ಮೆಮೊರಿ ಕಾರ್ಡ್ ಬಳಸದೆ ಸ್ಮಾರ್ಟ್‌ಫೋನ್‌ ಮೆಮೊರಿ ಹೆಚ್ಚಿಸುವುದು ಹೇಗೆ ಗೊತ್ತಾ..?!

|

ಮಾರುಕಟ್ಟೆಯಲ್ಲಿ ಹೆಚ್ಚು ಮೆಮೊರಿ ಹೊಂದಿರುವ ಸ್ಮಾರ್ಟ್‌ಫೋನ್ ಲಾಂಚ್ ಆದರೂ ಸಹ ಬಳಕೆದಾರರಿಗೆ ತಮ್ಮ ಸ್ಮಾರ್ಟ್‌ಫೋನಿನಲ್ಲಿ ಜಾಗ ಸಾಲುವುದೇ ಇಲ್ಲ. ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಬ್ಯಾಟರಿ ಮತ್ತು ಮೆಮೊರಿಯನ್ನು ಒದಗಿಸಲು ಸಾಧ್ಯವೇ ಇಲ್ಲ ಮಾತು ಸಾಮಾನ್ಯವಾಗಿದೆ. ಮೊಬೈಲ್ ಅನ್ನು ಬುದ್ದಿವಂತಿಕೆಯಿಂದ ಬಳಕೆ ಮಾಡಿದರೆ ಮೆಮೊರಿಯನ್ನು ಹೆಚ್ಚಿಸಿಕೊಳ್ಳಬಹುದಾಗಿದೆ.

ಮೆಮೊರಿ ಕಾರ್ಡ್ ಬಳಸದೆ ಸ್ಮಾರ್ಟ್‌ಫೋನ್‌ ಮೆಮೊರಿ ಹೆಚ್ಚಿಸುವುದು ಹೇಗೆ ಗೊತ್ತಾ..?!

ದಿನ ಕಳೆದಂತೆ ಸ್ಮಾರ್ಟ್‌ಫೋನ್ ಬಳಕೆಯ ಪ್ರಮಾಣವು ಅಧಿಕವಾಗುತ್ತಿದೆ, ವಾಟ್ಸ್‌ಆಪ್‌ ಸೇರಿದಂತೆ ಚಾಟ್ ಆಪ್‌ಗಳು ಹೆಚ್ಚಿನ ಪ್ರಮಾಣದಲ್ಲಿ ಇಮೇಜ್‌ಗಳು ಮತ್ತು ವಿಡಿಯೋಗಳು ಹೆಚ್ಚಿನ ಪ್ರಮಾಣದಲ್ಲಿ ಹರಿದಾಡುತ್ತಿರುವುರಿಂದಾಗಿ ಸ್ಮಾರ್ಟ್‌ಫೋನಿನಲ್ಲಿ ಮೆಮೊರಿಯೂ ತುಂಬಿ ಹೋಗುತ್ತದೆ. ಈ ಹಿನ್ನಲೆಯಲ್ಲಿ ಸ್ಮಾರ್ಟ್‌ಫೋನಿನಲ್ಲಿ ಸ್ಪೆಸ್ ಅನ್ನು ಹೇಗೆ ಹೆಚ್ಚಿಸುವುದು ಎಂಬುದನ್ನು ತಿಳಿಸುವ ಪ್ರಯತ್ನವೇ ಇದಾಗಿದೆ.

ಓದಿರಿ: ಏನೀದು ಜಿಯೋ ಹೋಮ್ TV..? ರೂ.1 ಕ್ಕೆ HD ಚಾನಲ್‌ಗಳು..!

ಅನಗತ್ಯ ಆಪ್‌ ಡಿಲೀಟ್ ಮಾಡಿ:

ಅನಗತ್ಯ ಆಪ್‌ ಡಿಲೀಟ್ ಮಾಡಿ:

ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಸುಮ್ಮನೆ ಬಳಸದೆ ಬಿದ್ದಿರುವ ಆಪ್‌ಗಳನ್ನು ತೆಗೆದು ಹಾಕಿ. ಅಲ್ಲದೇ ಸ್ಮಾರ್ಟ್‌ಫೋನ್ ಖರೀದಿಸಿದ ಸಂದರ್ಭದಲ್ಲಿ ನೀಡಿರುವ ಪ್ರೀ ಲೋಡ್ ಆಪ್‌ಗಳನ್ನು ಬಳಸದಿದ್ದರೇ ಡಿಲೀಟ್ ಮಾಡಿರಿ. ಇದರಿಂದ ಹೆಚ್ಚಿನ ಪ್ರಮಾಣದ ಜಾಗವು ಖಾಲಿಯಾಗಲಿದೆ. ಆಪ್ ಹೆಚ್ಚಾದಾಷ್ಟು ಜಾಗವು ತುಂಬಿಕೊಳ್ಳುವುದರೊಂದಿಗೆ ಕ್ಯಾಚ್ ಹೆಚ್ಚಾಗಿ ನಿಮ್ಮ ಫೋನಿನ ವೇಗವು ಕುಂಠಿತವಾಗಲಿದೆ.

ಜಾಸ್ತಿ ಗೇಮ್ ಬೇಡ:

ಜಾಸ್ತಿ ಗೇಮ್ ಬೇಡ:

ಇಂದಿನ ದಿನದಲ್ಲಿ ಸ್ಮಾರ್ಟ್‌ಫೋನಿನಲ್ಲಿ ಮಕ್ಕಳು ಹಿರಿಯರು ಎನ್ನದೇ ಗೇಮ್‌ಗಳನ್ನು ಆಡುವುದರಲ್ಲಿ ಬಿಜಿಯಾಗಿರುತ್ತಾರೆ. ಈ ಗೇಮ್‌ಗಳೇ ಸ್ಮಾರ್ಟ್‌ಫೋನಿನಲ್ಲಿ ಹೆಚ್ಚಿನ ಜಾಗವನ್ನು ಕ್ರಮಿಸಿರುತ್ತವೆ. ಈ ಹಿನ್ನಲೆಯಲ್ಲಿ ಕೆಲವೇ ಕೆಲವು ಗೇಮ್‌ಗಳನ್ನು ಇಟ್ಟುಕೊಂಡು ತುಂಬದಿನಗಳಿಂದ ಆಡದಿರುವ ಗೇಮ್‌ಗಳನ್ನು ಡಿಲೀಟ್ ಮಾಡಿ. ಇದರಿಂದ ಹೆಚ್ಚಿನ ಸ್ಪೇಸ್ ಬಳಕೆಗೆ ದೊರೆಯಲಿದೆ.

ಮೂವಿ ನೋಡಿದ ಮೇಲೆ ಡಿಲೀಟ್ ಮಾಡಿ:

ಮೂವಿ ನೋಡಿದ ಮೇಲೆ ಡಿಲೀಟ್ ಮಾಡಿ:

ಇಂದಿನ ದಿನದಲ್ಲಿ ಸ್ಮಾರ್ಟ್‌ಫೋನಿನಲ್ಲಿಯೇ ಸಿನಿಮಾಗಳನ್ನು ಡೌನ್‌ಲೋಡ್ ಮಾಡಿ, ಇಲ್ಲವೇ ಶೇರ್ ಇಟ್ ಮೂಲಕ ಕಳುಹಿಸಿಕೊಂಡು ನೋಡುವ ಅಭ್ಯಾಸವು ಅಧಿಕವಾಗುತ್ತಿದೆ. ಇದರಿಂದಲೇ ಹೆಚ್ಚಿನ ಸ್ಮಾರ್ಟ್‌ಫೋನ್ ಸ್ಪೇಸ್ ಬಳಕೆಯಾಗಲಿದೆ. ಇದರಿಂದಾಗಿ ಸಿನಿಮಾ ನೋಡಿದ ಮೇಲೆ ಡಿಲೀಟ್ ಮಾಡಿ. ಹೆಚ್ಚು ಇಟ್ಟುಕೊಂಡಷ್ಟು ಜಾಗ ಕಡಿಮೆಯಾಗಲಿದೆ.

ಕ್ಯಾಚ್ ಕ್ಲಿಯರ್ ಮಾಡಿ:

ಕ್ಯಾಚ್ ಕ್ಲಿಯರ್ ಮಾಡಿ:

ಬಳಕೆಯಲ್ಲಿರುವ ಆಪ್‌ಗಳ ಕ್ಯಾಚ್ ಗಳು ಹೆಚ್ಚಿನ ಪ್ರಮಾಣದಲ್ಲಿ ಆವರಿಸಿಕೊಂಡಿರುತ್ತವೆ. ಅವುಗಳನ್ನು ಕಾಲ-ಕಾಲಕ್ಕೆ ಕ್ಲಿಯರ್ ಮಾಡಿ. ಇದರಿಂದ ನಿಮ್ಮ ಫೋನಿನ ಮೆಮೊರಿಯ ಹೆಚ್ಚಾಗಲಿದೆ. ಅನಗತ್ಯ ಡೇಟಾ ಸೇವ್ ಆಗುವುದನ್ನು ತಪ್ಪಿಸಬಹುದು. ಅಲ್ಲದೇ ಆಪ್‌ಗಳನ್ನು ಚುರುಕಾಗಿಸಬಹುದು

How to read deleted WhatsApp messages - GIZBOT KANNADA
ಗೂಗಲ್‌ ಫೋಟೋಸ್ ಬಳಸಿ:

ಗೂಗಲ್‌ ಫೋಟೋಸ್ ಬಳಸಿ:

ಫೋನಿನಲ್ಲಿ ಫೋಟೋಗಳು ಹೆಚ್ಚಿನ ಪ್ರಮಾಣದಲ್ಲಿ ಜಾಗವನ್ನು ಆಕ್ರಮಿಸುದರಿಂದಾಗಿ ಗ್ಯಾಲೆರಿಯನ್ನು ಗೂಗಲ್ ಫೋಟೋಸ್‌ನೊಂದಿಗೆ ಲೀಂಕ್ ಮಾಡಿ. ಇದರಿಂದ ನಿಮ್ಮ ಫೋನಿನಲ್ಲಿ ಫೋಟೋಗಳು ಸೇವ್ ಆಗುವುದು ತಪ್ಪಲಿದ್ದು, ಹೆಚ್ಚಿನ ಮೆಮೊರಿ ಬಳಕೆಗೆ ದೊರೆಯಲಿದೆ. ಫೋಟೋಗಳು ಆನ್‌ಲೈನಿಲ್ಲಿ ಸೇಫ್‌ ಆಗಿರಲಿದೆ. ಇದನ್ನು ಬಿಟ್ಟು ಕೆಲವು ಆಯ್ಕೆಗಳು ಇದೆ. ಅವುಗಳೇಂದರೆ.

ಕ್ಲೌಡ್‌ ಸ್ಟೋರೇಜ್:

ಕ್ಲೌಡ್‌ ಸ್ಟೋರೇಜ್:

ಮೆಮೊರಿ ಕಾರ್ಡ್ ಬೇಡ ಎನ್ನುವವರು ಕ್ಲೌಡ್ ಸ್ಟೋರೆಜ್ ಬಳಕೆ ಮಾಡಿಕೊಳ್ಳಬಹುದಾಗಿದೆ. ಆದರೆ ಇದನ್ನು ಆಕ್ಸಿಸ್ ಮಾಡಲು ನೀವು ಹೆಚ್ಚುವರಿ ಇಂಟರ್ನೆಟ್ ಹೊಂದಿರಬೇಕಾಗುತ್ತದೆ. ಇದು ಒಳ್ಳೆಯ ಆಯ್ಕೆಯಾಗಿದ್ದು, ವೇಗದ ಇಂಟರ್ನೆಟ್ ಇದ್ದರೇ ಮಾತ್ರ ಹೆಚ್ಚಿನ ಲಾಭವಾಗಲಿದೆ.

ಫೋನ್‌ ರಿಸ್ಟೋರ್‌ ಮಾಡಿ

ಫೋನ್‌ ರಿಸ್ಟೋರ್‌ ಮಾಡಿ

ಫೋನ್ ವೇಗ ಬೇಕು ಮತ್ತೇ ಜಾಗ ಖಾಲಿಯಾಗಬೇಕು ಎನ್ನುವದಾದರೆ ಕೊನೆಯ ಅಸ್ತ್ರ ನಿಮ್ಮ ಸ್ಮಾರ್ಟ್‌ಫೋನ್ ರಿಸ್ಟೋರ್ ಮಾಡಿ. ಹೀಗೆ ಮಾದರೆ ನಿಮ್ಮ ಸ್ಮಾರ್ಟ್‌ಫೋನಿನಲ್ಲಿರುವ ಎಲ್ಲಾ ಡೇಟಾ ಖಾಲಿಯಾಗಲಿದ್ದು, ಹೊಸ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬಂದ ಮಾದರಿಯಲ್ಲಿ ಇರಲಿದೆ. ಆದರೆ ಮೊದಲೇ ಅಮೂಲ್ಯ ಡೇಟಾಗಳನ್ನು ಸೇವ್‌ ಮಾಡಿಕೊಳ್ಳಿ.

ಮೆಮೊರಿ ಕಾರ್ಡ್‌ ಬಳಸಿ:

ಮೆಮೊರಿ ಕಾರ್ಡ್‌ ಬಳಸಿ:

ಎಲ್ಲಾ ಮಾಡಿಯೂ ಸ್ಮಾರ್ಟ್‌ಫೋನಿನ ಸ್ಪೇಸ್ ಸಾಲಿಲ್ಲ ಎನ್ನುವಾಗ ಮೈಕ್ರೊ SD ಕಾರ್ಡ್ ಬಳಕೆಯೂ ಸೂಕ್ತವಾಗಿದೆ. ಇದಕ್ಕೇ ನಿಮ್ಮ ಫೋನಿನಲ್ಲಿ ವಿಡಿಯೋಗಳು ಸೇರಿಂತೆ ದೊಡ್ಡ ಫೈಲ್‌ಗಳನ್ನು ವರ್ಗಾವಣೆ ಮಾಡಿದರೆ ಸಾಕು, ನಿಮ್ಮ ಫೋನಿನಲ್ಲಿ ದೊಡ್ಡ ಪ್ರಮಾಣದ ಮೆಮೊರಿ ಕಾಲಿಯಾಗಲಿದೆ.

Best Mobiles in India

English summary
how to increase smartphone memory. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X