ಗೂಗಲ್ ಹ್ಯಾಂಡ್‌ರೈಟ್ ಸರ್ಚ್ ಆಯ್ಕೆಯನ್ನು ಬಳಸುವುದು ಹೇಗೆ?
ಗೂಗಲ್‌ನಲ್ಲಿ ಯಾವುದೇ ವಿಚಾರವನ್ನು ಟೈಪಿಸಿ ಕ್ಷಣದಲ್ಲೇ ಮಾಹಿತಿಯನ್ನು ಹುಡುಕಬಹುದು. ಹೀಗಾಗಿ ಈ ಮಾಹಿತಿಗಳನ್ನು ಮತ್ತಷ್ಟು ಸುಲಭವಾಗಿ ಜನರಿಗೆ ಸಿಗುವಂತೆ ಮಾಡಲು ವಿವಿಧ ರೀತಿಯ ವಿಶಿಷ್ಟ ಸೌಲಭ್ಯಗಳನ್ನು ಈಗಾಗಲೇ ಆರಂಭಿಸಿರುವುದನ್ನು ನೀವು ಓದಿರಬಹುದು. ಇಷ್ಟೇ ಅಲ್ಲದೇ ಸ್ಮಾರ್ಟ್‌ಫೋನ್,ಫ್ಯಾಬ್ಲೆಟ್,ಟ್ಯಾಬ್ಲೆಟ್‌ನಲ್ಲಿ ಸ್ಕ್ರೀನ್‌ನಲ್ಲಿ ಕೈಯಲ್ಲಿ ಬರೆದು ಗೂಗಲ್‌ನಲ್ಲಿ ಮಾಹಿತಿ ಹುಡುಕಬಹುದು.
ಈ ಸೇವೆಯನ್ನು ಬಳಸಲು ಹೀಗೆ ಸೆಟ್ಟಿಂಗ್ಸ್ ಮಾಡಿ:
ನಿಮ್ಮಲ್ಲಿರುವ ಸಾಧನದ ಮೂಲಕ ಗೂಗಲ್ ಹೋಮ್‌ಪೇಜ್‌ನ ಕೆಳಗಡೆ ಇರುವ ಸೆಟ್ಟಿಂಗ್ಸ್ ಮೆನುವಿಗೆ ಹೋಗಿ. ಇಲ್ಲಿ 'Handwrite' ವಿಭಾಗಕ್ಕೆ ಹೋಗಿ 'Enable' ಆಯ್ಕೆಯನ್ನು ಸೆಲೆಕ್ಟ್ ಮಾಡಿ ಸೇವ್ ಬಟನ್ ಒತ್ತಿರಿ.
ಈ ರೀತಿ ಸೆಟ್ಟಿಂಗ್ಸ್ ಬದಲಾವಣೆ ಮಾಡಿದ ಮೇಲೆ ಗೂಗಲ್ ಸರ್ಚ್ ಹೋಮ್ ಪೇಜ್ ಹೋಗಿ. ಈ ಸಂದರ್ಭದಲ್ಲಿ ಹೋಮ್ ಪೇಜ್‌ನ ಕೆಳಗಡೆಯ ಬಲಭಾಗದ ತುದಿಯಲ್ಲಿ ಒಂದು ಹ್ಯಾಂಡ್‌ರೈಟ್ ಐಕಾನ್ ಕಾಣಿಸುತ್ತಿರುತ್ತದೆ. ಐಕಾನ್ ಟ್ಯಾಪ್ ಮಾಡಿ ಸ್ಕ್ರೀನ್ ಮಧ್ಯಕ್ಕೆ ಎಳೆದು ತನ್ನಿ. ನಂತರ ನಿಮ್ಮ ಸ್ಕ್ರೀನ್ ನಲ್ಲಿ ಕೈಯಲ್ಲಿ ಬರೆಯಲು ಆರಂಭಿಸಿ. ನೀವು ಬರೆದ ಅಕ್ಷರಗಳು ಸರಿಯಾಗಿದ್ದಲ್ಲಿ ಆ ಅಕ್ಷರಗಳು ಗೂಗಲ್ ಸರ್ಚ್‌ನಲ್ಲಿ ಟೈಪ್ ಆಗುತ್ತಿರುತ್ತದೆ.
ಈ ಸಾಧನಗಳಿಗೆ ಈ ಹ್ಯಾಂಡ್‌ರೈಟ್ ಸೇವೆ ಲಭ್ಯವಾಗುತ್ತದೆ-
ಆಂಡ್ರಾಯ್ಡ್ 2.3 ಜಿಂಜರ್‌ಬ್ರಿಡ್ ಆಪರೇಟಿಂಗ್ ಸಿಸ್ಟಂ ನಂತರ ಬಂದಿರುವ ಎಲ್ಲಾ ಆಂಡ್ರಾಯ್ಡ್ ಓಎಸ್ ಸ್ಮಾರ್ಟ್‌ಫೋನ್ ಹೊಂದಿರುವ ಗ್ರಾಹಕರು ಈ ಸೇವೆ ಬಳಸಬಹುದು.
ಟ್ಯಾಬ್ಲೆಟ್‌ನಲ್ಲಾದರೆ ಆಂಡ್ರಾಯ್ಡ್ 4.0+ ಐಸ್‌ಕ್ರೀಮ್ ಸ್ಯಾಂಡ್ವಿಚ್, ಜೆಲ್ಲಿಬೀನ್ ಓಎಸ್ ಹೊಂದಿರುವ ಬಳಕೆದಾರರು ಈ ಸೇವೆ ಬಳಸಬಹುದು.
ಆಪ್‌ಲ್ ಸಾಧನದಲ್ಲಾದರೆ iOS 5+ ನಂತರ ಬಂದಿರುವ ಐಫೋನ್ ಮತ್ತು ಐಪ್ಯಾಡ್ ಹೊಂದಿರುವ ಬಳಕೆದಾರರು ಈ ಸೇವೆಯನ್ನು ಬಳಸಬಹುದು.
<center><center><center><center><iframe width="640" height="360" src="https://www.youtube.com/embed/uyeJXKfAcpc?feature=player_embedded" frameborder="0" allowfullscreen></iframe></center></center></center></center>


Click it and Unblock the Notifications








