Subscribe to Gizbot

999 ರೂ. ಜಿಯೋ 4G ಫೋನ್ ಅನ್ನು ಆನ್‌ಲೈನ್‌ನಲ್ಲಿ ಬುಕ್‌ ಮಾಡೋದು ಹೇಗೆ?

Written By:

ಪ್ರಪಂಚದಲ್ಲಿಯೇ ಅತಿ ಕಡಿಮೆಬೆಲೆ 999 ರೂಪಾಯಿಗಳಿಗೆ 4G ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿರುವ ಜಿಯೋ ಇದಕ್ಕಾಗಿ ಎಲ್ಲಾ ತಯಾರಿಗಳನ್ನು ನಡೆಸುತ್ತಿದೆ. ಒಮ್ಮೆಲೇ ಹೆಚ್ಚಿನ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುವ ಯೋಜನೆಯನ್ನು ಜಿಯೋ ಹಾಕಿಕೊಂಡಿದ್ದು, ಜಿಯೋ ಬಳಕೆದಾರರನ್ನು ಮತ್ತಷ್ಟು ಹೆಚ್ಚಿಸುವ ಗುರಿ ಹೊಂದಿದೆ.

999 ರೂಪಾಯಿಗಳ ಜಿಯೋ ಸ್ಮಾರ್ಟ್‌ಫೊನ್‌ಗೆ ಲೈಫ್‌ ಈಜಿ (LYF Easy) ಎಂದು ಹೆಸರಿಡಲಾಗಿದ್ದು, ಶೀಘ್ರದಲ್ಲಿಯೇ ಮಾರುಕಟ್ಟೆಗೆ ಬರಲಿದೆ. ಇನ್ನು ಫೋನ್‌ ಮಾರುಕಟ್ಟೆಗೆ ಬಂದಕೂಡಲೇ ಡಿವೈಸ್‌ಗಳು ಕೆಲವರಿಗೆ ಮಾತ್ರ ಸಿಗಬಹುದು. ಹಾಗಾಗಿ, ಲೈಫ್ ಈಜಿ ಫೋನ್‌ ಅನ್ನು ಲಾಂಚ್ ಆಗುತ್ತಿದ್ದಂತೆ ಖರೀದಿಸಬೇಕು ಎನ್ನುವವರು ಈಗಲೇ ಮುಂಗಡವಾಗಿ ಫೋನ್‌ ಅನ್ನು ಬುಕ್ ಮಾಡಬಹುದು. ಅದು ಹೇಗೆ ಎಂದು ಇಂದಿನ ಲೇಖನದಲ್ಲಿ ತಿಳಿಯಿರಿ.

2900 ರೂ.ಗೆ 4G ಸ್ಮಾರ್ಟ್‌ಫೋನ್ ಮತ್ತು ಒಂದು ವರ್ಷ ಉಚಿತ ಜಿಯೋ ಸೇವೆ!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಜಿಯೋದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ

ಜಿಯೋದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ

1000 ರೂನ 4G ಫೋನ್‌ ಅನ್ನು ಪಡೆಯಲು ಬಯಸುವವರು ಜಿಯೋ ಲೈಫ್ ಫೋನ್ ಮಾರುಕಟ್ಟೆಗೆ ಬರುವವರೆಗು ಕಾಯಬೇಕಿದೆ. ಆದರೆ ಬಂದ ಸಮಯದಲ್ಲಿ ಖರೀದಿಸಲು ಆನ್‌ಲೈನ್ ಮತ್ತು ಸ್ಟೋರ್‌ಗಳಲ್ಲಿಯೂ ಜನದಟ್ಟಣೆ ಉಂಟಾಗಬಹುದು. ಆದ್ದರಿಂದ ಫೋನ್‌ ಅನ್ನು ಮುಂಗಡವಾಗಿ ಬುಕ್ ಮಾಡಲು ಜಿಯೋದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ. JIO.com ಗೆ ಭೇಟಿ ನೀಡಿ.

'Buy' ಆಪ್ಶನ್ ಚೆಕ್‌ ಮಾಡಿ

'Buy' ಆಪ್ಶನ್ ಚೆಕ್‌ ಮಾಡಿ

ಜಿಯೋ ವೆಬ್‌ಸೈಟ್‌ಗೆ ಭೇಟಿ ನೀಡಿದ ನಂತರ ಜಿಯೋ ಲೈಫ್ ಈಜಿ ಫೋನ್‌ ಬುಕ್ ಮಾಡಲು 'Buy' ಆಪ್ಶನ್ ಕ್ಲಿಕ್ ಮಾಡಿ ನಿಮ್ಮ ನಿಖರ ಮಾಹಿತಿ ನೀಡಿ. ಆದರೆ ಹಣ ಸಂದಾಯ ಮಾಡುವ ಮುನ್ನ ಎಚ್ಚರದಿಂದ ಎಲ್ಲಾ ಮಾಹಿತಿಗಳನ್ನು ಓದಿಕೊಳ್ಳಿರಿ.

ಕಾರ್ಡ್‌ ಅಥವಾ ಕ್ಯಾಶ್‌ ಆನ್‌ ಡೆಲಿವರಿ ಆಪ್ಶನ್ ಆಯ್ಕೆ ಮಾಡಬಹುದು

ಕಾರ್ಡ್‌ ಅಥವಾ ಕ್ಯಾಶ್‌ ಆನ್‌ ಡೆಲಿವರಿ ಆಪ್ಶನ್ ಆಯ್ಕೆ ಮಾಡಬಹುದು

ಫೋನ್‌ ನಂಬರ್ ಸಹಿತ ನಿಮ್ಮ ಮಾಹಿತಿ ನೀಡಿದ ನಂತರ, ಪೇಮೆಂಟ್ ಆಪ್ಶನ್‌ಗೆ ಹೋಗಿರಿ. ಅಲ್ಲಿ ಕಾರ್ಡ್‌ ಅಥವಾ ಕ್ಯಾಶ್‌ ಆನ್‌ ಡೆಲಿವರಿ ಆಪ್ಶನ್‌ ಅನ್ನು ಆಯ್ಕೆ ಮಾಡಿಕೊಳ್ಳಬಹುದು. ಆರ್ಡರ್ ಕನ್ಫರ್ಮ್ ಮಾಡಿ. ನಂತರ ಕನ್ಫರ್ಮೇಶನ್ ಮೆಸೇಜ್ ಪಡೆಯುತ್ತೀರಿ.

ನೆನಪಿರಬೇಕಾದ ಅಂಶಗಳು

ನೆನಪಿರಬೇಕಾದ ಅಂಶಗಳು

#1 ನಂತರದ ಪ್ರೋಸೆಸ್‌ಗಳು ಜಿಯೋ ಲೈಫ್‌ ಈಜಿ ಫೋನ್‌ ಲಾಂಚ್‌ ನಂತರ ಅಧಿಕೃತವಾಗಿ ನಡೆಯುತ್ತವೆ.
#2 ಲೈಪ್ ಈಜಿ ಫೋನ್‌ಗಳು ಇ-ಕಾಮರ್ಸ್ ಸೈಟ್‌ ಅಥವಾ ಇತರೆ ಅಧಿಕೃತ ವೆಬ್‌ಸೈಟ್‌ಗಳಲ್ಲಿ ಮಾರಾಟವಾಗುವ ನಿರೀಕ್ಷೆ ಇದೆ.

ಜಿಯೋಗೆ ಪೋರ್ಟ್ ಆಗಬೇಕೆ? ರೀಚಾರ್ಜ್ ಮಾಡಿಸಬೇಕೆ? ಲೇಖನ ಓದಿ ಡಿಸೈಡ್ ಮಾಡಿ!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Reliance Jio is soon going to launch 4G LYF Easy feature phones at just Rs. 1,000. Try out this simple process to book Jio LYF easy phone, after the official launch.to know more visit to kanada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot