದು ಅಕ್ರಮ.

ಫೋನ್‌ ಟ್ಯಾಪಿಂಗ್‌ ಯಾಕೆ ? ಹೇಗೆ ? ಯಾರು ಮಾಡಬಹುದು?

ಫೋನ್‌ ಟ್ಯಾಪಿಂಗ್‌ ಯಾಕೆ ? ಹೇಗೆ ? ಯಾರು ಮಾಡಬಹುದು?

ಫೋನ್‌ ಟ್ಯಾಪ್‌ ಮಾಡಲೆಂದೇ ಹೊಸ ಸಾಧನಗಳು ತಯಾರಾಗಿವೆ.ಸಿಂಗಾಪುರದಿಂದ ಈ ಸಾಧನಗಳು ಅಕ್ರಮವಾಗಿ ದೇಶದೊಳಗೆ ನುಸುಳಿವೆ. 1.5 ಕೋಟಿ ರೂಪಾಯಿಯ ಈ ಸಾಧನಗಳನ್ನು ಪತ್ತೆ ಮಾಡುವಂತಹ ಖಾಸಗಿ ಸಂಸ್ಥೆಗಳು ಬಳಸುತ್ತಿವೆ.

ಫೋನ್‌ ಟ್ಯಾಪಿಂಗ್‌ ಯಾಕೆ ? ಹೇಗೆ ? ಯಾರು ಮಾಡಬಹುದು?

ಫೋನ್‌ ಟ್ಯಾಪಿಂಗ್‌ ಯಾಕೆ ? ಹೇಗೆ ? ಯಾರು ಮಾಡಬಹುದು?

ತಜ್ಷರ ಪ್ರಕಾರ ಈ ಸಾಧನಗಳು ಸುಮಾರು ಎರಡು ಕಿ.ಮೀ.ವರೆಗೆನ ವ್ಯಕ್ತಿಗಳ ಫೋನ್‌ ಕರೆಗಳನ್ನು ಕದ್ದಾಲಿಕೆ ಮಾಡುವ ಸಾಮರ್ಥ್ಯ ಈ ಸಾಧನಗಳಿವೆ.

ಫೋನ್‌ ಟ್ಯಾಪಿಂಗ್‌ ಯಾಕೆ ? ಹೇಗೆ ? ಯಾರು ಮಾಡಬಹುದು?

ಫೋನ್‌ ಟ್ಯಾಪಿಂಗ್‌ ಯಾಕೆ ? ಹೇಗೆ ? ಯಾರು ಮಾಡಬಹುದು?

ಸಮಾಜ ಘಾತುಕ ಶಕ್ತಿಗಳ ಚಲನವಲನ, ಕ್ರಿಮಿನಲ್‌ ಸಂಚು, ದೇಶದ, ಗಣ್ಯರ ವಿರುದ್ಧ ದಾಳಿಯಂತಹ ಚಟುವಟಿಕೆಗಳನ್ನು ತಡೆಯಲು ಗುಪ್ತಚರ ಸಂಸ್ಥೆಗಳು ಫೋನ್‌ ಕದ್ದಾಲಿಕೆ ಮಾಡುತ್ತವೆ.

ಫೋನ್‌ ಟ್ಯಾಪಿಂಗ್‌ ಯಾಕೆ ? ಹೇಗೆ ? ಯಾರು ಮಾಡಬಹುದು?

ಫೋನ್‌ ಟ್ಯಾಪಿಂಗ್‌ ಯಾಕೆ ? ಹೇಗೆ ? ಯಾರು ಮಾಡಬಹುದು?

ಸಿಬಿಐ,ಗುಪ್ತಚರ ಇಲಾಖೆ ಕಂದಾಯ ಗುಪ್ತಚರ, ಮಾದಕವಸ್ತು ನಿಯಂತ್ರಣ ದಳ, ಆದಾಯ ತೆರಿಗೆ ಇಲಾಖೆ ಮತ್ತು ಪೋಲಿಸ್‌ ಇಲಾಖೆ ಕದ್ದಾಲಿಕೆಯನ್ನು ಮಾಡಬಹುದು.

ಫೋನ್‌ ಟ್ಯಾಪಿಂಗ್‌ ಯಾಕೆ ? ಹೇಗೆ ? ಯಾರು ಮಾಡಬಹುದು?

ಫೋನ್‌ ಟ್ಯಾಪಿಂಗ್‌ ಯಾಕೆ ? ಹೇಗೆ ? ಯಾರು ಮಾಡಬಹುದು?

ಉಪಗ್ರಹ ಆಧಾರಿತ, ವ್ಯವಸ್ಥೆಗಳು, ಟೆಲಿಫೋನ್‌ ಎಕ್ಸ್‌ಚೇಂಜ್‌ನ ನೆರವಿನೊಂದಿಗೆ ಪ್ರತ್ಯೇಕ ಎಲೆಕ್ಟ್ರಾನಿಕ್‌ ವ್ಯವಸ್ಥೆಗಳ ಮೂಲಕ ಫೋನ್‌ ಕದ್ದಾಲಿಕೆಯನ್ನು ಮಾಡಲಾಗುತ್ತದೆ.

ಫೋನ್‌ ಟ್ಯಾಪಿಂಗ್‌ ಯಾಕೆ ? ಹೇಗೆ ? ಯಾರು ಮಾಡಬಹುದು?

ಫೋನ್‌ ಟ್ಯಾಪಿಂಗ್‌ ಯಾಕೆ ? ಹೇಗೆ ? ಯಾರು ಮಾಡಬಹುದು?

ಇಂಡಿಯನ್‌ ಟೆಲಿಗ್ರಾಫ್ ಕಾಯ್ದೆ 1885ರ ಸೆಕ್ಷನ್‌ 5 (2)ರಲ್ಲಿ 419ನೇ ಮತ್ತು 419ಎ ನಿಬಂಧನೆಗಳಲ್ಲಿ ಫೋನ್‌ ಕರೆಗಳ ಮಾಹಿತಿ ಪಡೆಯುವ, ಕೇಳುವ ಬಗ್ಗೆ ಹೇಳಲಾಗಿದೆ. ರಾಷ್ಟ್ರದ ಹಿತಾಸಕ್ತಿಗೆ ವಿರುದ್ಧವಾಗಿ, ಭದ್ರತೆಗೆ ತೊಂದರೆಯಾಗುವ ವಿಚಾರಗಳಲ್ಲಿ ಫೋನ್‌ ಕದ್ದಾಲಿಕೆಗೆ ಅವಕಾಶವಿದ್ದು ಕ್ಯಾಬಿನೆಟ್‌ ಕಾರ್ಯದರ್ಶಿ, ಕಾನೂನು ಕಾರ್ಯದರ್ಶಿ ಈ ಬಗ್ಗೆ ನಿರ್ಧಾರ ಕೈಗೊಂಡು, ಗೃಹ ಇಲಾಖೆಗೆ ಮಾಹಿತಿ ನೀಡಬೇಕು.

ಫೋನ್‌ ಟ್ಯಾಪಿಂಗ್‌ ಬಗ್ಗೆ ತಿಳಿದಿರಿ

ಫೋನ್‌ ಟ್ಯಾಪಿಂಗ್‌ ಬಗ್ಗೆ ತಿಳಿದಿರಿ

ಈ ಬಗ್ಗೆ ಗೃಹ ಇಲಾಖೆ 2 ತಿಂಗಳೊಳಗೆ ಪರಿಶೀಲನೆ ನಡೆಸಿ ತೀರ್ಮಾನಿಸಬೇಕು. ಒಂದು ಬಾರಿ ಅನುಮತಿ ನೀಡಿದರೆ ಅದು 6 ತಿಂಗಳ ಅವಧಿಯದ್ದಾಗಿರುತ್ತದೆ. ಹೀಗೆ ಕದ್ದಾಲಿಕೆ ವೇಳೆ ಪಡೆದ ಮಾಹಿತಿಗಳನ್ನು ಬಳಸಿ 2 ತಿಂಗಳೊಳಗೆ ಅವುಗಳನ್ನು ನಾಶಪಡಿಸಬೇಕು. ಇದು ಹೊರತಾಗಿ ಕೋರ್ಟ್‌ ನಿರ್ದೇಶನದ ಮೇರೆಗೆ ಫೋನ್‌ ಕದ್ದಾಲಿಕೆಗೆ ಅವಕಾಶವಿದೆ.

ಫೋನ್‌ ಟ್ಯಾಪಿಂಗ್‌ ಯಾಕೆ ? ಹೇಗೆ ? ಯಾರು ಮಾಡಬಹುದು?

ಫೋನ್‌ ಟ್ಯಾಪಿಂಗ್‌ ಯಾಕೆ ? ಹೇಗೆ ? ಯಾರು ಮಾಡಬಹುದು?

ಖಾಸಗಿ ತನಕ್ಕೆ ಧಕ್ಕೆ ತಂದದ್ದಕ್ಕಾಗಿ ವ್ಯಕ್ತಿ ಮಾನವ ಹಕ್ಕುಗಳ ಆಯೋಗದ ಮೊರೆ ಹೋಗಬಹುದು.
ಪೊಲೀಸ್‌ ಠಾಣೆಯಲ್ಲಿ ಎಫ್ಐಆರ್‌ ದಾಖಲಿಸಬಹುದು.

ಫೋನ್‌ ಟ್ಯಾಪಿಂಗ್‌ ಯಾಕೆ ? ಹೇಗೆ ? ಯಾರು ಮಾಡಬಹುದು?

ಫೋನ್‌ ಟ್ಯಾಪಿಂಗ್‌ ಯಾಕೆ ? ಹೇಗೆ ? ಯಾರು ಮಾಡಬಹುದು?

ಅಕ್ರಮ ಕದ್ದಾಲಿಕೆ ವಿಚಾರದ ಬಗ್ಗೆ ಭಾರತೀಯ ಟೆಲಿಗ್ರಾಫ್ ಕಾಯ್ದೆಯ ಸೆ26(ಬಿ) ಅಡಿಯಲ್ಲಿ ಕೋರ್ಟ್‌ಗೂ ದೂರು ನೀಡಬಹುದು. ಒಂದು ವೇಳೆ ಕದ್ದಾಲಿಸಿದ್ದು ಸಾಬೀತಾದರೆ ಅಪರಾಧಿಗೆ 3 ವರ್ಷಗಳ ವರೆಗೆ ಕಾರಾಗೃಹ ಶಿಕ್ಷೆ ನೀಡಲು ಕಾನೂನಿನಲ್ಲಿ ಅವಕಾಶವಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X