Subscribe to Gizbot

ಬೇರೆಯವರಿಗೆ ನಿಮ್ಮ ಮೊಬೈಲ್ ನಂಬರ್ ಕಾಣಿಸದಂತೆ ಕಾಲ್ ಮಾಡುವುದು ಹೇಗೆ?

Written By:

ಸ್ಮಾರ್ಟ್‌ಫೋನ್ ಬಳಕೆ ಮಾಡುವವೇಳೆ ಕೆಲವೊಮ್ಮೆ ಕಿರಿಕಿರಿ ಉಂಟಾಗುವುದು ಸಹಜ.! ನಿಮ್ಮ ಮೊಬೈಲ್ ನಂಬರ್ ಹಲವು ವೇಳೆ ಅಪರಿಚಿತರಿಗೆ ಸಿಗುವ ಸಾಧ್ಯತೆ ಇದೆ. ಇನ್ನು ನಿಮ್ಮ ನಂಬರ್‌ನಿಂದ ಅಪರಿಚಿತರಿಗೆ ಕರೆ ಮಾಡಿದರೆ ಆ ನಂಬರ್ ಅವರಲ್ಲಿ ಸೇವ್ ಆಗಿ ಬಿಡುತ್ತದೆ. ಅವರು ಮತ್ತೆ ಮತ್ತೆ ನಿಮಗೆ ಕಾಲ್‌ಮಾಡಿ ನಿಮಗೆ ಕಿರಿಕಿರಿ ಉಂಟು ಮಾಡುತ್ತಾರೆ.!

ಹಾಗಾಗಿ, ನೀವು ಯಾರಿಗೇ ಕರೆ ಮಾಡಿದರೂ ಸಹ ನಿಮ್ಮ ನಂಬರ್ ಅವರಿಗೆ ಕಾಣದಂತೆ, ಕೇವಲ "Private Number" ಎಂದು ಗೋಚರಿಸುವ ಹಾಗೆ, ಇಂತಹ ಕಿರಿಕಿರಿಗಳನ್ನು ತಪ್ಪಿಸುವುದರ ಜೊತೆಗೆ ಇದರಿಂದ ನಿಮ್ಮ ಸ್ನೇಹಿತರಿಗೂ ಆಗಾಗ ಫೂಲ್‌ ಮಾಡಬಹುದು.!!

ಬೇರೆಯವರಿಗೆ ನಿಮ್ಮ ಮೊಬೈಲ್ ನಂಬರ್ ಕಾಣಿಸದಂತೆ ಕಾಲ್ ಮಾಡುವುದು ಹೇಗೆ?

ಏರ್‌ಟೆಲ್ ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿದ ಜಿಯೋ!..ಟ್ರೂ ಕಾಲರ್ ರಿಪೋರ್ಟ್!!

ಇನ್ನು ನೀವೇನಾದರೂ ಕಾರ್ಯದ ನಿಮಿತ್ತ ನಿಮ್ಮ ಪರ್ಸೆನಲ್ ನಂಬರ್ ಮೂಲಕ ಕಸ್ಟಮರ್‌ಗಳಿಗೆ ಕರೆ ಮಾಡಿದರೆ ಮತ್ತೆ ಮತ್ತೆ ಅವರು ನಿಮಗೆ ಕಾಲ್ ಮಾಡಿ ತೊಂದರೆ ಕೊಡಬಹುದು. ಹಾಗಾಗಿ, ಬೆರೆಯವರಿಗೆ ನಿಮ್ಮ ನಂಬರ್‌ ಕಾಣಿಸದಂತೆ ಕರೆ ಮಾಡುವುದು ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿದುಕೊಳ್ಳಿರಿ.

ಆಂಡ್ರಾಯ್ಡ್ ಬಳಕೆದಾರು ಮೊಬೈಲ್ ನಂಬರ್ ಹೈಡ್ ಮಾಡುವುದು ಹೇಗೆ?

ಆಂಡ್ರಾಯ್ಡ್ ಬಳಕೆದಾರರು ಓಪನ್ Phone app>> Click on Menu>> Go to Call settings >> Caller ID>> Hide number option ಮೇಲೆ ಕ್ಲಿಕ್‌ ಮಾಡಿ. ಹೀಗೆ ಮಾಡಿದ ನಂತರ ನೀವು ಯಾರಿಗೆ ಕರೆ ಮಾಡಿದರು 'Private Number' ಎಂದು ಗೋಚರವಾಗುತ್ತದೆ.

ಬೇರೆಯವರಿಗೆ ನಿಮ್ಮ ಮೊಬೈಲ್ ನಂಬರ್ ಕಾಣಿಸದಂತೆ ಕಾಲ್ ಮಾಡುವುದು ಹೇಗೆ?

ಐಫೋನ್ ಬಳಕೆದಾರರು ಮೊಬೈಲ್ ನಂಬರ್ ಹೈಡ್ ಮಾಡುವುದು ಹೇಗೆ?

ಐಫೋನ್ ಬಳಕೆದಾರರು 'Private Number' ಎಂದು ಹೇಗೆ ಬದಲಿಸುವುದು ಐಫೋನ್‌ ಬಳಕೆದಾರರು ಓಪನ್‌ Settings app>> go to Phone icon>>Show My Caller ID ಕ್ಲಿಕ್ ಮಾಡಿ. ನಂತರ 'Private number' ಎಂದು ಗೋಚರಿಸುವಂತೆ ಮಾಡಿ.

ಆನ್‌ಲೈನ್‌ನಲ್ಲಿ ರೈಲ್ವೆ ಟಿಕೆಟ್ ಬುಕ್ ಮಾಡುವುದು ಹೇಗೆ? ಈ ಸಿಂಪಲ್ ಸ್ಟೆಪ್ಸ್ ಫಾಲೋ ಮಾಡಿ

English summary
Enlisted are a few tricks and tactics through which you can change your 10 digit number appear as 'Private number calling' .to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot