Home
ಟೆಕ್ ನೌಕರಿ

ಫೇಸ್‌ಬುಕ್, ಇನ್‌ಸ್ಟಾಗ್ರಾಂನಲ್ಲಿ ನೀವು ಕಳೆದ ಸಮಯ ಎಷ್ಟು ಗೊತ್ತಾ..? ತಿಳಿಯಿರಿ..!

By Gizbot Bureau

ಪ್ರತಿಯೊಬ್ಬ ವ್ಯಕ್ತಿಗೂ ಸಮಯದ ನಿರ್ವಹಣೆ ಬಹಳ ಮುಖ್ಯ. ಇತ್ತೀಚೆಗೆ ಮೊಬೈಲ್ ನ ಫೇಸ್ ಬುಕ್ ಮತ್ತು ಇನ್ಸ್ಟಾಗ್ರಾಂ ಇನ್ನಿತರೆ ಸಾಮಾಜಿಕ ಜಾಲತಾಣಗಳ ಅತಿರೇಗದ ಬಳಕೆಯಿಂದಾಗಿ ಜನಸಾಮಾನ್ಯರು ಕುಟುಂಬದೊಡನೆ ಬೆರೆಯುವುದೂ ಕೂಡ ಕಡಿಮೆಯಾಗುತ್ತಿದೆ ಎಂಬ ಕೂಗು ಕೇಳಿ ಬರುತ್ತಿರುವ ಬೆನ್ನಲ್ಲೇ ಫೇಸ್ ಬುಕ್ ಮತ್ತು ಇನ್ಸ್ಟಾಗ್ರಾಂ ಈ ಬಗ್ಗೆ ಜನರಿಗೆ ಎಚ್ಚರಿಕೆ ನೀಡುವ ವಿಶೇಷ ವೈಶಿಷ್ಟ್ಯತೆಯೊಂದನ್ನು ಬಿಡುಗಡೆಗೊಳಿಸಿತು.

ಓದಿರಿ: ಆಪಲ್-ಸ್ಯಾಮ್‌ಸಂಗ್‌ ಹಿಂದಿಕ್ಕಿ, ನಂ.1 ಸ್ಥಾನಕ್ಕಾಗಿ ಒನ್‌ಪ್ಲಸ್ ಹೂಡಿದ ತಂತ್ರ..!

ಅದುವೇ ನೀವೆಷ್ಟು ಸಮಯ ಫೇಸ್ ಬುಕ್ ಅಥವಾ ಇನ್ಸ್ಟಾಗ್ರಾಂನಲ್ಲಿ ಸಮಯ ಕಳೆದಿದ್ದೀರಿ ಎಂಬುದನ್ನು ತಿಳಿಸುವುದು. ಅದನ್ನು ನೋಡಿಯಾದರೂ ಅತಿಯಾಯ್ತು ಎಂದು ಸ್ವಯಂ ಬಳಕೆದಾರರೇ ಅರಿತುಕೊಳ್ಳಲಿ ಎಂಬ ಉದ್ದೇಶವನ್ನು ಫೇಸ್ ಬುಕ್ ಮತ್ತು ಇನ್ಸ್ಟಾಗ್ರಾಂ ಹೊಂದಿದೆ ಎಂಬುದು ಅಷ್ಟೇ ಸತ್ಯ.

ಫೇಸ್‌ಬುಕ್, ಇನ್‌ಸ್ಟಾಗ್ರಾಂನಲ್ಲಿ ನೀವು ಕಳೆದ ಸಮಯ ಎಷ್ಟು ಗೊತ್ತಾ..? ತಿಳಿಯಿರಿ.!

ಧೂಮಪಾನ ನಿಷೇಧಿಸಿದೆ ಎಂದು ಪ್ಯಾಕೆಟ್ ಮೇಲೆ ಬರೆದರೂ ಕೂಡ ಅದನ್ನು ಬಳಸುವವರೇನು ಕಡಿಮೆಯಾಗಿದ್ದಾರೆಯೇ? ಇದು ಕೂಡ ಒಂದು ರೀತಿ ಅದೇ ರೀತಿಯ ಪ್ರಯತ್ನವೆನ್ನಬಹುದು. ಆದರೆ ಯಾವುದೇ ಆಪ್ ಗಳೂ ಕೂಡ ನಮ್ಮನ್ನ ಬಳಸಬೇಡಿ ಇದು ನಿಮ್ಮ ಆರೋಗ್ಯಕ್ಕೆ ಹಾನಿಕರ ಎಂದು ನೇರವಾಗಿ ಹೇಳಲು ಸಾಧ್ಯವಿಲ್ಲವಲ್ಲ!

ಆದರೂ ಫೇಸ್ ಬುಕ್ ಮತ್ತು ಇನ್ಸ್ಟಾಗ್ರಾಂ ಜರಲ್ಲಿ ಜಾಗೃತಿ ಮೂಡಿಸಲು ಮುಂದಾಗಿರುವುದು ಸ್ವಾಗತಾರ್ಹ ವಿಚಾರವೇ ಆಗಿದೆ. ಹಾಗಾಗಿಈ ವೈಶಿಷ್ಟ್ಯತೆಯಿಂದ ಒಂದಷ್ಟು ಜನರಾದರೂ ಬದಲಾದರೆ ಅಷ್ಟೇ ಖುಷಿ. ಹಾಗಾದ್ರೆ ನೀವೆಷ್ಟು ಸಮಯ ಫೇಸ್ ಬುಕ್ ಅಥವಾ ಇನ್ಸ್ಟಾಗ್ರಾಂ ನಲ್ಲಿ ಕಳೆದಿದ್ದೀರಿ ಎಂದು ತಿಳಿಯುವುದು ಹೇಗೆ? ಈ ಬಗೆಗಿನ ಹಂತಹಂತವಾದ ವಿವರಣೆ ಈ ಕೆಳಗೆ ವಿವರಿಸಲಾಗಿದೆ.

ಫೇಸ್ ಬುಕ್ ನಲ್ಲಿ ನೀವೆಷ್ಟು ಸಮಯ ಕಳೆದಿದ್ದೀರಿ ಎಂದು ತಿಳಿದುಕೊಳ್ಳುವುದು ಹೇಗೆ?

1. ಫೇಸ್ ಬುಕ್ ಆಪ್ ನ್ನು ತೆರೆಯಿರಿ

2. ಸೆಟ್ಟಿಂಗ್ಸ್ ಪೇಜ್ ಗೆ ತೆರಳಿ

3.ಫೇಸ್ ಬುಕ್ ನಲ್ಲಿ Your Time ನ್ನು ಟ್ಯಾಪ್ ಮಾಡಿ

4. ನೀವೊಂದು ಬಾರ್ ಗ್ರಾಫ್ ನ್ನು ಗಮನಿಸುತ್ತೀರಿ. ಆ ಡಿವೈಸ್ ನಲ್ಲಿ ನೀವೆಷ್ಟು ಸಮಯ ಫೇಸ್ ಬುಕ್ ನಲ್ಲಿ ಕಾಲ ಕಳೆದಿದ್ದೀರಿ ಎಂಬುದನ್ನು ಅದು ತಿಳಿಸುತ್ತದೆ.

5. ಆ ದಿನದ ಒಟ್ಟು ಸಮಯವನ್ನು ತಿಳಿಯಲು ಯಾವುದೇ ಬಾರ್ ನ ಮೇಲೆ ಟ್ಯಾಪ್ ಮಾಡಿ ನೋಡಿ.

6. ಒಂದು ವೇಳೆ ನೀವು ಪ್ರತಿದಿನ ಎಷ್ಟು ಸಮಯ ಕಳೆದಿದ್ದೀರಿ ಎಂಬುದನ್ನು ತಿಳಿಯಲು ಇಚ್ಛಿಸಿದರೆ ಅದರ ರಿಮೈಂಡರ್ ನ್ನು ಸೆಟ್ ಮಾಡಿ ಇಡಬಹುದು .

ಇನ್ಸ್ಟಾಗ್ರಾಂನಲ್ಲಿ ನೀವೆಷ್ಟು ಸಮಯ ಕಳೆದಿದ್ದೀರಿ ಎಂದು ತಿಳಿದುಕೊಳ್ಳುವುದು ಹೇಗೆ?

1. ಇನ್ಸ್ಟಾಗ್ರಾಂ ಆಪ್ ನ್ನು ತೆರೆಯಿರಿ

2. ಸೆಟ್ಟಿಂಗ್ಸ್ ಪೇಜ್ ತೆರಳಿ.

3. Your Activity ಯನ್ನು ಟ್ಯಾಪ್ ಮಾಡಿ.

4. ಫೇಸ್ ಬುಕ್ ರೀತಿಯಲ್ಲೇ, ಇಲ್ಲೂ ಕೂಡ ನೀವೊಂದು ಗ್ರಾಫ್ ಬಾರ್ ನ್ನು ಗಮನಿಸುತ್ತೀರಿ. ಅದು ಆ ಡಿವೈಸ್ ನಲ್ಲಿ ನೀವೆಷ್ಟು ಸಮಯ ಇನ್ಸ್ಟಾಗ್ರಾಂನಲ್ಲಿ ಕಳೆದಿದ್ದೀರಿ ಎಂಬುದರ ಸೂಚ್ಯಂಕವಾಗಿರುತ್ತದೆ.

5. ಯಾವುದೇ ಬಾರ್ ನ್ನು ಟ್ಯಾಪ್ ಮಾಡಿದರೆ ಆ ನಿರ್ಧಿಷ್ಟ ದಿನದ ಒಟ್ಟು ಸಮಯದ ಲೆಕ್ಕಾಚಾರ ನಿಮಗೆ ಲಭ್ಯವಾಗುತ್ತದೆ.

6. ಒಂದು ವೇಳೆ ನೀವು ಪ್ರತಿದಿನ ಎಷ್ಟು ಸಮಯ ಕಳೆದಿದ್ದೀರಿ ಎಂಬುದನ್ನು ತಿಳಿಯಲು ಇಚ್ಛಿಸಿದರೆ ಅದರ ರಿಮೈಂಡರ್ ನ್ನು ಇನ್ಸ್ಟಾಗ್ರಾಂನಲ್ಲೂ ಕೂಡ ಸೆಟ್ ಮಾಡಿ ಇಡಲು ಅವಕಾಶವಿರುತ್ತದೆ.

ಆದರೆ ಓದುಗರೇ ನೀವು ನೆನಪಿನಲ್ಲಿ ಇಡಬೇಕಾದ ಅಂಶವೇನೆಂದರೆ, ಈ ವೈಶಿಷ್ಟ್ಯವು ನೀವು ಯಾವ ಡಿವೈಸ್ ನಲ್ಲಿ ಲಾಗಿನ್ ಆಗಿ ಫೇಸ್ ಬುಕ್ ಗಮನಿಸುತ್ತಿರುತ್ತೀರೋ ಆ ಡಿವೈಸ್ ನಲ್ಲಿ ಎಷ್ಟು ಸಮಯ ಫೇಸ್ ಬುಕ್ ಅಥವಾ ಇನ್ಸ್ಟಾಗ್ರಾಂನಲ್ಲಿ ಕಳೆದಿದ್ದೀರಿ ಎಂಬುದನ್ನು ತಿಳಿಸುತ್ತದೆಯೇ ಹೊರತು ಇನ್ಯಾವುದೇ ಇತರೆ ಡಿವೈಸ್ ನಲ್ಲಿ ಲಾಗಿನ್ ಆಗಿದ್ದರೆ ಅದರ ವಿವರಣೆಯನ್ನು ಈ ಗ್ರಾಫ್ ನೀಡುವುದಿಲ್ಲ.

ಅಂದರೆ ನೀವು ಸ್ಮಾರ್ಟ್ ಫೋನ್, ಡೆಸ್ಕ್ ಟಾಪ್, ಟ್ಯಾಬ್ಲೆಟ್ ಹೀಗೆ ಬೇರೆಬೇರೆ ಡಿವೈಸ್ ನಲ್ಲಿ ಫೇಸ್ ಬುಕ್ ಅಥವಾ ಇನ್ಸ್ಟಾಗ್ರಾಂ ಬಳಕೆ ಮಾಡಿದ್ದರೆ ಅದರ ಒಟ್ಟು ಗ್ರಾಸ್ ಸಮಯವನ್ನು ಇದು ನೀಡುವುದಿಲ್ಲ ಎಂಬುದರ ಅರಿವು ನಿಮಗಿರಲಿ.

Best Mobiles in India

English summary
How to check how much time you spend on Facebook and Instagram. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+