Home
ಟೆಕ್ ನೌಕರಿ

Aadhaar Card ನಲ್ಲಿ ನಾವು ಎಷ್ಟು ಬಾರಿ ಹೆಸರು ಬದಲಾವಣೆ ಮಾಡಬಹುದು?

ಪ್ರಸ್ತುತ ದಿನಗಳಲ್ಲಿ ಆಧಾರ್‌ ಕಾರ್ಡ್‌ ಪ್ರತಿಯೊಬ್ಬರ ಪ್ರಮುಖ ದಾಖಲೆಯಾಗಿ ಗುರುತಿಸಿಕೊಂಡಿದೆ. ಸರ್ಕಾರದ ಯಾವುದೇ ಸೌಲಭ್ಯಗಳನ್ನು ಪಡೆದುಕೊಳ್ಳಬೇಕಾದರೂ ಕೂಡ ಆಧಾರ್‌ ಕಾರ್ಡ್‌ (Aadhaar Card) ಅತ್ಯಗತ್ಯವಾಗಿದೆ. ಅಲ್ಲದೇ ಅನೇಕ ಸಂದರ್ಭಗಳಲ್ಲಿ ಆಧಾರ್ ಕಾರ್ಡ್‌ ಅಧಿಕೃತ ಗುರುತಿಸಿನ ಚೀಟಿಯಾಗಿಯು ಬಳಕೆಗೆ ಅವಶ್ಯ ಎನಿಸಿದೆ. ಇನ್ನು ಜನರು ಆಧಾರ್‌ ಕಾರ್ಡ್‌ನಲ್ಲಿರುವ ತಮ್ಮ ಮಾಹಿತಿ ತಿದ್ದುಪಡಿ ಮಾಡುವುದಕ್ಕೂ ಅವಕಾಶ ಸಹ ನೀಡಲಾಗಿದೆ.

ಹೌದು, ಆಧಾರ್‌ ಕಾರ್ಡ್‌ನಲ್ಲಿ (Aadhaar Card) ಜನರು ತಮ್ಮ ಹೆಸರು, ವಿಳಾಸ ಹಾಗೂ ಮೊಬೈಲ್‌ ನಂಬರ್‌ ಅನ್ನು ಬದಲಾವಣೆ ಮಾಡುವುದಕ್ಕೆ UIDAI (ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ) ಅವಕಾಶ ಲಭ್ಯ ಮಾಡಿದೆ. ಅಂದಹಾಗೆ ಆಧಾರ್‌ ಕಾರ್ಡ್‌ನಲ್ಲಿ ಏನೇ ಬದಲಾವಣೆ ಮಾಡಬೇಕಿದ್ದರೂ, ಅದಕ್ಕೆ ಸೂಕ್ತ ದಾಖಲೆಗಳು ಅವಶ್ಯ ಇರುತ್ತವೆ. ಇನ್ನು ಜನರು ಆಧಾರ್‌ ಕಾರ್ಡ್‌ನಲ್ಲಿ ತಮ್ಮ ಹೆಸರನ್ನು ಎಷ್ಟು ಬಾರಿ ಬದಲಾವಣೆ ಮಾಡಬಹುದು? ಇದಕ್ಕೆ ಇಲ್ಲಿದೆ ಉತ್ತರ ಮುಂದೆ ಓದಿರಿ.

Aadhaar Card ನಲ್ಲಿ ನಾವು ಎಷ್ಟು ಬಾರಿ ಹೆಸರು ಬದಲಾವಣೆ ಮಾಡಬಹುದು?

ಆಧಾರ್‌ ಕಾರ್ಡ್‌ ಅಗತ್ಯ

ಜನರಿಗೆ ಸಿಮ್‌ ಕಾರ್ಡ್‌ ತೆಗೆದುಕೊಳ್ಳಲು, ಬ್ಯಾಂಕ್‌ನಲ್ಲಿ ಖಾತೆ ತೆರೆಯಲು, ಸರ್ಕಾರಿ ಸಬ್ಸಿಡಿ ಸೌಲಭ್ಯಗಳ ಪ್ರಯೋಜನ ಪಡೆದುಕೊಳ್ಳಲು ಸೇರಿದಂತೆ ಇನ್ನು ಅನೇಕ ಸಂದರ್ಭಗಳಲ್ಲಿ 12 ಅಂಕಿಗಳ ಅನನ್ಯ ಸಂಖ್ಯೆಯ ಆಧಾರ ಕಾರ್ಡ್‌ (Aadhaar Card) ಅತೀ ಅಗತ್ಯ ದಾಖಲೆಯಾಗಿ ಗುರುತಿಸಿಕೊಂಡಿದೆ.

ಆಧಾರ್‌ ಕಾರ್ಡ್‌ನಲ್ಲಿ ಎಷ್ಟು ಬಾರಿ ಹೆಸರು ತಿದ್ದುಪಡಿ ಮಾಡಬಹುದು?

ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ವ್ಯಕ್ತಿಯೊಬ್ಬರು ತಮ್ಮ ಜೀವಿತಾವಧಿಯಲ್ಲಿ ಎರಡು ಬಾರಿ ತಮ್ಮ ಆಧಾರ್ ಕಾರ್ಡ್‌ನಲ್ಲಿ ತಮ್ಮ ಹೆಸರನ್ನು ಬದಲಾವಣೆ ಮಾಡಲು ಅನುಮತಿಸುತ್ತದೆ. ಆದಾಗ್ಯೂ, ಕೆಲವು ವಿಶೇಷ ಅಥವಾ ಅಸಾಧಾರಣ ಸಂದರ್ಭಗಳಲ್ಲಿ ಮಾತ್ರ, ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಶಾಖೆಯು ಮೂರನೇ ಬಾರಿಗೆ ಹೆಸರು ಬದಲಾವಣೆಯನ್ನು ಅನುಮತಿಸಬಹುದು.

ಹೆಸರು ಬದಲಾವಣೆಗೆ ಅರ್ಜಿ

ಜನರು ಆಧಾರ್‌ ಕಾರ್ಡ್‌ನಲ್ಲಿ ತಮ್ಮ ಹೆಸರನ್ನು ಅಪ್‌ಡೇಟ್‌ (ಬದಲಾವಣೆ) ಮಾಡಲು UIDAI ವೆಬ್‌ಸೈಟ್‌ನಲ್ಲಿ ಅರ್ಜಿ ಅನ್ನು ಡೌನ್‌ಲೋಡ್ ಮಾಡಬೇಕು. ಬಳಿಕ ಅಗತ್ಯವಿರುವ ಮಾಹಿತಿಯನ್ನು ಭರ್ತಿ ಮಾಡಿ, ಅದನ್ನು ಆಧಾರ್ ಸೇವಾ ಕೇಂದ್ರಕ್ಕೆ ಸಲ್ಲಿಸಬೇಕು. ಅಥವಾ ಜನರು ಆಧಾರ್ ಸೇವಾ ಕೇಂದ್ರಕ್ಕೆ ಭೇಟಿ ನೀಡಿ, ಅಲ್ಲಿ ಅರ್ಜಿ ಪಡೆಯಬಹುದು. ಹಾಗೆಯೇ ಅದನ್ನು ಭರ್ತಿ ಮಾಡಿ ಅಲ್ಲಿಯೇ ಸಲ್ಲಿಸಬಹುದು.

ಆಧಾರ್‌ ಕಾರ್ಡ್‌ನಲ್ಲಿ ಹೆಸರನ್ನು ಅಪ್‌ಡೇಟ್‌ ಮಾಡಲು ಈ ಕ್ರಮ ಅನುಸರಿಸಿ:

ಹಂತ 1: ಮೊದಲಿಗೆ UIDAI ನ ಅಧಿಕೃತ ವೆಬ್‌ಸೈಟ್‌ನಿಂದ ಆಧಾರ್ ನೋಂದಣಿ ಹಾಗೂ ಅಪ್‌ಡೇಟ್ ಫಾರ್ಮ್ ಅನ್ನು ಡೌನ್‌ಲೋಡ್ ಮಾಡಿರಿ.
ಹಂತ 2: ಬಳಿಕ ನಿಮ್ಮ ಹತ್ತಿರದ ಆಧಾರ್ ನೋಂದಣಿ ಕೇಂದ್ರ ಅಥವಾ ಆಧಾರ್ ಸೇವಾ ಕೇಂದ್ರಕ್ಕೆ ಭೇಟಿ ನೀಡಿರಿ.
ಹಂತ 3: ನಂತರ ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿರಿ ಹಾಗೂ ಆ ಫಾರ್ಮ್ ಅನ್ನು ಕಾರ್ಯನಿರ್ವಾಹಕರಿಗೆ ನೀಡಿರಿ.
ಹಂತ 4: ತದ ನಂತರ ಗುರುತಿನ ದಾಖಲೆಯ ಮೂಲ ದಾಖಲೆಯನ್ನು ಕಾರ್ಯನಿರ್ವಾಹಕರಿಗೆ ನೀಡಿರಿ.
ಹಂತ 5: ಆ ಬಳಿಕ ಆಧಾರ್‌ನಲ್ಲಿ ನಿಮ್ಮ ಹೆಸರನ್ನು ಅಪ್‌ಡೇಟ್‌ ಮಾಡಲು, 50ರೂ. ಶುಲ್ಕವನ್ನು ಸಲ್ಲಿಸಿ.

ಆಧಾರ್ ಕಾರ್ಡ್ ಹೆಸರು ಅಪ್‌ಡೇಟ್‌ ಮಾಡಲು ಬೇಕಾಗುವ ದಾಖಲೆಗಳು

- ಪಾಸ್‌ಪೋರ್ಟ್‌
- ಪ್ಯಾನ್ ಕಾರ್ಡ್‌
- ಮತದಾರರ ಗುರುತಿನ ಚೀಟಿ
- ಪಡಿತರ ಚೀಟಿ/ ರೇಷನ್‌ ಕಾರ್ಡ್‌
- ಡ್ರೈವಿಂಗ್ ಕಾರ್ಡ್
- ಮದುವೆ ಪ್ರಮಾಣಪತ್ರ
- ಪಿಂಚಣಿದಾರರ ಕಾರ್ಡ್

Best Mobiles in India

English summary
How Many Times Can You Change Your Name on Aadhaar Card?. how to change name, Required documents, seva center Know all details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+