Home
ಟೆಕ್ ನೌಕರಿ

ನಿಮ್ಮದೇ ಬ್ಯುಸಿನೆಸ್ 'ಆಪ್' ಕ್ರಿಯೇಟ್ ಮಾಡಬೇಕೆ?..ಇಲ್ಲಿದೆ ನೋಡಿ ಭವಿಷ್ಯದ ದಾರಿ!!

ನಮಗೆ ತಂತ್ರಜ್ಞಾನ ಗೊತ್ತಿಲ್ಲಾ ಎನ್ನುವಷ್ಟು ತಪ್ಪು ಬೇರೆನಿಲ್ಲ.! ಹಾಗಾಗಿ, ನಿಮಗೆ ಆಪ್ ತಯಾರು ಮಾಡಿಕೊಡಲು ಅಪ್ಲಿಕೇಶನ್ ತಯಾರಕರೇ ಬೇಕಿಲ್ಲ.!!

By Bhaskar N J

ನಿಮ್ಮದೇ ಒಂದು ಆಪ್ ರಚಿಸುವ ಕುರಿತು ನೀವು ಯೋಚಿಸುತ್ತಿದ್ದರೆ ಇಂದಿನ ಆನ್‌ಲೈನ್ ಯುಗದಲ್ಲಿ ನೀವು ಸರಿಯಾದ ಹೆಜ್ಜೆಯನ್ನಿಟ್ಟಿದ್ದೀರಾ ಎಂದರ್ಥ.!ಹೌದು, ಇಂದಿನ ವ್ಯವಹಾರಗಳೆಲ್ಲವೂ ಆಪ್‌ ಮೂಲವೇ ನಡೆಯುತ್ತವೆ. ಒಂದು ಆಪ್‌ ಮೂಲಕ ಬಹುದೊಡ್ಡ ಮಾರುಕಟ್ಟೆಗೆ ನಿಮ್ಮನ್ನು ನೀವು ತೆರೆದುಕೊಳ್ಳಲು ಸಾಧ್ಯವಾಗುತ್ತದೆ.!!

ಇಂದು ತರಕಾರಿ ಮಾರಾಟ ಮಾಡುವವರು ಕೂಡ ಆಪ್ ಬಳಸಿ ತಮ್ಮದೇ ಮಾರುಕಟ್ಟೆಯನ್ನು ಸೃಷ್ಟಿಸಿಕೊಂಡಿದ್ದಾರೆ.! ಸಾಕಷ್ಟು ಕೌಶಲ್ಯ, ತಾಳ್ಮೆ, ಪರಿಶ್ರಮ ಮತ್ತು ಸಂಪನ್ಮೂಲಗಳನ್ನು ಕ್ರೂಡಿಕರಿಸಿಕೊಂಡು ಒಂದು ಆಪ್ ಮೂಲಕ ನಿಮ್ಮ ವ್ಯವಹಾರ ನಡೆಸಿದರೆ ನಿಮ್ಮ ಜೀವನದ ಯಶಸ್ಸನ್ನು ನೀವು ಕಾಣುತ್ತೀರಾ!!

ಹಾಗಾಗಿಯೇ ಇಂದಿನ ಲೇಖನದಲ್ಲಿ ಕಡಿಮೆ ಬೆಲೆಗೆ ಆಪ್ ಕ್ರಿಯೇಟ್ ಮಾಡಿಕೊಳ್ಳುವುದು ಹೇಗೆ? ಆಪ್ ತಯಾರಿಸಿಕೊಳ್ಳಲು ಎಷ್ಟು ವೆಚ್ಚವಾಗಬಹುದು. ಎಂಬುದನ್ನು ತಿಳಿಸಿಕೊಡುತ್ತೇವೆ. ಹಾಗಾದರೆ ಕಡಿಮೆ ಬೆಲೆಯಲ್ಲಿ ನಿಮ್ಮದೇ ಆಪ್ ಕ್ರಿಯೇಟ್ ಮಾಡಿಕೊಳ್ಳಬಹುದಾದ ಅತ್ಯುತ್ತಮ ಸೈಟ್‌ಗಳು ಯಾವುವು ಎಂದು ಇಂದಿನ ಲೇಖನದಲ್ಲಿ ತಿಳಿಯಿರಿ.!!

ಅಪ್ಲಿಕೇಶನ್ ತಯಾರಕರೇ ಬೇಕಿಲ್ಲ.!!

ಅಪ್ಲಿಕೇಶನ್ ತಯಾರಕರೇ ಬೇಕಿಲ್ಲ.!!

ನಮಗೆ ತಂತ್ರಜ್ಞಾನ ಗೊತ್ತಿಲ್ಲಾ ಎನ್ನುವಷ್ಟು ತಪ್ಪು ಬೇರೆನಿಲ್ಲ.! ಹಾಗಾಗಿ, ನಿಮಗೆ ಆಪ್ ತಯಾರು ಮಾಡಿಕೊಡಲು ಅಪ್ಲಿಕೇಶನ್ ತಯಾರಕರೇ ಬೇಕಿಲ್ಲ.!! ಇವರ ಸಹಾಯವಿಲ್ಲದೇ ನೀವು ಆಪ್‌ ಕ್ರಿಯೇಟ್ ಮಾಡಿಕೊಳ್ಳಲು ಅಪ್ಲಿಕೇಷನ್ ಬಿಲ್ಡರ್ಸ್‌ ತುದಿಗಾಲಿನಲ್ಲಿ ನಿಂತಿವೆ.!!

ಸೆಟಲ್ ಕ್ಲೌಡ್ ಆಪ್ ಬಿಲ್ಡರ್( Seattle Cloud App Builder)

ಸೆಟಲ್ ಕ್ಲೌಡ್ ಆಪ್ ಬಿಲ್ಡರ್( Seattle Cloud App Builder)

ಸೆಟಲ್ ಕ್ಲೌಡ್ ಅಪ್ಲಿಕೇಶನ್ ಬಿಲ್ಡರ್ ಬಳಸಿ ಇಲ್ಲಿಯವರೆಗೂ 480,000ಕ್ಕೂ ಹೆಚ್ಚಿನ ಸ್ಥಳೀಯ ಆಪ್‌ಗಳನ್ನು ನಿರ್ಮಿಸಲಾಗಿದೆ ಎಂದರೆ ನೀವು ನಂಬಲೇಬೇಕು. ಯಾವುದೇ
ಕೋಡಿಂಗ್ ಅಗತ್ಯವಿಲ್ಲದೇ, ಅವರೆ ನೀಡಿರುವ ಟೆಂಪ್ಲೇಟ್‌ಗಳಿಂದ ನೀವು ಆಪ್ ರಚಿಸಿಕೊಳಬಹುದು. 10000 ರೂ. ಒಳಗೆ ನಿಮ್ಮದೇ ಆಪ್ ಸಿದ್ದವಾಗುತ್ತದೆ.!!

ಗುಡ್ ಬಾರ್ಬರ್( GoodBarber)

ಗುಡ್ ಬಾರ್ಬರ್( GoodBarber)

ನಿಮ್ಮ ಕ್ರಿಯೆವಿಟಿಗೆ, ನಿಮ್ಮ ಚಿಂತನೆಗೆ ತಕ್ಕಂತೆ ಕಲಾತ್ಮಕವಾಗಿ ಆಪ್‌ಗಳನ್ನು ರಚಿಸಿಕೊಡುವ ಮತ್ತೊಂದು ಆಪ್ ಬಿಲ್ಡರ್ ಎಂದರೆ ಅದು ಗುಡ್ ಬಾರ್ಬರ್.!! ಬಹಳ ಸುಲಭವಾದ ಟೆಂಪ್ಲೇಟ್‌ಗಳ ಮೂಲಕ ನಿಮ್ಮದೇ ಆಪ್ ರಚನೆಗೆ ಗುಡ್ ಬಾರ್ಬರ್ ವಿಧಿಸುವ ದರ ಪ್ರತಿ ತಿಂಗಳು 240 ರೂಪಾಯಿಗಷ್ಟೆ!!

ಆಪ್ ಮಷಿನ್( App Machine)

ಆಪ್ ಮಷಿನ್( App Machine)

HTML5 ಬಳಸಿಕೊಂಡು ಮೊಬೈಲ್ ಆಪ್ ರೂಪಿಸುವ ಆಪ್ ಬಿಲ್ಡರ್ 'ಆಪ್ ಮಷಿನ್' ಸದಸ್ಯತ್ವದೊಂದಿಗೆ ಮೊಬೈಲ್ ಸೈಟ್ ಮತ್ತು ಪರ ಸದಸ್ಯತ್ವದೊಂದಿಗೆ ಸ್ಥಳೀಯ ಅಪ್ಲಿಕೇಶನ್ ರೂಪಿಸುವ ಆಯ್ಕೆ ಇದರಲ್ಲಿದೆ. ಸುಧಾರಿತ ವೈಶಿಷ್ಟ್ಯಗಳನ್ನು ಒಳಗೊಂಡಿರುವ ಆವೃತ್ತಿಯ ಆಪ್‌ಗೆ 500 ರೂಪಾಯ ದರನ್ನು ವಿಧಿಸುತ್ತದೆ.!!

ಯೋಚಿಸದೇ ಆಪ್ ಕ್ರಿಯೇಟ್ ಮಾಡಿಬಿಡಿ.!!

ಯೋಚಿಸದೇ ಆಪ್ ಕ್ರಿಯೇಟ್ ಮಾಡಿಬಿಡಿ.!!

ಉದ್ಯಮ ಶುರುಮಾಡಬೇಕು ಎಂದರೆ ಆಪ್‌ಗಳ ಸಹಾಯ ಇಂದು ಬೇಕೆ ಬೇಕು. ಆಪ್‌ ಲೋಕದಲ್ಲಿ ಎಲ್ಲರೂ ತಮ್ಮದೇ ಆಪ್‌ಗಳನ್ನು ಅಚ್ಚೊತ್ತುವ ಮುನ್ನ ನಿಮ್ಮದೇ ಆಪ್ ಕ್ರಿಯೇಟ್ ಮಾಡಿ. ಸೇವೆ, ಮಾರಾಟ ಮತ್ತು ಇನ್ನಿತರ ಯಾವುದೇ ರೀತಿಯಲ್ಲಿ ಆನ್‌ಲೈನ್‌ ಮೂಲಕ ಹಣಗಳಿಸಲು ಇದೊಂದು ಉತ್ತಮ ದಾರಿ.

ಓದಿರಿ:ವೋಟರ್ ಐಡಿಗೆ ಆನ್‌ಲೈನ್‌ನಲ್ಲಿ ಅರ್ಜಿಸಲ್ಲಿಸಲು 1ತಿಂಗಳ ಅಭಿಯಾನ!!ಅರ್ಜಿ ಸಲ್ಲಿಕೆ ಹೇಗೆ?

Best Mobiles in India

English summary
If you’re thinking of creating an app, then I’d like to congratulate you first. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+