Home
ಟೆಕ್ ನೌಕರಿ

ಕಂಪ್ಯೂಟರ್‌ನಲ್ಲಿ ವೈರಸ್ ಡಿಲೀಟ್ ಮಾಡುವುದು ಹೇಗೆ? ಯಾರು ಹೇಳ್ಕೊಡೊಲ್ಲಾ ಈ ಟ್ರಿಕ್ಸ್!!

ನಾವೆ ಕಂಪ್ಯೂಟರ್‌ನಲ್ಲಿ ಸೇರಿರುವ ವೈರಸ್‌ ಅನ್ನು ಹೇಗೆ ತೆಗೆಯಬಹುದು ಎಂದು ಇಂದಿನ ಲೇಖನದಲ್ಲಿ ತಿಳಿಯೋಣ.!!

By Bhaskar N J

ನಮ್ಮದೇ ಹಲವು ತಪ್ಪುಗಳಿಂದ ಕಂಪ್ಯೂಟರ್ ವೈರಸ್ ತೊಂದರೆಗೆ ಸಿಲುಕಿಕೊಳ್ಳುತ್ತದೆ.!! ಇಂಟರ್‌ನೆಟ್‌ ಸಂಪರ್ಕ ಮತ್ತು ಹಾರ್ಡ್‌ ಡ್ರೈವ್‌ಗಳ ಸ್ಕ್ಯಾನ್‌ ಮಾಡದೇ ಬಳಸುವುದು ಕಂಪ್ಯೂಟರ್‌ನೊಳಗೆ ವೈರಸ್‌ ಸೇರಲು ಮೂಲ ಕಾರಣ! ಹೀಗೆ, ನಿಮ್ಮ ಅರಿವಿಗೆ ಬಾರದಂತೆ ಮಾಲ್‌ವೇರ್‌ಗಳು ನಿಮ್ಮ ಕಂಪ್ಯೂಟರ್‌ ಪ್ರವೇಶಿಸಿರುತ್ತವೆ.!!

ಇದರಿಂದ ನಿಮ್ಮ ಕಂಪ್ಯೂಟರ್ ಸ್ಲೋ ಆಗುವುದು, ಫೈಲ್‌ ಕ್ರಾಶ್ ಆಗುವುದು ಮತ್ತು ಯಾವಾಗಲೂ ಶಟ್‌ಡೌನ್ ಆಗುವ ತೊಂದರೆಗೆ ಸಿಲುಕುತ್ತದೆ. ಇನ್ನು ವೈರಸ್ ತೊಂದರೆ ಎಂದರೆ ರಿಪೇರಿ ಅಂಗಡಿಗೆ ಹೋದರೆ ಅಲ್ಲಿ ನೀವು ಸಾವಿರಾರು ರೂಪಾಯಿ ಹಣವನ್ನು ತೆರಬೇಕಾಗುತ್ತದೆ.!!

ಓದಿರಿ: ಕಂಪ್ಯೂಟರ್ ವೈರಸ್ ಎಂದರೆ ಏನು? ಸಮಸ್ಯೆ ಹೇಗೆ ಕಂಡುಹಿಡಿಯುವುದು? ಫುಲ್ ಡೀಟೆಲ್ಸ್!!

ಇನ್ನು ಹಚ್ಚಿನದಾಗಿ, ಕಂಪ್ಯೂಟರ್ ರಿಪೇರಿ ಮಾಡುವ ಬಹುತೇಕರಿಗೆ ಸರಿಯಾಗಿ ರಿಪೇರಿ ಸಹ ಗೊತ್ತಿರುವುದಿಲ್ಲ.! ಹಾಗಾಗಿ, ನಾವೆ ಕಂಪ್ಯೂಟರ್‌ನಲ್ಲಿ ಸೇರಿರುವ ವೈರಸ್‌ ಅನ್ನು ಹೇಗೆ ತೆಗೆಯಬಹುದು ಎಂದು ಇಂದಿನ ಲೇಖನದಲ್ಲಿ ತಿಳಿಯೋಣ.!!

ಪೆನ್‌ಡ್ರೈವ್‌ಗೆ ಆಂಟಿವೈರಸ್ ಡೌನ್‌ಲೋಡ್ ಮಾಡಿ.!!

ಪೆನ್‌ಡ್ರೈವ್‌ಗೆ ಆಂಟಿವೈರಸ್ ಡೌನ್‌ಲೋಡ್ ಮಾಡಿ.!!

ಕಂಪ್ಯೂಟರ್‌ನಲ್ಲಿ ಸೇರಿರುವ ವೈರಸ್ ತೆಗೆಯಲು ಮೊದಲು ಇಂಟರ್‌ನೆಟ್‌ನಲ್ಲಿ ಸಿಗುವ ಆಂಟಿವೈರಸ್ ಅನ್ನು ಡೌನ್‌ಲೋಡ್ ಮಾಡಬೇಕು. ಕೆಲವೊಂದು ಉಚಿತವಾಗಿದ್ದರೆ, ಇನ್ನು ಕೆಲವು ಹಣಕೊಟ್ಟು ಪಡೆಯಬೇಕಾಗುತ್ತದೆ. ಹೀಗೆ ಡೌನ್‌ಲೋಡ್ ಮಾಡಿದ ನಂತರ ಅದನ್ನು ನಿಮ್ಮ ಪೆನ್‌ಡ್ರೈವ್‌ಗೆ ಹಾಕಿಕೊಳ್ಳಿರಿ.

ಈಗ ಸೇಫ್‌ ಮೋಡ್‌ ರೀಸ್ಟಾರ್ಟ್ ಮಾಡಿ!!

ಈಗ ಸೇಫ್‌ ಮೋಡ್‌ ರೀಸ್ಟಾರ್ಟ್ ಮಾಡಿ!!

ವೈರಸ್ ತೆಗೆಯಲು ಕಂಪ್ಯೂಟರ್ ಅನ್ನು ಸೇಫ್‌ ಮೋಡ್‌ ರೀಸ್ಟಾರ್ಟ್ ಮಾಡಿಕೊಳ್ಳಬೇಕು. ಕಂಪ್ಯೂಟರ್‌ ರೀಸ್ಟಾರ್ಟ್ ಆಯ್ಕೆ ಕ್ಲಿಕ್‌ ಮಾಡಿ F8 ಕೀಯನ್ನು ಪದೇ ಪದೇ ಒತ್ತಬೇಕು. (ಒಂದೇ ಸಮನೆ ಒತ್ತಿ ಹಿಡಿಯಬಾರದು) ಹೀಗೆ ಮಾಡಿದಾಗ ಅಡ್ವಾನ್ಸಡ್ ಬೂಟ್ ಆಫ್ಶನ್ ಮೆನು ( Advanced Boot Options menu) ಎಂಬ ಆಯ್ಕೆ ಬರುತ್ತದೆ. ಅದರಲ್ಲಿ ಸೇಫ್ ಮೋಡ್ ವಿತ್ ನೆಟ್‌ವರ್ಕಿಂಗ್ (Safe Mode with Networking) ಆಯ್ಕೆಯ ಮೇಲೆ ಕ್ಲಿಕ್‌ ಮಾಡಿ.

ಆಂಟಿವೈರಸ್‌ ಇನ್‌ಸ್ಟಾಲ್ ಮಾಡಿ!!

ಆಂಟಿವೈರಸ್‌ ಇನ್‌ಸ್ಟಾಲ್ ಮಾಡಿ!!

ಸೇಫ್‌ ಮೋಡ್‌ನಲ್ಲಿ ರೀಸ್ಟಾರ್ಟ್ ಮಾಡುವಾಗ ಪೆನ್‌ಡ್ರೈವ್‌ನಲ್ಲಿ ಸೇವ್‌ ಮಾಡಿಟ್ಟ ಆಂಟಿವೈರಸ್ ಇನ್‌ಸ್ಟಾಲ್ ಮಾಡಬೇಕು. ಇದಕ್ಕೆ ಆಯ್ಕೆಯನ್ನು ಕಂಪ್ಯೂಟರ್ ತೋರಿಸುತ್ತದೆ. ಸ್ಕ್ಯಾನ್‌ ಮಾಡುವ ಮೊದಲು ಕಂಪ್ಯೂಟರ್‌ನಲ್ಲಿರುವ ಟೆಂಪರರಿ ಫೈಲ್‌ಗಳನ್ನು ಡಿಲೀಟ್‌ ಮಾಡಿಕೊಳ್ಳಬೇಕು. ಇದರಿಂದ ವೇಗವಾಗಿ ಸ್ಕ್ಯಾನ್‌ ಆಗುತ್ತದೆ.

ನಂತರ ನಿಮ್ಮ ಕಂಪ್ಯೂಟರ್ ಸೆಕ್ಯೂರ್!!

ನಂತರ ನಿಮ್ಮ ಕಂಪ್ಯೂಟರ್ ಸೆಕ್ಯೂರ್!!

ಆಂಟಿವೈರಸ್ ಇನ್‌ಸ್ಟಾಲ್ ಮಾಡಿ ಸೇಫ್‌ ಮೋಡ್‌ನಲ್ಲಿ ಕಂಪ್ಯೂಟರ್ ರೀಸ್ಟಾರ್ಟ್ ಮಾಡಿದ ನಂತರ ನಿಮ್ಮ ಕಂಪ್ಯೂಟರ್ ಸೆಕ್ಯೂರ್ ಆಗುತ್ತದೆ. ಆದರೆ, Ransomware ನಂತಹ ವೈರಸ್ಗಳನ್ನು ನಾಶಪಡಿಸಲು ಸಾಧ್ಯವಿಲ್ಲ. ಇದು ಪತ್ತೆಯಾದರೆ ಕೂಡಲೇ ನಿಮ್ಮ ಕಂಪ್ಯೂಟರ್‌ನಲ್ಲಿ ಕ್ಲೌಡ್‌ ಸಿಂಕಿಂಗ್ ಸರ್ವೀಸಸ್ (cloud syncing services) ಇದ್ದರೆ ಅದನ್ನು ಡಿಸೇಬಲ್‌ ಮಾಡಿಕೊಳ್ಳುವುದು ಒಳ್ಳೆಯದು.

ಯಾವ ಆಂಟಿವೈರಸ್ ಒಳ್ಳೆಯದು?

ಯಾವ ಆಂಟಿವೈರಸ್ ಒಳ್ಳೆಯದು?

ಆಂಟಿ ವೈರಸ್‌ಗಳಲ್ಲಿ ರಿಯಲ್ ಟೈಮ್ ಆಂಟಿವೈರಸ್ (real-time antivirus) ಮತ್ತು ಆನ್ ಡಿಮಾಂಡ್ ಆಂಟಿವೈರಸ್ (on-demand scanners) ಎಂಬ ಎರಡು ಆಯ್ಕೆಗಳಿವೆ. ವೈರಸ್‌ ದಾಳಿ ಆದರೆ ಕೂಡಲೇ ಮೊದಲು ಆನ್‌ ಡಿಮ್ಯಾಂಡ್‌ ಸ್ಕ್ಯಾನರ್‌ ಬಳಸಿ ಸ್ಕ್ಯಾನ್‌ ಮಾಡಬೇಕು. ಆ ನಂತರ ಬಿಟ್‌ ಡಿಫೆಂಡರ್, ಕ್ಯಾಸ್ಪರ್ ಸ್ಕಿ ಮತ್ತು ನಾರ್ಮನ್‌ನಂತಹ ಆಂಟಿ ವೈರಸ್‌ ಬಳಸಬಹುದು.!!

ಸೂಚನೆ:ಇಷ್ಟಕ್ಕೆ ಮೊಬೈಲ್ ಅಂಗಡಿಯವರು ಸಾವಿರಾರು ರೂಪಾಯಿ ಚಾರ್ಜ್ ಮಾಡುತ್ತಾರೆ. ಹಾಗಾಗಿ, ಇದನ್ನು ಶೇರ್ ಮಾಡಿ ಬೇರೆಯವರಿಗೂ ಸಹಾಯ ಮಾಡಿCool

Best Mobiles in India

English summary
Using CMD Command Prompt is certainly the easiest way to remove shortcut virus from your Computer. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+