ರೀಸೈಕಲ್ ಬಿನ್ ಬಳಸದೇ ಫೈಲ್ ಅಳಿಸುವುದು ಹೇಗೆ?
ನೀವು ವಿಂಡೋಸ್‌ನ ತ್ವರಿತ ಬಳಕೆದಾರರಾಗಿದ್ದು ಹೆಚ್ಚಿನ ಫೈಲ್‌ಗಳೊಂದಿಗೆ ನೀವು ಕಾರ್ಯನಿರ್ವಹಿಸುವವರಾಗಿದ್ದಲ್ಲಿ ಫೈಲ್‌ಗಳನ್ನು ಡಿಲೀಟ್ ಮಾಡಲು ರೀಸೈಕಲ್ ಬಿನ್‌ಗೆ ಅವುಗಳನ್ನು ಸರಿಸುವುದು ನಿಜಕ್ಕೂ ತಲೆನೋವಿನ ಕೆಲಸವಾಗಿದೆ ತಾನೇ? ಹಾಗಿದ್ದರೆ ಅವುಗಳನ್ನು ಸ್ಥಳದಲ್ಲೇ ಡಿಲೀಟ್ ಮಾಡುವುದಾಗಿದ್ದರೆ ಎಷ್ಟು ಒಳ್ಳೆಯದು ಅಲ್ಲವೇ? ಹೀಗೆ ಮಾಡುವುದು ತುಂಬಾ ಸುಲಭ ಮತ್ತು ಸರಳ ಮಾರ್ಗವಾಗಿದೆ ಎಂಬುದು ನಿಮಗೆ ಗೊತ್ತೇ? ಹಾಗಿದ್ದರೆ ಇಂದಿನ ಲೇಖನದಲ್ಲಿ ನಾವು ಕೊಟ್ಟಿರುವ ಕೆಲವೊಂದು ಸರಳ ವಿಧಾನಗಳನ್ನು ಅನುಸರಿಸುವ ಮೂಲಕ ನಿಮ್ಮ ಕೆಲಸವನ್ನು ಹಗುರಾಗಿಸಿಕೊಳ್ಳಿ.
ಇದನ್ನೂ ಓದಿ: ವಾಟ್ಸಾಪ್ ಬಳಕೆಗೆ ಪರಿಣಾಮಕಾರಿ ಸಲಹೆಗಳು
ವಿಂಡೋಸ್‌ನಲ್ಲಿ ಫೈಲ್‌ಗಳನ್ನು ಡಿಲೀಟ್ ಮಾಡಲು ಎರಡು ವಿಧಾನಗಳಿವೆ.
ನೀವು ಡಿಲೀಟ್ ಮಾಡಬೇಕೆಂದು ಬಯಸುವ ಫೈಲ್‌ಗಳ ಮೇಲೆ ಮೌಸ್‌ನ ಬಾಣದ ಗುರುತನ್ನು ಇಟ್ಟು ಡಿಲೀಟ್ ಬಟನ್ ಅನ್ನು ಒತ್ತಿ ಅದನ್ನು ರೀಸೈಕಲ್ ಬಿನ್‌ಗೆ ಕಳುಹಿಸುವುದು
ಎರಡನೇ ವಿಧಾನ ರೀಸೈಕಲ್ ಬಿನ್‌ಗೆ ಫೈಲ್‌ಗಳನ್ನು ಅಳಿಸಲು ಕಳುಹಿಸುವುದಾಗಿದೆ, ಆದರೆ ಈ ವಿಧಾನವು ನಿಮಗೆ ಅಗತ್ಯವಾದಾಗಲೆಲ್ಲಾ ಫೈಲ್‌ಗಳನ್ನು ಶಾಶ್ವತವಾಗಿ ಅಳಿಸುತ್ತದೆ.

#1
ರೈಟ್ ಕ್ಲಿಕ್ ಡಿಲೀಟ್ ಆಯ್ಕೆಯನ್ನು ಬದಲಾಯಿಸುವುದು

#2
ರೀಸೈಕಲ್ ಬಿನ್‌ಗೆ ಬಲ ಕ್ಲಿಕ್ ಮಾಡಿ ಮತ್ತು ಪ್ರಾಪರ್ಟೀಸ್ ಆಯ್ಕೆ ಮಾಡಿ

#3
ರೀಸೈಕಲ್ ಬಿನ್ ಪ್ರಾಪರ್ಟೀಸ್ ಬಾಕ್ಸ್‌ನಲ್ಲಿ, "ರೀಸೈಕಲ್ ಬಿನ್‌ಗೆ ಫೈಲ್‌ಗಳನ್ನು ಕಳುಹಿಸಬೇಡಿ" ಆಯ್ಕೆಯನ್ನು ಆರಿಸಿ.

#4
ಓಕೆ ಬಟನ್ ಅನ್ನು ಕ್ಲಿಕ್ ಮಾಡಿ

#5
ನೀವು ಇದನ್ನು ಪೂರ್ಣಗೊಳಿಸಿದ ನಂತರ, ರೀಸೈಕಲ್ ಬಿನ್‌ಗೆ ನಿಮ್ಮ ಫೈಲ್‌ಗಳನ್ನು ಕಳುಹಿಸುವ ಸಾಮಾನ್ಯ ಪ್ರಕ್ರಿಯೆಯು ಅವುಗಳನ್ನು ಶಾಶ್ವತವಾಗಿ ಅಳಿಸಿಬಿಡುತ್ತದೆ.

#6
ನೀವು ಶಾಶ್ವತವಾಗಿ ಅಳಿಸಬೇಕೆಂದಿರುವ ಫೈಲ್ ಅನ್ನು ಬಲ ಕ್ಲಿಕ್ ಮಾಡಿ

#7
ನಿಮ್ಮ ಕೀಬೋರ್ಡ್‌ನಲ್ಲಿ ಶಿಫ್ಟ್ ಕೀ ಅನ್ನು ಹೋಲ್ಡ್ ಡೌನ್ ಮಾಡಿ

#8
ಶಿಫ್ಟ್ ಕೀ ಅನ್ನು ಹಿಡಿದುಕೊಂಡಿರುವಾಗ, ಡಿಲೀಟ್ ಅನ್ನು ಕ್ಲಿಕ್ ಮಾಡಿ ಅಥವಾ ಶಿಫ್ಟ್ ಹಿಡಿದುಕೊಳ್ಳುತ್ತಾ ನಿಮ್ಮ ಕೀಬೋರ್ಡ್‌ನಲ್ಲಿ ಪರ್ಯಾಯವಾಗಿ ಡಿಲೀಟ್ ಬಟನ್ ಅನ್ನು ಒತ್ತಿ.

#9
ಫೈಲ್ ಅಳಿಸುವಿಕೆಯನ್ನು ದೃಢಪಡಿಸಿಕೊಳ್ಳಿ ಮತ್ತು ಫೈಲ್ ಶಾಶ್ವತವಾಗಿ ಅಳಿಸಿಹೋಗಿರುತ್ತದೆ.


Click it and Unblock the Notifications








