Home
ಟೆಕ್ ನೌಕರಿ

ಈ ಚುನಾವಣೆಯಲ್ಲಿ ನೀವು ವೋಟ್ ಮಾಡಬಹುದಾ Or ಇಲ್ವಾ..? ಈಗಲೇ ಆನ್‌ಲೈನಿನಲ್ಲಿ ಚೆಕ್ ಮಾಡಿ..!

By Srinidhi

ರಾಜ್ಯದಲ್ಲಿ ಚುನಾವಣಾ ಕಾವು ಹೆಚ್ಚಾಗುತ್ತಿದ್ದು, ರಾಜಕೀಯ ಪಕ್ಷಗಳು ಕಾಲಿಗೆ ಚಕ್ರಕಟ್ಟಿಕೊಂಡು ರಾಜ್ಯದಲ್ಲಿ ಭಾರೀ ಪ್ರಚಾರವನ್ನು ಮಾಡುತ್ತಿವೆ. ಇದೇ ಮಾದರಿಯಲ್ಲಿ ಈ ಬಾರಿ ಉತ್ತಮ ಸರಕಾರವನ್ನು ಆಯ್ಕೆ ಮಾಡಬೇಕು ಎಂಬ ಕಾರಣಕ್ಕಾಗಿ ಮತದಾರರು ಸಹ ಎಚ್ಚೆತ್ತು ಕೊಂಡು ಸಿದ್ಧತೆಯನ್ನು ನಡೆಸುತ್ತಿದ್ದಾರೆ. ಉತ್ತಮ ಸರಕಾರಕ್ಕೆ ಓಟು ನೀಡುವ ಸಲುವಾಗಿ ಮತದಾನದ ಮಹತ್ವವನ್ನು ಸಾರಲು ಚುನಾವಣಾ ಆಯೋಗವು ಅನೇಕ ಕಾರ್ಯಕ್ರಮಗಳನ್ನು ಕೈಗೊಂಡಿದೆ.

ನೀವು ವೋಟ್ ಮಾಡಬಹುದಾ Or ಇಲ್ವಾ..? ಈಗಲೇ ಆನ್‌ಲೈನಿನಲ್ಲಿ ಚೆಕ್ ಮಾಡಿ..!

ಈ ಹಿನ್ನಲೆಯಲ್ಲಿ ಆನ್‌ಲೈನಿನಲ್ಲಿಯೇ ಮತದಾರ ಪಟ್ಟಿಯನ್ನು ಪ್ರಕಟ ಮಾಡಿದ್ದು, ಮತದಾರರು ಈ ಬಾರಿ ತಾವು ಮತಚಲಾಯಿಸಬಹುದೇ, ಇಲ್ಲವೇ, ಪಟ್ಟಿನಲ್ಲಿ ತಮ್ಮ ಹೆಸರು ಇದೆಯೇ, ಎಲ್ಲಿ ಮತದಾನ ಮಾಡಬೇಕು ಎಂಬುದನ್ನು ಸಂಪೂರ್ಣವಾಗಿ ತಿಳಿದುಕೊಳ್ಳಲು ಆನ್‌ಲೈನಿನಲ್ಲಿಯೇ ಚುನಾವಣಾ ಆಯೋಗವು ಅವಕಾಶವನ್ನು ಮಾಡಿಕೊಟ್ಟಿದೆ. ಈ ಹಿನ್ನಲೆಯಲ್ಲಿ ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೇ? ಇಲ್ಲವೇ ಎಂಬುದನ್ನು ತಿಳಿದುಕೊಳ್ಳುವುದು ಹೇಗೆ ತಿಳಿದುಕೊಳ್ಳುವ.

ಮತಪಟ್ಟಿಯಲ್ಲಿ ಹೆಸರು ಇರಬೇಕು:

ಮತಪಟ್ಟಿಯಲ್ಲಿ ಹೆಸರು ಇರಬೇಕು:

ಮತಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲವಾದರೆ ನೀವು ಮತದಾನ ಮಾಡಲು ಸಾಧ್ಯವಿಲ್ಲ. ಈ ಹಿನ್ನಲೆಯಲ್ಲಿ ನೀವು ಮತದಾನಕ್ಕೆ ಮುನ್ನೇ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಎಂಬುದನ್ನು ತಿಳಿಯಬೇಕು, ಕೇವಲ ವೋಟರ್ ಐಡಿ ಇದ್ದರೇ ನಿಮಗೆ ಮತದಾನ ಮಾಡಲು ಅವಕಾಶ ನೀಡುವುದಿಲ್ಲ.

ಎರಡು ಮಾದರಿಯಲ್ಲಿ ನೋಡಬಹುದು:

ಎರಡು ಮಾದರಿಯಲ್ಲಿ ನೋಡಬಹುದು:

ಮತದಾರ ಪಟ್ಟಿಯಲ್ಲಿ ನಿಮ್ಮ ಹೆಸರು ಇರುವುದನ್ನು ನೀವು ಎರಡು ವಿಧದಲ್ಲಿ ನೋಡಬಹುದಾಗಿದೆ. ಒಂದು ಕೇವಲ ನಿಮ್ಮ ವೋಟರ್ ಕಾರ್ಡ್ ನಂಬರ್ ಅನ್ನು ಬಳಕೆ ಮಾಡಿಕೊಂಡು ನೋಡುವುದು. ಮತ್ತೊಂದು ನಿಮ್ಮ ಎಲ್ಲಾ ಮಾಹಿತಿಗಳನ್ನು ದಾಖಲಿಸಿ ಮಾಹಿತಿ ಇದೆಯೇ ಇಲ್ಲವೇ ಎಂಬುದನ್ನು ಕಂಡುಹಿಡಿಯಬಹುದು.

ಮೊದಲ ಮಾದರಿ:

ಮೊದಲ ಮಾದರಿ:

ಇದಕ್ಕಾಗಿ ನೀವು EPIC ನಂಬರ್ ಅನ್ನು ಹೊಂದಿರ ಬೇಕಾಗುತ್ತದೆ. ಇದು ನಿಮ್ಮ ಓಟರ್ ಐಡಿಯಲ್ಲಿ ಕಾಣಬಹುದಾಗಿದೆ. ಈ ನಂಬರ್ ಇಟ್ಟುಕೊಂಡು ಸರ್ಚ್ ಮಾಡುವುದು ಹೇಗೆ ಎಂಬುದನ್ನು ತಿಳಿಯುವ

ಹಂತ 01:

ಹಂತ 01:

ಮೊದಲಿಗೆ ನ್ಯಾಷಿನಲ್ ವೋಟರ್ ಸರ್ವೀಸ್ ಪೋರ್ಟಲ್ ಅನ್ನು ತೆರೆಯಿರಿ. ಲಿಂಕ್‌ಗಾಗಿ ಇಲ್ಲಿಕ್ಲಿಕ್ ಮಾಡಿ.

ಹಂತ 02:

ಹಂತ 02:

ನಂತರ ಕಾಣಿಸಿಕೊಳ್ಳುವ ಪುಟದಲ್ಲಿ Search by EPIC No ಆಯ್ಕೆಯನ್ನು ಸೆಲೆಕ್ಟ್ ಮಾಡಿಕೊಳ್ಳಿ, ಹೀಗೆ ಮಾಡಿದ ನಂತರದಲ್ಲಿ ನಂತರದಲ್ಲಿ ಮತ್ತೊಂದು ಪುಟ ತೆರೆದುಕೊಳ್ಳಲಿದೆ.

ಹಂತ 03:

ಹಂತ 03:

ನಂತರ ನಿಮ್ಮ ವೋಟರ್ ಕಾರ್ಡಿನಲ್ಲಿರುವ EPIC ನಂಬರ್ ಅನ್ನು ದಾಖಲಿಸಿ, ನಂತರ ನಿಮ್ಮ ರಾಜ್ಯವನ್ನು ಸೆಲೆಕ್ಟ್ ಮಾಡಿ, ನಂತರ ಅಲ್ಲಿರುವ ಕೋಡ್ ಅನ್ನು ಎಂಟ್ರಿ ಮಾಡಿ. ಮಾಡಿದ ನಂತರ ಸರ್ಚ್ ಮಾಡಿ.

ಹಂತ 04:

ಹಂತ 04:

ನಿಮ್ಮ ಹೆಸರು ಮತದಾನದ ಪಟ್ಟಿಯಲ್ಲಿ ಇದ್ದರೆ ನಿಮ್ಮ ಸಂಪೂರ್ಣ ಮಾಹಿತಿಯೂ ಅಲ್ಲಿ ದೊರೆಯಲಿದೆ. ನೀವು ಎಲ್ಲಿ ಮತದಾನ ಮಾಡಬೇಕು ಎಂಬುದರ ಕುರಿತು ಮಾಹಿತಿ ಸಹ ಅಲ್ಲಿಯೇ ದೊರೆಯಲಿದೆ.

ವಿಧಾನ ಎರಡು:

ವಿಧಾನ ಎರಡು:

ನಿಮ್ಮ ಬಳಿ EPIC ನಂಬರ್ ಇಲ್ಲ ಎನ್ನುವ ಸಂದರ್ಭದಲ್ಲಿಯೂ ನಿಮ್ಮ ಹೆಸರು ಮತದಾನದ ಪಟ್ಟಿಯಲ್ಲಿ ಇದೆಯೇ ಎಂಬುದನ್ನು ತಿಳಿಯಬಹುದಾಗಿದೆ. ಅದು ಹೇಗೆ ಎಂಬುದನ್ನು ಮುಂದಿನಂತೆ ನೋಡುವ.

ಹಂತ 01:

ಹಂತ 01:

ಮೊದಲಿಗೆ ನ್ಯಾಷಿನಲ್ ವೋಟರ್ ಸರ್ವೀಸ್ ಪೋರ್ಟಲ್ ಅನ್ನು ತೆರೆಯಿರಿ. ಲಿಂಕ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ.

ಹಂತ 02:

ಹಂತ 02:

ನಂತರ ಕಾಣಿಸಿಕೊಳ್ಳುವ ಪುಟದಲ್ಲಿ Search by Details ಆಯ್ಕೆಯನ್ನು ಸೆಲೆಕ್ಟ್ ಮಾಡಿಕೊಳ್ಳಿ, ಹೀಗೆ ಮಾಡಿದ ನಂತರದಲ್ಲಿ ನಂತರದಲ್ಲಿ ಮತ್ತೊಂದು ಪುಟ ತೆರೆದುಕೊಳ್ಳಲಿದೆ.

ಹಂತ 03:

ಹಂತ 03:

ನಂತರ ತರೆಯುವ ಪುಟದಲ್ಲಿ ನೀವು ಖಾಲಿ ಇರುವ ಜಾಗಗಳಲ್ಲಿ ಹೆಸರು, ಲಿಂಗ, ವಯಸ್ಸು, ನಿಮ್ಮ ಕ್ಷೇತ್ರ, ಸೇರಿದಂತೆ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಬೇಕಾಗಿದೆ. ನಂತರದಲ್ಲಿ ಕ್ಯಾಪ್ಷರ್ ಎಂಟ್ರಿ ಮಾಡಬೇಕಾಗಿದೆ, ನಂತರದಲ್ಲಿ ಸರ್ಚ್ ಮಾಡಬೇಕಾಗಿದೆ.

ಹಂತ 04:

ಹಂತ 04:

ನಿಮ್ಮ ಮಾಹಿತಿಯೂ ಮತದಾರರ ಪಟ್ಟಿಯಲ್ಲಿ ಇದ್ದರೇ ಅಲ್ಲಿ ತೋರಿಸಲಿದೆ. ಅಲ್ಲಿ ಯಾವುದೇ ಮಾಹಿತಿ ಇಲ್ಲವಾದರೆ ನಿಮಗೆ ಮತದಾನಕ್ಕೆ ಅವಕಾಶ ದೊರೆಯುವುದಿಲ್ಲ ಎನ್ನಲಾಗಿದೆ.

How to Check Your Voter ID Card Status (KANNADA)

ಓದಿರಿ: ಮೆಮೊರಿ ಕಾರ್ಡ್ ಬಳಸದೆ ಸ್ಮಾರ್ಟ್‌ಫೋನ್‌ ಮೆಮೊರಿ ಹೆಚ್ಚಿಸುವುದು ಹೇಗೆ ಗೊತ್ತಾ..?!

Best Mobiles in India

English summary
how to check voter list online. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+