Home
ಟೆಕ್ ನೌಕರಿ

ಗೂಗಲ್ ಸಂಗ್ರಹಿಸಿಟ್ಟ "ವಾಯ್ಸ್ ಸರ್ಚ್" ಹಿಸ್ಟರಿ ಡಿಲೀಟ್ ಮಾಡುವುದು ಹೇಗೆ?

ಆಘಾತಕಾರಿ ವಿಷಯವೆಂದರೆ ನಮ್ಮ ವಾಯ್ಸ್ ಸರ್ಚ್‌ಗಳನ್ನೆಲ್ಲಾ ಗೂಗಲ್ ಸಂಗ್ರಹಿಸಿಟ್ಟಿಕೊಳ್ಳುತ್ತಿದೆ.!

By Bhaskar N J

ಗೂಗಲ್ ಏನೇ ಮಾಡಿದರೂ ಸಹ ಅದು ನಾವು ಯೋಚಿಸುವುದಕ್ಕಿಂತ ಹೆಚ್ಚಿರುತ್ತದೆ ಎಂಬ ಮಾತಿದೆ. ಹಾಗೆಯೇ, ಗೂಗಲ್ ಕೂಡ ಭವಿಷ್ಯದ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುತ್ತಾ ಜನರಿಗೆ ಅವಶ್ಯಕವಾಗಿರುವ ಸೇವೆಗಳನ್ನು ನೀಡುತ್ತದೆ. ಹೀಗೆ ಹೀಗೆ ನಮಗೆ ಸಹಾಯ ಮಾಡುತ್ತಿರುವುದು ಗೂಗಲ್‌ನ ಭವಿಷ್ಯದ ತಂತ್ರಜ್ಞಾನ 'ಗೂಗಲ್ ಅಸಿಸ್ಟೆಂಟ್'.

ಗೂಗಲ್‌ನಲ್ಲಿ ಟೈಪ್ ಮಾಡುವ ಬದಲು ಮೈಕ್ ಒತ್ತಿ ಹಿಡಿದು ಏನಾದರೂ ಹೇಳಿದರೆ ಇದಕ್ಕೆ ಸಂಬಂಧಪಟ್ಟ ಎಲ್ಲ ಮಾಹಿತಿಗಳು ತೆರೆದುಕೊಳ್ಳುವ ಭವಿಷ್ಯದ ತಂತ್ರಜ್ಞಾನ 'ಗೂಗಲ್ ಅಸಿಸ್ಟೆಂಟ್' ಇಂದು ಟೈಪ್ ಮಾಡಿ ಹುಡುಕುವ ಕೆಲಸವನ್ನು ತಪ್ಪಿಸಿದೆ. ಜೊತೆಗೆ ಆಘಾತಕಾರಿ ವಿಷಯವೆಂದರೆ ನಮ್ಮ ವಾಯ್ಸ್ ಸರ್ಚ್‌ಗಳನ್ನೆಲ್ಲಾ ಗೂಗಲ್ ಸಂಗ್ರಹಿಸಿಟ್ಟಿಕೊಳ್ಳುತ್ತಿದೆ.!

ಗೂಗಲ್ ಸಂಗ್ರಹಿಸಿಟ್ಟ

ಹೌದು, ಗೂಗಲ್ ಈ ರೀತಿ ಮಾಡುತ್ತಿದೆಯಾ ಎಂದು ಹುಬ್ಬೇರಿಸಬೇಡಿ. ನೀವು ಕೇಳುತ್ತಿರುವುದು ಸತ್ಯ.! ಗೂಗಲ್ ಅಸಿಸ್ಟೆಂಟ್ ನಮಗೆ ಸಹಾಯ ಮಾಡುವುದರ ಜತೆಗೆ ಗೂಗಲ್ ನಾವು ಹೇಳಿದ್ದನ್ನೆಲ್ಲಾ ರೆಕಾರ್ಡ್ ಮಾಡಿಟ್ಟಿರುತ್ತದೆ!. ಭಾಷೆ ಗುರುತಿಸುವಿಕೆ ಸಾಧನ (Language Recognition Tools)ವನ್ನು ಉತ್ತಮಗೊಳಿಸಲು ಇದು ಸಹಾಯವಾಗುತ್ತದೆ ಎಂದು ಗೂಗಲ್ ಹೇಳಿದೆ.

ಹಾಗಾಗಿ, ಗೂಗಲ್‌ನಲ್ಲಿ ವಾಯ್ಸ್ ಸರ್ಚ್ ಮಾಡಿದ್ದರೆ, ನಾವು ಇಲ್ಲಿಯವರೆಗೆ ಮಾಡಿದ ನಮ್ಮ ವಾಯ್ಸ್ ಸರ್ಚ್ ಅನ್ನು ಗೂಗಲ್ ಸೇವ್ ಮಾಡಿಟ್ಟಿರುತ್ತದೆ. ಇದು ಎಲ್ಲಿದೆ ಎಂದು ನೋಡಬೇಕಾದರೆ https://support.google.com/websearch/answer/6030020?hl=en ಎಂಬ ಲಿಂಕ್ ಕ್ಲಿಕ್ ಮಾಡಿ. ಅಲ್ಲಿ ಗೂಗಲ್ ಖಾತೆಗೆ ಸೈನ್ ಇನ್ ಆಗಿರಿ.

ಗೂಗಲ್ ಸಂಗ್ರಹಿಸಿಟ್ಟ

ನಂತರ ನಿಮ್ಮ ಬಲಭಾಗದಲ್ಲಿ ಸೆಟ್ಟಿಂಗ್ಸ್ ಕೆಳಗೆ Delete searches & other activity ಎಂಬ ಲಿಂಕ್ ಕಾಣುತ್ತದೆ. ನಂತರ https://myactivity.google.com/myactivity ಎಂಬ ಲಿಂಕ್ ಕ್ಲಿಕ್ ಮಾಡಿದರೆ ನೀವು ಕಂಪ್ಯೂಟರ್, ಮೊಬೈಲ್‍ನಲ್ಲಿ ಹುಡುಕಿದ ಪದಗಳ ಮಾಹಿತಿ ಸಿಗುತ್ತದೆ. ಇಲ್ಲಿ ವರ್ಷಗಳ ಹಿಂದೆ ನಾವು ಬಳಸಿದ ವಾಯ್ಸ್ ಸರ್ಚ್‌ನ ಎಲ್ಲ ಮಾಹಿತಿ ಕಾಣಬಹುದು.

Xiaomi Mi TV 4A ಹೇಗಿದೆ?..ಖರೀದಿಸಲು ಬೆಸ್ಟ್ ಟಿವಿ ಇದೇನಾ?

ಒಂದು ವೇಳೆ ನೀವು ಹುಡುಕುವ ಪದವನ್ನು ಸೇವ್ ಮಾಡುವುದು ಬೇಡ ಎಂದಾದರೆ Stop saving activity completely ಅಥವಾ Stop saving activity temporarily ಆಯ್ಕೆ ಕ್ಲಿಕ್ ಮಾಡಬಹುದು. ಹೀಗೆ ಮಾಡಬೇಕಾದರೆ https://myaccount.google.com/activitycontrols ಲಿಂಕ್ ಕ್ಲಿಕ್ ಮಾಡಿ, Web & App Activity ಎಂಬ ಆಯ್ಕೆಯನ್ನು ಆಫ್ ಮಾಡಿಡಿ.

ಓದಿರಿ: 20MP ಸೆಲ್ಫಿ ಕ್ಯಾಮೆರಾವಿರುವ ಈ ಸ್ಮಾರ್ಟ್‌ಫೋನ್ ಬೆಲೆ ಕೇವಲ 8,999 ರೂ.!!

Best Mobiles in India

English summary
To delete your Google Voice Search history, click the three-dot 'Menu' icon in the upper left corner. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+