Subscribe to Gizbot

20MP ಸೆಲ್ಫಿ ಕ್ಯಾಮೆರಾವಿರುವ ಈ ಸ್ಮಾರ್ಟ್‌ಫೋನ್ ಬೆಲೆ ಕೇವಲ 8,999 ರೂ.!!

Written By:

ಭಾರತದಲ್ಲಿ ಈಗಷ್ಟೇ ಸದ್ದು ಮಾಡುತ್ತಿರುವ ಹಾಂಕಾಂಗ್ ಮೂಲಕ ಮೊಬೈಲ್ ತಯಾರಿಕಾ ಕಂಪೆನಿ ಇನ್ಫಿನಿಕ್ಸ್, ಭಾರತದಲ್ಲಿ ಮೊಬೈಲ್ ಮಾರುಕಟ್ಟೆಯನ್ನು ವಶಪಡಿಸಿಕೊಳ್ಳಲು ಭಾರೀ ಪ್ರಯತ್ನಿಸುತ್ತಿದೆ. ಕೇವಲ 10 ಸಾವಿರಕ್ಕಿಂತ ಕಡಿಮೆ ಬೆಲೆಗೆ ಹೈ ಎಂಡ್ ಫೀಚರ್‌ಗಳಿರುವ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ್ದ ಇನ್ಫಿನಿಕ್ಸ್ ಇದೀಗ ಮತ್ತೊಂದು ಬೆಸ್ಟ್ ಆಫರ್ ಅನ್ನು ನೀಡಿದೆ.

ಭಾರತೀಯ ಮಾರುಕಟ್ಟೆಯಲ್ಲಿಯೇ ಅತ್ಯಂತ ಕಡಿಮೆ ಬೆಲೆಗೆ 18:9ಅನುಪಾತದ ಡಿಸ್‌ಪ್ಲೇ, 20MP ಸೆಲ್ಫಿ ಕ್ಯಾಮೆರಾ, 4000mAh ಬ್ಯಾಟರಿಗಳಂತಹ ಫೀಚರ್ಸ್ ಮೂಲಕ ಹೊರಬಂದಿದ್ದ ಇನ್ಫಿನಿಕ್ಸ್ ಹಾಟ್ ಎಸ್3 ಸ್ಮಾರ್ಟ್‌ಫೋನ್ ಇದೀಗ ಮತ್ತೊಮ್ಮೆ ಬೆಲೆ ಕಳೆದುಕೊಂಡಿದೆ. ಇದೀಗ ಇನ್ಫಿನಿಕ್ಸ್ ಹಾಟ್ ಎಸ್3 ಸ್ಮಾರ್ಟ್‌ಫೋನ್ ಬೆಲೆ ಕೇವಲ 8,999 ರೂ.ಗೆ ಲಭ್ಯವಿದೆ.

20MP ಸೆಲ್ಫಿ ಕ್ಯಾಮೆರಾವಿರುವ ಈ ಸ್ಮಾರ್ಟ್‌ಫೋನ್ ಬೆಲೆ ಕೇವಲ 8,999 ರೂ.!!

"ಇಂಡಿಯಾ ಫಸ್ಟ್" ಸ್ಮಾರ್ಟ್‌ಫೋನ್ ಎಂಬ ಹೆಸರಿನಲ್ಲಿ ಬಿಡುಗಡೆಯಾಗಿದ್ದ ಇನ್ಫಿನಿಕ್ಸ್ ಹಾಟ್ ಎಸ್3 ಸ್ಮಾರ್ಟ್‌ಫೋನ್ ಶಿಯೋಮಿ ಕಂಪೆನಿಯ ಬಜೆಟ್ ಸ್ಮಾರ್ಟ್‌ಫೋನ್‌ಗಳಿಗೂ ಸೆಡ್ಡು ಹೊಡೆಯುತ್ತಿದೆ. ಹಾಗಾದರೆ, ಇನ್ಫಿನಿಕ್ಸ್ ಹಾಟ್ ಎಸ್ 3 ಸ್ಮಾರ್ಟ್‌ಫೋನ್ ಇತರೆ ಫೀಚರ್ಸ್ ಮತ್ತು ವಿಶೇಷತೆಗಳು ಯಾವುವು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಡಿಸ್‌ಪ್ಲೇ ಮತ್ತು ವಿನ್ಯಾಸ!!

ಡಿಸ್‌ಪ್ಲೇ ಮತ್ತು ವಿನ್ಯಾಸ!!

ಇನ್ಫಿನಿಕ್ಸ್ ಹಾಟ್ ಎಸ್ 3 18:9 ಪ್ರದರ್ಶನದೊಂದಿಗೆ ಬಂದಿದ್ದು, 565 ಇಂಚ್ (1,440 × 720 ಪಿಕ್ಸೆಲ್) ಹೆಚ್‌ಡಿ + ಡಿಸ್‌ಪ್ಲೇಯನ್ನು ಹೊಂದಿದೆ.! ಸ್ಮಾರ್ಟ್‌ಫೋನ್ ಸಾಕಷ್ಟು ಕಿರಿದಾದ ಬೆಜೆಲ್‌ಗಳನ್ನು ಹೊಂದಿದ್ದು, ಹಿಂಬಾಗದಲ್ಲಿ ಫಿಂಗರ್‌ಪ್ರಿಂಟ್ ಕ್ಯಾಮೆರಾ, ಒಂದು ರಿಯರ್ ಕ್ಯಾಮೆರಾ ಹಾಗೂ ಫ್ಲ್ಯಾಶ್‌ನೊಂದಿಗೆ ವಿನ್ಯಾಸಗೊಂಡಿದೆ.!!

ಪ್ರೊಸೆಸರ್ ಮತ್ತು ಒಎಸ್!!

ಪ್ರೊಸೆಸರ್ ಮತ್ತು ಒಎಸ್!!

ಕ್ವಾಲ್ಕಾಮ್ ಓಕ್ಟಾ-ಕೋರ್ ಸ್ನ್ಯಾಪ್‌ಡ್ರಾಗನ್ 430 ಪ್ರೊಸೆಸರ್ ಅನ್ನು ಕಡಿಮೆ ಬೆಲೆಯ ಇನ್ಫಿನಿಕ್ಸ್ ಹಾಟ್ ಎಸ್3 ಸ್ಮಾರ್ಟ್‌ಫೋನಿನಲ್ಲಿ ಅಳವಡಿಸಲಾಗಿದೆ.! ಇನ್ನು ನೂತನ ಗೂಗಲ್ ಆಂಡ್ರಾಯ್ಡ್ ಓರಿಯೋ ಮೂಲಕ ಸ್ಮಾರ್ಟ್‌ಫೋನ್ ಕಾರ್ಯನಿರ್ವಹಣೆ ನೀಡಲಿದೆ.!!

RAM ಮತ್ತು ಮೆಮೊರಿ!!

RAM ಮತ್ತು ಮೆಮೊರಿ!!

ಇನ್ಫಿನಿಕ್ಸ್ ಹಾಟ್ ಎಸ್3 ಸ್ಮಾರ್ಟ್‌ಫೋನ್ ಎರಡು ವೆರೆಯಂಟ್‌ಗಳಲ್ಲಿ ಮಾರುಕಟ್ಟೆಗೆ ಕಾಲಿಟ್ಟಿದ್ದು, 3GB RAM ಮತ್ತು 32GB ಆಂತರಿಕ ಮೆಮೊರಿ ಹಾಗೂ 4GB RAM ಮತ್ತು 64GB ಆಂತರಿಕ ಮೆಮೊರಿಯ ಎರಡು ಸ್ಮಾರ್ಟ್‌ಫೋನ್‌ಗಳು ಲಭ್ಯವಿವೆ.! ಎರಡೂ ಫೋನ್‌ಗಳ ಮೆಮೊರಿಯನ್ನು ಎಸ್‌ಡಿ ಕಾರ್ಡ್ ಮೂಲಕ ಹೆಚ್ಚಿಸಬಹುದಾದ ಆಯ್ಕೆ ಲಭ್ಯವಿದೆ.!!

4000 mAh ಬ್ಯಾಟರಿ!!

4000 mAh ಬ್ಯಾಟರಿ!!

ಚೀನಾ ಕಂಪೆನಿಯ ಸ್ಮಾರ್ಟ್‌ಫೋನ್‌ಗಳಿಗೆ ನೇರಾ ನೇರಾ ಸೆಡ್ಡುಹೊಡೆಯುತ್ತಿರುವ ಇನ್ಫಿನಿಕ್ಸ್ ಹಾಟ್ ಎಸ್3 ಸ್ಮಾರ್ಟ್‌ಫೋನ್ 4000 mAh ಬ್ಯಾಟರಿ ಶಕ್ತಿಯನ್ನು ಹೊಂದಿದೆ.! ಬಜೆಟ್ ಬೆಲೆಯಲ್ಲಿ ಎಲ್ಲಾ ಫೀಚರ್ಸ್‌ಗಳನ್ನು ನೀಡಿರುವ ಇನ್ಫಿನಿಕ್ಸ್ ಕಂಪೆನಿ ಬ್ಯಾಟರಿ ವಿಷಯದಲ್ಲಿ ರಾಜಿಯಾಗದೇ ಮಾರುಕಟ್ಟೆಗೆ ಕಾಲಿಟ್ಟಿದೆ.!!

20 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ!!

20 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ!!

ಮೊದಲೇ ಹೇಳಿದಂತೆ ಅತ್ಯಂತ ಕಡಿಮೆ ಬೆಲೆಗೆ 20MP ಸೆಲ್ಫಿ ಕ್ಯಾಮೆರಾ ಹೊಂದಿರುವ ಸ್ಮಾರ್ಟ್‌ಪೋನ್ ಇದಾಗಿದ್ದು, ಡಿಎಸ್ಎಲ್ಆರ್-ರೀತಿಯ ಬೊಕೆ ಪರಿಣಾಮಗಳ ಸೆಲ್ಫಿ ತೆಗೆಯಬಹುದು ಎಂದು ಹೇಳಲಾಗಿದೆ. ಎರಡೂ ಕಡೆಗಳಲ್ಲಿ ಎಲ್‌ಇಡಿ ಫ್ಲಾಶ್ ಹೊಂದಿರುವ ಈ ಫೋನ್ 13MP ರಿಯರ್ ಕ್ಯಾಮೆರಾವನ್ನು ಹೊಂದಿದೆ.!!

ಸ್ಮಾರ್ಟ್‌ಪೋನ್ ಬೆಲೆ ಎಷ್ಟು?

ಸ್ಮಾರ್ಟ್‌ಪೋನ್ ಬೆಲೆ ಎಷ್ಟು?

ಇನ್ಫಿನಿಕ್ಸ್ ಹಾಟ್ ಎಸ್ 3 ಸ್ಮಾರ್ಟ್‌ಫೋನಿನ ಆರಂಭಿಕ ಬೆಲೆ 8,999 ರೂಪಾಯಿಗಳಿಂದ ಆರಂಭವಾಗಿದೆ. ಭಾರತದಲ್ಲಿ 3 ಜಿಬಿ + 32 ಜಿಬಿ ವೆರಿಯಂಟ್ ಸ್ಮಾರ್ಟ್‌ಫೋನ್ ಬೆಲೆ 8,999 ರೂಪಾಯಿಗಳಾಗಿದ್ದರೆ, 4GB + 64GB ವೆರಿಯಂಟ್ ಫೋನ್ ಬೆಲೆ 10,999 ರೂಪಾಯಿಗಳಾಗಿವೆ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
In this competitive selfie market, Infinix, which is an online smartphone brand from China-based Transsion Holdings. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot