ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಪೋನಿನ ವೇಗ ಹೆಚ್ಚಿಸುವುದು ಹೇಗೆ ಅಂತೀರಾ...?
ಆಂಡ್ರಾಯ್ಡ್ ಪೋನು ಬಳಕೆದಾರರ ಬಹುದೊಡ್ಡ ದೂರು ಎಂದರೆ ನಮ್ಮ ಫೋನು ಇದ್ದಕ್ಕಿಂತೆ ನಿಧಾನವಾಗಿ ಕಾರ್ಯನಿರ್ವಹಿಸುತ್ತಿದೆ ಎಂಬುದು. ಈ ಹಿನ್ನಲೆಯಲ್ಲಿ ನಿಮ್ಮ ಆಂಡ್ರಾಯ್ಡ್ ಪೋನಿನ ವೇಗವನ್ನು ಹೆಚ್ಚಿಸುವುದು ಹೇಗೆ ಎಂದನ್ನು ತಿಳಿಯೋಣ.
ಇಂದಿನ ದಿನಗಳಲ್ಲಿ ಸ್ಮಾರ್ಟ್‌ಪೋನು ಪ್ರತಿಯೊಬ್ಬರ ಕಿಸೆ ಸೇರಿದ್ದು, ಬೇರೆ ಎಲ್ಲಾ ಗ್ಯಾಜೆಟ್ ಗಳಿಗಿಂತ ಸರಳವಾಗಿ ಎಲ್ಲರ ಬಳಕೆಗೆ ಮುಕ್ತವಾಗಿದೆ. ಹೀಗೆ ಪ್ರತಿಯೊಬ್ಬರ ಕೈಯಲ್ಲೂ ಕಾಣ ಸಿಗುತ್ತಿರುವ ಸ್ಮಾರ್ಟ್‌ಪೋನುಗಳಲ್ಲಿ ಬಹುತೇಕ ಆಂಡ್ರಾಯ್ಡ್ ಕಾರ್ಯಚರಣೆಯಲ್ಲಿ ನಡೆಯುತ್ತಿವೆ.

ಒಂದೇ ಪೋನಿನಲ್ಲಿ ಎರಡು ಫೇಸ್‌ಬುಕ್ ಆಕೌಂಟ್ ಬಳಸುವುದು ಹೇಗೆ..?
ಈ ಆಂಡ್ರಾಯ್ಡ್ ಪೋನು ಬಳಕೆದಾರರ ಬಹುದೊಡ್ಡ ದೂರು ಎಂದರೆ ನಮ್ಮ ಫೋನು ಇದ್ದಕ್ಕಿಂತೆ ನಿಧಾನವಾಗಿ ಕಾರ್ಯನಿರ್ವಹಿಸುತ್ತಿದೆ ಎಂಬುದು. ಈ ಹಿನ್ನಲೆಯಲ್ಲಿ ನಿಮ್ಮ ಆಂಡ್ರಾಯ್ಡ್ ಪೋನಿನ ವೇಗವನ್ನು ಹೆಚ್ಚಿಸುವುದು ಹೇಗೆ ಎಂದನ್ನು ತಿಳಿಯೋಣ.

ಹೋಮ್ ಸ್ಕ್ರಿನ್ ಕ್ಲಿನ್ ಮಾಡಿ
ನಿಮ್ಮ ಆಂಡ್ರಾಯ್ಡ್ ಪೋನಿನ RAMನಲ್ಲಿ ಎಷ್ಟು ಖಾಲಿ ಜಾಗವಿರುತ್ತದೆಯೋ ಅಷ್ಟು ವೇಗವಾಗಿ ಕಾರ್ಯನಿರ್ವಹಿಸಲಿದೆ. ಈ ಹಿನ್ನಲೆಯಲ್ಲಿ ನಿಮ್ಮ ಪೋನಿನ ಹೋಮ್ ಸ್ಕ್ರಿನ್ ಅನ್ನು ಆಗಿಂದಾಗಲೇ ಕ್ಲಿನ್ ಮಾಡುತ್ತಿರಿ. ಅಲ್ಲದೇ ಬಾಕ್‌ಗ್ರಾಂಡಿನಲ್ಲಿ ಆದಷ್ಟು ಕಡಿಮ ಆಪ್ ಗಳ ಇರುವಂತೆ ನೋಡಿಕೋಳ್ಳಿ.

ಬೇರೆ ಬೇರೆ ಲಾಚರ್ ಟ್ರೈ ಮಾಡಿ
ನಿಮ್ಮ ಪೋನಿನ ವೇಗವನ್ನು ಹೆಚ್ಚಿಸಲು ಬೇರೆ ಬೇರೆ ಲಾಂಚರ್ ಗಳನ್ನು ಉಪಯೋಗಿಸುವುದರಿಂದಲೂ ನಿಮ್ಮ ಪೋನಿನ ವೇಗವನ್ನು ಹೆಚ್ಚಿಸಬಹುದಾಗಿದೆ. ನಿಮ್ಮ ಪೋನಿನಲ್ಲಿ ಇರುವ ಲಾಂಚರ್ ಗಳು ಹೆಚ್ಚಿನ ಕ್ಲಿಷ್ಟವಾಗಿದ್ದರು ಫೋನ್ ನಿಧಾನ ಎನ್ನಿಸಬಹುದು. ನೋವಾ ಲಾಂಚರ್ ಇದ್ದರಲ್ಲಿ ಸ್ಪಲ್ಪ ವೇಗವಾಗಿ ಕಾರ್ಯನಿರ್ವಹಿಸುತ್ತದೆ ಎನ್ನಲಾಗಿದೆ.

ಬ್ರೌಸರ್ ಬದಲಾವಣೆ ಮಾಡಿ
ಗೂಗಲ್ ಕ್ರೋಮ್ ಬೌಸರ್ ಹೆಚ್ಚಿನ ಜಾಗ ಮತ್ತು ವೇಗವನ್ನು ಬೇಡುತ್ತದೆ ಇದರಿಂದ ನಿಮ್ಮ ಪೋನಿ ವೇಗ ಕಡಿಮೆಯಾಗಬಹುದು ಹಾಗಾಗಿ, ಕ್ರೋಮ್ ಬಿಟ್ಟು ಬೇರೆ ಯಾವುದಾದರು ಬ್ರೌಸರ್ ಆಪ್ ಬಳಕೆ ಮಾಡಿ. ಓಪೆರಾ, ಯುಸಿ ಮುಂತಾದವನ್ನು ಬಳಸಬಹುದಾಗಿದೆ.

ಬ್ಯಾಡ್ ಆಪ್ ಗಳನ್ನು ಡಿಲಿಟ್ ಮಾಡಿ
ನಿಮ್ಮ ಆಂಡ್ರಾಯ್ಡ್ ಪೋನಿನ ವೇಗವನ್ನು ಹೆಚ್ಚಿಸಲು ಮೊದಲು ನೀವು ಮಾಡಬೇಕಾದ ಕೆಲಸ ಎಂದರೆ ಬ್ಯಾಡ್ ಆಪ್ ಗಳನ್ನು ಡಿಲಿಟ್ ಮಾಡುವುದು. ನಿಮ್ಮ ಪೋನಿನಲ್ಲಿರುವ ಫೇಸ್‌ಬುಕ್ ಮತ್ತು ಸ್ನ್ಯಾಪ್ ಚಾಟ್ ಈ ಎರಡು ಆಪ್ ಗಳನ್ನು ಡಿಲಿಟ್ ಮಾಡಿದರೆ ಸಾಕು ನಿಮ್ಮ ಪೋನಿನ ವೇಗ ಶೇ.20 ರಷ್ಟು ಹೆಚ್ಚಾಗಲಿದೆ.

ಆಂಟಿವೈರಸ್ ತೆಗೆದುಹಾಕಿರಿ
ನಿಮ್ಮ ಪೋನಿನ ವೇಗವನ್ನು ಕಡಿಮೆ ಮಾಡುವಲ್ಲಿ ಆಂಟಿವೈರಸ್‌ಗಳ ಪಾತ್ರ ಪ್ರಮುಖವಾಗಿದೆ, ಹಾಗಾಗಿ ನಿಮ್ಮ ಪೋನಿನಲ್ಲಿರುವ ಆಂಟಿವೈರಸ್ ಸಾಫ್ಟ್‌ವೇರ್‌ಗಳನ್ನು ಅನ್ ಇನ್ಸಟಾಲ್ ಮಾಡುವ ಮೂಲಕ ನಿಮ್ಮ ಪೋನಿನ ವೇಗವನ್ನು ಹೆಚ್ಚಿಸ ಬಹುದಾಗಿದೆ.


Click it and Unblock the Notifications








