Home
ಟೆಕ್ ನೌಕರಿ

ನಿಮ್ಮ ನಂಬರ್‌ ಕಾಣದಂತೆ ಇತರರಿಗೆ ಫೋನ್‌ ಕರೆ ಮಾಡುವುದು ಹೇಗೆ?

By Suneel

ಹಲವು ಸಾಮಾಜಿಕ ಜಾಲತಾಣ ಖಾತೆಗಳನ್ನು ಹೊಂದುವುದರಿಂದ, ವ್ಯಕ್ತಿಯ ಮೊಬೈಲ್‌ ನಂಬರ್‌ ಯಾವುದಾದರೊಂದು ಸಾಮಾಜಿಕ ತಾಣದಿಂದ ಸಾರ್ವಜನಿಕರಿಗೆ ಪ್ರದರ್ಶನವಾಗುತ್ತದೆ. ವ್ಯಕ್ತಿಯ ನಂಬರ್‌ ಸಾರ್ವಜನಿಕ ವೇದಿಕೆಯಲ್ಲಿ ಪ್ರದರ್ಶನವಾಗುವುದರಿಂದ ಸಮಸ್ಯೆ ತಪ್ಪಿದಲ್ಲ. ಅಲ್ಲದೇ ದಿನದಿಂದ ದಿನಕ್ಕೆ ನಾವುಗಳು ಹಲವು ಜನರಿಗೆ ಕರೆ ಮಾಡುತ್ತೇವೆ. ಸಾಲದು ಎಂದು ನಮಗೆ ಪರಿಚಿತವಲ್ಲದ ವ್ಯಕ್ತಿಗಳಿಗೂ ಸಹ ಕರೆ ಮಾಡುತ್ತೇವೆ.

ಅಂದಹಾಗೆ ಪರಿಚಿತವಲ್ಲದ ವ್ಯಕ್ತಿಗಳಿಗೆ ನಮ್ಮ ವೈಯಕ್ತಿಕ ನಂಬರ್‌ಗಳು ಸಿಗುವುದರಿಂದ ಕೆಲವೊಮ್ಮೆ ಹಲವು ಬೆದರಿಕೆಗಳು ಮತ್ತು ಘಟನೆಗಳು ಜರುಗುತ್ತವೆ. ದುರುದ್ದೇಶಪೂರಕ ಚಟುವಟಿಕೆಗಳು ಸಹ ನಡೆಯುತ್ತವೆ. ಆದ್ದರಿಂದ ವೈಯಕ್ತಿಕ ನಂಬರ್‌ ಅನ್ನು ಅಪರಿಚಿತರಿಗೆ ತಿಳಿಯದಂತೆ ಕಾಪಾಡುವುದು ಉತ್ತಮ.

ಜಿಯೋ ಸಿಮ್ ಡೌನ್‌ಲೋಡ್‌ ವೇಗವನ್ನು, ಮೊಬೈಲ್‌ ಬ್ರೌಸರ್‌ನಿಂದ ಹೆಚ್ಚಿಸಲು ಟ್ರಿಕ್ಸ್

ಇಂದಿನ ಲೇಖನದಲ್ಲಿ ನಿಮ್ಮ ವೈಯಕ್ತಿಕ ಮೊಬೈಲ್‌ ನಂಬರ್‌ಗಳನ್ನು ಅಪರಿಚಿತರಿಗೆ ತಿಳಿಯದಂತೆ ಹಾಗೂ ನೀವು ಅಪರಿಚಿತರಿಗೆ ಕರೆ(Call) ಮಾಡಿದರೂ ಸಹ ನಿಮ್ಮ ನಂಬರ್ ಅವರಿಗೆ ಕಾಣದಂತೆ, ಕೇವಲ "Private Number" ಎಂದು ಗೋಚರಿಸುವ ಹಾಗೆ ಕಾಣುವಂತೆ ಕರೆ ಮಾಡುವುದು ಹೇಗೆ ಎಂದು ತಿಳಿಸುತ್ತಿದ್ದೇವೆ.

ಹೇಗೆ ಎಂದು ಲೇಖನದ ಕೆಳಗಿನ ಸ್ಲೈಡರ್‌ಗಳ ಮಾಹಿತಿ ಓದಿ ತಿಳಿಯಿರಿ.

ನಿಮ್ಮ ಆಂಡ್ರಾಯ್ಡ್ ಫೋನ್ ನಂಬರ್‌ ಅನ್ನು 'Private Number'  ಆಗಿ ಬದಲಿಸಿ

ನಿಮ್ಮ ಆಂಡ್ರಾಯ್ಡ್ ಫೋನ್ ನಂಬರ್‌ ಅನ್ನು 'Private Number' ಆಗಿ ಬದಲಿಸಿ

ಅಪರಿಚಿತರಿಗೆ ನೀವು ಕರೆ ಮಾಡಿದರೂ, ನಿಮ್ಮ ನಂಬರ್ ಗೋಚರಿಸದಂತೆ, ಆಂಡ್ರಾಯ್ಡ್ ಬಳಕೆದಾರರು 10 ಸಂಖ್ಯೆಯ ಮೊಬೈಲ್ ನಂಬರ್‌ ಅನ್ನು 'Private' ಎಂದು ಬದಲಿಸಿ. ಹೀಗೆ ಮಾಡುವುದರಿಂದ ಅಪರಿಚಿತರಿಗೆ ನಿಮ್ಮ ಮೊಬೈಲ್‌ ಸಂಖ್ಯೆ ತಿಳಿಯುವುದಿಲ್ಲ. ಅಲ್ಲದೇ ನಿಮ್ಮ ಸ್ನೇಹಿತರಿಗೆ ಆಗಾಗ ಫೂಲ್‌ ಮಾಡಬಹುದು. ಹೇಗೆ ಎಂದು ತಿಳಿಯಲು ಮುಂದೆ ಓದಿರಿ.

 ಆಂಡ್ರಾಯ್ಡ್ 4.0 ಮತ್ತು ಹಿಂದಿನ ಬಳಕೆದಾರರಿಗಾಗಿ

ಆಂಡ್ರಾಯ್ಡ್ 4.0 ಮತ್ತು ಹಿಂದಿನ ಬಳಕೆದಾರರಿಗಾಗಿ

ಓಪನ್‌ Settings App>>Go to'Call> additional settings>>Caller ID>> Hide Number Option ಟ್ಯಾಪ್ ಮಾಡಿ. ನಂತರ ನೀವು ನಿಮ್ಮ ಸ್ನೇಹಿತರಿಗೆ, ಯಾರಿಗೆ ಕರೆ ಮಾಡಿದರೂ ಸಹ ನೀವು ಯಾರು ಎಂದು ತಿಳಿಯುವುದಿಲ್ಲ. ಅಲ್ಲದೇ ನಿಮ್ಮ ನಂಬರ್‌ 'Private Number calling' ಎಂದು ಗೋಚರವಾಗುತ್ತದೆ.

ಆಂಡ್ರಾಯ್ಡ್ 4.1 ಮತ್ತು ನಂತರದ ಬಳಕೆದಾರರು

ಆಂಡ್ರಾಯ್ಡ್ 4.1 ಮತ್ತು ನಂತರದ ಬಳಕೆದಾರರು

ಓಪನ್ Phone app>>Click on Menu>> Go to Call settings >> Caller ID>> Hide number option ಮೇಲೆ ಕ್ಲಿಕ್‌ ಮಾಡಿ. ನಂತರ ನೀವು ಯಾರಿಗೆ ಕರೆ ಮಾಡಿದರು 'Private Number' ಎಂದು ಗೋಚರವಾಗುತ್ತದೆ.

ಐಫೋನ್ ಬಳಕೆದಾರರು 'Private Number' ಎಂದು ಹೇಗೆ ಬದಲಿಸುವುದು

ಐಫೋನ್ ಬಳಕೆದಾರರು 'Private Number' ಎಂದು ಹೇಗೆ ಬದಲಿಸುವುದು

ಐಫೋನ್‌ ಬಳಕೆದಾರರು ಓಪನ್‌ Settings app>> go to Phone icon>>Show My Caller ID ಕ್ಲಿಕ್ ಮಾಡಿ. ನಂತರ 'Private number' ಎಂದು ಗೋಚರಿಸುವಂತೆ ಮಾಡಿ.

ವಿಂಡೋಸ್ ಫೋನ್‌ ಬಳಕೆದಾರರು

ವಿಂಡೋಸ್ ಫೋನ್‌ ಬಳಕೆದಾರರು

ವಿಂಡೋಸ್‌ ಫೋನ್‌ ಬಳಕೆದಾರರು ಫೋನ್‌ ಆಪ್‌ ಓಪನ್‌ ಮಾಡಿ Mobile>>go to more button option>>settings>> click on Show my caller ID>>no one /my Contacts ಯಾವುದಾದರೊಂದು ಆಯ್ಕೆ ಸೆಲೆಕ್ಟ್‌ ಮಾಡಿ.

No One ಆಪ್ಶನ್ ನಿಮ್ಮ ಎಲ್ಲ ಕರೆಗಳನ್ನು ಸಹ 'Private number' ಎಂದು ಗೋಚರಿಸುತ್ತದೆ. 'My Contact' ಆಪ್ಶನ್‌ ನಿಮ್ಮ ನಂಬರ್‌ ಅನ್ನು ನಿಮ್ಮ ಕಾಂಟ್ಯಾಕ್ಟ್‌ಗಳಿಗೆ ಮಾತ್ರ 'Private number' ಎಂದು ಗೋಚರಿಸುವಂತೆ ಮಾಡುತ್ತದೆ.

ಸೂಚನೆ: ನಿಮ್ಮ ನಂಬರ್‌ ಅನ್ನು 'Private Number' ಎಂದು ಪಡೆಯಲು ಮೊದಲಿಗೆ ನಿಮ್ ಮೊಬೈಲ್‌ ಆಪರೇಟರ್ ಅನ್ನು ಸಂಪರ್ಕಿಸಬೇಕು. ಏರ್‌ಟೆಲ್‌, ವೊಡಾಫೋನ್‌, ಬಿಎಸ್‌ಎನ್‌ಎಲ್‌ಗಳು ಪ್ರತ್ಯೇಕ ಸೇವೆಗಳಾಗಿ ಡಯಲ್‌ಪೋರ್ಟ್‌, ವಿಐಪಿ ಮೊಬೈಲ್‌, ವೊಡಾಫೋನ್‌ ವಿಪಿಎನ್‌ ಮತ್ತು ವಾಯ್ಸ್ ವಿಪಿಎನ್‌ಗಳನ್ನು ಹೊಂದಿವೆ.

Best Mobiles in India

English summary
How to Make a Call in India Without Showing Your Phone Number to other. Read more about this in kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+