ಆನ್‌ಲೈನ್‌ನಲ್ಲಿ ರೈಲ್ವೆ ಟಿಕೆಟ್ ಬುಕ್ ಮಾಡುವುದು ಹೇಗೆ? ಈ ಸಿಂಪಲ್ ಸ್ಟೆಪ್ಸ್ ಫಾಲೋ ಮಾಡಿ

|

ಅಪರೂಪಕ್ಕೊಮ್ಮೆ ರೈಲಿನಲ್ಲಿ ಸಂಚರಿಸುವವರ ಒಂದು ದೊಡ್ಡ ಸಮಸ್ಯೆಯೆಂದರೆ ರೈಲ್ವೆಟಿಕೆಟ್ ಬುಕ್ ಮಾಡುವುದು! ಇದಕ್ಕಿಂತಲೂ ಹೆಚ್ಚಾಗಿ ಎಷ್ಟೋ ಜನರಿಗೆ ಇಂದು ಕೂಡ ರೈಲ್ವೆ ಟಿಕೆಟ್ ಹೇಗೆ ಬುಕ್ ಮಾಡುವುದು ಎಂದು ತಿಳಿದಿಲ್ಲ!!

ರೈಲ್ವೆ ಸ್ಟೇಷನ್‌ನಲ್ಲಿ ಸಾಲು ನಿಂತು, ರೈಲಿನಲ್ಲಿ ಎಷ್ಟು ಖಾಲಿ ಸೀಟುಗಳಿವೆ ಎಂಬುದನ್ನು ತಿಳಿಯುವುದರಿಂದ ಹಿಡಿದು ರೈಲ್ವೆ ಟಿಕೆಟ್ ಬುಕ್ ಮಾಡುವ ವೇಳೆಗೆ ಎರಡು ಅಥವಾ ಮೂರು ದಿವಸಗಳೇ ಕಳೆದಿರುತ್ತವೆ!!

ಗೂಗಲ್‌ನಲ್ಲಿ "Find My Phone" ಎಂದು ಟೈಪಿಸಿ, ಕಳೆದಿರುವ ಮೊಬೈಲ್ ಹುಡುಕಿ!!

ಎಲ್ಲವೂ ಡಿಜಿಟಲ್ ಆಗುತ್ತಿರುವ ಇಂದಿನ ದಿನಗಳಲ್ಲಿ ಒಂದೇ ವೆಬ್‌ಸೈಟ್‌ನಲ್ಲಿ ಎಲ್ಲಾ ರೈಲ್ವೆ ಮಾಹಿತಿಗಳು ಸಿಗುತ್ತಿರುವಾಗ ಆನ್‌ಲೈನ್‌ನಲ್ಲಿ ರೈಲ್ವೆ ಟಿಕೆಟ್ ಬುಕ್ ಮಾಡುವುದು ಹೇಗೆ ಎಂಬುದನ್ನು ಪ್ರತಿಯೊಬ್ಬರು ತಿಳಿಯಬೇಕಾಗಿದೆ. ಹಾಗಾಗಿ, ಆನ್‌ಲೈನ್‌ನಲ್ಲಿ ಸುಲಭವಾಗಿ ರೈಲ್ವೆ ಟಿಕೆಟ್ ಹೇಗೆ ಬುಕ್ ಮಾಡುವುದು ಹೇಗೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

www.IRCTC.co.in ವೆಬ್‌ಸೈಟ್ ತೆರೆಯಿರಿ.

www.IRCTC.co.in ವೆಬ್‌ಸೈಟ್ ತೆರೆಯಿರಿ.

ಆನ್‌ಲೈನ್‌ನಲ್ಲಿ ರೈಲ್ವೇ ಟಿಕೆಟ್ ಬುಕ್ ಮಾಡಲು ಭಾರತ ಸರ್ಕಾದ ಅಧೀನ ಸಂಸ್ಥೆ IRCTC(Indian Railway Catering and Turism Corporationlimited) ವೆಬ್‌ಸೈಟ್ ತೆರೆಯಿರಿ

IRCTC ವೆಬ್‌ಸೈಟ್‌ಗೆ ಸೈನ್ ಅಪ್ ಆಗಿ

IRCTC ವೆಬ್‌ಸೈಟ್‌ಗೆ ಸೈನ್ ಅಪ್ ಆಗಿ

ವೆಬ್‌ಸೈಟ್ ಪೇಜ್ ತೆರೆದ ನಂತರ ಲಾಗಿನ್ ಅನ್ನುವ ಆಯ್ಕೆ ನಿಮಗೆ ಕಾಣಿಸುತ್ತದೆ. ಅದರ ಕೆಳಬಾಗದಲ್ಲಿರುವ ಸೈನ್‌ಅಪ್ ಐಕಾನ್ ಅನ್ನು ಕ್ಲಿಕ್ ಮಾಡಿ. ( ಲಾಗಿನ್ ಆಗಲು ರಿಜಿಸ್ಟರ್ ಮಾಡಿಕೊಳ್ಳಬೇಕು)

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಾಹಿತಿ ನಮೂದಿಸಿ ರಿಜಿಸ್ಟರ್ ಮಾಡಿಕೊಳ್ಳಿ.

ಮಾಹಿತಿ ನಮೂದಿಸಿ ರಿಜಿಸ್ಟರ್ ಮಾಡಿಕೊಳ್ಳಿ.

ಸೈನ್ ಅಪ್ ಆಯ್ಕೆ ಕ್ಲಿಕ್ ಮಾಡಿದ ನಂತರ ಬೇರೆ ಒಂದು ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ಮಾಹಿತಿಗಳನ್ನು ನೀಡಿ ನಿಮ್ಮ ಯೂಸರ್ ಐಡಿ ಮತ್ತು ಪಾಸ್‌ವರ್ಡ್ ತಯಾರಿಸಿಕೊಳ್ಳಿ

ವೆಬ್‌ಸೈಟ್‌ಗೆ ಲಾಗಿನ್ ಆಗಿ.

ವೆಬ್‌ಸೈಟ್‌ಗೆ ಲಾಗಿನ್ ಆಗಿ.

ಸೈನ್ ಅಪ್ ಆದ ನಂತರ ಮತ್ತೆ ವೆಬ್‌ಸೈಟ್‌ ಮುಖಪುಟಕ್ಕೆ ಬನ್ನಿ. ಅಲ್ಲಿ ನಿಮ್ಮ ಯೂಸರ್ ಐಡಿ ಮತ್ತು ಪಾಸ್‌ವರ್ಡ್ ಮೂಲಕ ಲಾಗಿನ್ ಆಗಿರಿ.

ಪ್ರಯಾಣದ ವಿವರ ನಮುದಿಸಿ.

ಪ್ರಯಾಣದ ವಿವರ ನಮುದಿಸಿ.

ವೆಬ್‌ಸೈಟ್‌ಗೆ ಲಾಗಿನ್ ಆದ ನಂತರ ನೀವು ಪ್ರಯಾಣಿಸಬೇಕಾದ ಸ್ಥಳ ಮತ್ತು ದಿನಾಂಕವನ್ನು ನಮೂದಿಸಿ. ನಂತರ ಇ-ಟಿಕೆಟ್ ಎಂದು ಸೆಲೆಕ್ಟ್‌ ಮಾಡಿ ಮತ್ತು ಕೋಟಾ ನಮೂದಿಸಿ.

ರೈಲಿನಲ್ಲಿ ಸೀಟು ಇದೆಯಾ ಖಚಿತಮಾಡಿಕೊಳ್ಳಿ

ರೈಲಿನಲ್ಲಿ ಸೀಟು ಇದೆಯಾ ಖಚಿತಮಾಡಿಕೊಳ್ಳಿ

ನೀವು ಪ್ರಯಾಣಿಸಬೇಕಾದ ಸ್ಥಳ ಮತ್ತು ದಿನಾಂಕವನ್ನು ನಮೂದಿಸಿದ ನಂತರ ಆ ದಿನಾಂಕದಲ್ಲಿ ನೀವು ಪ್ರಯಾಣಿಸಬೇಕಾ ದರೈಲುಗಳ ಲೀಸ್ಟ್ ತೆರೆಯುತ್ತದೆ. ರೈಲಿನಲ್ಲಿ ಸೀಟು ಇದೆ ಎಂಬುದನ್ನು ಖಚಿತಮಾಡಿಕೊಳ್ಳಿ. Wl (waiting list), RAC(Reservation Against Cancellation ) and Available (Seat Available).

ಟಿಕೆಟ್ ಫಾರ್ಮ್ ತುಂಬಿರಿ.

ಟಿಕೆಟ್ ಫಾರ್ಮ್ ತುಂಬಿರಿ.

ಎಷ್ಟು ಜನರಿಗೆ ಟಿಕೆಟ್ ಬೇಕಾಗಿದೆ. ಅವರ ವಯಸ್ಸು ಎಲ್ಲವನ್ನು ಟಿಕೆಟ್ ಫಾರ್ಮ್ ಫಿಲ್ ಮಾಡಿ ನಂತರ ಮುಂದುವರೆಯಿರಿ.

ಹಣ ಪೇ ಮಾಡಿ ರೈಲ್ವೆ ಟಿಕೆಟ್ ಬುಕ್ ಮಾಡಿ

ಹಣ ಪೇ ಮಾಡಿ ರೈಲ್ವೆ ಟಿಕೆಟ್ ಬುಕ್ ಮಾಡಿ

ನಿಮ್ಮ ಎಲ್ಲಾ ಮಾಹಿತಿಗಳನ್ನು ನಮೂದಿಸಿದ ನಂತರ ಮೇಕ್ ಪೇಮೆಮಟ್ ಎಂಬ ಆಯ್ಕೆ ಕಾಣಿಸುತ್ತದೆ. ಆನ್‌ಲೈನ್ ಪೇಮೆಂಟ್ ಮಾಡಿ ನಂತರ ನಿಮಗೆ ಟಿಕೆಟ್ ಬುಕ್ ಆಗಿರುವ ಬಗ್ಗೆ ಎಸ್‌ಎಂಎಸ್ ಬರುತ್ತದೆ. ನಿಮ್ಮ ಟಿಕೆಟ್ ಬಕ್ ಆಗಿರುತ್ತದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
you have to wait in long row or ques for your turn. And it’s a very hectic process. Then why not use some other easy method of booking railway ticket.to know more visit to kannda.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X